ಅಲಿಬಾಬ ಕಂಪೆನಿಯ ಜಾಕ್ ಮಾ ಅವರು ಒಂದು ವರ್ಷದ ಹಿಂದಿನ ತನಕ ಚೀನಾದ ಪೋಸ್ಟರ್ ಬಾಯ್. ಎಂಥ ಅದ್ಭುತವಾದ ಸಮಯ ನಡೆಯುತ್ತಿತ್ತು ಗೊತ್ತಾ? ಆ್ಯಂಟ್ ಸಮೂಹದ ಐಪಿಒಗೆ ಎಲ್ಲ ಸಿದ್ಧತೆ ನಡೆದಿತ್ತು. 3700 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಐಪಿಒ ಇನ್ನೇನು ಬಿಡುಗಡೆ ಆಗಬೇಕು ಅನ್ನೋಷ್ಟರಲ್ಲಿ ಚೀನಾ ಸರ್ಕಾರದಿಂದ ಅದಕ್ಕೆ ತಡೆ ಬಿತ್ತು. ಚೀನಾ ಕಾರ್ಪೊರೇಟ್ನ ಅತಿ ದೊಡ್ಡ ತಾರೆ ಜಾಕ್ ಮಾ ಓಟಕ್ಕೆ ಸರಿಯಾಗಿಯೇ ಸಂಕಷ್ಟ ಎದುರಾಯಿತು. ಇದೀಗ ಬಹಳ ಎಚ್ಚರಿಕೆಯಿಂದ ಹೂಡಿಕೆದಾರರು ಬೆನ್ನು ತಡವಿದ್ದರಿಂದ, ಜಾಕ್ ಮಾ ನಿಧಾನವಾಗಿ ಜಾಗತಿಕ ಮಟ್ಟದಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಯುರೋಪ್ನಲ್ಲಿ ತೋಟಗಾರಿಕೆ ಹವ್ಯಾಸ ಶುರು ಮಾಡಿದ್ದಾರೆ. 2017ನೇ ಇಸವಿಯಲ್ಲಿ ಅಮೆರಿಕದ ನ್ಯೂಯಾರ್ಕ್ನ ಟ್ರಂಪ್ ಟವರ್ಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಡೊನಾಲ್ಡ್ ಟ್ರಂಪ್ರನ್ನು ಭೇಟಿ ಮಾಡಿ ಬಂದಿದ್ದ ಜಾಕ್ ಮಾ ಚರಿಷ್ಮಾ ಹೇಗಿತ್ತು ಗೊತ್ತಾ? ಅಮೆರಿಕನ್ನರಿಗೆ ಹತ್ತಾರು ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡುವ ಹಾಗೂ ಟ್ರಂಂಪ್ ಟವರ್ ಉದ್ಘಾಟಿಸುವ ಮುಂಚಿನ ಭೇಟಿ ಆಗಿತ್ತು.
ಆ ಹೈ ಪ್ರೊಫೈಲ್ ಪ್ರವಾಸವು ಚೀನೀ ಸರ್ಕಾರವನ್ನು ಕೆರಳಿಸಿತ್ತು. ಇನ್ನು ಜಾಕ್ ಮಾ ಅವರು ಗಗನಚುಂಬಿ ಕಟ್ಟಡದ ಲಾಬಿಯಲ್ಲಿ ವರದಿಗಾರರೊಂದಿಗೆ ಅನೌಪಚಾರಿಕ ದೂರದರ್ಶನದ ಪ್ರಶ್ನೋತ್ತರ ಸೆಷನ್ ನಡೆಸಿದಾಗ ಭೇಟಿ ಮತ್ತು ಉದ್ಯೋಗಗಳ ಭರವಸೆಯನ್ನು ಮೊದಲು ತಿಳಿದುಬಂತು. ಈ ವಿಷಯದ ಬಗ್ಗೆ ಮಾಹಿತಿ ಇರುವ ಅಲಿಬಾಬದ ನಾಲ್ಕು ಆಪ್ತಮೂಲಗಳು ಮತ್ತು ಬೀಜಿಂಗ್ ಸರ್ಕಾರದ ಒಂದು ಮೂಲ ತಿಳಿಸಿದೆ. ಸರ್ಕಾರದ ಪೂರ್ವಾನುಮತಿಯಿಲ್ಲದೆ ಜಾಕ್ ಮಾ ಅವರು ಟ್ರಂಪ್ರನ್ನು ಭೇಟಿಯಾದ ಬಗ್ಗೆ ಬೀಜಿಂಗ್ ಅತೃಪ್ತಿ ಹೊಂದಿದೆ ಎಂದು ಚೀನಾದ ಅಧಿಕಾರಿಗಳು ಅಲಿಬಾಬದ ಸರ್ಕಾರಿ ಸಂಬಂಧಗಳ ಜತೆ ವ್ಯವಹರಿಸುವ ತಂಡಕ್ಕೆ ತಿಳಿಸಿದ್ದರು ಎಂದು ಕಂಪನಿಗೆ ಹತ್ತಿರವಿರುವ ಇಬ್ಬರು ತಿಳಿಸಿದ್ದಾರೆ. ಮಾಧ್ಯಮಗಳಿಂದ ಬರುವ ಪ್ರಶ್ನೆಗಳನ್ನು ನಿರ್ವಹಿಸುವ ಮಾ ಅವರ ಚಾರಿಟೆಬಲ್ ಫೌಂಡೇಷನ್ ಸಹ ಪ್ರತಿಕ್ರಿಯೆ ಕೇಳಿರುವ ವಿನಂತಿಗೆ ಸ್ಪಂದಿಸಿಲ್ಲ.
ಟ್ರಂಪ್ ಭೇಟಿ ನಂತರದ ತಿರುವು
ಇನ್ನು ಸರ್ಕಾರಿ ಕೌನ್ಸಿಲ್ ಮಾಹಿತಿ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಂದನೆಯ ವಿನಂತಿಗಳಿಗೆ ಪ್ರತಿಕ್ರಿಯಿಸಲಿಲ್ಲ. ವಿಷಯದ ಸೂಕ್ಷ್ಮತೆಯಿಂದಾಗಿ ಎಲ್ಲ ಮೂಲಗಳು ತಮ್ಮ ಹೆಸರನ್ನು ತಿಳಿಸಲು ನಿರಾಕರಿಸಿವೆ. ಟ್ರಂಪ್ ತಮ್ಮ ಚುನಾವಣೆ ಪ್ರಚಾರದ ಸಮಯದಲ್ಲಿ ಚೀನಾವನ್ನು ಟೀಕಿಸಿದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಜನವರಿ 9ರಂದು ನಡೆದ ಸಭೆಯು ಅಮೆರಿಕದ ಉದ್ಯೋಗಗಳ ನಷ್ಟಕ್ಕೆ ಕಾರಣವಾಯಿತು. ಟ್ರಂಪ್‌ರ ವಕ್ತಾರರು ಪ್ರತಿಕ್ರಿಯೆಗಾಗಿ ಮಾಡಿದ ವಿನಂತಿಗೆ ಸ್ಪಂದಿಸಲಿಲ್ಲ. ಅಲಿಬಾಬಗೆ ಹತ್ತಿರವಿರುವ ನಾಲ್ಕು ಮೂಲಗಳು ತಿಳಿಸುವಂತೆ, ಈ ಸಭೆಯು ಜಾಕ್ ಮಾ ಮತ್ತು ಬೀಜಿಂಗ್ ನಡುವಿನ ಸಂಬಂಧದಲ್ಲಿ ನಕಾರಾತ್ಮಕ ತಿರುವು ಎಂದು ನಂಬಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅದು ಹೇಗೆ ಎಂಬುದನ್ನು ವಿವರಿಸಿಲ್ಲ.
