Home Loan: ಗೃಹಸಾಲ ತೆಗೆದು ಅಧಿಕ ಬಡ್ಡಿ ಕಟ್ಟುತ್ತಿದ್ದೀರಾ? ಹಾಗಿದ್ದರೆ ವರ್ಗಾಯಿಸಿ; ಪ್ರಯೋಜನಗಳು ಇಲ್ಲಿವೆ

| Updated By: Rakesh Nayak Manchi

Updated on: Sep 22, 2022 | 3:30 PM

ನೀವು ಬ್ಯಾಂಕ್ ಒಂದರಲ್ಲಿ ಗೃಹ ಸಾಲ ಪಡೆದು ಅದಕ್ಕೆ ಅಧಿಕ ಬಡ್ಡಿ ಕಟ್ಟುತ್ತಿದ್ದರೆ ಬಾಕಿ ಮೊತ್ತವನ್ನು ಕಡಿಮೆ ಬಡ್ಡಿ ನೀಡುವ ಬ್ಯಾಂಕ್​ಗೆ ವರ್ಗಾವಣೆ ಮಾಡಿದರೆ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

Home Loan: ಗೃಹಸಾಲ ತೆಗೆದು ಅಧಿಕ ಬಡ್ಡಿ ಕಟ್ಟುತ್ತಿದ್ದೀರಾ? ಹಾಗಿದ್ದರೆ ವರ್ಗಾಯಿಸಿ; ಪ್ರಯೋಜನಗಳು ಇಲ್ಲಿವೆ
ಗೃಹ ಸಾಲದ ಬಾಕಿ ಮೊತ್ತವನ್ನು ವರ್ಗಾವಣೆ ಮಾಡುವುದರಿಂದ ಆಗವ ಪ್ರಯೋಜನಗಳು
Follow us on

ಮನೆ ಕಟ್ಟುವುದು ಎಲ್ಲರ ಕನಸು ಆಗಿರುತ್ತದೆ. ಹೆಚ್ಚಿನವರು ತಮ್ಮ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ ಮೂಲಕ ಗೃಹ ಸಾಲ (Home Loan)ವನ್ನು ಪಡೆಯುತ್ತಾರೆ. ಇದಕ್ಕೆ ಒಂದೊಂದು ಬ್ಯಾಂಕ್​ನವರು ಒಂದೊಂದು ರೀತಿಯಲ್ಲಿ ಬಡ್ಡಿಯನ್ನು ವಿಧಿಸುತ್ತಾರೆ. ಕೆಲವು ಬ್ಯಾಂಕ್​ಗಳು ಅಧಿಕ ಬಡ್ಡಿ ವಿಧಿಸಿದರೆ ಇನ್ನು ಕೆಲವು ಬ್ಯಾಂಕ್​ಗಳು ಕಡಿಮೆ ಬಡ್ಡಿಯನ್ನು ವಿಧಿಸತ್ತವೆ. ಒಂದೊಮ್ಮೆ ನೀವು ಗೃಹಸಾಲಕ್ಕೆ ಅಧಿಕ ಬಡ್ಡಿ ಕಟ್ಟುತ್ತಿದ್ದೀರಿ ಎಂದಾದರೆ ನಿಮಗೆ ಅದನ್ನು ಬೇರೊಂದು ಬ್ಯಾಂಕ್​ಗೆ ವರ್ಗಾವಣೆ ಮಾಡುವ ಅವಕಾಶ ಇದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದರೆ ಇದಕ್ಕೆ ಉತ್ತರ ಅವಕಾಶವಿದೆ. ಚಾಲ್ತಿಯಲ್ಲಿರುವ ಸಾಲವು ಹೆಚ್ಚಿನ ಬಡ್ಡಿಯನ್ನು ಹೊಂದಿದ್ದಾರೆ ಬಾಕಿ ಮೊತ್ತವನ್ನು ಕಡಿಮೆ ಬಡ್ಡಿ ನೀಡುವ ಬ್ಯಾಂಕ್​ಗೆ ವರ್ಗಾವಣೆ ಮಾಡಬಹುದು. ಆರ್‌ಬಿಐ ಸ್ವತ್ತುಮರುಸ್ವಾಧೀನ ದಂಡವನ್ನು ತೆಗೆದುಹಾಕಿದಾಗಿನಿಂದ ಬಾಕಿ ವರ್ಗಾವಣೆ (Balance Transfer)ಯ ಪ್ರಕ್ರಿಯೆಯು ಅನುಕೂಲಕರವಾಗಿದೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಸಾಲ ನೀಡುವ ಸಂಸ್ಥೆಗಳು ಸ್ವತ್ತುಮರುಸ್ವಾಧೀನಕ್ಕೆ ಅಥವಾ ಗೃಹ ಸಾಲವನ್ನು ಪೂರ್ವಪಾವತಿ ಮಾಡಲು ದಂಡ ವಿಧಿಸುವಂತಿಲ್ಲ.

