Inflation: ಹಣದುಬ್ಬರ ಎಫೆಕ್ಟ್; ಭಾರತದಲ್ಲಿ ಬ್ಯಾಂಕ್ ಬಡ್ಡಿ ದರಗಳು ಇನ್ನಷ್ಟು ಹೆಚ್ಚಾಗಲಿವೆಯೇ?

|

Updated on: Jul 23, 2023 | 11:57 AM

Bank Interest Rates May Rise: ಜೂನ್ ತಿಂಗಳಲ್ಲಿ ಶೇ. 4.87ರಷ್ಟಿರುವ ಹಣದುಬ್ಬರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಶೇ. 6ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಏರಬಹುದು ಎಂದು ಜಪಾನ್ ಬ್ರೋಕರೇಜ್ ಸಂಸ್ಥೆ ನೊಮುರಾ ಹೇಳಿದೆ.

Inflation: ಹಣದುಬ್ಬರ ಎಫೆಕ್ಟ್; ಭಾರತದಲ್ಲಿ ಬ್ಯಾಂಕ್ ಬಡ್ಡಿ ದರಗಳು ಇನ್ನಷ್ಟು ಹೆಚ್ಚಾಗಲಿವೆಯೇ?
ಹಣದುಬ್ಬರ
Follow us on

ನವದೆಹಲಿ, ಜುಲೈ 23: ಟೊಮೆಟೋ ಮತ್ತಿತರ ಆಹಾರವಸ್ತುಗಳ ಬೆಲೆ ಏರಿಕೆಯು (Essential Commodities Price Rise) ಭಾರತದ ಹಣದುಬ್ಬರ ನಿಯಂತ್ರಣ ಪ್ರಯತ್ನಗಳಿಗೆ ಹಿನ್ನಡೆ ತರುವ ಸಾಧ್ಯತೆ ಇದೆ. ಜಪಾನ್​ನ ಬ್ರೋಕರೇಜ್ ಸಂಸ್ಥೆ ನೊಮುರಾ ಪ್ರಕಾರ, ಭಾರತದ ಹಣದುಬ್ಬರ (India Inflation) ಮುಂದಿನ ದಿನಗಳಲ್ಲಿ ಬಹಳ ಎತ್ತರಕ್ಕೆ ಹೋಗುವ ಸಾಧ್ಯತೆ ಇದೆ. ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಕಳೆದ ಎರಡು ತಿಂಗಳಿಂದ ಶೇ. 5ರ ಒಳಗೆಯೇ ಇದೆ. ಆದರೆ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಶೇ. 6ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಹಣದುಬ್ಬರ ಏರಬಹುದು ಎಂದು ನೊಮುರಾ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರ ಜುಲೈ 20ರಂದು ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ನಿಷೇಧಿಸುವ ಕ್ರಮ ಕೈಗೊಂಡಿದ್ದು ಹಣದುಬ್ಬರ ನಿಯಂತ್ರಣದ ದೃಷ್ಟಿಯಿಂದಲೇ ಎಂದು ಹೇಳಲಾಗುತ್ತಿದೆ. ಅಕ್ಕಿ ರಫ್ತು ನಿಷೇಧಿಸಿದರೂ ಇತರ ಹಲವು ಆಹಾರಪದಾರ್ಥಗಳ ಬೆಲೆ ಹೆಚ್ಚಾಗುವುದರಿಂದ ಹಣದುಬ್ಬರ ದರ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿTomato Price: ಸರ್ಕಾರದಿಂದ ಟೊಮೆಟೋಗೆ ಸಬ್ಸಿಡಿ ಇನ್ನಷ್ಟು ಹೆಚ್ಚಳ; ಕಿಲೋಗೆ 70 ರೂನಂತೆ ಮಾರಾಟ

ಶೇ. 6ರವರೆಗೂ ಹಣದುಬ್ಬರಕ್ಕೆ ತಾಳಿಕೆ ಮಿತಿ

ಭಾರತದ ಹಣದುಬ್ಬರ ಶೇ. 4ರಷ್ಟಿರಬೇಕು. ತಾಳಿಕೆಯ ಮಿತಿ ಶೇ. 2ರ ಆಸುಪಾಲು ಇರಬೇಕು ಎಂದು ಆರ್​ಬಿಐಗೆ ಕೇಂದ್ರ ಸರ್ಕಾರ ಗುರಿ ಕೊಟ್ಟಿದೆ. ಅಂದರೆ ಹಣದುಬ್ಬರವು ಶೇ. 2ರಿಂದ ಶೇ. 6ರ ವ್ಯಾಪ್ತಿಯೊಳಗೆ ಇರಿಸುವುದು ಆರ್​ಬಿಐನ ಗುರಿಯಾಗಿದೆ. 2022ರ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಶೇ. 7.79ಕ್ಕೆ ಏರಿಹೋಗಿತ್ತು. ಅದಾದ ಬಳಿಕ ಆರ್​ಬಿಐ ಬ್ಯಾಂಕ್ ಬಡ್ಡಿ ದರ ಏರಿಸುವುದು ಸೇರಿದಂತೆ ವಿವಿಧ ಕ್ರಮಗಳ ಮೂಲಕ ಹಣದುಬ್ಬರವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. 2023ರ ಮೇ ತಿಂಗಳಲ್ಲಿ ಶೇ. 4.25ಕ್ಕೆ ಇಳಿದಿದ್ದ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 4.81ಕ್ಕೆ ತುಸು ಏರಿಕೆಯಾಗಿತ್ತು.

ಈಗ ವಿವಿಧ ಆಹಾರ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 6ಕ್ಕಿಂತಲೂ ಮೇಲೇರುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿIndian Rice: ಭಾರತದಿಂದ ಅಕ್ಕಿ ರಫ್ತು ನಿಷೇಧ; ಹಲವು ದೇಶಗಳಲ್ಲಿ ಆತಂಕ; ಅಮೆರಿಕ, ಕೆನಡಾದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನರು

ಬಡ್ಡಿ ದರ ಏರಿಸುತ್ತಾ ಆರ್​ಬಿಐ?

ಕಳೆದ ಬಾರಿ (2023 ಜೂನ್ 6ರಿಂದ 8) ನಡೆದ ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ರೆಪೋ ದರ ಏರಿದೇ ಇರಲು ತೀರ್ಮಾನಿಸಲಾಗಿತ್ತು. ಆದರೆ, ಮುಂದಿನ ಎಂಪಿಸಿ ಸಭೆಯಲ್ಲಿ ಆರ್​ಬಿಐ ಬಡ್ಡಿ ದರಗಳನ್ನು ಹೆಚ್ಚಿಸಬಹುದು. ಆರ್​ಬಿಐನ ಮುಂದಿನ ಎಂಪಿಸಿ ಸಭೆ ಆಗಸ್ಟ್ 8ರಿಂದ 10ಕ್ಕೆ ನಡೆಯಲಿದೆ. ತುರ್ತು ಅಗತ್ಯ ಇದ್ದರೆ ಆರ್​ಬಿಐ ಎಂಪಿಸಿ ನಿಗದಿತ ವೇಳಾಪಟ್ಟಿಗಿಂತ ಮುಂಚೆಯೇ ಸಭೆ ಸೇರಿ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇಲ್ಲದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