ಮಾ ಅವರ ಪರಿಸ್ಥಿತಿಯ ಬಗ್ಗೆ ಸುಳಿವು ತಿಳಿದುಕೊಳ್ಳುವುದಕ್ಕೆ ಹೂಡಿಕೆದಾರರು ಬಯಸಿದ್ದಾರೆ: ಕಳೆದ ತಿಂಗಳು ಸ್ಪ್ಯಾನಿಷ್ ದ್ವೀಪವಾದ ಮಲ್ಲೋರ್ಕಾದಲ್ಲಿ ಉದ್ಯಮಿಯನ್ನು ನೋಡಿದಾಗ, ಒಂದು ವರ್ಷದಲ್ಲಿ ಅವರ ಮೊದಲ ವಿದೇಶ ಪ್ರವಾಸ ಅದಾಗಿತ್ತು. ಆ ತಕ್ಷಣವೇ ಅಲಿಬಾಬ ಷೇರುಗಳು 4200 ಕೋಟಿ ಡಾಲರ್ ಮೌಲ್ಯವನ್ನು ಗಳಿಸಿತು. ಕ್ಸಿ ಜಿನ್‌ಪಿಂಗ್ ಅವರ ಅಧಿಕಾರಾವಧಿಯಲ್ಲಿ ಚೀನಾ ಎಷ್ಟು ವೇಗವಾಗಿ ರೂಪಾಂತರಗೊಂಡಿದೆ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅವರು ಆರ್ಥಿಕ ಶಕ್ತಿಯ ನಾಯಕರಾಗಿ ಮೂರನೇ ಅವಧಿಗೆ ಪೂರ್ವನಿದರ್ಶನ ಮುರಿದಿದ್ದಾರೆ ಮತ್ತು ಚೀನಾದ ಕೆಲವು ಆವಿಷ್ಕಾರದ ಕಂಪೆನಿಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಮೊದಲ ದಾಳಿ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾಂಘೈನಲ್ಲಿ ಭಾಷಣ ಮಾಡಿದ ನಂತರ ಜಾಕ್ ಮಾ ಅವರ ಉದ್ಯಮ ಸಾಮ್ರಾಜ್ಯದ ಮೇಲೆ ಅಧಿಕಾರಿಗಳು ಮುರಿದುಕೊಂಡು ಬಿದ್ದರು. ಹಣಕಾಸಿನ ನಿಗಾ ಸಂಸ್ಥೆಗಳು ಆವಿಷ್ಕಾರಗಳನ್ನು ನಿಗ್ರಹಿಸುತ್ತಿವೆ ಎಂದು ಜಾಕ್ ಮಾ ಆರೋಪಿಸಿದ್ದರು. ಜಾಕ್ ಮಾಗೆ ಸೇರಿದ ಫಿನ್‌ಟೆಕ್ ಸಂಸ್ಥೆ ಆ್ಯಂಟ್ ಸಮೂಹದ 3700 ಕೋಟಿ ಡಾಲರ್ ಲಿಸ್ಟಿಂಗ್ ಅನ್ನು ನವೆಂಬರ್ 5 ರಂದು ಯೋಜಿಸಲಾಗಿತ್ತು. ಅದರ ಎರಡು ದಿನಗಳ ಮೊದಲು ನಿಯಂತ್ರಕರು ಅಮಾನತುಗೊಳಿಸಿದರು. ಆ್ಯಂಟ್ ಅನ್ನು ಪುನರ್ರಚಿಸಲು ಆದೇಶಿಸಿ, ಮಾ ಅವರ ವ್ಯವಹಾರಗಳ ಮೇಲೆ ವಿಶ್ವಾಸ ಧಕ್ಕೆಗೆ ಸಂಬಂದಿಸಿದಂತೆ ತನಿಖೆಗಳನ್ನು ಪ್ರಾರಂಭಿಸಿದರು. ಅಂತಿಮವಾಗಿ ಏಪ್ರಿಲ್‌ನಲ್ಲಿ ಅಲಿಬಾಬಗೆ ದಾಖಲೆಯ 275 ಕೋಟಿ ಅಮೆರಿಕನ್ ಡಾಲರ್ ದಂಡವನ್ನು ವಿಧಿಸಿದರು.
