ಹಬ್ಬದ ಅವಧಿಗೆ ಮುಂಚಿತವಾಗಿಯೇ ಹ್ಯುಂಡೈ ಇಂಡಿಯಾ ಕಾರು ಪ್ರಿಯರಿಗಾಗಿ ವಿಶೇಷ ಹಾಗೂ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. 2021ರ ಸೆಪ್ಟೆಂಬರ್ ತಿಂಗಳಲ್ಲಿ ವಾಹನ ಕೊಳ್ಳಲಿರುವವರಿಗೆ ಹುಂಡೈ ಕಂಪೆನಿಯ ಆಯ್ದ ಕಾರುಗಳ ಮೇಲೆ ರಿಯಾಯಿತಿ ಸಿಗಲಿದ್ದು, ಈ ಬಗ್ಗೆ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸ್ಯಾಂಟ್ರೋ, ಗ್ರಾಂಡ್ ಐ 10 ನಿಯೋಸ್ ಮತ್ತು ಔರಾ ಮಾದರಿಗಳಿಗೆ ರಿಯಾಯಿತಿ ಅನ್ವಯಿಸಲಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯಲು ಹ್ಯುಂಡೈ ಈ ಹೆಜ್ಜೆ ಇಟ್ಟಿದೆ.
ಹ್ಯುಂಡೈ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಯಾಯಿತಿ ಕುರಿತಾದ ವಿವರಗಳನ್ನು ಪ್ರಕಟಿಸಲಾಗಿದ್ದು, ಯಾವ ಯಾವ ಮಾದರಿಯ ಕಾರುಗಳಿಗೆ ರಿಯಾಯಿತಿ ಅನ್ವಯಿಸಲಿದೆ, ಎಲ್ಲಿಯ ತನಕ ಈ ವಿಶೇಷ ಕೊಡುಗೆ ಲಭ್ಯವಿರಲಿದೆ ಎನ್ನುವುದನ್ನು ತಿಳಿಸಲಾಗಿದೆ. ಸಂಸ್ಥೆ ನೀಡಿರುವ ವಿವರಗಳ ಪ್ರಕಾರ ಈ ಪ್ರಯೋಜನ ಸ್ಯಾಂಟ್ರೋ, ಗ್ರಾಂಡ್ ಐ 10 ನಿಯೋಸ್ ಮತ್ತು ಔರಾ ಕಾರುಗಳಿಗೆ ಅನ್ವಯಿಸುತ್ತದೆ. ಆಕರ್ಷಕ ಪ್ರಯೋಜನಗಳು ಮತ್ತು ವಿಶೇಷ ಕೊಡುಗೆಗಳೊಂದಿಗೆ ಈ ಅವಧಿಯಲ್ಲಿ ಸದರಿ ಮಾದರಿ ಕಾರುಗಳ ಮಾರಾಟ ಹೆಚ್ಚಿಸುವ ಗುರಿಯನ್ನು ಕಾರು ತಯಾರಿಕಾ ಸಂಸ್ಥೆ ಹ್ಯುಂಡೈ ಹೊಂದಿದೆ.
ಹ್ಯುಂಡೈ ಸಂಸ್ಥೆ ತನ್ನ ಕಾರುಗಳ ಮೇಲೆ ನೀಡುತ್ತಿರುವ ರಿಯಾಯಿತಿ ಔರಾ, ಗ್ರಾಂಡ್ ಐ 10 ನಿಯೋಸ್ ಮತ್ತು ಸ್ಯಾಂಟ್ರೋಗೆ ಸೀಮಿತವಾಗಲಿದ್ದು, ವೆನ್ಯೂ, ಕ್ರೆಟಾ, ಅಲ್ಕಾಜಾರ್, ಆಲ್ ನ್ಯೂ ಐ 20, ಐ 20 ಎನ್ ಲೈನ್, ಟಕ್ಸನ್, ಕೋನಾ ಎಲೆಕ್ಟ್ರಿಕ್, ಎಲಾಂಟ್ರಾ ಮತ್ತು ವರ್ನಾ ಕಾರುಗಳಿಗೆ ಅನ್ವಯಿಸುವುದಿಲ್ಲ ಎನ್ನುವುದು ಗಮನಾರ್ಹವಾಗಿದೆ. ಹ್ಯುಂಡೈ ಕಾರುಗಳ ಮೇಲಿನ ಈ ಕೊಡುಗೆಗಳು ಸೆಪ್ಟೆಂಬರ್ 30, 2021 ರವರೆಗೆ ಲಭ್ಯ ಇರಲಿವೆ. ಇದು ನಗದು ರಿಯಾಯಿ, ಕಾರ್ಪೊರೇಟ್ ಬೋನಸ್ ಮತ್ತು ವಿನಿಮಯ ಪ್ರಯೋಜನಗಳನ್ನು ಒಳಗೊಂಡಿರುತ್ತವೆ. ಬಹುಮುಖ್ಯವಾಗಿ ಈ ಕೊಡುಗೆಗಳು ಕೆಲವೆಡೆ ಮಾತ್ರ ಸಿಗಲಿದ್ದು, ಕಾರುಗಳ ಲಭ್ಯತೆಗೆ ಅನುಗುಣವಾಗಿ ಬದಲಾಗಬಹುದು ಎಂದು ಸಂಸ್ಥೆ ತಿಳಿಸಿದೆ.
