SBI Debit Card: ಎಸ್​ಬಿಐ ಡೆಬಿಟ್​ ಕಾರ್ಡ್​ ಮೂಲಕ ಖರೀದಿಸಿದ್ದನ್ನು ಇಎಂಐ ಆಗಿ ಬದಲಿಸಿಕೊಳ್ಳೋದು ಹೇಗೆ?

| Updated By: Srinivas Mata

Updated on: Sep 06, 2021 | 4:54 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಬಿಟ್​ ಕಾರ್ಡ್​ ಮೂಲಕ ಮಾಡಲಾದ ಪಾವತಿಯನ್ನು ಇಎಂಐ ಆಗಿ ಕನ್ವರ್ಟ್ ಮಾಡಿಸುವುದು ಹೇಗೆ? ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

SBI Debit Card: ಎಸ್​ಬಿಐ ಡೆಬಿಟ್​ ಕಾರ್ಡ್​ ಮೂಲಕ ಖರೀದಿಸಿದ್ದನ್ನು ಇಎಂಐ ಆಗಿ ಬದಲಿಸಿಕೊಳ್ಳೋದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಗ್ರಾಹಕರಿಗಾಗಿ ಇಎಂಐ ವ್ಯವಸ್ಥೆ ಒದಗಿಸಲಾಗುತ್ತಿದೆ. ಎಸ್​ಬಿಐ ಡೆಬಿಟ್​ ಕಾರ್ಡ್​ಗಳನ್ನು ಬಳಸಿ, ಪಾಯಿಂಟ್​ ಆಫ್ ಸೇಲ್ಸ್​ನಲ್ಲಿ ಮರ್ಚೆಂಟ್​ ಸ್ಟೋರ್​ನಿಂದ ಗ್ರಾಹಕ ಉಪಯೋಗಿ ವಸ್ತುಗಳನ್ನು ಖರೀದಿ ಮಾಡಬಹುದು. ಇನ್ನು ಅಮೆಜಾನ್, ಫ್ಲಿಪ್​ಕಾರ್ಟ್​ನಂಥ ಇ-ಕಾಮರ್ಸ್​ನಲ್ಲಿ ಎಸ್​ಬಿಐ ಡೆಬಿಟ್​ ಕಾರ್ಡ್​ನಲ್ಲಿ ಆನ್​ಲೈನ್​ ಮೂಲಕ ಖರೀದಿ ಮಾಡಿದರೂ ಇಎಂಐ ಸೌಲಭ್ಯ ದೊರೆಯಲಿದೆ.

ವೈಶಿಷ್ಟ್ಯ ಮತ್ತು ಅನುಕೂಲಗಳು
– ಶೂನ್ಯ ಪ್ರೊಸೆಸಿಂಗ್ ಫೀ
– ಶೂನ್ಯ ದಾಖಲಾತಿಗಳು ಹಾಗೂ ತಕ್ಷಣದ ವಿಲೇವಾರಿ
– ಉಳಿತಾಯ ಖಾತೆ ಬ್ಯಾಲೆನ್ಸ್ ಬ್ಲಾಕ್ ಮಾಡುವುದಿಲ್ಲ
– ಈ ಇಎಂಐ ಸೌಲಭ್ಯ ಪಡೆಯುತ್ತಿದ್ದಂತೆ ತಿಂಗಳಿಗೆ ಕಟ್ಟಬೇಕಾದಷ್ಟು ಮೊತ್ತದೊಂದಿಗೆ ಗ್ರಾಹಕರ ಉಳಿತಾಯ ಖಾತೆಯೊಂದಿಗೆ ಸ್ಟ್ಯಾಂಡಿಂಗ್ ಸೂಚನೆ ನೀಡಲಾಗುತ್ತದೆ.

ಈ ಕೆಳಗಿನ ಹಂತಗಳನ್ನು ಅನುಸರಿಸುವುದರೊಂದಿಗೆ ಡೆಬಿಟ್ ಕಾರ್ಡ್ ಇಎಂಐ ಮತ್ತು ಆನ್​ಲೈನ್ ಇಎಂಐ ಪಡೆಯಿರಿ:
ಡೆಬಿಟ್ ಕಾರ್ಡ್ ಇಎಂಐ
– ಮರ್ಚೆಂಟ್​ ಸ್ಟೋರ್​ನ ಪಿಒಎಸ್​ ಮಶೀನ್​ನಲ್ಲಿ ಎಸ್​ಬಿಐ ಡೆಬಿಟ್ ಕಾರ್ಡ್ ಸ್ವೈಪ್ ಮಾಡಬೇಕು
– ಬ್ರ್ಯಾಂಡ್​ ಇಎಂಐ- ಬ್ಯಾಂಕ್ ಇಎಂಐ ಆಯ್ಕೆ ಮಾಡಬೇಕು
– ಮೊತ್ತ- ಮರುಪಾವತಿ ಅವಧಿ ನಮೂದಿಸಬೇಕು
– ಪಿಒಎಸ್ ಮಶೀನ್ ಅರ್ಹತೆ ಪರಿಶೀಲಿಸಿದ ಮೇಲೆ PIN ನಮೂದಿಸಿ OK ಎಂಬುದನ್ನು ಒತ್ತಬೇಕು
– ಯಶಸ್ವಿ ವಹಿವಾಟಿನ ನಂತರ ಸಾಲದ ಮೊತ್ತವು ಕಾಯ್ದಿರಿಸಲಾಗುತ್ತದೆ
– ಚಾರ್ಜ್ ಸ್ಲಿಪ್​ನಲ್ಲಿ ನಿಯಮ ಮತ್ತು ನಿಬಂಧನೆಗಳು ಇರುತ್ತವೆ. ಅದರ ಮೇಲೆ ಗ್ರಾಹಕರು ಸಹಿ ಮಾಡಬೇಕು

