Hardwyn India: 3 ವರ್ಷದಲ್ಲಿ 43ಪಟ್ಟು ಹೆಚ್ಚು ಲಾಭ; ಹಾರ್ಡ್​ವಿನ್ ಷೇರಿಗೆ ಹಣ ಹಾಕಿದವರು ಇವತ್ತು ಕೋಟ್ಯಾಧೀಶ್ವರರು

Multibagger Stock Gives 43 Times More Pofit: ಹಾರ್ಡ್​ವಿನ್ ಇಂಡಿಯಾ ಎಂಬ ಕಂಪನಿಯ ಷೇರುಪೇಟೆ ಓಟ ಈಗ ಅದಕ್ಕೆ ಮಲ್ಟಿಬ್ಯಾಗರ್ ಸ್ಟಾಕ್ ಎಂಬ ಹೆಗ್ಗಳಿಕೆ ತಂದಿದೆ. ಕಳೆದ 3 ವರ್ಷದಲ್ಲಿ ಈ ಕಂಪನಿಯ ಷೇರು 4,350 ಪ್ರತಿಶತದಷ್ಟು ಬೆಳೆದಿದೆ. ಅಂದರೆ ಹಾರ್ಡ್​ವಿನ್ ಷೇರು ಮೌಲ್ಯ 43 ಪಟ್ಟು ಹೆಚ್ಚಾಗಿದೆ.

Hardwyn India: 3 ವರ್ಷದಲ್ಲಿ 43ಪಟ್ಟು ಹೆಚ್ಚು ಲಾಭ; ಹಾರ್ಡ್​ವಿನ್ ಷೇರಿಗೆ ಹಣ ಹಾಕಿದವರು ಇವತ್ತು ಕೋಟ್ಯಾಧೀಶ್ವರರು
ಷೇರುಪೇಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 13, 2023 | 12:59 PM

ನವದೆಹಲಿ: ಷೇರುಪೇಟೆಯ ಮ್ಯಾಜಿಕ್ ಇರುವುದೇ ಹೀಗೆ. ಯಾವ ಕಂಪನಿಯ ಷೇರು ಯಾವ ದಿಕ್ಕಿನಲ್ಲಿ ಸಾಗುತ್ತೆ ಎಂದು ನಿಖರವಾಗಿ ಅಂದಾಜು ಮಾಡುವುದು ಕಷ್ಟ. ದೊಡ್ಡ ಕಂಪನಿ ಇನ್ನೂ ದೊಡ್ಡದಾಗಿ ಬೆಳೆಯಬಹುದು ಎಂದು ನಿರೀಕ್ಷಿಸಿ ಹಣ ಹೂಡಿದವರು ಕೈಕೈ ಹಿಸುಕಿಕೊಳ್ಳುವ ಮಟ್ಟಕ್ಕೆ ಹೋದ ಹಲವು ನಿದರ್ಶನಗಳು ಕಣ್ಮುಂದೆ ಇವೆ. ಇನ್ನೂ ಕೆಲ ಕಂಪನಿಗಳ ಬಗ್ಗೆ ಬಹಳ ಮಂದಿಗೆ ಗೊತ್ತೇ ಇರುವುದಿಲ್ಲ. ಆ ಕ್ಷೇತ್ರದಲ್ಲಿರುವವರಿಗೆ ಮಾತ್ರ ಗೊತ್ತಿರುವ ಇಂಥ ಕೆಲ ಕಂಪನಿಗಳ ಷೇರುಗಳು ಸಿಕ್ಕಾಪಟ್ಟೆ ಬೆಳೆದು, ಅದರಲ್ಲಿ ಹೂಡಿಕೆ ಮಾಡಿದ್ದವರನ್ನು ಕೋಟ್ಯಾಧೀಶ್ವರರನ್ನಾಗಿಸಿಬಿಡುತ್ತವೆ. ಇಂಥ ಕಂಪನಿಯ ಷೇರಿಗೆ ಮಲ್ಟಿಬ್ಯಾಗರ್ ಸ್ಟಾಕ್ (Multibagger Stock) ಎನ್ನುತ್ತಾರೆ. ಹಾರ್ಡ್​ವಿನ್ ಇಂಡಿಯಾ (Hardwyn India) ಎಂಬ ಕಂಪನಿಯ ಷೇರುಪೇಟೆ ಓಟ ಈಗ ಅದಕ್ಕೆ ಮಲ್ಟಿಬ್ಯಾಗರ್ ಸ್ಟಾಕ್ ಎಂಬ ಹೆಗ್ಗಳಿಕೆ ತಂದಿದೆ. ಕಳೆದ 3 ವರ್ಷದಲ್ಲಿ ಈ ಕಂಪನಿಯ ಷೇರು 4,350 ಪ್ರತಿಶತದಷ್ಟು ಬೆಳೆದಿದೆ. ಅಂದರೆ ಹಾರ್ಡ್​ವಿನ್ ಷೇರು ಮೌಲ್ಯ 43 ಪಟ್ಟು ಹೆಚ್ಚಾಗಿದೆ. 2020 ಜುಲೈನಲ್ಲಿ ಕೇವಲ 7 ರೂಪಾಯಿ ಇದ್ದ ಇದರ ಬೆಲೆ ಇದೀಗ 304 ರುಪಾಯಿ ಆಗಿದೆ. ನಿನ್ನೆಯಷ್ಟೇ 250 ರೂ ಇದ್ದ ಷೇರು ಬೆಲೆ ಗುರುವಾರ ಒಂದೇ ದಿನದಲ್ಲಿ 50 ರೂ ಹೆಚ್ಚಿಸಿಕೊಂಡಿದೆ.

