ಇನ್ನೂ ಓದು ಮುಗಿಯದಿದ್ದರೂ 2 ಕೋಟಿ ರೂ ಸಂಬಳದ ಕೆಲಸ ಗಿಟ್ಟಿಸಿದ ಧರ್ಮತೇಜ ರೆಡ್ಡಿ
ಐಐಟಿ ಮದ್ರಾಸ್ನ ಕಂಪ್ಯೂಟರ್ ಸೈನ್ಸ್ ಬಿಟೆಕ್ ವಿದ್ಯಾರ್ಥಿ ಧರ್ಮತೇಜ ರೆಡ್ಡಿ ನೆದರ್ಲ್ಯಾಂಡ್ಸ್ ಮೂಲದ ಐಎಂಸಿ ಕಂಪನಿಯಲ್ಲಿ ವಾರ್ಷಿಕ 2 ಕೋಟಿ ರೂ ಪ್ಯಾಕೇಜ್ನ ಕೆಲಸ ಪಡೆದಿದ್ದಾರೆ. ಆಂಧ್ರದ ಕಡಪ ಜಿಲ್ಲೆಯ ಈ ಯುವಕ ಮುಂಬೈ ಕ್ಯಾಂಪಸ್ ಸಂದರ್ಶನದಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ್ದಾನೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಇನ್ನೂ ವಿಫುಲ ಅವಕಾಶಗಳಿವೆ ಎನ್ನುವುದನ್ನು ಕಾಣಬಹುದು.

ಮುಂಬೈ, ನವೆಂಬರ್ 16: ತಂತ್ರಜ್ಞಾನ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಲೇ ಆಫ್ ನಡೆಯುತ್ತಿದ್ದರೂ ಕಂಪನಿಗಳಿಂದ ದುಬಾರಿ ಹೈರಿಂಗ್ ನಿಂತಿಲ್ಲ. ಕ್ಯಾಂಪಸ್ ಸಂದರ್ಶನಗಳಲ್ಲಿ ಆಯ್ಕೆಯಾಗುವ ಪ್ರತಿಭಾನ್ವಿತ ಎಂಜಿನಿಯರುಗಳಿಗೆ ಸಖತ್ ಸಂಬಳದ ಆಫರ್ಗಳು ಹರಿದುಬರುತ್ತಿರುತ್ತವೆ. ಗೂಗಲ್ ಇತ್ಯಾದಿ ಸಂಸ್ಥೆಗಳು ಆಯ್ದ ಕಾಲೇಜುಗಳಿಗೆ ಹೋಗಿ ಪ್ರತಿಭಾನ್ವಿತರನ್ನು ಹೆಕ್ಕಿ ಕೈತುಂಬ ಸಂಬಳದ ಆಫರ್ ಕೊಡುತ್ತವೆ. ಐಐಟಿ ಮುಂಬೈನಲ್ಲಿ ನಡೆದ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಧರ್ಮತೇಜ ರೆಡ್ಡಿಗೆ ಬರೋಬ್ಬರಿ ಎರಡು ಕೋಟಿ ರೂ ಸಂಬಳದ ಕೆಲಸ ಸಿಕ್ಕಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಎರ್ರಗುಂಟ್ಲ ಗ್ರಾಮದ ಧರ್ಮತೇಜ ರೆಡ್ಡಿ ಅವರಿಗೆ ಈ ಎರಡು ಕೋಟಿ ರೂ ಸಂಬಳದ ಕೆಲಸದ ಆಫರ್ ಕೊಟ್ಟಿದ್ದು ನೆದರ್ಲ್ಯಾಂಡ್ಸ್ ಮೂಲದ ಐಎಂಸಿ ಕಂಪನಿ. ಧರ್ಮತೇಜ ರೆಡ್ಡಿ ಐಐಟಿ ಮದ್ರಾಸ್ನಲ್ಲಿ ಬಿಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿ. ಪದವಿ ಕೈಗೆ ಬರುವ ಮುನ್ನವೇ ಎಲ್ಲರೂ ಕನಸು ಕಾಣುವಂತಹ ಭರ್ಜರಿ ಸಂಬಳದ ಕೆಲಸ ಗಿಟ್ಟಿಸಿರುವುದು ವಿಶೇಷ.