ಆದರೆ ಈಗ, ಆರ್‌ಬಿಐ ಮಾರ್ಗಸೂಚಿಯು ಸಾಲಗಾರರಿಗೆ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯನ್ನು ಆರಿಸಿಕೊಳ್ಳುವ ಮೂಲಕ ಇತರ ಸಾಲದಾತರು ನೀಡುವ ಕಡಿಮೆ ಬಡ್ಡಿದರಗಳನ್ನು ಪಡೆಯಲು ಅನುಮತಿಸುತ್ತದೆ. ಹೆಚ್ಚಿನ ಜನರು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಆಯ್ಕೆ ಮಾಡಿಕೊಳ್ಳಲು ದೊಡ್ಡ ಕಾರಣವೆಂದರೆ ಕಡಿಮೆ ಬಡ್ಡಿ ದರ. ಹಾಗಿದ್ದರೆ ಸಾಲದ ಬಾಕಿ ಮೊತ್ತವನ್ನು ವರ್ಗಾವಣೆ ಮಾಡುವುದರಿಂದ ಆಗವ ಪ್ರಯೋಜನಗಳು ಏನು? ಈ ಕೆಳಗಿನಂತಿವೆ.

ಕಡಿಮೆ ಬಡ್ಡಿ ದರ

ಚಾಲ್ತಿಯಲ್ಲಿರುವ ಗೃಹ ಸಾಲದ ಬಾಕಿ ಮೊತ್ತವನ್ನು ವರ್ಗಾವಣೆ ಮಾಡಿದರೆ ನೀವು ಕಡಿಮೆ ಬಡ್ಡಿಯ ಅನುಕೂಲವನ್ನು ಪಡೆಯಬಹುದಾಗಿದೆ. ನೀವು ಗೃಹ ಸಾಲಕ್ಕೆ ಅಧಿಕ ಬಡ್ಡಿ ಕಟ್ಟುತ್ತಿದ್ದೀರಿ ಎಂದಾದರೆ ಕಡಿಮೆ ಬಡ್ಡಿ ವಿಧಿಸುವ ಬ್ಯಾಂಕ್​ಗೆ ಸಾಲದ ಬಾಕಿ ಮೊತ್ತವನ್ನು ವರ್ಗಾವಣೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

ಕಡಿಮೆ ಇಎಂಐ

ಸಾಲದ ಬಾಕಿ ಮೊತ್ತವನ್ನು ವರ್ಗಾವಣೆ ಮಾಡುವುದರಿಂದ ಆಗುವ ಎರಡನೇ ಪ್ರಯೋಜನವೆಂದರೆ ಕಡಿಮೆ ಇಎಂಐ. ನಿಮ್ಮ ಕ್ರೆಡಿಟ್ ಪ್ರೊಫೈಲ್ ಮತ್ತು ಅರ್ಹತೆ ಉತ್ತಮವಾಗಿದ್ದರೆ ಬ್ಯಾಂಕಿನವರು ಕಡಿಮೆ ಇಎಂಐ ವಿಧಿಸುತ್ತಾರೆ. ಅಂದರೆ ಅಧಿಕ ಬಡ್ಡಿ ಇದ್ದಾಗಲೂ ನೀವು ಕಂತುಗಳನ್ನು ಸರಿಯಾಗಿ ಕಟ್ಟುತ್ತಾ ಬಂದಿದ್ದರೆ ಬ್ಯಾಂಕುಗಳು ಆಕರ್ಷಕ ಬಡ್ಡಿ ದರವನ್ನು ನೀಡುತ್ತವೆ. ಇದು ಉಳಿದ ಸಾಲದ ಮೇಲಿನ ಇಎಂಐ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅವಧಿಯ ಮರುಪರಿಶೀಲನೆ

ಸಾಲದ ಅವಧಿಯನ್ನು ನಿರ್ಧರಿಸುವಾಗ ಆದಾಯ, ಹಣಕಾಸಿನ ಹೊಣೆಗಾರಿಕೆಗಳು, ಬಡ್ಡಿದರಗಳು ಮತ್ತು ಇತರ ಅಂಶಗಳನ್ನು ಪರಿಗಣಿಸಲಾಗುತ್ತದೆ. ಗೃಹಸಾಲದ ಬಾಕಿ ವರ್ಗಾವಣೆಯು ಉಳಿದ ಅಸಲು ಮೊತ್ತದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವುದರಿಂದ ಅವಧಿಯನ್ನು ಮರುಪರಿಶೀಲಿಸಲು ಅವಕಾಶವನ್ನು ನೀಡುತ್ತದೆ. ಸಾಲದ ಬಾಕಿ ವರ್ಗಾವಣೆಯು ಉತ್ತಮ ಸಾಲದ ಅವಧಿಗೆ ಬದಲಾಯಿಸಲು ಸಹಾಯ ಮಾಡುತ್ತದೆ.

ಹೆಚ್ಚುವರಿ ಸಾಲ ಪಡೆಯುವ ಅವಕಾಶ

ನೀವು ಅಧಿಕ ಬಡ್ಡಿ ವಿಧಿಸುತ್ತಿದ್ದ ಬ್ಯಾಂಕ್​ನಿಂದ ಬಾಕಿ ಸಾಲದ ಮೊತ್ತವನ್ನು ಬೇರೊಂದು ಬ್ಯಾಂಕ್​ಗೆ ವರ್ಗಾಯಿಸುತ್ತೀರಿ ಎಂದು ಅಂದೊಕೊಳ್ಳಿ. ಆಗ ನಿಮಗೆ ಹೆಚ್ಚುವರಿ ಸಾಲ ಪಡೆಯುವ ಅವಕಾಶ ಸಿಗಲಿದೆ. ಅಂದರೆ ನೀವು ಪಡೆದ ಸಾಲ ಖಾಲಿಯಾಗಿ ಮನೆ ಕಟ್ಟುವ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಮುಕ್ತಾಯವಾಗಿರದಿದ್ದರೆ ಇದನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಾಲವನ್ನು ಪಡೆಯಬಹುದಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