ಹುರೂನ್ ವೆಲ್ತ್ ರಿಪೋರ್ಟ್: ಮುಂಬೈಯನ್ನು ಹಿಂದಿಕ್ಕಿದ ಬೆಂಗಳೂರು ನಂ. 1
IDFC First Private and Hurun India's Top-100 self-made entrepreneurs of Millenia 2025: ಐಡಿಎಫ್ಸಿ ಫಸ್ಟ್ ಪ್ರೈವೇಟ್ ಅಂಟ್ ಹುರೂನ್ ಇಂಡಿಯಾ ಟಾಪ್ 200 ಸೆಲ್ಫ್ ಮೇಡ್ ಆಂಟ್ರಪ್ರನ್ಯೂರ್ಸ್ ಆಫ್ ಮಿಲೇನಿಯಾ ಪಟ್ಟಿ ಬಿಡುಗಡೆ ಆಗಿದೆ. 2000ದಿಂದೀಚೆ ಸ್ವಂತ ಬಲದಲ್ಲಿ ಉದ್ಯಮ ಸ್ಥಾಪಿಸಿದ ಆಂಟ್ರಪ್ರನ್ಯೂರ್ಗಳನ್ನು ಈ ಪಟ್ಟಿಯಲ್ಲಿ ಒಳಗೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಅತಿಹೆಚ್ಚು ಇರುವುದು ಬೆಂಗಳೂರಿಗರೇ. ಅತಿ ಹೆಚ್ಚು ಮೌಲ್ಯಯುತ ಉದ್ಯಮಗಳು ಸ್ಥಾಪನೆಯಾಗಿರುವುದೂ ಬೆಂಗಳೂರಿನಲ್ಲೇ.

ನವದೆಹಲಿ, ಡಿಸೆಂಬರ್ 18: ಟ್ರಾಫಿಕ್ ಜಂಜಾಟದ ಸಮಸ್ಯೆ ಏನೇ ಇದ್ದರೂ ಬ್ಯುಸಿನೆಸ್ ಮತ್ತು ಹಣದಲ್ಲಿ ಬೆಂಗಳೂರಿಗೆ ಸಾಟಿಯೇ ಇಲ್ಲದಂತಾಗಿದೆ. ಭಾರತೀಯ ನಗರಗಳ ಪೈಕಿ ಅತಿಹೆಚ್ಚು ಸಂಪತ್ತು ಹೊಂದಿರುವುದು ಬೆಂಗಳೂರೇ. ಹುರೂನ್ ಇಂಡಿಯಾದಿಂದ ಬಿಡುಗಡೆಯಾದ ವೆಲ್ತ್ ರಿಪೋರ್ಟ್ 2025 ವರದಿ (IDFC First Private and Hurun Indias Top-100 self-made entrepreneurs of Millenia 2025) ಪ್ರಕಾರ, ಬೆಂಗಳೂರಿನಲ್ಲೇ ಅತಿಹೆಚ್ಚು ಆಂಟ್ರಪ್ರನ್ಯೂರ್ಗಳು ಇರುವುದು. ಹಾಗೆಯೇ, ಅತಿಹೆಚ್ಚು ಬಿಲಿಯನ್ ಡಾಲರ್ ಕಂಪನಿಗಳಿಗೆ ಜನ್ಮ ನೀಡಿರುವ ನಗರವೆಂದರೆ ಅದು ಬೆಂಗಳೂರೇ.
ಐಡಿಎಫ್ಸಿ ಫಸ್ಟ್ ಪ್ರೈವೇಟ್ ಅಂಡ್ ಹುರೂನ್ ಇಂಡಿಯಾ ವೆಲ್ತ್ ರಿಪೋರ್ಟ್ನಲ್ಲಿ ಭಾರತದ ಟಾಪ್-200 ಕಂಪನಿಗಳು ಹಾಗೂ ಸೆಲ್ಫ್ ಮೇಡ್ ಆಂಟ್ರಪ್ರನ್ಯೂರ್ಗಳ ಪಟ್ಟಿ ಇದೆ. 2000ರದ ವರ್ಷದಿಂದೀಚೆ ಭಾರತದಲ್ಲಿ ಸ್ಥಾಪನೆಯಾದ 200 ಅತಿ ಮೌಲ್ಯದ ಕಂಪನಿಗಳ ಪಟ್ಟಿ ಇದೆ.
