
ಬಂಗಾರ ಯಾವ ಖರೀದಿಸಿದರೂ ಲಾಭವೇ. ಆದರೂ ದೀಪಾವಳಿ, ಅಕ್ಷಯ ತೃತೀಯ, ಧನತ್ರಯೋದಶಿ (ಧನ್ತೇರಾಸ್) ಇತ್ಯಾದಿ ಕೆಲ ಶುಭ ದಿನಗಳಂದು ಚಿನ್ನವನ್ನು ಖರೀದಿಸುವುದು ಬಹಳ ಶುಭಕರ ಎನ್ನುವ ನಂಬಿಕೆ ಇದೆ. ಈ ಬಾರಿ ಧನತ್ರಯೋದಶಿಯು ನವೆಂಬರ್ 6ರಂದು ಇದೆ. ಅಂದು ನೀವು ಚಿನ್ನವನ್ನು ಖರೀದಿಸುತ್ತಿದ್ದರೆ ಕೆಲ ಉಪಯುಕ್ತ ಮಾಹಿತಿ ತಿಳಿದಿರಿ. ಆವತ್ತಿನ ಖರೀದಿಗೆ ಮಾತ್ರವಲ್ಲ, ಯಾವತ್ತೇ ಚಿನ್ನ ಖರೀದಿಸಿದರೂ ಈ ಕೆಳಕಂಡ ಮಾಹಿತಿ ನೆನಪಲ್ಲಿರಬೇಕು.
ಈಗ ಹಾಲ್ಮಾರ್ಕ್ ಇರುವ ಚಿನ್ನ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಆದರೆ, ನಕಲಿ ನೋಟುಗಳು ಬರುವ ಹಾಕಿ ನಕಲಿ ಹಾಲ್ಮಾರ್ಕ್ ಗುರುತು ಹಾಕಿರಲೂಬಹುದು. ಆ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹೀಗಾಗಿ, ಹಾಲ್ಮಾರ್ಕ್ ಗುರುತಿನ ಜೊತೆಗೆ ಅದರ ಐಡಿ (ಎಚ್ಯುಐಡಿ) ಕೋಡ್ ಅನ್ನೂ ಪರಿಶೀಲಿಸುವುದು ಅಗತ್ಯ ಎನಿಸಬಹುದು.
ಹೆಚ್ಯುಐಡಿ ಎಂದರೆ ಹಾಲ್ಮಾರ್ಕ್ ಯೂನಿಕ್ ಐಡಿ. ಇದು ಆರು ಅಂಕಿಗಳ ಅಕ್ಷರಸಂಖ್ಯೆ ಸಂಯೋಜನೆಯ ಒಂದು ಕೋಡ್. ಹಾಲ್ಮಾರ್ಕ್ ಗುರುತು ಹಾಕಲಾಗಿರುವ ಚಿನ್ನದ ವಸ್ತುವಿನಲ್ಲಿ ಈ ಕೋಡ್ ಇರುತ್ತದೆ. ಈ ಕೋಡ್ ಮೂಲಕ ಒಡವೆಯ ಶುದ್ಧತೆಯನ್ನು ಪರಿಶೀಲಿಸಬಹುದು.
ಇದನ್ನೂ ಓದಿ: ಮಹಾಕುಸಿತದ ಹಾದಿಯಲ್ಲಿ ಚಿನ್ನ; ಇಷ್ಟೊಂದು ತೀವ್ರವಾಗಿ ಬೆಲೆ ಇಳಿಯುತ್ತಿರುವುದ್ಯಾಕೆ? ಇಲ್ಲಿವೆ ಕೆಲ ಕಾರಣಗಳು
ಇದನ್ನೂ ಓದಿ: Gold Rates 27 October: ಚಿನ್ನದ ಬೆಲೆ ಮತ್ತೆ ಏರಿಕೆ; ಮೂರು ದಿನದಲ್ಲಿ 75 ರೂ ಹೆಚ್ಚಳ
ಒಂದು ವೇಳೆ, ಹಾಲ್ಮಾರ್ಕ್ ಇರುವ ಚಿನ್ನದ ಶುದ್ಧತೆಯು ಘೋಷಿಸಿರುವುದಕ್ಕಿಂತ ಕಡಿಮೆ ಶುದ್ಧತೆ ಹೊಂದಿದ್ದರೆ ಅದಕ್ಕೆ ಪರಿಹಾರ ಪಡೆಯಲು ಅವಕಾಶ ಇದೆ. ಬಿಐಎಸ್ ನಿಯಮಗಳ ಪ್ರಕಾರ, ಘೋಷಿತವಾಗಿರುವುದಕ್ಕಿಂತ ಎಷ್ಟು ಕಡಿಮೆ ಶುದ್ಧತೆ ಇದೆಯೋ ಆ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಶುದ್ಧತೆಯ ಪರೀಕ್ಷೆಗೆ ತಗುಲಿದ ವೆಚ್ಚವನ್ನೂ ಮರಳಿ ಪಡೆಯಬಹುದು.
ಹಳೆಯ ಒಡವೆಗಳಿಗೆ ಹಾಲ್ಮಾರ್ಕ್ ಗುರುತಿರುವುದಿಲ್ಲ. ಅಂಥ ಚಿನ್ನದ ಶುದ್ಧತೆ ಪರೀಕ್ಷಿಸಲು ಮಾರ್ಗೋಪಾಯಗಳಿವೆ. ಬಿಐಎಸ್ನಲ್ಲಿ ನೊಂದಾಯಿತವಾದ ಹಾಲ್ಮಾರ್ಕಿಂಗ್ ಸೆಂಟರ್ಗಳಲ್ಲಿ ಇವುಗಳನ್ನು ಪರೀಕ್ಷಿಸಬಹುದು. ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಇಂಥ ಅಧಿಕೃತ ಸೆಂಟರ್ಗಳಿರುತ್ತವೆ. ಹಾಲ್ಮಾರ್ಕ್ ಇರುವ ಚಿನ್ನದ ಬಗ್ಗೆ ಅನುಮಾನ ಇದ್ದರೂ ಈ ಕೇಂದ್ರಗಳಲ್ಲಿ ಶುದ್ಧತೆಯ ಪರೀಕ್ಷೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