Nikhil Kamath: ಅಮೆರಿಕ ಬಿಟ್ಟು ಬನ್ನಿ, ಭಾರತದಲ್ಲಿ ಏನಾದರೂ ಮಾಡಿ: ಎನ್​ಆರ್​ಐಗಳಿಗೆ ನಿಖಿಲ್ ಕಾಮತ್ ಕರೆ

Zerodha Co-founder's Tweet: ಭಾರತದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ಕಡಿಮೆ. ಜಿಡಿಪಿಯೂ ಉತ್ತಮವಾಗಿದೆ. ಅಮೆರಿಕದಲ್ಲಿರುವ ಭಾರತೀಯರು ತಮ್ಮ ತವರಿಗೆ ವಾಪಸ್ ಬಂದು ಏನಾದರೂ ಶುರು ಮಾಡಿ ಎಂದು ಝೀರೋಧ ಮುಖ್ಯಸ್ಥ ನಿಖಿಲ್ ಕಾಮತ್ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.

Nikhil Kamath: ಅಮೆರಿಕ ಬಿಟ್ಟು ಬನ್ನಿ, ಭಾರತದಲ್ಲಿ ಏನಾದರೂ ಮಾಡಿ: ಎನ್​ಆರ್​ಐಗಳಿಗೆ ನಿಖಿಲ್ ಕಾಮತ್ ಕರೆ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 13, 2023 | 4:21 PM

ನವದೆಹಲಿ: ಅಮೆರಿಕದಲ್ಲಿ ಕೆಲಸ ಸಿಕ್ಕರೆ ಸಾಕು ಎಂದು ತುದಿಗಾಲಿನಲ್ಲಿ ನಿಂತು ಹಗಲೂ ರಾತ್ರಿ ಕನಸು ಕಾಣುವ ಭಾರತೀಯ ಯುವಕರು ಬಹಳ ಮಂದಿ ಇರುವಾಗ, ಅಮೆರಿಕದಲ್ಲಿ ನೆಲಸಿರುವ ಭಾರತೀಯರು ತವರಿಗೆ ಬರುತ್ತಾರಾ? ಭಾರತದ ಪ್ರಮುಖ ಸ್ಟಾಕ್ ಟ್ರೇಡಿಂಗ್ ಕಂಪನಿ ಝೀರೋಧ ಮುಖ್ಯಸ್ಥ ನಿಖಿಲ್ ಕಾಮತ್ (Zerodha Co-founder Nikhil Kamath), ಭಾರತಕ್ಕೆ ವಾಪಸ್ ಬಂದು ಏನಾದರೂ ಶುರು ಮಾಡುವಂತೆ ಭಾರತೀಯ ಅಮೆರಿಕನ್ನರಿಗೆ ಕರೆ ನೀಡಿದ್ದಾರೆ. ನಿಖಲ್ ಕಾಮತ್ ಮಾಡಿರುವ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮುಂದುವರಿದ ದೇಶಗಳಲ್ಲಿರುವ ಸೌಲಭ್ಯ, ಸವಲತ್ತುಗಳು, ಉತ್ತಮ ಗುಣಮಟ್ಟದ ಜೀವನ ಭಾರತದಲ್ಲಿ ಸಿಗಲು ಬಹಳ ಕಾಲ ಬೇಕಾಗಬಹುದು. ಅಲ್ಲಿಯವರೆಗೆ ಭಾರತೀಯ ಅಮೆರಿಕನ್ನರು ಭಾರತಕ್ಕೆ ಬರಲು ಮನಸು ಮಾಡುವುದು ಕಷ್ಟ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಝೀರೋಧ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಮಾಡಿರುವ ಟ್ವೀಟ್​ನ ವಿವರ ಇಲ್ಲಿದೆ:

‘ನನ್ನ ಹಲವು ಸ್ನೇಹಿತರು ಅಮೆರಿಕದ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿ ಆ ದೇಶದಲ್ಲೇ ಕೆಲಸ ಮಾಡುತ್ತಿದ್ದಾರೆ. ಇವರು ತವರಿಗೆ ಬಂದು ಏನಾದರೂ ಶುರು ಮಾಡುವ ಆಲೋಚನೆ ಮಾಡಲಿ ಎಂದು ನಿಖಿಲ್ ಕಾಮತ್ ತಮ್ಮ ಟ್ವೀಟ್​ನಲ್ಲಿ ಕರೆ ನೀಡಿದ್ದಾರೆ.

ಅದೇ ಟ್ವೀಟ್​ನಲ್ಲಿ ಎರಡು ಫೋಟೋಗಳನ್ನು ಲಗತ್ತಿಸಿರುವ ಝೀರೋಧ ಮುಖ್ಯಸ್ಥರು, ಈ ದಶಕದಲ್ಲಿ ವಾಸಿಸಬೇಕಾದ ದೇಶ ಭಾರತ ಎಂಬುದರ ಎಲ್ಲಾ ಸೂಚನೆಗಳು ಇವೆ. ಉದ್ಯಮಿಗಳಿಗೆ ಇಲ್ಲಿ ಒಳ್ಳೆಯ ಅವಕಾಶ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ಲಗತ್ತಿಸಿರುವ ಎರಡು ಫೋಟೋಗಳಲ್ಲಿ ಒಂದು 2023ರಲ್ಲಿ ವಿಶ್ವಾದ್ಯಂತ ಆರ್ಥಿಕ ಹಿಂಜರಿತ (Economic Recession) ಸಾಧ್ಯತೆ ಯಾವ್ಯಾವ ದೇಶದಲ್ಲಿ ಎಷ್ಟೆಷ್ಟು ಇದೆ ಎಂದು ಗ್ರಾಫಿಕ್ಸ್ ಇರುವ ಫೋಟೋ. ಮತ್ತೊಂದು ಫೋಟೋದಲ್ಲಿ ವಿವಿಧ ದೇಶಗಳ ಜಿಡಿಪಿ ಬೆಳವಣಿಗೆಯ ಗ್ರಾಫಿಕ್ಸ್ ಇದೆ.

ಇದನ್ನೂ ಓದಿHardwyn India: 3 ವರ್ಷದಲ್ಲಿ 43ಪಟ್ಟು ಹೆಚ್ಚು ಲಾಭ; ಹಾರ್ಡ್​ವಿನ್ ಷೇರಿಗೆ ಹಣ ಹಾಕಿದವರು ಇವತ್ತು ಕೋಟ್ಯಾಧೀಶ್ವರರು

ಬ್ಲೂಮ್​ಬರ್ಗ್ ಸಂಸ್ಥೆಯ ಅಂಕಿ ಅಂಶಗಳನ್ನು ಆಧರಿಸಿ ಗ್ರಾಫಿಕ್ಸ್ ಮಾಡಲಾದ ಮೊದಲ ಫೋಟೋದಲ್ಲಿರುವ ಮಾಹಿತಿ ಪ್ರಕಾರ 2023ರಲ್ಲಿ ಭಾರತಕ್ಕೆ ರಿಸಿಶನ್ ಬಾಧಿಸುವ ಸಾಧ್ಯತೆ ಶೂನ್ಯ. ಬ್ರಿಟನ್, ನ್ಯೂಜಿಲೆಂಡ್, ಅಮೆರಿಕ, ಜರ್ಮನಿ, ಇಟಲಿ, ಕೆನಡಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ ಶೇ. 50ಕ್ಕಿಂತಲೂ ಹೆಚ್ಚಿದೆ. ನಿಖಿಲ್ ಕಾಮತ್ ಈ ಅಂಕಿ ಅಂಶಗಳ ಮೂಲಕ ಭಾರತದಲ್ಲಿ ನೆಲಸಲು ಮತ್ತು ವ್ಯವಹಾರ ನಡೆಸಲು ಒಳ್ಳೆಯ ಸಮಯ ಎಂದು ಪರೋಕ್ಷವಾಗಿ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಫೋಟೋ ಜಿಡಿಪಿಯದ್ದಾಗಿದೆ. ಭಾರತದ ಆರ್ಥಿಕ ಬೆಳವಣಿಗೆ ಶೇ. 5.9 ಇದೆ. ಐಎಂಎಫ್ ಪ್ರಕಾರ ಇದು ವಿಶ್ವದಲ್ಲೇ ಗರಿಷ್ಠ. ಚೀನಾ ಶೇ. 5.2ರಷ್ಟು ಬೆಳವಣಿಗೆ ಹೊಂದಿ ಎರಡನೇ ಸ್ಥಾನದಲ್ಲಿದೆ. ಆದರೆ, ಬ್ರಿಟನ್ ಮತ್ತು ಜರ್ಮನಿ ದೇಶಗಳ ಆರ್ಥಿಕ ಬೆಳವಣಿಗೆ ಮೈನಸ್​ಗೆ ಹೋಗಿದೆ. ಫ್ರಾನ್ಸ್, ಇಟಲಿ, ರಷ್ಯಾ, ಸ್ವಿಟ್ಜರ್​ಲೆಂಡ್, ನ್ಯೂಜಿಲೆಂಡ್, ಜಪಾನ್, ಸ್ಪೇನ್, ಕೆನಡಾ, ಕೊರಿಯಾ, ಅಮೆರಿಕ, ಆಸ್ಟ್ರೇಲಿಯಾದಂಥ ಮುಂದುವರಿದ ದೇಶಗಳ ಆರ್ಥಿಕ ಬೆಳವಣಿಗೆ ಶೇ. 2ಕ್ಕಿಂತಲೂ ಕಡಿಮೆ ಇರಲಿದೆ ಎಂಬುದು ಐಎಂಎಫ್​ನ ಡಾಟಾ ಆಧರಿಸಿ ಮಾಡಲಾದ ಈ ಗ್ರಾಫಿಕ್ ಚಿತ್ರ ಹೇಳುತ್ತದೆ.

Nikhil Kamath

ನಿಖಿಲ್ ಕಾಮತ್

ನಿಖಿಲ್ ಕಾಮತ್ ಅವರ ಈ ಟ್ವೀಟ್ ಮತ್ತು ಭಾರತೀಯ ಅಮೆರಿಕನ್ನರಿಗೆ ಕೊಟ್ಟಿರುವ ಕರೆಗೆ ಟ್ವಿಟ್ಟರ್​ನಲ್ಲಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಜೈಶಂಕರ್ ಬಾಲಾ ಎಂಬುವವರು ಬ್ಯಾಟರಿ ಕೆಮಿಸ್ಟ್ರಿ, ಕ್ವಾಂಟಮ್ ಕಂಪ್ಯೂಟಿಂಗ್ ಮೊದಲಾದ ಹೈಟೆಕ್ ವಲಯಗಳಲ್ಲಿ ಉದ್ಯಮ ನಡೆಸಬಹುದು ಎಂದು ಸಲಹೆ ನೀಡಿದ್ದಾರೆ. ಹಾಗೆಯೇ, ಉದ್ಯೋಗ ಹರಸುತ್ತಿರುವವರು ಭಾರತದ ಹೊರಗೆ ಹೋಗುವುದು ಸರಿ. ವ್ಯವಹಾರ ಮಾಡುವವರು ಭಾರತಕ್ಕೆ ಬರುವುದು ಸರಿ ಎಂದು ವಿವೇಕ್ ಜೋಶಿ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿSmartphone: ಭಾರತದಿಂದ ಸ್ಮಾರ್ಟ್​ಫೋನ್ ರಫ್ತು ಎರಡು ಪಟ್ಟು ಹೆಚ್ಚಳ; ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಲಿದೆಯಾ ಭಾರತ?

ಭಾರತದಲ್ಲಿ ಉದ್ಯಮಸ್ನೇಹಿ ವಾತಾವರಣ ಇಲ್ಲದಿರುವುದು, ಅಧಿಕ ತೆರಿಗೆ ವ್ಯವಸ್ಥೆ ಮತ್ತು ಅತಿಯಾದ ಕಾನೂನು ಕಟ್ಟುಪಾಡುಗಳಿರುವುದು ಅನೇಕ ಉದ್ಯಮಿಗಳನ್ನು ಭಾರತ ಬಿಟ್ಟು ಹೋಗುವಂತೆ ಮಾಡಿವೆ ಎಂಬುದು ಕೆಲವರ ಅನಿಸಿಕೆ.

21ನೇ ಶತಮಾನಕ್ಕೆ ಬಂದು ಹೆಚ್ಚೂಕಡಿಮೆ 25 ವರ್ಷ ಆಯಿತು. 24 ಗಂಟೆ ವಿದ್ಯುತ್ ಸಿಗುತ್ತೆ ಎನ್ನುವ ಖಾತ್ರಿ ಇಲ್ಲ. ದಿನವೂ ನೀರು ಸರಬರಾಜು ಇರುತ್ತಾ ಗೊತ್ತಿಲ್ಲ. ನಿತ್ಯ ಕಸ ವಿಲೇವಾರಿ ಎಂಬುದು ಕನಸಾಗಿದೆ. ಇಂಥ ಕಳಪೆ ಜನಜೀವನ ವ್ಯವಸ್ಥೆ ಇರುವ ದೇಶಕ್ಕೆ ನೀವು ವಾಪಸ್ ಬರಬೇಕಾ ಯೋಚಿಸಿ ಎಂದು ಬೆಂಗಳೂರಿನ ನಿವಾಸಿ ಪಂಕಜ್ ಕುಮಾರ್ ಎಂಬಾತ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್