Aadhaar-PAN Link Update: ಆಧಾರ್-ಪ್ಯಾನ್ ಲಿಂಕ್: ಈ ಫಾರ್ಮ್ ಆಯ್ಕೆ ಮಾಡಿಕೊಳ್ಳಿ- ಇಲ್ಲಿದೆ ಹೆಚ್ಚಿನ ಮಾಹಿತಿ

New Option Before Late Payment Fees: ಇದೀಗ 1,000 ರೂ ಶುಲ್ಕ ಪಾವತಿಸಿ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಬೇಕು. ಇದಕ್ಕೆ 2023ರ ಮಾರ್ಚ್ 31 ದಿನಾಂಕವನ್ನು ಅಂತಿಮ ಗಡುವಾಗಿ ಇಡಲಾಗಿತ್ತು. ಆದರೆ ಬಹಳ ಮಂದಿ ಇನ್ನೂ ಲಿಂಕ್ ಮಾಡಿಲ್ಲದಿರುವುದರಿಂದ ಜೂನ್ 30ರವರೆಗೂ ಅವಧಿ ವಿಸ್ತರಿಸಲಾಗಿದೆ.

Aadhaar-PAN Link Update: ಆಧಾರ್-ಪ್ಯಾನ್ ಲಿಂಕ್: ಈ ಫಾರ್ಮ್ ಆಯ್ಕೆ ಮಾಡಿಕೊಳ್ಳಿ- ಇಲ್ಲಿದೆ ಹೆಚ್ಚಿನ ಮಾಹಿತಿ
ಆಧಾರ್ ಮತ್ತು ಪಾನ್ ನಂಬರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 14, 2023 | 12:50 PM

ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ ಅನ್ನು ಲಿಂಕ್ (Aadhaar PAN Linking) ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ (Income Tax Department) ಸೂಚನೆ ನೀಡಿ ವರ್ಷಗಳೇ ಆಗಿವೆ. ಕಳೆದ ವರ್ಷ ಮಾರ್ಚ್ 31ರವರೆಗೂ ಈ ಎರಡನ್ನು ಉಚಿತವಾಗಿ ಲಿಂಕ್ ಮಾಡುವ ಅವಕಾಶ ನೀಡಲಾಗಿತ್ತು. ಇದೀಗ 1,000 ರೂ ಶುಲ್ಕ ಪಾವತಿಸಿ ಆಧಾರ್ ಮತ್ತು ಪ್ಯಾನ್ ನಂಬರ್ (PAN) ಲಿಂಕ್ ಮಾಡಬೇಕು. ಇದಕ್ಕೆ 2023ರ ಮಾರ್ಚ್ 31 ದಿನಾಂಕವನ್ನು ಅಂತಿಮ ಗಡುವಾಗಿ ಇಡಲಾಗಿತ್ತು. ಆದರೆ ಬಹಳ ಮಂದಿ ಇನ್ನೂ ಲಿಂಕ್ ಮಾಡಿಲ್ಲದಿರುವುದರಿಂದ ಜೂನ್ 30ರವರೆಗೂ ಅವಧಿ ವಿಸ್ತರಿಸಲಾಗಿದೆ. ಅಂದರೆ ಲೇಟ್ ಪೇಮೆಂಟ್ ಶುಲ್ಕ ಕಟ್ಟಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಜೂನ್ 30ರವರೆಗೂ ಅವಕಾಶ ಇದೆ. ಅದಾದ ಬಳಿಕ ಪಾನ್ ಸಂಖ್ಯೆ ನಿಷ್ಕ್ರಿಯಗೊಳ್ಳುತ್ತದೆ. ಇದು ಐಟಿ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿರುವ ಅಂಶ. ಇದರ ಜೊತೆಗೆ ಆಧಾರ್ ಮತ್ತು ಪ್ಯಾನ್ ನಂಬರ್ ಜೋಡಿಸುವಾಗಿನ ಪ್ರಕ್ರಿಯೆಯಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅದರ ವಿವರ ಕೆಳಗಿದೆ.

ಆಧಾರ್ ಮತ್ತು ಪಾನ್ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ಒಂದು ಬದಲಾವಣೆ

ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಲಾಗಿದ್ದರೂ ಈಗಲೂ ಲಕ್ಷಾಂತರ ಮಂದಿ ಇವೆರಡನ್ನು ಲಿಂಕ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಮಾರ್ಚ್ ತಿಂಗಳಿಂದ ಜನರು ಗಡಿಬಿಡಿಯಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುತ್ತಿದ್ದಾರೆ. ಇದೀಗ ಏಪ್ರಿಲ್ ತಿಂಗಳಲ್ಲಿ ಈ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ಒಂದು ಬದಲಾವಣೆ ಆಗಿದೆ.

