Home loan: ಭಾರತದಲ್ಲಿ ಗೃಹಸಾಲ ದುಂದು ವೆಚ್ಚವಾಗುತ್ತಿದೆ, ನಿಯಂತ್ರಣ ಮಾಡಲು ಬ್ಯಾಂಕ್​​ಗಳಿಗೆ ಆರ್​​ಬಿಐ ಎಚ್ಚರಿಕೆ

|

Updated on: Apr 26, 2024 | 4:08 PM

ಭಾರತದಲ್ಲಿ ಗೃಹಸಾಲ ಹೆಚ್ಚು ಪಡೆಯುತ್ತಿದ್ದಾರೆ. ಆದರೆ ಇದನ್ನು ಮನೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿಲ್ಲ. ಇದರಿಂದ ಬ್ಯಾಂಕುಗಳಿಗೆ ಹೊರೆಯಾಗುತ್ತಿದೆ ಎಂದು ಹೇಳಲಾಗಿದೆ. ಇದನ್ನು ನಿಯಂತ್ರಣ ಮಾಡಲು ಆರ್​​ಬಿಐ, ಬ್ಯಾಂಕುಗಳಿಗೆ ಆದೇಶ ನೀಡಿದೆ. ಗೃಹ ಸಾಲವು ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು 39.1 ಪ್ರತಿಶತದಷ್ಟು ಹೊಸ ಸಾಲವನ್ನು ಪಡೆಯಲಾಗಿದೆ ಎಂದು ಹೇಳಿದೆ. ಇದು ಕಳೆದ ವರ್ಷಕ್ಕಿಂತ 36.7 ಪ್ರತಿಶತದಷ್ಟು ಹೆಚ್ಚಾಗಿದೆ

Home loan: ಭಾರತದಲ್ಲಿ ಗೃಹಸಾಲ ದುಂದು ವೆಚ್ಚವಾಗುತ್ತಿದೆ, ನಿಯಂತ್ರಣ ಮಾಡಲು ಬ್ಯಾಂಕ್​​ಗಳಿಗೆ ಆರ್​​ಬಿಐ ಎಚ್ಚರಿಕೆ
Follow us on

ಭಾರತದಲ್ಲಿ ಬ್ಯಾಂಕ್​​ಗಳಿಂದ ಹೆಚ್ಚು ಹೆಚ್ಚು ಸಾಲ ಪಡೆಯುತ್ತಿದ್ದಾರೆ. ಇದರಲ್ಲೂ ಗೃಹಸಾಲ (Home loan) ಹೆಚ್ಚು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷದ ಕೊನೆಯ ಮೂರು ತಿಂಗಳುಗಳಲ್ಲಿ ಭಾರತದಲ್ಲಿ ಗೃಹ ಸಾಲ ದಾಖಲೆಯ ಮಟ್ಟಕ್ಕೆ ಏರಿದೆ. ಗ್ರಾಹಕರು ಅಪಾಯಕಾರಿಯಾಗಿ ಸಾಲ ಹೊರೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಬ್ಯಾಂಕ್​​ಗಳಿಗೆ ಆತಂಕ ವ್ಯಕ್ತಪಡಿಸಿದೆ. ಗೃಹ ಸಾಲವು ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು 39.1 ಪ್ರತಿಶತದಷ್ಟು ಹೊಸ ಸಾಲವನ್ನು ಪಡೆಯಲಾಗಿದೆ ಎಂದು ಹೇಳಿದೆ. ಇದು ಕಳೆದ ವರ್ಷಕ್ಕಿಂತ 36.7 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅರ್ಥಶಾಸ್ತ್ರಜ್ಞರಾದ ನಿಖಿಲ್ ಗುಪ್ತಾ ಮತ್ತು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ತನಿಶಾ ಲಾಧಾ ತನ್ನ ವರದಿಯಲ್ಲಿ ತಿಳಿಸಿದೆ.