ಇದನ್ನೂ ಓದಿ: ಹೊಸ ಇತಿಹಾಸ ನಿರ್ಮಿಸಹೊರಟ ಅಗ್ನಿಕುಲ್ ಕಾಸ್ಮೋಸ್; ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್, ಮರುಬಳಕೆ ರಾಕೆಟ್ ಉಡಾವಣೆಗೆ ಪ್ಲಾನ್
ಧರ್ಮತೇಜ ರೆಡ್ಡಿಗೆ ಎರಡು ಕೋಟಿ ರೂ ಸಂಬಳವು ವಾರ್ಷಿಕವಾದುದು. ತಿಂಗಳಿಗೆ 8 ಲಕ್ಷ ರೂ ಮೇಲ್ಪಟ್ಟು ಸಂಬಳ ಸಿಗುತ್ತದೆ. ಐಟಿ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಎಂಟು ಲಕ್ಷ ರೂ ಮಾಸಿಕ ಸಂಬಳದ ಮಟ್ಟಕ್ಕೆ ಹೋಗಲು ಹಲವು ವರ್ಷಗಳು ಮತ್ತು ಬಡ್ತಿಗಳು ತಗುಲುತ್ತವೆ.
ಧರ್ಮತೇಜ ರೆಡ್ಡಿ ಡಿಸೆಂಬರ್ 3ರಂದು ಐಎಂಸಿ ಕಂಪನಿಯ ಕೆಲಸಕ್ಕೆ ಸೇರಲಿದ್ದಾರೆ ಎಂದು ಅವರ ಪೋಷಕರಾದ ರಮಣ ರೆಡ್ಡಿ ಮತ್ತು ತುಳಸಿ ತಿಳಿಸಿದ್ದಾರೆ. ಆದರೆ, ಕೆಲಸದ ಸ್ಥಳವು ಎಲ್ಲಿ ಎಂಬುದು ಗೊತ್ತಾಗಿಲ್ಲ. ನೆದರ್ಲ್ಯಾಂಡ್ಸ್ನ ಆಮ್ಸ್ಟರ್ಡಾಮ್ನಲ್ಲಿ ಮುಖ್ಯ ಕಚೇರಿ ಇದೆ. ಬೇರೆ ಕೆಲ ದೇಶಗಳಲ್ಲಿ ಇದರ ಕಚೇರಿಗಳಿವೆ. ಮುಂಬೈನಲ್ಲೂ ಒಂದು ಘಟಕ ಇದೆ. ಮುಂಬೈನಲ್ಲಿ ರೆಕ್ರುಟ್ಮೆಂಟ್ ನಡೆದಿರುವುದರಿಂದ ಐಎಂಸಿಯ ಮುಂಬೈ ಕಚೇರಿಯಲ್ಲೇ ಕೆಲಸ ಇರಬಹುದು.
ಇದನ್ನೂ ಓದಿ: ಜಾಗತಿಕ ಎಐ ಪೂರೈಕೆ ಸರಪಳಿ ವ್ಯವಸ್ಥೆಗೆ ಮೈತ್ರಿ; ಅಮೆರಿಕ ನೇತೃತ್ವದ ಗುಂಪಿಗೆ ಭಾರತ ಸೇರ್ಪಡೆ
ಧರ್ಮತೇಜ ರೆಡ್ಡಿಯ ತಂದೆ ರಮಣ ರೆಡ್ಡಿ ಅವರು ಎರ್ರಗುಂಟ್ಲದಲ್ಲಿರುವ ಸ್ಥಳೀಯ ಸಿಮೆಂಟ್ ಕಾರ್ಖಾನೆಯಲ್ಲಿ ಸಾಗಣೆದಾರರಾಗಿ ಕೆಲಸ ಮಾಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