ಇದನ್ನೂ ಓದಿInfosys: ಇನ್ಫೋಸಿಸ್ ಷೇರು ಡಿವಿಡೆಂಡ್; ಅಕ್ಷತಾ ಮೂರ್ತಿಗೆ ಸಿಗುವ ಹಣ ಎಷ್ಟು? ಕಂಪನಿ ಲಾಭ ಎಷ್ಟು? ಯಾರ ಬಳಿ ಎಷ್ಟೆಷ್ಟು ಷೇರುಗಳಿವೆ?

1,000 ರೂಗಳ ಶುಲ್ಕ ಕಟ್ಟುವ ಮುನ್ನ ಹಣಕಾಸು ವರ್ಷವಾಗಿ 24-25 ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಮಾರ್ಚ್ 31ಕ್ಕೆ ಮುನ್ನ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವಾಗ ಹಣಕಾಸು ವರ್ಷ 23-24 ಎಂದು ಆಯ್ಕೆ ಮಾಡಲಾಗುತ್ತಿತ್ತು. ಈಗ ಅದನ್ನು 24-25 ಎಂದು ಆಯ್ಕೆ ಮಾಡಿಕೊಳ್ಳಬೇಕು. ಹಾಗೆಯೇ ಪಾವತಿ ವಿಧಾನವನ್ನು ಅದರ್ ರೆಸಿಪ್ಟ್ಸ್ (500) ಎಂಬ ಆಯ್ಕೆ ಆರಿಸಬೇಕು.

ಆಧಾರ್ ಮತ್ತು ಪಾನ್ ನಂಬರ್ ಜೋಡಿಸುವ ವಿಧಾನಗಳು:

ಐಟಿ ಪೋರ್ಟಲ್ ಮೂಲಕ:

  • ಆದಾಯ ತೆರಿಗೆ ಇಲಾಖೆಯ ಇಫೈಲಿಂಗ್ ಪೋರ್ಟಲ್ incometax.gov.in/iec/foportal/ ಭೇಟಿ ನೀಡಿ
  • ಕ್ವಿಕ್ ಲಿಂಕ್ಸ್ ಸೆಕ್ಷನ್​ನಲ್ಲಿ ಕಾಣುವ ಲಿಂಕ್ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಇದಾದ ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಪ್ಯಾನ್ ನಂಬರ್, ಆಧಾರ್ ನಂಬರ್ ಮತ್ತಿತರ ಕೆಲ ವಿವರ ಭರ್ತಿ ಮಾಡಿ.
  • ನಂತರ ಶುಲ್ಕ ಪಾವತಿ ಪುಟಕ್ಕೆ ಕರೆದೊಯ್ಯುತ್ತದೆ.
  • ಅಲ್ಲಿ ಶುಲ್ಕ ಕಟ್ಟಿದ ಬಳಿಕ ನಿಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಬಹುದು.

ಇದೇ ಕ್ವಿಕ್ ಲಿಂಕ್ ಸೆಕ್ಷನ್​ನಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಎಂಬ ಆಯ್ಕೆ ಇರುತ್ತದೆ. ಅಲ್ಲಿಗೆ ಹೋದರೆ ನಿಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸಬಹುದು.

ಇದನ್ನೂ ಓದಿBrightcom Fraud: ಅಕ್ರಮ ಹಣಕಾಸು ವರದಿ ಆರೋಪ: ಬ್ರೈಟ್​ಕಾಮ್ ಗ್ರೂಪ್​ಗೆ ಶೋಕಾಸ್ ನೋಟೀಸ್; ಕುಸಿಯುತ್ತಿರುವ ಷೇರುಬೆಲೆ

ಎಸ್ಸೆಮ್ಮೆಸ್ ಮೂಲಕ ಆಧಾರ್ ಮತ್ತು ಪಾನ್ ಲಿಂಕ್ ಮಾಡಿ

  • ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಇರುವ ಮೊಬೈಲ್​ನಲ್ಲಿ ಈ ಕೆಳಗಿನಂತೆ ಮೆಸೇಜ್ ಟೈಪಿಸಿ
  • UIDPAN <12 ಅಂಕಿಗಳ ಆಧಾರ್ ಸಂಖ್ಯೆ> <10 ಅಂಕಿಗಳ ಪ್ಯಾನ್ ನಂಬರ್>
  • ಈ ಮೆಸೇಜ್ ಅನ್ನು 567678 ಅಥವಾ 56161 ಈ ನಂಬರ್​ಗೆ ಎಸ್ಸೆಮ್ಮೆಸ್ ಮೂಲಕ ಕಳುಹಿಸಿ.
  • ಈಗ ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಆಗಿರುವ ಸಂದೇಶ ಬರುತ್ತದೆ.

