AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಕುಸಿತದ ಹಾದಿಯಲ್ಲಿ ಚಿನ್ನ; ಇಷ್ಟೊಂದು ತೀವ್ರವಾಗಿ ಬೆಲೆ ಇಳಿಯುತ್ತಿರುವುದ್ಯಾಕೆ? ಇಲ್ಲಿವೆ ಕೆಲ ಕಾರಣಗಳು

ಚಿನ್ನದ ಬೆಲೆ ಕಳೆದ 8-9 ತಿಂಗಳಲ್ಲಿ ಒಂದು ಗ್ರಾಮ್​ಗೆ 3,500 ರೂಗೂ ಅಧಿಕ ಮೊತ್ತದಷ್ಟು ಕುಸಿದಿದೆ. ಕಳೆದ 10 ದಿನಗಳಿಂದಲೂ ಚಿನ್ನದ ಬೆಲೆ ಭರ್ಜರಿಯಾಗಿ ಇಳಿದಿದೆ. ಅಭರಣ ಚಿನ್ನದ ಬೆಲೆ 13,000 ರೂ ಗಡಿ ಸಮೀಪಕ್ಕೆ ತಗ್ಗಿದೆ. ತೈಲ ಬೆಲೆ ಏರಿಕೆ, ಡಾಲರ್ ಕರೆನ್ಸಿ ಮೌಲ್ಯ, ಟ್ರೆಷರಿ ಯೀಲ್ಡ್ ಏರಿಕೆ ಇತ್ಯಾದಿ ಕೆಲ ಸಂಗತಿಗಳು ಬಂಗಾರದ ದರದ ಮೇಲೆ ಪ್ರಭಾವ ಬೀರಿವೆ.

ಮಹಾಕುಸಿತದ ಹಾದಿಯಲ್ಲಿ ಚಿನ್ನ; ಇಷ್ಟೊಂದು ತೀವ್ರವಾಗಿ ಬೆಲೆ ಇಳಿಯುತ್ತಿರುವುದ್ಯಾಕೆ? ಇಲ್ಲಿವೆ ಕೆಲ ಕಾರಣಗಳು
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2026 | 5:51 PM

Share

ನವದೆಹಲಿ, ಅಕ್ಟೋಬರ್ 23: ಷೇರುಗಳನ್ನು ಬಿಡಿ, ಚಿನ್ನ ಹಿಡಿಯಿರಿ ಎಂದು ಅನೇಕ ಪರಿಣಿತರು ಕಳೆದ ಒಂದು ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ, ಚಿನ್ನದ ವರ್ತನೆ ಬೇರೆ ರೀತಿಯಲ್ಲೇ ಆಗುತ್ತಿದೆ. ಕಳೆದ ಒಂದೆರಡು ವರ್ಷ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಣನೀಯವಾಗಿ ಏರಿದ್ದವು. ಜನವರಿ 28ರಂದು ಇವುಗಳ ಬೆಲೆ ಉಚ್ಛ್ರಾಯ ಮಟ್ಟಕ್ಕೆ ಏರಿದ್ದವು. ಆ ಬಳಿಕ ಬೆಲೆ ಇಳಿಕೆ ಹೆಚ್ಚುತ್ತಿದೆ. ಈಗ ಕೆಲ ದಿನಗಳಿಂದ ಗಣನೀಯ ಬೆಲೆ ಕುಸಿತ ಸಂಭವಿಸುತ್ತಿದೆ.

ಜನವರಿ 28ರಂದು 17,885 ರೂ ಇದ್ದ ಅಪರಂಜಿ ಚಿನ್ನದ ಬೆಲೆ ಈಗ 14,248 ರೂಗೆ ಕುಸಿದಿದೆ. 8-9 ತಿಂಗಳ ಅವಧಿಯಲ್ಲಿ ಬೆಲೆ 3,637 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ 10 ದಿನದಲ್ಲೇ ಇದರ ಬೆಲೆ 894 ರೂಗಳಷ್ಟು ಇಳಿದಿದೆ. ಬೆಳ್ಳಿ ಬೆಲೆಗಳೂ ಕೂಡ 220 ರೂಗಳಿಗೆ ಇಳಿದಿವೆ. ಅಂತಾರಾಷ್ಟ್ರೀಯವಾಗಿಯೂ ಇವೆರಡು ಲೋಹಗಳ ಬೆಲೆ ಗಣನೀಯವಾಗಿ ಕಡಿಮೆ ಆಗಿದೆ. ಚಿನ್ನದ ಬೆಲೆ ಕುಸಿಯಲು ಏನು ಕಾರಣ?

