Zero Balance ನಿಂದ ಬ್ಯಾಂಕಿಂಗ್​ ವ್ಯವಸ್ಥೆ ಹಾಳಾಗುತ್ತೆ ಅಂದಿದ್ದರು! ಆದರೆ ಇಂದು ಚಿತ್ರಣವೇ ಬದಲಾಗಿದೆ ಎಂದು PMJDY ಯೋಜನೆಯ ಕೊಂಡಾಡಿದ ಸಚಿವೆ ನಿರ್ಮಲಾ

Nirmala Sitharaman: ಈ ಜನ್ ಧನ್ ಯೋಜನೆಯಡಿ 50.70 ಕೋಟಿ ಮಂದಿ ಫಲಾನುಭವಿಗಳ ಖಾತೆಗಳಿಗೆ ಅಂದಾಜು 206,781.34 ಕೋಟಿ ರೂ ಜಮಾ ಮಾಡಲಾಗಿದೆ. ಈ ಜನ್ ಧನ್ ಖಾತೆಗಳಲ್ಲಿ ಶೇ. 56 ಖಾತೆಗಳು ಮಹಿಳೆಯರಿಗೆ ಸೇರಿದೆ. 67 ರಷ್ಟು ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ. ಇದು ಆರ್ಥಿಕ ಸೇರ್ಪಡೆಯಲ್ಲದೆ ಮತ್ತಿನ್ನೇನು? -ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Zero Balance ನಿಂದ ಬ್ಯಾಂಕಿಂಗ್​ ವ್ಯವಸ್ಥೆ ಹಾಳಾಗುತ್ತೆ ಅಂದಿದ್ದರು! ಆದರೆ ಇಂದು ಚಿತ್ರಣವೇ ಬದಲಾಗಿದೆ ಎಂದು PMJDY ಯೋಜನೆಯ ಕೊಂಡಾಡಿದ ಸಚಿವೆ ನಿರ್ಮಲಾ
ಅಂದು ಶೂನ್ಯ ಬ್ಯಾಲೆನ್ಸ್ ನಿಂದ ದೇಶದ ಬ್ಯಾಂಕಿಂಗ್​ ವ್ಯವಸ್ಥೆ ಹಾಳಾಗುತ್ತದೆ ಅಂದಿದ್ದರು!
Follow us
|

Updated on: Oct 21, 2023 | 9:34 AM

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಬಗ್ಗೆ (Pradhan Mantri Jan-Dhan Yojana -PMJDY) ಎಲ್ಲರಿಗೂ ತಿಳಿದಿದೆ. ದೇಶದ ಕೋಟಿಗಟ್ಟಲೆ ಫಲಾನುಭವಿಗಳು ಸರ್ಕಾರದ ಯೋಜನೆಯಡಿ ತಮ್ಮ ಖಾತೆಗಳನ್ನು ತೆರೆದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರದ ಈ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಕೌಟಿಲ್ಯ ಏಕನಾಮಿಕ್ ಕಾನ್ಕ್ಲೇವ್ 2023 ರ ಉದ್ಘಾಟನಾ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಜನ್ ಧನ್ ಖಾತಾ) ಕುರಿತು ಪ್ರಸ್ತಾಪಿಸಿದರು.

2014 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಜನ್-ಧನ್ ಯೋಜನೆ (ಪಿಎಂಜೆಡಿವೈ) ದೇಶದಲ್ಲಿ ಆರ್ಥಿಕ ಸೇರ್ಪಡೆಯನ್ನು (financial inclusion) ತರುವ ಅತಿದೊಡ್ಡ ಸಾಧನವಾಗಿ ಹೊರಹೊಮ್ಮಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಕೌಟಿಲ್ಯ ಎಕನಾಮಿಕ್ ಕಾನ್ಕ್ಲೇವ್ 2023 (Kautilya Economic Conclave 2023) ಅನ್ನು ಉದ್ಘಾಟಿಸಿದ ಸಚಿವರು, 50 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳ ಅಡಿಯಲ್ಲಿ ಆರ್ಥಿಕ ಪ್ರಯೋಜನಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ ಎಂದು ಹೇಳಿದರು.

ಈ ಜನ್ ಧನ್ ಯೋಜನೆಯಡಿ 50.70 ಕೋಟಿ ಮಂದಿ ಫಲಾನುಭವಿಗಳ ಖಾತೆಗಳಿಗೆ ಅಂದಾಜು 206,781.34 ಕೋಟಿ ರೂ ಜಮಾ ಮಾಡಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ 50 ಕೋಟಿ ಜನ್ ಧನ್ ಖಾತೆಗಳಲ್ಲಿ 56 ಪ್ರತಿಶತ ಮಹಿಳೆಯರಿಗೆ ಸೇರಿದೆ. 67 ರಷ್ಟು ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ. ಈ ಖಾತೆಗಳ ಮೂಲಕ ಸುಮಾರು 34 ಕೋಟಿ ರೂ ಪೆ ಕಾರ್ಡ್​​ ವಿತರಣೆಯಾಗಿದೆ. ಈ ಯೋಜನೆಯನ್ನು ಪ್ರಾರಂಭಿಸಿದಾಗ ಸಾರ್ವಜನಿಕ ವಲಯದ ಬ್ಯಾಂಕುಗಳು “ಶೂನ್ಯ ಬ್ಯಾಲೆನ್ಸ್” ಖಾತೆಗಳನ್ನು ನೀಡುವ ಮೂಲಕ ಒತ್ತಡಕ್ಕೆ ಗುರಿಯಾಗುತ್ತವೆ ಎಂದು ಅನೇಕ ಜನರು ಭಾವಿಸಿದ್ದರು. ಆದರೆ ಈ ಖಾತೆಗಳಲ್ಲಿ ಈಗ 2 ಲಕ್ಷ ಕೋಟಿ ರೂ. ಗೂ ಅಧಿಕ ಮೊತ್ತವಿದೆ ಎಂದು ಸಚಿವೆ ಸೀತಾರಾಮನ್ ಮೆಚ್ಚಿಗೆ ವ್ಯಕ್ತಪಡಿಸಿದರು.

ಸಚಿವರು ತಮ್ಮ ಭಾಷಣದಲ್ಲಿ ಹವಾಮಾನ ಹಣಕಾಸು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ವಿವರವಾಗಿ ಮಾತನಾಡಿದರು. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು (MDBs) ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳು ಕಡಿಮೆ ಪರಿಣಾಮಕಾರಿಯಾಗಿವೆ. ಆದರೆ ಅನೇಕ ಜನರು ಈ ಜನ್ ಧನ್ ಯೋಜನೆ ಬಗ್ಗೆ ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದರು. ನಂತರ ಅವರು ಈ ಖಾತೆಗಳ ಮೂಲಕ ಪ್ರಯೋಜನಗಳೇನು ಎಂದು ತಿಳಿಯಲು ಬಯಸಿದ್ದರು. ಈ ಶೂನ್ಯ ಖಾತೆ ಖಾತೆಗಳಿಂದ ಬಳಕೆದಾರರು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದಲ್ಲದೇ ಮೋದಿ ಸರಕಾರ ದೇಶದ ಜನತೆಗೆ ಹಲವು ರೀತಿಯ ಯೋಜನೆಗಳನ್ನು ಕಲ್ಪಿಸಿದೆ ಎಂಬುದನ್ನೂ ಅವರು ನೆನಪಿಸಿದರು. ಜನರ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಯೋಜನೆಗಳನ್ನು ಮಾಡುತ್ತಿದೆ ಎಂದು ಹೇಳಿದರು

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