ಹ್ಯುಂಡೈನ ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರು ಗರಿಷ್ಠ ₹40,000ದ ತನಕ ರಿಯಾಯಿತಿ ಹೊಂದಿದೆ. ಈ ಕಾರಿಗೆ ನಗದು ರಿಯಾಯಿತಿ, ವಿನಿಮಯ ಲಾಭ ಮತ್ತು ಕಾರ್ಪೊರೇಟ್ ಬೋನಸ್ ಕ್ರಮವಾಗಿ ₹ 25,000, ₹10,000 ಮತ್ತು ₹5,000ದ ತನಕ ಅನ್ವಯಿಸಲಿದೆ. ಎರಾ ಮಾದರಿಯ ಮೇಲೆ ಒಟ್ಟು ₹25,000 ದ ತನಕ ರಿಯಾಯಿತಿ ಲಭ್ಯವಿದ್ದು, ಇದರಲ್ಲಿ ₹10,000 ನಗದು ರಿಯಾಯಿತಿ ಮತ್ತು ₹10,000 ವಿನಿಮಯ ಲಾಭ ಮತ್ತು ₹5,000 ಕಾರ್ಪೊರೇಟ್ ಬೋನಸ್ ಇರಲಿದೆ.
ಹ್ಯುಂಡೈ ಔರಾ ಕಾಂಪ್ಯಾಕ್ಟ್ ಸೆಡಾನ್ ಮಾರಾಟಕ್ಕೆ ಲಭ್ಯವಿದ್ದು ಅದರ ಮೇಲೆ ಗರಿಷ್ಠ ₹50,000ದ ತನಕ ಪ್ರಯೋಜನ ಪಡೆಯಬಹುದಾಗಿದೆ. ಇದು ₹35,000 ನಗದು ರಿಯಾಯಿತಿ, ₹10,000 ವಿನಿಮಯ ಪ್ರಯೋಜನ ಮತ್ತು ₹5,000 ಕಾರ್ಪೊರೇಟ್ ಬೋನಸ್ ಒಳಗೊಂಡಿದೆ. ಇತ್ತ ಸಿಎನ್‌ಜಿ ವೇರಿಯಂಟ್ಗಳಲ್ಲಿ ವಿನಿಮಯ ಲಾಭ ಮತ್ತು ಕಾರ್ಪೊರೇಟ್ ಬೋನಸ್ ಕ್ರಮವಾಗಿ ₹10,000 ಮತ್ತು ₹5,000 ಸಿಗಲಿದ್ದು, ಯಾವುದೇ ನಗದು ರಿಯಾಯಿತಿ ಇರುವುದಿಲ್ಲ.
ಗ್ರ್ಯಾಂಡ್ ಐ 10 ನಿಯೋಸ್ ಬಯಸುವ ಗ್ರಾಹಕರು ₹50,000ದ ತನಕ ಉಪಯೋಗ ಪಡೆದುಕೊಳ್ಳಬಹುದು. ಗ್ರ್ಯಾಂಡ್ ಐ 10 ನಿಯೋಸ್ ಮಾದರಿಯ ಮೇಲೆ ಒಟ್ಟು ರಿಯಾಯಿತಿ ₹50,000 ಇರಲಿದ್ದು, ಅದರಲ್ಲಿ ₹35,000 ನಗದು ರಿಯಾಯಿತಿ, ₹10,000 ವಿನಿಮಯ ಪ್ರಯೋಜನ ಮತ್ತು₹5,000 ಕಾರ್ಪೊರೇಟ್ ಬೋನಸ್ ಸಿಗಲಿದೆ. ಈ ಕೊಡುಗೆ ಕೇವಲ ಗ್ರಾಂಡ್ ಐ 10 ನಿಯೋಸ್ ಟರ್ಬೊ ವೇರಿಯಂಟ್ಗೆ ಮಾತ್ರ ಲಭ್ಯವಿದೆ. ಉಳಿದವುಗಳಿಗೆ ₹35,000ದ ತನಕ ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:
Jio Offer: ಜಿಯೋ ಸೂಪರ್ ಆಫರ್: ಫ್ರೀ ಹಾಟ್ಸ್ಟಾರ್ ಜೊತೆಗೆ 1 ವರ್ಷದವರೆಗೆ ಪ್ರತಿದಿನ 2GB ಡೇಟಾ
(Hyundai announces discounts of up to rs 50000 on selected car variants)