ಅಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮೋದನೆ: ಲಕ್ಷಾಂತರ ಉದ್ಯೋಗಗಳು ಸೃಷ್ಟಿ

ಅತ್ಯಧಿಕ ದಕ್ಷತೆಯ ಸೌರಶಕ್ತಿಯ ಪಿವಿ ಮಾಡ್ಯೂಲ್‌ಗಳಲ್ಲಿ ಗಿಗಾ ವ್ಯಾಟ್ ಮಟ್ಟದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ 19,500 ಕೋಟಿ ರೂ. ಗಾತ್ರದ ಬೃಹತ್ ಮತ್ತು ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. 

ಅಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮೋದನೆ: ಲಕ್ಷಾಂತರ ಉದ್ಯೋಗಗಳು ಸೃಷ್ಟಿ
ಸೋಲಾರ್(ಸಂಗ್ರಹ ಚಿತ್ರ)
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 21, 2022 | 8:39 PM

ಅತ್ಯಧಿಕ ದಕ್ಷತೆಯ ಸೌರಶಕ್ತಿಯ ಫೋಟೊ ವೋಲ್ಟಾಯಿಕ್(ಪಿವಿ) ಸೆಲ್ಸ್ ಅಥವಾ ಮಾಡ್ಯೂಲ್‌(ಸೌರಶಕ್ತಿ ಕೋಶಗಳು)ಗಳ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ (2ನೇ ಹಂತ)ಯನ್ನು ವಿಸ್ತರಿಸುವ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಸಚಿವಾಲಯದ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅತ್ಯಧಿಕ ದಕ್ಷತೆಯ ಸೌರಶಕ್ತಿಯ ಪಿವಿ ಮಾಡ್ಯೂಲ್‌ಗಳಲ್ಲಿ ಗಿಗಾ ವ್ಯಾಟ್ ಮಟ್ಟದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ 19,500 ಕೋಟಿ ರೂ. ಗಾತ್ರದ ಬೃಹತ್ ಮತ್ತು ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

ಅತ್ಯಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ರಾಷ್ಟ್ರೀಯ ಕಾರ್ಯಕ್ರಮವು ಭಾರತದಲ್ಲಿ ಅಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಗೆ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿ ಹೊಂದಿದೆ. ಇದರಿಂದಾಗಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಮದು ಅವಲಂಬನೆ ಕಡಿಮೆ ಮಾಡುತ್ತದೆ. ಇದು ಆತ್ಮನಿರ್ಭರ್ ಭಾರತ ಉಪಕ್ರಮವನ್ನು ಬಲಪಡಿಸುವುದರೊಂದಿಗೆ ಅಪಾರ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಸೌರಶಕ್ತಿ ಫೋಟೊ ವೋಲ್ಟಾಯಿಕ್ ಕೋಶಗಳ ತಯಾರಕ ಕಂಪನಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ. ಸೌರಶಕ್ತಿ ಪಿವಿ ಕೋಶಗಳ ಉತ್ಪಾದನಾ ಘಟಕಗಳು ಕಾರ್ಯಾಚರಣೆ ಆರಂಭಿಸಿದ ನಂತರ, 5 ವರ್ಷಗಳವರೆಗೆ ದೇಶೀಯ ಮಾರುಕಟ್ಟೆಯಲ್ಲಿ ಅಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ಮಾರಾಟಕ್ಕೆ ಉತ್ಪಾದನಾ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ)ಯ ಪ್ರಯೋಜನಗಳನ್ನು ವಿತರಿಸಲಾಗುತ್ತದೆ.

ಪಿಎಲ್ಐ ಯೋಜನೆಯ ನಿರೀಕ್ಷಿತ ಫಲಿತಾಂಶಗಳು, ಪ್ರಯೋಜನಗಳು ಈ ಕೆಳಕಂಡಂತಿವೆ:

1.ವಾರ್ಷಿಕವಾಗಿ ಸುಮಾರು 65,000 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಸಂಪೂರ್ಣ ಮತ್ತು ಭಾಗಶಃ ಸಂಯೋಜಿತ, ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ(ಘಟಕಗಳು ಅಥವಾ ಸ್ಥಾವರಗಳು) ಸ್ಥಾಪನೆ ಆಗಲಿದೆ ಎಂದು ಅಂದಾಜಿಸಲಾಗಿದೆ.

2.ಈ ಯೋಜನೆಯು ಸುಮಾರು 94,000 ಕೋಟಿ ರೂ. ನೇರ ಹೂಡಿಕೆಯನ್ನು ಆಕರ್ಷಿಸಲಿದೆ.

3.ಎಥಿನಿಲ್ ವೀನೈಲ್ ಅಸಿಟೇಟ್(ಇವಿಎ), ಸೋಲಾರ್ ಗ್ಲಾಸ್, ಬ್ಯಾಕ್‌ಶೀಟ್ ಇತ್ಯಾದಿ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆ ಸಮತೋಲನ ಕಾಪಾಡಲು ಉತ್ಪಾದನಾ ಸಾಮರ್ಥ್ಯ ಸೃಜಿಸಲಿದೆ.

4. ಸುಮಾರು 1,95,000 ನೇರ ಉದ್ಯೋಗಗಳು ಮತ್ತು 7,80,000 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.

5.ಅಂದಾಜು 1.37 ಲಕ್ಷ ಕೋಟಿ ರೂ. ಮೌಲ್ಯದ ಆಮದು ವೆಚ್ಚ ತಗ್ಗಲಿದೆ.

6.ಸೌರಶಕ್ತಿ ಫೋಟೊ ವೋಲ್ಟಾಯಿಕ್ ಕೋಶಗಳ ಉತ್ಪಾದನೆಯ ಅತ್ಯಧಿಕ ದಕ್ಷತೆ ಸಾಧಿಸುವ ರಾಜಮಾರ್ಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉತ್ತೇಜನ ಒದಗಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada