ಕಚ್ಚಾತೈಲಕ್ಕೆ ಚೀನಾ ಕರೆನ್ಸಿಯಲ್ಲಿ ಹಣ ಪಾವತಿಸುವ ರಷ್ಯಾ ಒತ್ತಾಯವನ್ನು ತಿರಸ್ಕರಿಸಿದ ಭಾರತ

|

Updated on: Oct 20, 2023 | 5:23 PM

ಕಚ್ಚಾತೈಲ ಆಮದು ಮಾಡಿಕೊಳ್ಳಬೇಕಿದ್ದರೆ ಚೀನಾದ ಕರೆನ್ಸಿ ನೀಡುವಂತೆ ರಷ್ಯಾ ಒತ್ತಾಯಿಸಿದ್ದು, ಈ ಬೇಡಿಕೆಯನ್ನು ಭಾರತ ತಿರಸ್ಕರಿಸಿದೆ.ಕಚ್ಚಾತೈಲ ಆಮದು ಮಾಡಿಕೊಳ್ಳಬೇಕಾದರೆ ಭಾರತವು ರಷ್ಯಾಗೆ ಚೀನಾದ ಕರೆನ್ಸಿ ಯುವಾನ್​ನಲ್ಲಿ ಪಾವತಿ ಮಾಡಬೇಕು ಎಂದು ರಷ್ಯಾ ಬೇಡಿಕೆ ಇಟ್ಟಿತ್ತು. ಆದರೆ ಭಾರತ ಹಾಗೂ ಬೀಜಿಂಗ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಉದ್ವಿಗ್ನತೆ ಉಂಟಾಗುತ್ತಿದೆ.

ಕಚ್ಚಾತೈಲಕ್ಕೆ ಚೀನಾ ಕರೆನ್ಸಿಯಲ್ಲಿ ಹಣ ಪಾವತಿಸುವ ರಷ್ಯಾ ಒತ್ತಾಯವನ್ನು ತಿರಸ್ಕರಿಸಿದ ಭಾರತ
ಆಯಿಲ್
Image Credit source: Outlook
Follow us on

ಕಚ್ಚಾತೈಲ(Crude Oil) ಆಮದು ಮಾಡಿಕೊಳ್ಳಬೇಕಿದ್ದರೆ ಚೀನಾ(China)ದ ಕರೆನ್ಸಿ ನೀಡುವಂತೆ ರಷ್ಯಾ ಒತ್ತಾಯಿಸಿದ್ದು, ಈ ಬೇಡಿಕೆಯನ್ನು ಭಾರತ ತಿರಸ್ಕರಿಸಿದೆ.ಕಚ್ಚಾತೈಲ ಆಮದು ಮಾಡಿಕೊಳ್ಳಬೇಕಾದರೆ ಭಾರತವು ರಷ್ಯಾಗೆ ಚೀನಾದ ಕರೆನ್ಸಿ ಯುವಾನ್​ನಲ್ಲಿ ಪಾವತಿ ಮಾಡಬೇಕು ಎಂದು ರಷ್ಯಾ ಬೇಡಿಕೆ ಇಟ್ಟಿತ್ತು. ಆದರೆ ಭಾರತ ಹಾಗೂ ಬೀಜಿಂಗ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಉದ್ವಿಗ್ನತೆ ಉಂಟಾಗುತ್ತಿದೆ.

ಕೆಲವು ರಷ್ಯಾ ತೈಲ ಪೂರೈಕೆದಾರರು ಯುವಾನ್​ನಲ್ಲಿ ಪಾವತಿ ಮಾಡಲು ಒತ್ತಾಯಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಈ ಮನವಿಯನ್ನು ತಿರಸ್ಕರಿಸಿದೆ. ಭಾರತದ ಸುಮಾರು ಶೇ.70ರಷ್ಟು ರಿಫೈನರಿಗಳು ಸರ್ಕಾರಿ ಸ್ವಾಮ್ಯದ ಘಟಕಗಳಾಗಿವೆ, ಅಂದರೆ ಅವರು ಹಣಕಾಸು ಸಚಿವಾಲಯ ಹೊರಡಿಸಿದ ಪಾವತಿ ಸೂಚನೆಗಳಿಗೆ ಬದ್ಧರಾಗಿರಬೇಕು ಎಂಬುದು ಗಮನಿಸಬೇಕಾದ ಸಂಗತಿ.