ಅತಿದೊಡ್ಡ ನವ ಉದ್ದಿಮೆದಾರರ ಪಟ್ಟಿಯಲ್ಲಿ ಬೆಂಗಳೂರು ಟಾಪ್ ಇದೆ. ಸಿಲಿಕಾನ್ ಸಿಟಿಯ 88 ಆಂಟ್ರಪ್ರನ್ಯೂರ್ಗಳು ಈ ಪಟ್ಟಿಯಲ್ಲಿದ್ದಾರೆ. 83 ಉದ್ದಿಮೆದಾರರಿರುವ ಮುಂಬೈ ಅನ್ನು ಬೆಂಗಳೂರು ಎರಡನೇ ಸ್ಥಾನಕ್ಕೆ ತಳ್ಳಿದೆ. ದೆಹಲಿಯಲ್ಲಿ 52 ಹಾಗೂ ಗುರುಗ್ರಾಮ್ನಲ್ಲಿ 32 ಆಂಟ್ರಪ್ರನ್ಯೂರ್ಗಳು ಈ ಹುರೂನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ
ಭಾರತದ ನಗರವಾರು ಅಗ್ರಮಾನ್ಯ ಆಂಟ್ರಪ್ರನ್ಯೂರ್ಗಳ ಪಟ್ಟಿ
- ಬೆಂಗಳೂರು: 88
- ಮುಂಬೈ: 83
- ನವದೆಹಲಿ: 52
- ಗುರುಗ್ರಾಮ್: 32
- ಚೆನ್ನೈ: 15
- ಪುಣೆ: 13
- ಹೈದರಾಬಾದ್: 12
- ಕೋಲ್ಕತಾ: 10
- ಅಹ್ಮದಾಬಾದ್: 9
- ಜೈಪುರ್: 7
ಅತಿ ಮೌಲ್ಯಯುತ ಕಂಪನಿಗಳ ಹುಟ್ಟು
- ಬೆಂಗಳೂರು: 52
- ಮುಂಬೈ: 51
- ಗುರುಗ್ರಾಮ್: 36
- ಚೆನ್ನೈ: 11
- ನವದೆಹಲಿ: 10
- ಪುಣೆ: 8
- ಹೈದರಾಬಾದ್: 8
- ನೋಯ್ಡಾ: 7
- ಅಹ್ಮದಾಬಾದ್: 5
- ಕೋಲ್ಕತಾ: 4
- ಜೈಪುರ್: 4
ಇದನ್ನೂ ಓದಿ: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?
ಮೇಲಿನ ಪಟ್ಟಿಗಳಿಗೆ ಕಂಪನಿಗಳನ್ನು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಲು ಕೆಲ ಮಾನದಂಡಗಳನ್ನು ಇಡಲಾಗಿದೆ. 2000ದ ನಂತರ ಉದ್ಯಮ ಸ್ಥಾಪಿಸಿರಬೇಕು. ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ವಿದೇಶೀ ಕಂಪನಿಗಳ ಅಂಗ ಸಂಸ್ಥೆಗಳಾಗಿರಬಾರದು. ಫ್ಯಾಮಿಲಿ ಬ್ಯುಸಿನೆಸ್ ಆಗಿರಬಾರದು. ಸ್ವಂತ ಬಲದಲ್ಲಿ ಆಂಟ್ರಪ್ರನ್ಯೂರ್ಗಳಾಗಿರಬೇಕು. ಅಂದರೆ ಸೆಲ್ಫ್ ಮೇಡ್ ಉದ್ಯಮಿಗಳಾಗಿರಬೇಕು.
ಭಾರತದ 200 ಅಗ್ರಮಾನ್ಯ ಆಂಟ್ರಪ್ರನ್ಯೂರ್ಗಳ ಒಟ್ಟು ಸಂಪತ್ತು 42 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಸೇರಿ 51 ನಗರಗಳ ಆಂಟ್ರಪ್ರನ್ಯೂರ್ಗಳು ಸ್ಥಾನ ಪಡೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




