Infosys: ಇನ್ಫೋಸಿಸ್ ಷೇರು ಡಿವಿಡೆಂಡ್; ಅಕ್ಷತಾ ಮೂರ್ತಿಗೆ ಸಿಗುವ ಹಣ ಎಷ್ಟು? ಕಂಪನಿ ಲಾಭ ಎಷ್ಟು? ಯಾರ ಬಳಿ ಎಷ್ಟೆಷ್ಟು ಷೇರುಗಳಿವೆ?

Infosys Gives Rs 34 Dividend Per Share: 2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ 6,128 ಕೋಟಿ ರೂ ಲಾಭ ತೋರಿಸಿದೆ. ಹಾಗೆಯೇ ಆ ಹಣಕಾಸು ವರ್ಷದಲ್ಲಿ ಪ್ರತೀ ಷೇರಿಗೆ ಒಟ್ಟು 34 ರೂ ಡಿವಿಡೆಂಡ್ ಕೊಡುವ ಮೂಲಕ ಷೇರುದಾರರಿಗೆ ಒಳ್ಳೆಯ ಗಿಫ್ಟ್ ಕೂಡ ಕೊಟ್ಟಿದೆ.

Infosys: ಇನ್ಫೋಸಿಸ್ ಷೇರು ಡಿವಿಡೆಂಡ್; ಅಕ್ಷತಾ ಮೂರ್ತಿಗೆ ಸಿಗುವ ಹಣ ಎಷ್ಟು? ಕಂಪನಿ ಲಾಭ ಎಷ್ಟು? ಯಾರ ಬಳಿ ಎಷ್ಟೆಷ್ಟು ಷೇರುಗಳಿವೆ?
ಇನ್ಫೋಸಿಸ್
Follow us
|

Updated on: Apr 14, 2023 | 10:38 AM

ಬೆಂಗಳೂರು: ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲೊಂದಾದ ಇನ್ಫೋಸಿಸ್ (Infosys) ಏಪ್ರಿಲ್ 13ರಂದು ತನ್ನ ಕೊನೆಯ ತ್ರೈಮಾಸಿಕ ಅವಧಿಯಲ್ಲಿನ ಲಾಭ ನಷ್ಟದ ವರದಿ ಪ್ರಕಟಿಸಿದೆ. ಅದರಂತೆ ಮಾರ್ಚ್ ಅಂತ್ಯದ ಕೊನೆಯ ಕ್ವಾರ್ಟರ್​ನಲ್ಲಿ (Last Quarter of 2022-23) ಇನ್ಫೋಸಿಸ್ ಸಂಸ್ಥೆ 6,128 ಕೋಟಿ ರೂ ಲಾಭ ತೋರಿಸಿದೆ. ಕಳೆದ ವರ್ಷದ ಇದೇ ಕ್ವಾರ್ಟರ್​ನಲ್ಲಿ ಗಳಿಸಿದ್ದ ಲಾಭಕ್ಕಿಂತ ಈ ಬಾರಿ ಶೇ. 7.8ರಷ್ಟು ಹೆಚ್ಚಿನ ಲಾಭ ಮಾಡಿರುವುದು ತಿಳಿದುಬರುತ್ತದೆ. ಇನ್ಫೋಸಿಸ್​ನ ಆದಾಯವೂ ಇದೇ ಅವಧಿಯಲ್ಲಿ ಶೇ. 16ರಷ್ಟು ಹೆಚ್ಚಿದೆ. ಹಿಂದಿನ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ 32,276 ಕೋಟಿ ರೂ ಆದಾಯ ತೋರಿಸಿದ್ದ ಸಂಸ್ಥೆ 2022-23ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ 37,441 ಕೋಟಿ ರೂ ಆದಾಯ ಗಳಿಸಿರುವುದಾಗಿ ಘೋಷಿಸಿದೆ. ಮುಂದಿನ ಹಣಕಾಸು ವರ್ಷ, ಅಂದರೆ 2023-24ರ ವರ್ಷದಲ್ಲಿ ತನ್ನ ಆದಾಯ ಶೇ. 4ರಿಂದ 7ರಷ್ಟು ಹೆಚ್ಚಾಗಬಹುದು ಎಂದೂ ಇದೇ ವೇಳೆ ಇನ್​ಫೋಸಿಸ್ ನಿರೀಕ್ಷೆ ಇಟ್ಟುಕೊಂಡಿದೆ.

ಇನ್ಫೋಸಿಸ್​ನ ಪ್ರತಿ ಷೇರಿಗೆ ಒಟ್ಟು 34 ರೂ ಡಿವಿಡೆಂಡ್ ಘೋಷಣೆ

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ಫೋಸಿಸ್ ಸಂಸ್ಥೆ ತನ್ನ ಷೇರುದಾರರಿಗೆ ಪ್ರತೀ ವರ್ಷವೂ ಡಿವಿಡೆಂಡ್ ಕೊಡುವ ಕೆಲವೇ ಸಂಸ್ಥೆಗಳಲ್ಲಿ ಒಂದು. ಹಿಂದಿನ ಹಣಕಾಸು ವರ್ಷದಲ್ಲಿ ಇನ್ಫೋಸಿಸ್​ನ ಪ್ರತೀ ಷೇರಿಗೆ 31 ರೂ ಲಾಭಾಂಶ ಕೊಡಲಾಗಿತ್ತು. ಈ ಹಣಕಾಸು ವರ್ಷದಲ್ಲಿ 34 ರೂನಂತೆ ಡಿವಿಡೆಂಡ್ ಕೊಡಲಾಗಿದೆ.

ಇದನ್ನೂ ಓದಿPhonePe: ಫೋನ್ ಪೇ ಈಗಲೂ ಯಾಕೆ ನಂಬರ್ ಒನ್? ಅದರ ಬಳಿ ಇದೆ ಪಿನ್​ಕೋಡ್, ಸ್ಮಾರ್ಟ್ ಸ್ಪೀಕರ್ ಅಸ್ತ್ರ

2022 ಅಕ್ಟೋಬರ್ ತಿಂಗಳಲ್ಲಿ ಪ್ರತೀ ಷೇರಿಗೆ 16.50 ರೂ ಮಧ್ಯಂತರ ಲಾಭಾಂಶವನ್ನು ಘೋಷಿಸಲಾಗಿತ್ತು. ಇದೀಗ ಇನ್ನೂ 17.50 ರೂ ಡಿವಿಡೆಂಡ್ ಘೋಷಿಸಲಾಗಿದೆ. ಅಲ್ಲಿಗೆ 2022-23ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಪ್ರತಿ ಷೇರಿಗೆ ಒಟ್ಟು 34 ರೂ ಡಿವಿಡೆಂಡ್ ಅನ್ನು ತನ್ನ ಷೇರಿಗೆ ಕೊಟ್ಟಂತಾಗುತ್ತದೆ. ಈಗಿನ ಷೇರುಮಾರುಕಟ್ಟೆಯಲ್ಲಿ ಇನ್ಫೋಸಿಸ್​ನ ಷೇರುಬೆಲೆ 1,388 ರೂ ಇದೆ. ಇದು ಈ ವರ್ಷದ ಅತ್ಯಂತ ಕಡಿಮೆ ಬೆಲೆಗೆ ಸಮೀಪವೇ ಇದೆ. ಇನ್ಫೋಸಿಸ್ ತನ್ನ ಷೇರುಬೆಲೆಯ ಶೇ. 2ಕ್ಕಿಂತಲೂ ಹೆಚ್ಚು ಮೊತ್ತವನ್ನು ಡಿವಿಡೆಂಡ್ ಆಗಿ ಹೂಡಿಕೆದಾರರಿಗೆ ನೀಡಿರುವುದು ಗಮನಾರ್ಹ.

ಅಕ್ಷತಾ ಮೂರ್ತಿಗೆ ಈ ಬಾರಿ ಇನ್ಫೋಸಿಸ್ ಡಿವಿಡೆಂಡ್​ನಿಂದಲೇ 132 ಕೋಟಿ ರೂ ಕೊಡುಗೆ

ಇನ್ಫೋಸಿಸ್ ಸಹಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಬ್ರಿಟನ್ ಪ್ರಧಾನಿ ರಿಷಿ ಸುನಕ್​ರ ಪತ್ನಿಯೂ ಹೌದು. ಇವರು ಇನ್ಫೋಸಿಸ್​ನಲ್ಲಿ 3.89 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಅಕ್ಷತಾ ಮೂರ್ತಿ ಈ ಹಣಕಾಸು ವರ್ಷದಲ್ಲಿ ಒಟ್ಟು 132.40 ಕೋಟಿ ರೂ ಮೊತ್ತದಷ್ಟು ಡಿವಿಡೆಂಡ್ ಅನ್ನು ಪಡೆಯಲಿದ್ದಾರೆ.

ಇದನ್ನೂ ಓದಿNikhil Kamath: ಅಮೆರಿಕ ಬಿಟ್ಟು ಬನ್ನಿ, ಭಾರತದಲ್ಲಿ ಏನಾದರೂ ಮಾಡಿ: ಎನ್​ಆರ್​ಐಗಳಿಗೆ ನಿಖಿಲ್ ಕಾಮತ್ ಕರೆ