ಅಂಕಿಅಂಶಗಳ ಪ್ರಕಾರ 2021 ರ ಜನವರಿ-ಮಾರ್ಚ್ ಅವಧಿಯಲ್ಲಿ 38.6 ಶೇಕಡಾಕ್ಕಿಂತ ಹೆಚ್ಚಾಗಿದೆ. ಒಟ್ಟು ಮನೆಯ ಸಾಲ ಶೇಕಡಾ 72 ರಷ್ಟಿದ್ದು, ವಸತಿ ರಹಿತ ಸಾಲವು ವಸತಿ ಸಾಲಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ಈ ಗೃಹ ಸಾಲ ಮನೆ ನಿರ್ಮಾಣಕ್ಕೆ ಪೂರ್ಣವಾಗಿ ಉಪಯೋಗವಾಗುತ್ತಿಲ್ಲ. ಇದನ್ನು ಗ್ರಾಹಕರು ವಸ್ತುಗಳನ್ನು ಹಾಗೂ ದುಂದುವೆಚ್ಚ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ವಸತಿಯೇತರ ಸಾಲವು ವರ್ಷದಿಂದ ವರ್ಷಕ್ಕೆ ಶೇಕಡಾ 18.3 ರಷ್ಟು ಹೆಚ್ಚಾಗಿದೆ, ಆದರೆ ವಸತಿಗಾಗಿ ತೆಗೆದುಕೊಂಡ ಸಾಲವು ಶೇಕಡಾ 12.2 ರಷ್ಟಿದೆ ಎಂದು ಹೇಳಿದೆ. ಭಾರತದ ಆರ್ಥಿಕತೆಯು ಸುಮಾರು 60 ಪ್ರತಿಶತದಷ್ಟು ಇಂತಹ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಆರ್​​ಬಿಐ, ಬ್ಯಾಂಕ್‌ಗಳ ಅಸುರಕ್ಷಿತ ಸಾಲದ ಏರಿಕೆಯ ನಿಯಂತ್ರಣ ಮಾಡಲು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ

ಕಳೆದ ವರ್ಷ ರಿಸರ್ವ್​​​ ಬ್ಯಾಂಕ್​​​ ಇಂತಹ ಸಾಲದ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದೆ. ಬ್ಯಾಂಕ್‌ಗಳು ಅಸುರಕ್ಷಿತ ಸಾಲ ನೀಡುವ ಮೊದಲು ಪರಿಶೀಲನೆ ಹಾಗೂ ಆ ಸಾಲ ಯಾವುದಕ್ಕೆ ಉಪಯೋಗ ಮಾಡಲಾಗುತ್ತದೆ ಎಂಬುದನ್ನು ಮೊದಲು ನೋಡಬೇಕು ಎಂದು ಹೇಳಿದೆ. ಹಾಗೂ ಈ ಸಾಲದಿಂದ ದೇಶದ ಹಣಕಾಸಿನ ಉಳಿತಾ ಕುಸಿಯದಂತೆ ನೋಡಿಕೊಳ್ಳಿ ಎಂದು ಹೇಳಿದೆ.

ಅಸುರಕ್ಷಿತ ಸಾಲಗಳ ಹೆಚ್ಚುತ್ತಿರುವ ಕಾರಣ ಭಾರತದ ಬ್ಯಾಂಕ್​​ಗಳ ವಾರ್ಷಿಕ ಪತ್ರಗಳಲ್ಲಿ ಇದರ ಹೊರೆ ಹೆಚ್ಚಾಗಬಹುದು ಎಂಬ ಆತಂಕ ಹೆಚ್ಚಾಗಿದೆ. ಇದರಿಂದ ಆರ್ಥಿಕ ವ್ಯವಸ್ಥೆ ಆರ್ಥಿಕ ಸ್ಥಿರತೆಗೆ ತೊಂದರೆಯನ್ನು ಉಂಟು ಮಾಡಬಹುದು ಎಂದು ಹೇಳಿದೆ. ಈ ಸಾಲದಿಂದ ಆರ್ಥಿಕತೆಯ ಉತ್ಪಾದಕ ಅಗತ್ಯಗಳಿಗೆ ಸಾಲ ನೀಡುವ ಬ್ಯಾಂಕ್‌ಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Published On - 4:04 pm, Fri, 26 April 24