ಅತಿ ದೊಡ್ಡ ಸಂಸ್ಕರಣಾಗಾರಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ಹಿಂದೆ ರಷ್ಯಾದ ಕಚ್ಚಾತೈಲಕ್ಕಾಗಿ ಯುವಾನ್ ಪಾವತಿಗಳನ್ನು ಮಾಡಿದ್ದರೆ, ಸರ್ಕಾರವು ಅಂತಹ ವಹಿವಾಟುಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಆದಾಗ್ಯೂ, ಖಾಸಗಿ ರಿಫೈನರಿಗಳು ಯುವಾನ್​ನಲ್ಲಿ ಪಾವತಿಸಬಹುದಾಗಿದೆ.

ಮತ್ತಷ್ಟು ಓದಿ: Petrol Price on October 20: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ತನಗೆ ಹೆಚ್ಚುವರಿ ರೂಪಾಯಿಗಳ ಪೂರೈಕೆ ಇದೆ ಮತ್ತು ಅದನ್ನು ಖರ್ಚು ಮಾಡಲು ಹೆಣಗಾಡುತ್ತಿದೆ ಎಂದು ರಷ್ಯಾ ಹೇಳಿದೆ.
ಚೀನಾದಿಂದ ಹೆಚ್ಚು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ಯುವಾನ್​ಗೆ ಪ್ರಾಮುಖ್ಯತೆ ಹೆಚ್ಚಾಗಿದೆ. ರಷ್ಯಾದ ಕಂಪನಿಗಳು ಯುವಾನ್​ನ್ನು ಹೆಚ್ಚು ಬಳಸುತ್ತಿವೆ. ಭಾರತೀಯ ರಿಫೈನರಿಗಳು ಹೆಚ್ಚಾಗಿ ಯುಎಇ ಕರೆನ್ಸಿ, ಡಾಲರ್​ ಹಾಗೂ ರೂಪಾಯಿಗಳಲ್ಲಿ ಪಾವತಿ ಮಾಡುತ್ತವೆ.

ಇತ್ತೀಚಿನ ದಿನಗಳಲ್ಲಿ ರಷ್ಯಾ ಹಾಗೂ ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಉಕ್ರೇನ್​ ಯುದ್ಧದಿಂದಾಗಿ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿವೆ. ಇದು ರಷ್ಯಾದ ತೈಲದ ಮೇಲೆ ಪ್ರತಿ ಬ್ಯಾರೆಲ್​ಗೆ 60 ಡಾಲರ್​ ನಿಷೇಧವನ್ನು ಸಹ ಒಳಗೊಂಡಿದೆ. ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಪಡೆಯುತ್ತಿದೆ ಆದರೆ ಪಾವತಿ ಸಮಸ್ಯೆಯಿಂದ ಇದು ಕಷ್ಟಕರವಾಗಬಹುದು.

ನಾಲ್ಕು-ಐದು ಸರಕುಗಳ ಪಾವತಿಯಲ್ಲಿ ವಿಳಂಬವಾಗಿದೆ, ಭಾರತ ಪ್ರಸ್ತುತ ರಷ್ಯಾದಿಂದ ಗರಿಷ್ಠ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಹೆಚ್ಚುತ್ತಿರುವ ಪಾವತಿ ಸಮಸ್ಯೆಗಳಿಂದಾಗಿ, ಈ ಒಪ್ಪಂದವು ತೊಂದರೆಗೆ ಸಿಲುಕಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