ತಂತ್ರಜ್ಞಾನ, ರಿಯಲ್ ಎಸ್ಟೇಟ್, ಗೇಮಿಂಗ್, ಶಿಕ್ಷಣ, ಕ್ರಿಪ್ಟೋಕರೆನ್ಸಿಗಳು ಮತ್ತು ಹಣಕಾಸು ಕಂಪೆನಿಗಳ ಮೇಲ್ವಿಚಾರಣೆಯನ್ನು ಅಧಿಕಾರಿಗಳು ಬಿಗಿ ಮಾಡುವುದರೊಂದಿಗೆ ಖಾಸಗಿ ವಲಯದಾದ್ಯಂತ ಬಿಗಿಯಾದ ಕ್ರಮಗಳು ಹರಡಿವೆ. “ಕ್ಸಿ ಪ್ರತಿಪಾದಿಸಿದ ಆಡಳಿತದ ಹೊಸ ವಿಧಾನದ ಹೊರತಾಗಿ ಜಾಕ್ ಮಾ ತುಂಬಾ ಪ್ರಚೋದನಾತ್ಮಕವಾಗಿ ಕಾಣಿಸಿಕೊಂಡಿದ್ದರಿಂದ ಪ್ರಮುಖ ಬದಲಾವಣೆಯು ಪ್ರಾರಂಭವಾಗಿದೆ ಎಂದು ಸೂಚಿಸಲು ಅವರು ಸಹಜವಾಗಿಯೇ ಮೊದಲ ಗುರಿಯಾಗಿದ್ದರು,” ಎಂದು ಬೀಜಿಂಗ್ ಮೂಲದ ಹೂಡಿಕೆ ಸಲಹಾ ಸಂಸ್ಥೆ BDA ಅಧ್ಯಕ್ಷ, ಚೀನಾ ಮತ್ತು ಅಲಿಬಾಬ ಹಾಗೂ ಮಾ ಕುರಿತ ಪುಸ್ತಕದ ಲೇಖಕ ಡಂಕನ್ ಕ್ಲಾರ್ಕ್ ಹೇಳಿದ್ದಾರೆ.
ಜಾಕ್ ಮಾ ಜಾಗತಿಕ ಪ್ರಭಾವ ಕೊನೆಯಾಗಿಲ್ಲ
“ಜಾಕ್ ಮಾ ಅವರು ವಿದೇಶಿ ಅಧ್ಯಕ್ಷರು, ಪ್ರಧಾನ ಮಂತ್ರಿಗಳು, ರಾಜಮನೆತನದವರು, ದಾವೋಸ್‌ನಂತಹ ಸ್ಥಳಗಳಲ್ಲಿ ಅಥವಾ ಅವರ ಸ್ವಂತ ವಿದೇಶ ಪ್ರವಾಸಗಳಲ್ಲಿ ನಿಯಮಿತವಾಗಿ ಭೇಟಿ ಆಗುತ್ತಿದ್ದರು. ಹ್ಯಾಂಗ್‌ಝೌನಲ್ಲಿಯೂ ಅವರನ್ನು ನೋಡಲು ವಿಐಪಿ ಸಂದರ್ಶಕರ ನಿರಂತರ ಹರಿವು ಇತ್ತು.” ಟ್ರಂಪ್ ಭೇಟಿಯ ನಂತರ ಜಾಕ್ ಮಾ ಅವರ ಜಾಗತಿಕ ಪ್ರಭಾವವು ಕೊನೆಗೊಂಡಿಲ್ಲ. 2018 ಮತ್ತು 2020ರ ಮಧ್ಯೆ ಅವರು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಜೋರ್ಡಾನ್ ರಾಣಿ ರಾನಿಯಾ, ಮಲೇಷ್ಯಾದ ಹಿರಿಯ ರಾಜಕಾರಣಿ ಮಹತೀರ್ ಮೊಹಮದ್ ಮತ್ತು ನಂತರ ಬೆಲ್ಜಿಯಂ ಪ್ರಧಾನ ಮಂತ್ರಿ ಚಾರ್ಲ್ಸ್ ಮೈಕೆಲ್ ಸೇರಿದಂತೆ ಹಲವಾರು ಉನ್ನತ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ,” ಎಂದು ಅಲಿಬಾಬದ ಸುದ್ದಿ ಪೋರ್ಟಲ್ ಅಲಿಝಿಲಾ ಮತ್ತು ಮಾಧ್ಯಮ ವರದಿಗಳು ತಿಳಿಸಿವೆ.
ಅಲಿಬಾಬದ ಹ್ಯಾಂಗ್‌ಝೌ ಪ್ರಧಾನ ಕಚೇರಿಯಲ್ಲಿ ಕಂಪೆನಿಯ ವಸ್ತುಸಂಗ್ರಹಾಲಯವನ್ನು ಹೊಂದಿರುವ ಕಟ್ಟಡ ಹೊಂದಿದೆ. ಅಲ್ಲಿ ಜಾಕ್ ಮಾ ಮತ್ತು ಅವರ ವ್ಯಾಪಾರ ಪಾಲುದಾರ ಜೋ ತ್ಸೈ ವಿದೇಶೀ ಸಂದರ್ಶಕರನ್ನು ಕರೆದೊಯ್ದು, ಅಲ್ಲಿರುವುದನ್ನು ತೋರಿಸುತ್ತಾರೆ ಎಂದು ಮಾ ಅವರಿಗೆ ಹತ್ತಿರವಿರುವ ಇನ್ನೊಬ್ಬ ವ್ಯಕ್ತಿಯ ಪ್ರಕಾರ ತಿಳಿದುಬರುತ್ತದೆ. ಅಲಿಬಾಬ ಮೂಲಕ ಸ್ಪಂದನೆ ಮಾಡುವ ವಿನಂತಿಗೆ ತ್ಸೈ ಪ್ರತಿಕ್ರಿಯಿಸಿಲ್ಲ.