ಇವೆಲ್ಲವನ್ನೂ ನೀವೇ ಖುದ್ದಾಗಿ ಮಾಡಬಹುದು. ಒಂದು ವೇಳೆ ಇದನ್ನು ಮಾಡಲು ಆಗುವುದಿಲ್ಲ ಎಂದಾದರೆ ಗ್ರಾಹಕ ಸೇವಾ ಕೇಂದ್ರಗಳ ಬಳಿ ಹೋಗಿ ಲಿಂಕ್ ಮಾಡಿಸಬಹುದು. ಇದಕ್ಕೆ ಹೆಚ್ಚಿನ ಹಣ ತೆರಬೇಕಾಗುತ್ತದೆ.

ಆಧಾರ್ ಮತ್ತು ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?

  • ಪ್ಯಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ.
  • ಐಟಿ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ
  • ಹಿಂದೆ ಐಟಿಆರ್ ಸಲ್ಲಿಸಿ ಬಾಕಿ ಬರಬೇಕಿರುವ ರೀಫಂಡ್ ಸಿಗುವುದಿಲ್ಲ
  • ಪಾನ್ ಚಾಲ್ತಿಯಲ್ಲಿ ಇರುವುದಿಲ್ಲವಾದ್ದರಿಂದ ಹೆಚ್ಚು ಮೊತ್ತದ ತೆರಿಗೆ ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ.
  • ನಿಷ್ಕ್ರಿಯಗೊಂಡ ಪ್ಯಾನ್ ಸಂಖ್ಯೆಯನ್ನು ಎಲ್ಲಿಯಾದರೂ ಬಳಸಿದರೆ 10 ಸಾವಿರ ರೂವರೆಗೂ ದಂಡ ಬೀಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿIPL-Insurance: ಐಪಿಎಲ್ ಅಬ್ಬರದ ಮಧ್ಯೆ ನಷ್ಟ ಎದುರಿಸಲು ಇನ್ಷೂರೆನ್ಸ್ ಮೊರೆ; ಯಾವ್ಯಾವುದಕ್ಕೆ ವಿಮೆ? ಇಲ್ಲಿದೆ ಡೀಟೇಲ್ಸ್

ಜೂನ್ 30 ಬಳಿಕ ಪ್ಯಾನ್ ನಂಬರ್ ನಿಷ್ಕ್ರಿಯಗೊಂಡಾಗ ಏನು ಮಾಡಬೇಕು?

ನೀವು ಐಟಿಆರ್ ಸಲ್ಲಿಸುವುದಿದ್ದರೆ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಲೇಬೇಕು. ನೀವು ಐಟಿ ರಿಟರ್ನ್ ಸಲ್ಲಿಸುವ ಪೈಕಿಯವರಲ್ಲ ಎಂದಾಗಿ, ಒಂದು ವೇಳೆ ನಿಮ್ಮ ಪ್ಯಾನ್ ಸಂಖ್ಯೆ ನಿಷ್ಕ್ರಿಯಗೊಂಡಿದ್ದೇ ಆದಲ್ಲಿ ಗಾಬರಿ ಬೀಳದಿರಿ. ನೂರಿನ್ನೂರು ರುಪಾಯಿಗೆ ಹೊಸ ಪ್ಯಾನ್ ಕಾರ್ಡ್ ಅನ್ನು ಪಡೆಯಬಹುದು.

ಹೀಗೆ ಪಡೆದ ಹೊಸ ಪ್ಯಾನ್ ನಂಬರ್ ಅನ್ನು ನೀವು ಖಾತೆ ಹೊಂದಿರುವ ಬ್ಯಾಂಕು, ಅಂಚೆ ಕಚೇರಿ, ಗ್ಯಾಸ್ ಏಜೆನ್ಸಿ ಇತ್ಯಾದಿ ಕಡೆ ಕೆವೈಸಿ ಅಪ್​ಡೇಟ್ ಮಾಡುವುದನ್ನು ಮರೆಯದಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Fri, 14 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