ಆನ್​ಲೈನ್ ಇಎಂಐ
– ಬ್ಯಾಂಕ್​ನಲ್ಲಿನ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಅಮೆಜಾನ್ ಅಥವಾ ಫ್ಲಿಪ್​ಕಾರ್ಟ್​ಗೆ ಲಾಗ್​ ಇನ್ ಆಗಬೇಕು
– ಯಾವ ಬ್ರ್ಯಾಂಡ್​ನ ವಸ್ತು ಎಂಬುದನ್ನು ಆರಿಸಿಕೊಳ್ಳಿ ಮತ್ತು ಪಾವತಿಯತ್ತ ತೆರಳಿ
– ಸುಲಭ ಇಎಂಐ ಆಯ್ಕೆಯನ್ನು ವಿವಿಧ ಪಾವತಿ ಆಯ್ಕೆಯೊಂದಿಗೆ ಆರಿಸಿಕೊಳ್ಳಬೇಕು ಮತ್ತು ನಂತರ ಎಸ್​ಬಿಐ ಆಯ್ಕೆ ಮಾಡಿಕೊಳ್ಳಬೇಕು
– ಮೊತ್ತವು ತಾನಾಗಿಯೇ ತರಲಾಗುವುದು, ಅವಧಿಯನ್ನು ನಮೂದಿಸಿ ಹಾಗೂ Proceed ಎಂಬುದರ ಮೇಲೆ ಕ್ಲಿಕ್ ಮಾಡಿ
– ಎಸ್​ಬಿಐ ಲಾಗ್​ ಇನ್ ಪುಟ ಕಾಣಿಸಿಕೊಳ್ಳುತ್ತದೆ, ಇಂಟರ್​ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಕ್ರೆಡಿನ್ಷಿಯಲ್​ಗಳನ್ನು ನಮೂದಿಸಿ
– ಸಾಲವು ಕಾಯ್ದಿರಿಸಲಾಗುತ್ತದೆ. ನಿಯಮ ಹಾಗೂ ನಿಬಂಧನೆಗಳು ಕಾಣಿಸಿಕೊಳ್ಳುತ್ತದೆ, ಒಂದು ವೇಳೆ ಅದನ್ನು ಒಪ್ಪಿಕೊಂಡಲ್ಲಿ ಆರ್ಡರ್ ಬುಕ್ ಆಗುತ್ತದೆ.

ಸಾಲದ ಮೊತ್ತ ಹಾಗೂ ಬಡ್ಡಿ ದರ
ಗ್ರಾಹಕರು ರೂ. 8000ದಿಂದ ರೂ. 1 ಲಕ್ಷದ ತನಕ ಪರಿಣಾಮಕಾರಿ ದರದಲ್ಲಿ 2 ವರ್ಷದ ಎಂಸಿಎಲ್​ಆರ್ + ಶೇ 7.50, ಅಂದರೆ ಸದ್ಯಕ್ಕೆ ಶೇ 14.70 ಆಗುತ್ತದೆ.

ಸಾಲದ ಅವಧಿ
ಆರಾಮದಾಯಕ ಸಾಲದ ಅವಧಿ ಆಯ್ಕೆಯು 6/9/12/18 ತಿಂಗಳಿನದಾಗಿರುತ್ತದೆ.

ಅರ್ಹತೆ
ಗ್ರಾಹಕರು ತಮ್ಮ ಅರ್ಹತೆಯನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದಾದಲ್ಲಿ DCEMI ಅನ್ನು 567676 ಅನ್ನು ತಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಯಿಂದ ಕಳುಹಿಸಬೇಕು.

ಇದನ್ನೂ ಓದಿ: Cash Withdrawal: ಎಸ್​ಬಿಐ, ಪಿಎನ್​ಬಿ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್​ ನಗದು ವಿಥ್​ಡ್ರಾ ಮಿತಿ ಇಂತಿವೆ

SBI Branch Transfer: ಎಸ್​ಬಿಐ ಗ್ರಾಹಕರು ಒಂದು ಶಾಖೆಯಿಂದ ಮತ್ತೊಂದಕ್ಕೆ ಖಾತೆ ವರ್ಗಾವಣೆ ಮಾಡೋದು ಹೀಗೆ

(How To Convert Payment Through SBI Debit Card In To EMI Here Is The Step By Step Details)