INR vs USD: ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ
ಗುರುವಾರ ಆರಂಭಿಕ ವಹಿವಾಟಿನಲ್ಲಿ US ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ 80ಕ್ಕಿಂತ ಕಡಿಮೆಗೆ ಕುಸಿಯಿತು. ಯುಎಸ್ ಡಾಲರ್ ವಿರುದ್ಧ ದೇಶೀಯ ಕರೆನ್ಸಿ 42 ಪೈಸೆಗಳಷ್ಟು ಕುಸಿದು ಸಾರ್ವಕಾಲಿಕ ಕನಿಷ್ಠ 80.38 ಕ್ಕೆ ತಲುಪಿದೆ.
ಗುರುವಾರ ಆರಂಭಿಕ ವಹಿವಾಟಿನಲ್ಲಿ US ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ 80ಕ್ಕಿಂತ ಕಡಿಮೆಗೆ ಕುಸಿಯಿತು. ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ದೇಶೀಯ ಕರೆನ್ಸಿ 42 ಪೈಸೆಗಳಷ್ಟು ಕುಸಿದು ಸಾರ್ವಕಾಲಿಕ ಕನಿಷ್ಠ 80.38 ಕ್ಕೆ ತಲುಪಿದೆ ಎಂದು ಪಿಟಿಐ ವರದಿ ಮಾಡಿದೆ. ಬೆಳಗ್ಗೆ 10.15 ಗಂಟೆಗೆ ರೂಪಾಯಿ ಮೌಲ್ಯ 80.51 ಆಗಿದೆ. ಬುಧವಾರದಂದು ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದೇಶೀಯ ಕರೆನ್ಸಿ ಪ್ರತಿ ಡಾಲರ್ಗೆ 79.81 ಕ್ಕೆ ಪ್ರಾರಂಭವಾಯಿತು. ಕೊನೆಯಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 22 ಪೈಸೆ ಕುಸಿದು 79.96 ಕ್ಕೆ ತಲುಪಿತ್ತು. ಮಂಗಳವಾರ ರೂಪಾಯಿ ಮೌಲ್ಯ 7 ಪೈಸೆ ಏರಿಕೆಯಾಗಿ 79.74ಕ್ಕೆ ತಲುಪಿತ್ತು.
ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಮತ್ತೆ 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆಯಿತು. ಇದು ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಳಕ್ಕೆ ಮುಂದಾಗಿದ್ದಕ್ಕೆ ಮಾರುಕಟ್ಟೆ ನೀಡಿರುವ ಪ್ರತಿಕ್ರಿಯೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಗುರುವಾರ ರೂಪಾಯಿ ತನ್ನ ಹಿಂದಿನ ಮುಕ್ತಾಯದ 80.28 ಕ್ಕಿಂತ ಶೇ 0.4 ಕಡಿಮೆಯಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇದಕ್ಕೂ ಮೊದಲು ಆಗಸ್ಟ್ 29 ರಂದು ದೇಶೀಯ ಕರೆನ್ಸಿ 80.12 ಕ್ಕೆ ತಲುಪಿತ್ತು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 am, Thu, 22 September 22