Price Rise: ಸರ್ಕಾರಕ್ಕೆ ಹಾಲು ಸಕ್ಕರೆ ತಲೆನೋವು; ಹಣದುಬ್ಬರಕ್ಕೆ ಕಾರಣವಾಗುವ ಪ್ರಮುಖ ಆಹಾರವಸ್ತುಗಳು ಯಾವುವು?

|

Updated on: Apr 13, 2023 | 2:23 PM

Milk Prices Effect On Inflation: ಭಾರತದಲ್ಲಿ ಹಣದುಬ್ಬರ ಅಳೆಯುವ ವಿಧಾನಗಳಲ್ಲಿ ಸಿಪಿಐ ಕೂಡ ಒಂದು. ಅಂದರೆ ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾಗಿ ಹಣದುಬ್ಬರ ಗಣಿಸಲಾಗುತ್ತದೆ. ಜನರು ದಿನಬಳಸುವ ಅಗತ್ಯ ಸರಕು ಮತ್ತು ಸೇವೆಗಳ ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದರ ಮೇಲೆ ಹಣದುಬ್ಬರ ನಿಂತಿದೆ.

Price Rise: ಸರ್ಕಾರಕ್ಕೆ ಹಾಲು ಸಕ್ಕರೆ ತಲೆನೋವು; ಹಣದುಬ್ಬರಕ್ಕೆ ಕಾರಣವಾಗುವ ಪ್ರಮುಖ ಆಹಾರವಸ್ತುಗಳು ಯಾವುವು?
ಬೆಲೆ ಏರಿಕೆ
Follow us on

ನವದೆಹಲಿ: ಭಾರತದಲ್ಲಿ ಹಣದುಬ್ಬರ (Inflation) ಕಡಿಮೆ ಆಗಿದೆ ಎನ್ನುವಂತಹ ಸುದ್ದಿ ಇದೆ. ಆದರೆ, ಇದೇ ಸಿಹಿ ಮುಂದಿನ ಬಾರಿಯೂ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಲು, ಸಕ್ಕರೆ ಇತ್ಯಾದಿ ವಸ್ತುಗಳ ಬೆಲೆಗಳು ಮುಂದಿನ ದಿನಗಳಲ್ಲಿ ಬಹಳಷ್ಟು ಹೆಚ್ಚಾಗಬಹುದು. ಇದರಿಂದ ಹಣದುಬ್ಬರ ಮತ್ತೆ ಶೇ. 6ಕ್ಕಿಂತ ಹೆಚ್ಚು ಮಟ್ಟಕ್ಕೆ ಉಬ್ಬಿ ಹೋಗಬಹುದು ಎಂದು ಹಲವರು ಎಚ್ಚರಿಸುತ್ತಿದ್ದಾರೆ. ಈ ವಸ್ತುಗಳ ಬೆಲೆ ಹೆಚ್ಚಿದರೆ ಹಣದುಬ್ಬರ ಹೇಗೆ ಹೆಚ್ಚಾಗುತ್ತದೆ ಎಂಬ ಕುತೂಹಲ ಕೆಲವರಿಗೆ ಮೂಡಬಹುದು. ಹಣದುಬ್ಬರ ಲೆಕ್ಕಾಚಾರಕ್ಕೆ ಸರ್ಕಾರ ಒಂದಿಷ್ಟು ಮಾನದಂಡ ಹಾಕಿದೆ. ಭಾರತದಲ್ಲಿ ಹಣದುಬ್ಬರ ಅಳೆಯುವ ವಿಧಾನಗಳಲ್ಲಿ ಸಿಪಿಐ ಕೂಡ ಒಂದು. ಅಂದರೆ ಗ್ರಾಹಕ ಬೆಲೆ ಅನುಸೂಚಿ (CPI- Consumer Price Index) ಆಧಾರಿತವಾಗಿ ಹಣದುಬ್ಬರ ಗಣಿಸಲಾಗುತ್ತದೆ. ಜನರು ದಿನಬಳಸುವ ಅಗತ್ಯ ಸರಕು ಮತ್ತು ಸೇವೆಗಳ (Goods and Service) ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದರ ಮೇಲೆ ಹಣದುಬ್ಬರ ನಿಂತಿದೆ. ಈ ಸರಕು ಮತ್ತು ಸೇವೆಗಳನ್ನು ಪಟ್ಟಿ ಮಾಡಿದ್ದು ಅದಕ್ಕೆ ಪ್ರತ್ಯೇಕ ಪ್ರಾಮುಖ್ಯತೆ ಕೊಡಲಾಗಿದೆ. ಈ ಪಟ್ಟಿಯನ್ನು ಇದೇ ಲೇಖನದಲ್ಲಿ ನೀಡಲಾಗಿದೆ.