ಅನಧಿಕೃತ ರಾಜತಾಂತ್ರಿಕತೆ
ಜಾಕ್ ಮಾ ಅವರ ವಿದೇಶೀ ರಾಜಕಾರಣಿಗಳೊಂದಿಗಿನ ಸಭೆಗಳನ್ನು ಚೀನಾಕ್ಕೆ “ಅನಧಿಕೃತ ರಾಜತಾಂತ್ರಿಕತೆ” ಎಂದು ನೋಡಿದ್ದಾರೆ. ಅದನ್ನು ಅವರು ಆನಂದಿಸಿದ್ದಾರೆ ಎನ್ನಲಾಗಿದೆ. ಅಲಿಬಾಬ ರಾಯಿಟರ್ಸ್‌ಗೆ ಪೆವಿಲಿಯನ್ 9 ಎಂದು ವ್ಯಾಪಕವಾಗಿ ಕರೆಯುವ ಅತಿಥಿ ಸ್ವಾಗತ ಸೌಲಭ್ಯವನ್ನು ಹೊಂದಿದ್ದು, ಅದು ಅದರ ಇತಿಹಾಸದ ದೃಶ್ಯ ಪ್ರವಾಸ ಮತ್ತು ಅದರ ವ್ಯವಹಾರಗಳ ಅವಲೋಕನವನ್ನು ನೀಡಿದೆ. ಇದು ತನ್ನ ಪ್ರಧಾನ ಕಚೇರಿಯಲ್ಲಿ ಇರುವ ಪ್ರದರ್ಶನ ಸಭಾಂಗಣದಲ್ಲಿ ವಿವಿಧ ರೀತಿಯ ಅತಿಥ್ಯಗಳನ್ನು ಆಯೋಜಿಸಿದೆ ಎಂದು ಅದು ಸೇರಿಸಿದೆ. ಈ ಬಗ್ಗೆ ಇತರ ಪ್ರಶ್ನೆಗಳಿಗೆ ಸಹ ಕಂಪೆನಿಯು ಪ್ರತಿಕ್ರಿಯಿಸಿಲ್ಲ.
ಚೀನಾದ ಅತ್ಯಂತ ಯಶಸ್ವಿ ಮತ್ತು ಪ್ರಭಾವಿ ಉದ್ಯಮಿಯೊಬ್ಬರ ಜೀವನವು ಹೇಗೆ ಬದಲಾಗಿದೆ ಎಂಬುದರ ಸಂಕೇತವಾಗಿ ಉದಾಹರಣೆಯನ್ನು ನೀಡುತ್ತವೆ ಮೂಲಗಳು. ಆ್ಯಂಟ್ ಲಿಸ್ಟಿಂಗ್ ನಿರ್ಬಂಧಿಸಿದ ನಂತರದ ವಾರಗಳಲ್ಲಿ ಅಧ್ಯಕ್ಷ ಕ್ಸಿ ಅವರ ಆಂತರಿಕ ವಲಯದಲ್ಲಿ ಕನಿಷ್ಠ ಇಬ್ಬರನ್ನು ಈ ಬಗ್ಗೆ ಮಾ ವಿನಂತಿಸಿದ್ದರು. ಆದರೆ ಅವರ ವಿನಂತಿಗಳನ್ನು ಇಬ್ಬರೂ ತಿರಸ್ಕರಿಸಿದ್ದರು ಎಂದು ಎರಡು ಪ್ರತ್ಯೇಕ ಮೂಲಗಳು ಖಾತ್ರಿ ಪಡಿಸಿವೆ. ಅದಾದ ಮೇಲೆ ಜಾಕ್ ಮಾ ಅವರು ಈ ವರ್ಷದ ಆರಂಭದಲ್ಲಿ ಅಧ್ಯಕ್ಷ ಕ್ಸಿಗೆ ನೇರವಾಗಿ ಪತ್ರ ಬರೆದು, ತನ್ನ ಉಳಿದ ಜೀವನವನ್ನು ಚೀನಾದ ಗ್ರಾಮೀಣ ಶಿಕ್ಷಣಕ್ಕೆ ಮೀಸಲಿಡಲು ಪ್ರಸ್ತಾಪಿಸಿದರು. ಸರ್ಕಾರದ ಮೂಲಗಳ ಪ್ರಕಾರ, ಮೇ ತಿಂಗಳಲ್ಲಿ ದೇಶದ ಹಿರಿಯ ನಾಯಕರ ಸಭೆಯಲ್ಲಿ ಅಧ್ಯಕ್ಷರು ಪತ್ರದ ಬಗ್ಗೆ ಮಾತನಾಡಿದರು.
