Economy: ಕೋವಿಡ್ ಬಾರದೇ ಹೋಗಿದ್ದರೆ ಭಾರತದ ಆರ್ಥಿಕತೆ ಹೇಗಿರುತ್ತಿತ್ತು? ಎಷ್ಟು ಹಿಂದೆಬಿದ್ದಿದೆ? ಆರ್ಥಿಕ ತಜ್ಞ ನೀಲಕಾಂತ್ ಮಿಶ್ರ ಅಭಿಪ್ರಾಯ ಇದು

|

Updated on: Dec 12, 2023 | 10:35 AM

Axis bank chief Economist Neelkanth Mishra: ಕೋವಿಡ್ ಸಾಂಕ್ರಾಮಿಕ ರೋಗ 2020ರಲ್ಲಿ ಬಾರದೇ ಹೋಗಿದ್ದರೆ ಈಗಿನ ಆರ್ಥಿಕತೆಗಿಂತ ಶೇ. 7ರಷ್ಟು ಹೆಚ್ಚಿರುತ್ತಿತ್ತು ಎಂದಿದ್ದಾರೆ ನೀಲಕಾಂತ್ ಮಿಶ್ರಾ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7ಕ್ಕಿಂತಲೂ ಹೆಚ್ಚು ಬೆಳೆಯಬಹುದು ಎಂದು ಎಕ್ಸಿಸ್ ಬ್ಯಾಂಕ್ ಚೀಫ್ ಎಕನಾಮಿಸ್ಟ್ ಹೇಳಿದ್ದಾರೆ. ಜಾಗತಿಕ ಅಡೆತಡಗಳ ಮಧ್ಯೆ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ ಶೇ. 6.5ಕ್ಕೆ ಇಳಿಯಬಹುದು.

Economy: ಕೋವಿಡ್ ಬಾರದೇ ಹೋಗಿದ್ದರೆ ಭಾರತದ ಆರ್ಥಿಕತೆ ಹೇಗಿರುತ್ತಿತ್ತು? ಎಷ್ಟು ಹಿಂದೆಬಿದ್ದಿದೆ? ಆರ್ಥಿಕ ತಜ್ಞ ನೀಲಕಾಂತ್ ಮಿಶ್ರ ಅಭಿಪ್ರಾಯ ಇದು
ನೀಲಕಾಂತ್ ಮಿಶ್ರ
Follow us on

ನವದೆಹಲಿ, ಡಿಸೆಂಬರ್ 12: ಕೋವಿಡ್ ಬಾರದೇ ಹೋಗಿದ್ದರೆ, ಹಾಗು ಆಗಿನ ಆರ್ಥಿಕ ವೇಗದಲ್ಲಿ ಭಾರತದ ಜಿಡಿಪಿ (India GDP) ಬೆಳೆಯುತ್ತಾ ಬಂದಿದ್ದರೆ ಭಾರತದ ಆರ್ಥಿಕತೆ ಈಗಿರುವುದಕ್ಕಿಂತ ಶೇ. 7ರಷ್ಟು ಹೆಚ್ಚಿರುತ್ತಿತ್ತು. ಅಂದರೆ ಕೋವಿಡ್ ಸಂಕಷ್ಟ ಪರಿಸ್ಥಿತಿಯಿಂದ ಭಾರತದ ಆರ್ಥಿಕತೆ (Indian economy) ಶೇ. 7ರಷ್ಟು ಹಿಂದುಳಿದಿದೆ. ಹಾಗಂತ ಎಕ್ಸಿಸ್ ಬ್ಯಾಂಕ್​ನ ಚೀಫ್ ಎಕನಾಮಿಸ್ಟ್ ಆಗಿರುವ ನೀಲಕಾಂತ್ ಮಿಶ್ರ (Neelkanth Mishra) ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿ (PM-EAC Economic Advisory Council) ಸದಸ್ಯರೂ ಆಗಿರುವ ನೀಲಕಾಂತ್ ಮಿಶ್ರ ಅವರ ಪ್ರಕಾರ, ಕೋವಿಡ್​ನಿಂದಾಗಿ ಭಾರತ ಒಂದರಿಂದ ಒಂದೂವರೆ ವರ್ಷದಷ್ಟು ಹಿಂದುಳಿದಿದೆ.