ಷೇರು ವಿಭಜನೆ ಮಾಡಲಿರುವ ಹಾರ್ಡ್​ವಿನ್ ಇಂಡಿಯಾ; ಷೇರುಭಾಗವಾದರೆ ಏನಾಗುತ್ತದೆ?

ಷೇರು ಮೌಲ್ಯ ನಿರೀಕ್ಷೆ ಮೀರಿ ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಹಾರ್ಡ್​ವಿನ್ ಇಂಡಿಯಾ ಸಂಸ್ಥೆಯ ತನ್ನ ಷೇರುಗಳ ವಿಭಜನೆ (Split of Shares) ಮಾಡುವ ನಿರ್ಧಾರಕ್ಕೆ ಬಂದಿದೆ. 2023 ಏಪ್ರಿಲ್ 26ರಂದು ಕಂಪನಿಯ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಷೇರು ವಿಭಜನೆ ಮಾಡುವ ನಿರ್ಧಾರವನ್ನು ಪರಿಶೀಲಿಸಿ, ಅಂದೇ ಅನುಮೋದನೆ ಕೊಡುವ ನಿರೀಕ್ಷೆ ಇದೆ. ಈ ವಿಚಾರವನ್ನು ಹಾರ್ಡ್​ವಿನ್ ಇಂಡಿಯಾ ಷೇರು ವಿನಿಮಿಯ ಕೇಂದ್ರಕ್ಕೆ ಏಪ್ರಿಲ್ 7ರಂದು ಸಲ್ಲಿಸಿದ ಫೈಲಿಂಗ್​ನಲ್ಲಿ ಮಾಹಿತಿ ಕೊಟ್ಟಿದೆ.

ಇದನ್ನೂ ಓದಿSmartphone: ಭಾರತದಿಂದ ಸ್ಮಾರ್ಟ್​ಫೋನ್ ರಫ್ತು ಎರಡು ಪಟ್ಟು ಹೆಚ್ಚಳ; ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಲಿದೆಯಾ ಭಾರತ?

ಇಲ್ಲಿ ಷೇರು ವಿಭಜನೆಯಾದರೆ ಷೇರುಗಳ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಅದರ ಮೌಲ್ಯದಲ್ಲಲ್ಲ. ಉದಾಹರಣೆಗೆ ಹಾರ್ಡ್​ವಿನ್ ಇಂಡಿಯಾದ ಒಂದು ಷೇರು ಮೌಲ್ಯ ಪ್ರಸ್ತುತ 300 ರೂ ಇದೆ ಎಂದಿಟ್ಟುಕೊಳ್ಳಿ. ಒಂದು ಷೇರನ್ನು ಎರಡು ಷೇರುಗಳಾಗಿ ವಿಭಜಿಸಿದರೆ ಒಂದೊಂದು ಷೇರು ಮೌಲ್ಯವೂ ಅದೇ ಪ್ರಮಾಣದಲ್ಲಿ ವಿಭಜನೆ ಆಗುತ್ತದೆ. ಅಂದರೆ 150 ರೂಗಳ ಎರಡು ಷೇರುಗಳಾಗುತ್ತವೆ. ಈಗ 100 ಷೇರುಗಳನ್ನು ಹೊಂದಿರುವ ವ್ಯಕ್ತಿ ಬಳಿ 30,000 ರೂ ಮೌಲ್ಯದ ಷೇರು ಇದ್ದಂತಾಗುತ್ತದೆ. ಒಂದು ಷೇರನ್ನು ತಲಾ 150 ರೂಗಳ ಎರಡು ಷೇರುಗಳಾಗಿ ವಿಭಜಿಸಿದಾಗ, ಈ ವ್ಯಕ್ತಿ ಬಳಿ ಇರುವ ಷೇರುಗಳ ಸಂಖ್ಯೆ 200 ಆಗುತ್ತದೆ. ಆದರೆ, ಒಟ್ಟು ಮೌಲ್ಯ ಮಾತ್ರ 30,000 ರೂ ಮಾತ್ರ ಇರುತ್ತದೆ.

ಯಾವುದಿದು ಹಾರ್ಡ್​ವಿನ್ ಇಂಡಿಯಾ ಕಂಪನಿ?

ಹಾರ್ಡ್​ವಿನ್ ಇಂಡಿಯಾ ವಾಸಸ್ಥಳ ಮತ್ತು ವಾಣಿಜ್ಯ ಕಟ್ಟಡಗಳಿಗೆ ಬಳಸುವ ಹಾರ್ಡ್​ವೇರ್ ಮತ್ತು ಗ್ಲಾಸ್ ಫಿಟ್ಟಿಂಗ್ ವಸ್ತುಗಳ ಉತ್ಪಾದಕ ಕಂಪನಿ. ಇದರ ಆದಾಯ ಕಣ್ಕುವಷ್ಟು ಏನೂ ಇಲ್ಲ. 2022ರ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಹಾರ್ಡ್​ವಿನ್ ಇಂಡಿಯಾ ಗಳಿಸಿದ ನಿವ್ವಳ ಲಾಭ ಕೇವಲ 3.27 ರೂ ಮಾತ್ರ. ಈ ಅವಧಿಯಲ್ಲಿ ಅದು 34.73 ಕೋಟಿ ರೂ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದೆ.

ಇನ್ನಷ್ಟು ಷೇರುಪೇಟೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