ಕೃಷಿ ಮತ್ತು ತಂತ್ರಜ್ಞಾನ ಅಧ್ಯಯನ ಪ್ರವಾಸ
ಅಲಿಬಾಬ ಒಡೆತನದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಕಳೆದ ತಿಂಗಳು ಜಾಕ್ ಮಾ ಅವರು ಯುರೋಪ್‌ಗೆ “ಪರಿಸರಕ್ಕೆ ಸಂಬಂಧಿಸಿದ ಕೃಷಿ ಮತ್ತು ತಂತ್ರಜ್ಞಾನ ಅಧ್ಯಯನ ಪ್ರವಾಸಕ್ಕೆ ಭೇಟಿ ನೀಡುತ್ತಿದ್ದಾರೆ” ಎಂದು ಹೇಳಿದೆ. ಕಳೆದ ವಾರ ಪತ್ರಿಕೆಯು jಆಕ್ ಮಾ ಬಿಳಿ ರಕ್ಷಣಾತ್ಮಕ ನಿಲುವಂಗಿಯನ್ನು ಧರಿಸಿರುವ ಮತ್ತು ಹೂಕುಂಡಗಳನ್ನು ಹಿಡಿದಿರುವ ಚಿತ್ರಗಳನ್ನು ಪ್ರಕಟಿಸಿತು. ಅವರ ಯೋಜನೆಗಳ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ, ಕೃಷಿ ಮೂಲಸೌಕರ್ಯ ಮತ್ತು ಸಸ್ಯ ಸಂತಾನೋತ್ಪತ್ತಿಯಲ್ಲಿ ತೊಡಗಿರುವ ಯುರೋಪಿಯನ್ ಕಂಪೆನಿಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಪ್ರವಾಸವನ್ನು ಮುಂದುವರಿಸುತ್ತಾರೆ ಎಂದು ಅದು ಹೇಳಿದೆ.
ಅಲಿಬಾಬದ ಸಹ-ಸಂಸ್ಥಾಪಕರಾದ ತ್ಸೈ, ಜೂನ್‌ನಲ್ಲಿ CNBCಯ ಸ್ಕ್ವಾಕ್ ಬಾಕ್ಸ್ ಶೋನಲ್ಲಿ, “ಅವರು ಇದೀಗ ಕೆಳಗೆ ಬಿದ್ದಿದ್ದಾರೆ. ನಾನು ಪ್ರತಿದಿನ ಅವನೊಂದಿಗೆ ಮಾತನಾಡುತ್ತೇನೆ,” ಎಂದು ಹೇಳಿದ್ದರು. “ಜಾಕ್ ಈ ಅಗಾಧ ಪ್ರಮಾಣದ ಶಕ್ತಿಯನ್ನು ಹೊಂದಿದ್ದಾರೆ ಎಂಬ ಕಲ್ಪನೆಯು ಸರಿಯಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ನಿಮ್ಮ ಮತ್ತು ನನ್ನಂತೆಯೇ ಇದ್ದಾರೆ, ಅವರು ಸಾಮಾನ್ಯ ವ್ಯಕ್ತಿ,” ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Jack Ma: ಜಾಕ್ ಮಾಗೆ ಸೇರಿದ ಉದ್ಯಮಗಳ ಕತ್ತು ಹಿಸುಕುತ್ತಿದೆ ಚೀನಾದ ಕಮ್ಯುನಿಸ್ಟ್ ಸರ್ಕಾರ