ಭಾರತದ ಆರ್ಥಿಕತೆಗೆ ಶೇ. 7ರಷ್ಟು ಬೆಳೆಯುವ ಶಕ್ತಿ

ಹಣದುಬ್ಬರ ಹೆಚ್ಚಳ ಮಾಡದೇ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯುವ ಸಾಮರ್ಥ್ಯ ಇದೆ ಎಂದು ನೀಲಕಂಠ ಮಿಶ್ರ ಹೇಳಿದ್ದಾರೆ. ಅಂದರೆ, ಭಾರತದ ಜಿಡಿಪಿ ಶೇ. 7ಕ್ಕಿಂತ ಹೆಚ್ಚು ಬೆಳೆದರೆ ಹಣದುಬ್ಬರ ಹೆಚ್ಚಳಕ್ಕೆ ಎಡೆ ಮಾಡಿಕೊಡಬಹುದು. ಸದ್ಯದ ಸುರಕ್ಷಿತವಾಗಿ ಮತ್ತು ಸರಾಗವಾಗಿ ಭಾರತದ ಆರ್ಥಿಕತೆ ಮುನ್ನಡೆಯಬೇಕಾದರೆ ಶೇ. 7ರಷ್ಟು ವೃದ್ಧಿಸುವುದು ಸೂಕ್ತ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಸಾಧ್ಯತೆ; ಚುನಾವಣೆಯೊಂದೇ ಕಾರಣವಲ್ಲ; ಮತ್ತಿನ್ನೇನು ಕಾರಣ?

ರಿಯಲ್ ಎಸ್ಟೇಟ್ ಮತ್ತು ಖಾಸಗಿ ವಲಯದಲ್ಲಿ ಬಂಡವಾಳ ವೆಚ್ಚ ಅಧಿಕಗೊಂಡಿರುವುದರಿಂದ ಭಾರತಕ್ಕೆ ಉತ್ತಮ ಬೆಳವಣಿಗೆ ಅವಕಾಶ ನಿರ್ಮಾಣ ಆಗಿದೆ. 2012ರಿಂದ 2019ರವ ಅವಧಿಯಲ್ಲಿ ಈ ಎರಡು ವಲಯಗಳ ಬೆಳವಣಿಗೆ ಮಂದಗೊಂಡಿತ್ತು. ಈಗ ಅಧಿಕ ಬಂಡವಾಳದಿಂದಾಗಿ ಇವು ಗರಿಗೆದರಿವೆ. ಇದರಿಂದ ಆರ್ಥಿಕ ಪ್ರಗತಿ ಸುಸ್ಥಿರವಾಗಿ ಸಾಗಲು ಅವಕಾಶ ಇದೆ ಎಂಬುದು ಎಕ್ಸಿಸ್ ಬ್ಯಾಂಕ್​ನ ಮುಖ್ಯ ಆರ್ಥಿಕ ತಜ್ಞರ ಅಭಿಮತ.

ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿದರ ಶೇ. 6.5

ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ ಆರ್​ಬಿಐ ಅಂದಾಜು ಮಾಡಿದುದಕ್ಕಿಂತಲೂ ಹೆಚ್ಚೇ ಬೆಳೆಯಬಹುದು ಎಂದು ಹೇಳುವ ನೀಲಕಾಂತ್ ಮಿಶ್ರ, ಮುಂದಿನ ಹಣಕಾಸು ವರ್ಷದಲ್ಲಿ ಅದೇ ವೇಗ ಇರುವುದಿಲ್ಲ ಎಂತಲೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?

ಜಾತಿಕವಾಗಿ ಪ್ರತಿಕೂಲ ಪರಿಸ್ಥಿತಿ ಇರುವುದರಿಂದ ಭಾರತದ ಆರ್ಥಿಕತೆ ಮುಂದಿನ ಹಣಕಾಸು ವರ್ಷದಲ್ಲಿ (2024-25) ಶೇ. 6.5ರಷ್ಟು ಮಾತ್ರ ಬೆಳೆಯಬಹುದು ಎಂದು ಮಿಶ್ರಾ ಹೆಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:27 am, Tue, 12 December 23