ಅಂದಹಾಗೆ, ಇನ್ಫೋಸಿಸ್​ನಲ್ಲಿ ನಾರಾಯಣಮೂರ್ತಿ ಅವರ ಕುಟುಂಬದ ಷೇರುಪಾಲು ಇರುವುದು ಶೇ. 3.6 ಮಾತ್ರ. ಇದರಲ್ಲಿ ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿ ಬಳಿ ಅತಿ ಹೆಚ್ಚು ಷೇರುಗಳಿವೆ. ಅವರು ಶೇ. 1.45ರಷ್ಟು ಷೇರು ಹೊಂದಿದ್ದಾರೆ. ನಂತರದ ಸ್ಥಾನ ಅಕ್ಷತಾ ಮೂರ್ತಿ ಅವರದ್ದು. ಅವರು ಶೇ. 0.93ರಷ್ಟು ಷೇರು ಹೊಂದಿದ್ದಾರೆ. ಸುಧಾಮೂರ್ತಿ ಅವರು ಶೇ. 0.82 ಮತ್ತು ನಾರಾಯಣಮೂರ್ತಿ ಅವರು ಶೇ. 0.40ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಮೂರ್ತಿ ಕುಟುಂಬಕ್ಕಿಂತ ಇನ್ಫೋಸಿಸ್​ನ ಇತರ ಪ್ರೊಮೋಟರ್​ಗಳು ಹೆಚ್ಚು ಷೇರುಗಳನ್ನು ಹೊಂದಿರುವುದು ವಿಶೇಷ. ಪ್ರೊಮೋಟರ್​ಗಳ ಪೈಕಿ ಇನ್ಫೋಸಿಸ್​ನ ಸಹಸಂಸ್ಥಾಪಕರಲ್ಲೊಬ್ಬರಾದ ನಂದನ್ ನಿಲೇಕಣಿ 10 ಕೋಟಿಗೂ ಅಧಿಕ ಷೇರುಗಳನ್ನು ಹೊಂದಿದ್ದಾರೆ. ಸಲೀಲ್ ಪರೇಖ್, ಮೋಹಿತ್ ಜೋಷಿ, ಇಂದರ್​ಜೀತ್ ಸಾವನೀ, ಕೃಷ್ಣಮೂರ್ತಿ ಶಂಕರ್ ಅವರುಗಳೂ ಸಾಕಷ್ಟು ಷೇರುಗಳನ್ನು ಹೊಂದಿದ್ದಾರೆ.

ಇನ್ಫೋಸಿಸ್​ನಲ್ಲಿರುವ ಷೇರುಗಳೆಷ್ಟು? ಜನಸಾಮಾನ್ಯರ ಕೈಯಲ್ಲಿರುವ ಷೇರುಗಳೆಷ್ಟು? ಯಾರ ಬಳಿ ಎಷ್ಟೆಷ್ಟು ಷೇರುಗಳಿವೆ?

ಇನ್ಫೋಸಿಸ್​ನ ಒಟ್ಟು ಷೇರುಗಳು: 418,60,86,843 (418 ಕೋಟಿ)

  • ಪ್ರೊಮೋಟರ್ಸ್: 55.17 ಕೋಟಿ (ಶೇ. 13.18)
  • ವಿದೇಶೀ ಸಾಂಸ್ಥಿಕ ಹೂಡಿಕೆದಾರರು: 132ಕೋಟಿ (ಶೇ. 31.64)
  • ಮ್ಯೂಚುವಲ್ ಫಂಡ್​ಗಳು: 64.63 ಕೋಟಿ (ಶೇ. 15.44)
  • ಹಣಕಾಸು ಸಂಸ್ಥೆಗಳು: 54.91 ಕೋಟಿ (ಶೇ. 13.12)
  • ಸಾರ್ವಜನಿಕರು: 47.4 ಕೋಟಿ (ಶೇ. 11.32)
  • ಜಿಡಿಆರ್: 54.87 ಕೋಟಿ (ಶೇ. 13.11)
  • ಇತರರು: 9.1 ಕೋಟಿ (ಶೇ. 2.18)

ಇದನ್ನೂ ಓದಿIPL-Insurance: ಐಪಿಎಲ್ ಅಬ್ಬರದ ಮಧ್ಯೆ ನಷ್ಟ ಎದುರಿಸಲು ಇನ್ಷೂರೆನ್ಸ್ ಮೊರೆ; ಯಾವ್ಯಾವುದಕ್ಕೆ ವಿಮೆ? ಇಲ್ಲಿದೆ ಡೀಟೇಲ್ಸ್

ಇನ್ಫೋಸಿಸ್ ಷೇರುಪಾಲಿನಲ್ಲಿ ಶೇ. 13ರಷ್ಟು ಷೇರುಗಳನ್ನು ಹೊಂದಿರುವ ಜಿಡಿಆರ್, ಏನಿದು?

GDR ಎಂದರೆ ಗ್ಲೋಬಲ್ ಡೆಪಾಸಿಟರಿ ರಿಸಿಪ್ಟ್ಸ್ (Global Depository Receipts). ಒಂದು ದೇಶದ ಸಂಸ್ಥೆ ಬೇರೆ ದೇಶಗಳ ಷೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಲು ಅವಕಾಶ ಕೊಡುವ ಒಂದು ವ್ಯವಸ್ಥೆ ಈ ಜಿಡಿಆರ್. ಇನ್ಫೋಸಿಸ್ ಸಂಸ್ಥೆ ಅಮೆರಿಕದ ನಾಸ್ಡಾಕ್, ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಜಿಡಿಆರ್ ಮೂಲಕ ಲಿಸ್ಟ್ ಆಗಿದೆ. ಈ ಜಿಡಿಆರ್ ಮೂಲಕ ಇನ್ಫೋಸಿಸ್ ಶೇ. 13ರಷ್ಟು ಷೇರುಗಳನ್ನು ಹಂಚಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್