ಇದನ್ನೂ ಓದಿ: Gold Rates 23 October: ಚಿನ್ನದ ಬೆಲೆ ಗ್ರಾಮ್​ಗೆ 175 ರೂ ಕುಸಿತ; ಬೆಳ್ಳಿ ಬೆಲೆಯೂ 5 ರೂ ಇಳಿಕೆ

ಕಚ್ಚಾ ತೈಲ ಬೆಲೆ ಹೆಚ್ಚಳ

ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್​ಗೆ 113 ಡಾಲರ್​ವರೆಗೂ ಏರಿದೆ. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಮುಂದುವರಿಯುತ್ತಿರುವುದರಿಂದ ತೈಲ ಬೆಲೆ ಇಳಿಕೆ ಸಾಧ್ಯತೆ ಕ್ಷೀಣಿಸಿದೆ. ತೈಲ ಬೆಲೆ ಹೆಚ್ಚಿದರೆ ಹಣದುಬ್ಬರವೂ ಹಿಗ್ಗುತ್ತದೆ. ಪರಿಣಾಮವಾಗಿ ಬಡ್ಡಿದರ ಹೆಚ್ಚುವ ಸಂಭವ ಇರುತ್ತದೆ. ಹೀಗಾದಲ್ಲಿ ಹೂಡಿಕೆದಾರರಿಗೆ ಚಿನ್ನದ ಮೇಲಿನ ಆಕರ್ಷಣೆ ಕಡಿಮೆ ಆಗುತ್ತದೆ.

ಅಧಿಕ ಬಡ್ಡಿದರ ಮತ್ತು ಬಾಂಡ್ ರಿಟರ್ನ್ಸ್

ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಅದು ಬಡ್ಡಿ ಅಥವಾ ಡಿವಿಡೆಂಡ್ ತಂದುಕೊಡುವ ಸ್ವತ್ತಲ್ಲ. ಹೀಗಾಗಿ, ಖಚಿತವಾಗಿ ಹೆಚ್ಚಿನ ರಿಟರ್ನ್ಸ್ ನೀಡುವ ಹೂಡಿಕೆಗಳು ಆಕರ್ಷಣೆ ಪಡೆಯುತ್ತವೆ. ಅಮೆರಿಕದ ಡಾಲರ್ ಈಗ ಹೆಚ್ಚಿನ ಮೌಲ್ಯ ಪಡೆದಿದೆ. ಫೆಡರಲ್ ರಿಸರ್ವ್​ನಿಂದ ಬಡ್ಡಿದರ ಕಡಿತ ಸಾಧ್ಯತೆ ಕಡಿಮೆ ಇರುವುದರಿಂದ ಡಾಲರ್ ಮತ್ತು ಬಾಂಡ್ ಯೀಲ್ಡ್ ಆಕರ್ಷಕವೆನಿಸುತ್ತವೆ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡಿದವರು ಟ್ರೆಷರಿಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಇದನ್ನೂ ಓದಿ: ಭಾರತೀಯ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಸ್ಟಾರ್ಟ್‌ಅಪ್ ಕ್ರೇಜ್: ಸರ್ಕಾರಿ ಉದ್ಯೋಗಕ್ಕಿಂತ ಸ್ವಂತ ಉದ್ಯಮಕ್ಕೇ ಜೈ

ಲಾಭಕ್ಕಾಗಿ ಚಿನ್ನ ಮಾರುತ್ತಿರುವ ಹೂಡಿಕೆದಾರರು…

ಈ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಆಗಿನಿಂದ ಬಹಳಷ್ಟು ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ ಕ್ರಮಕ್ಕೆ ಮುಂದಾಗಿದ್ದಾರೆ. ಚಿನ್ನದ ಬೆಲೆ ತುಸು ಏರಿದಾಗೆಲ್ಲಾ ಅದನ್ನು ಮಾರಿ ಲಾಭ ಮಾಡಿಕೊಳ್ಳುತ್ತಿರುವ ಪ್ರವೃತ್ತಿ ಕಂಡುಬಂದಿದೆ. ಹೀಗಾಗಿ, ಚಿನ್ನದ ಬೆಲೆ ಇಳಿಕೆ ಆಗುತ್ತಿರಬಹದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