ಗ್ರಾಹ ಬೆಲೆ ಸೂಚಿಯ ಪಟ್ಟಿಯಲ್ಲಿರುವ ಸರಕು ಮತ್ತು ಸೇವೆಗಳು (ಅತಿಹೆಚ್ಚು ಮುಖ್ಯವೆನಿಸಿದವು)

  • ಆಹಾರ ಹಾಗೂ ಪಾನೀಯಗಳು: ಶೇ. 45.86
  • ಗೃಹ ನಿರ್ಮಾಣ: 10.07
  • ಇಂಧನ, ವಿದ್ಯುತ್: 6.84
  • ಉಡುಗೆ ಮತ್ತು ಪಾದುಕೆ: 6.53
  • ಇತರೆ: 28.32

ಇದನ್ನೂ ಓದಿHardwyn India: 3 ವರ್ಷದಲ್ಲಿ 43ಪಟ್ಟು ಹೆಚ್ಚು ಲಾಭ; ಹಾರ್ಡ್​ವಿನ್ ಷೇರಿಗೆ ಹಣ ಹಾಕಿದವರು ಇವತ್ತು ಕೋಟ್ಯಾಧೀಶ್ವರರು

ಇನ್ನೂ ವಿಸ್ತೃತ ಸಿಪಿಐ ಪಟ್ಟಿ

  • ಆಹಾರ ಧಾನ್ಯ, ಬೇಳೆ ಕಾಳುಗಳು: 12.05
  • ಹಾಲು ಹಾಗೂ ಅದರ ಉತ್ಪನ್ನಗಳು: 6.61
  • ಹಣ್ಣು ಮತ್ತು ತರಕಾರಿ: 8.93
  • ಮಾಂಸಾಹಾರ, ಮೀನು, ಮೊಟ್ಟೆ: 4.04
  • ಉಡುಗೆ ತೊಡುಗೆ: 5.58
  • ಇಂಧನ: 6.84
  • ಸಾರಿಗೆ ಮತ್ತು ಸಂವಹನ: 8.59
  • ಶಿಕ್ಷಣ: 4.46
  • ಸಕ್ಕರೆ ಹಾಗೂ ಸಿಹಿ ತಿಂಡಿಗಳು: 1.36

ಹಾಲಾಹಲಕ್ಕೆ ಕಾರಣವಾಗಲಿರುವ ಹಾಲು

ಮೇಲಿನ ಸಿಪಿಐ ಪಟ್ಟಿಯಲ್ಲಿ ಹೆಚ್ಚು ವೇಯ್ಟೇಜ್ ಇರುವ ಆಹಾರ ವಸ್ತುಗಳಲ್ಲಿ ಹಾಲು ಇದೆ. ಭಾರತದಲ್ಲಿ ಹಾಲಿನ ಬೆಲೆ ಆಗಾಗ್ಗೆ ಹೆಚ್ಚುತ್ತಲೇ ಇರುತ್ತದೆ. ಆಹಾರ ಧಾನ್ಯಗಳ ಬೆಲೆ ಹೆಚ್ಚಾಗಿರುವುದರಿಂದ ದನಕರುಗಳಿಗೆ ನೀಡಲಾಗುವ ಇಂಡಿ, ಹೊಟ್ಟು ಬೂಸ ಇತ್ಯಾದಿ ಆಹಾರವಸ್ತುಗಳ ಬೆಲೆ ಹೆಚ್ಚಾಗಿದೆ. ಕೋವಿಡ್ ಸಂದರ್ಭದಲ್ಲಿ ದನಕರುಗಳಿಗೆ ಸರಿಯಾಗಿ ಮೇವು ಸಿಗದೇ ಇದ್ದರಿಂದ ಹಾಲಿನ ಉತ್ಪಾದನೆ ಕಡಿಮೆ ಆಗಿತ್ತು. ಇವೆಲ್ಲವೂ ಹಾಲಿನ ಬೆಲೆ ಒಂದು ವರ್ಷದಲ್ಲಿ ಶೇ. 12ರಷ್ಟು ಹೆಚ್ಚುವಂತೆ ಮಾಡಿದೆ. ಮುಂದಿನ ದಿನಗಳಲ್ಲೂ ಹಾಲಿನ ಬೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಇದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಬಹುದು.

ಇದನ್ನೂ ಓದಿInflation: ಕೊನೆಗೂ ಹಳಿಗೆ ಬಂದ ಹಣದುಬ್ಬರ; ಶೇ. 5.6ಕ್ಕೆ ಇಳಿದ ರೀಟೇಲ್ ಇನ್​ಫ್ಲೇಶನ್

ಹಾಲಿನ ಜೊತೆಗೆ ಸಕ್ಕರೆ ಬೆಲೆ ತುಟ್ಟಿಯಾಗುತ್ತಿದೆ. ಈಗಾಗಲೇ ಸಕ್ಕರೆ ಬೆಲೆ ಕಿಲೋಗೆ 45 ರೂ ತಲುಪಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಇನ್ನೂ ಅಧಿಕಗೊಳ್ಳಲಿದೆ. ಈ ಬಾರಿಯ ಮಳೆ ಋತುವಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ. ಹೀಗಾಗಿ, ಸಕ್ಕರೆ ಉತ್ಪಾದನೆ ಕಡಿಮೆ ಇರಲಿದೆ. ಅಲ್ಲದೇ ಸಕ್ಕರೆ ಕಾರ್ಖಾನೆಗಳು ಈಗ ಕಬ್ಬು ಅರೆಯುವುದನ್ನು ನಿಲ್ಲಿಸಿರುವುದು ಸಕ್ಕರೆ ಉತ್ಪಾದನೆ ಈ ಬಾರಿ ಸೀಮಿತಗೊಳ್ಳುವ ಸೂಚನೆ ನೀಡಿದೆ.

ಸಿಪಿಐ ಪಟ್ಟಿಯಲ್ಲಿ ಸಕ್ಕರೆ ಹಾಗೂ ಸಿಹಿ ತಿಂಡಿಯ ತೂಕ ಕಡಿಮೆ ಇದೆಯಾದರೂ ಸಕ್ಕರೆ ಬೆಲೆ ಗಣನೀಯವಾಗಿ ಹೆಚ್ಚಾದರೆ ಹಣದುಬ್ಬರದ ಮೇಲೆ ಪರಿಣಾಮ ಬೀರುವುದು ಹೌದು.

ಇದನ್ನೂ ಓದಿSmartphone: ಭಾರತದಿಂದ ಸ್ಮಾರ್ಟ್​ಫೋನ್ ರಫ್ತು ಎರಡು ಪಟ್ಟು ಹೆಚ್ಚಳ; ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಲಿದೆಯಾ ಭಾರತ?

ಭಾರತದ ಕೈಹಿಡಿದ ರಷ್ಯಾ ತೈಲ

ಒಂದು ವೇಳೆ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗದೇ ಹೋಗಿದ್ದರೆ ಭಾರತದಲ್ಲಿ ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತೀರಾ ತುಟ್ಟಿಯಾಗಿರುತ್ತಿದ್ದವು. ಹಣದುಬ್ಬರ ಶೇ. 7ಕ್ಕಿಂತ ಮೇಲೆಯೇ ಇದ್ದಿರುತ್ತಿತ್ತು. ಇಂಧನದ ಬೆಲೆ ಹೆಚ್ಚಾದರೆ ಸಾರಿಗೆ ಬೆಲೆಯೂ ಸಹಜವಾಗಿ ಹೆಚ್ಚುತ್ತದೆ. ಆಹಾರ ಧಾನ್ಯ ಮತ್ತಿತರ ಬಹುತೇಕ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚುತ್ತವೆ. ಹೀಗಾಗಿ ಭಾರತಕ್ಕೆ ತೈಲ ಸರಬರಾಜು ಮಾಡುವ ಮೂಲಕ ರಷ್ಯಾ ಒಂದು ರೀತಿಯಲ್ಲಿ ಆಪತ್ಬಾಂಧವ ಎನಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Thu, 13 April 23