ಕಚ್ಚಾತೈಲಕ್ಕೆ ಚೀನಾ ಕರೆನ್ಸಿಯಲ್ಲಿ ಹಣ ಪಾವತಿಸುವ ರಷ್ಯಾ ಒತ್ತಾಯವನ್ನು ತಿರಸ್ಕರಿಸಿದ ಭಾರತ
ಕಚ್ಚಾತೈಲ ಆಮದು ಮಾಡಿಕೊಳ್ಳಬೇಕಿದ್ದರೆ ಚೀನಾದ ಕರೆನ್ಸಿ ನೀಡುವಂತೆ ರಷ್ಯಾ ಒತ್ತಾಯಿಸಿದ್ದು, ಈ ಬೇಡಿಕೆಯನ್ನು ಭಾರತ ತಿರಸ್ಕರಿಸಿದೆ.ಕಚ್ಚಾತೈಲ ಆಮದು ಮಾಡಿಕೊಳ್ಳಬೇಕಾದರೆ ಭಾರತವು ರಷ್ಯಾಗೆ ಚೀನಾದ ಕರೆನ್ಸಿ ಯುವಾನ್ನಲ್ಲಿ ಪಾವತಿ ಮಾಡಬೇಕು ಎಂದು ರಷ್ಯಾ ಬೇಡಿಕೆ ಇಟ್ಟಿತ್ತು. ಆದರೆ ಭಾರತ ಹಾಗೂ ಬೀಜಿಂಗ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಉದ್ವಿಗ್ನತೆ ಉಂಟಾಗುತ್ತಿದೆ.
ಕಚ್ಚಾತೈಲ(Crude Oil) ಆಮದು ಮಾಡಿಕೊಳ್ಳಬೇಕಿದ್ದರೆ ಚೀನಾ(China)ದ ಕರೆನ್ಸಿ ನೀಡುವಂತೆ ರಷ್ಯಾ ಒತ್ತಾಯಿಸಿದ್ದು, ಈ ಬೇಡಿಕೆಯನ್ನು ಭಾರತ ತಿರಸ್ಕರಿಸಿದೆ.ಕಚ್ಚಾತೈಲ ಆಮದು ಮಾಡಿಕೊಳ್ಳಬೇಕಾದರೆ ಭಾರತವು ರಷ್ಯಾಗೆ ಚೀನಾದ ಕರೆನ್ಸಿ ಯುವಾನ್ನಲ್ಲಿ ಪಾವತಿ ಮಾಡಬೇಕು ಎಂದು ರಷ್ಯಾ ಬೇಡಿಕೆ ಇಟ್ಟಿತ್ತು. ಆದರೆ ಭಾರತ ಹಾಗೂ ಬೀಜಿಂಗ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಉದ್ವಿಗ್ನತೆ ಉಂಟಾಗುತ್ತಿದೆ.
ಕೆಲವು ರಷ್ಯಾ ತೈಲ ಪೂರೈಕೆದಾರರು ಯುವಾನ್ನಲ್ಲಿ ಪಾವತಿ ಮಾಡಲು ಒತ್ತಾಯಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಈ ಮನವಿಯನ್ನು ತಿರಸ್ಕರಿಸಿದೆ. ಭಾರತದ ಸುಮಾರು ಶೇ.70ರಷ್ಟು ರಿಫೈನರಿಗಳು ಸರ್ಕಾರಿ ಸ್ವಾಮ್ಯದ ಘಟಕಗಳಾಗಿವೆ, ಅಂದರೆ ಅವರು ಹಣಕಾಸು ಸಚಿವಾಲಯ ಹೊರಡಿಸಿದ ಪಾವತಿ ಸೂಚನೆಗಳಿಗೆ ಬದ್ಧರಾಗಿರಬೇಕು ಎಂಬುದು ಗಮನಿಸಬೇಕಾದ ಸಂಗತಿ.
ಅತಿ ದೊಡ್ಡ ಸಂಸ್ಕರಣಾಗಾರಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ಹಿಂದೆ ರಷ್ಯಾದ ಕಚ್ಚಾತೈಲಕ್ಕಾಗಿ ಯುವಾನ್ ಪಾವತಿಗಳನ್ನು ಮಾಡಿದ್ದರೆ, ಸರ್ಕಾರವು ಅಂತಹ ವಹಿವಾಟುಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಆದಾಗ್ಯೂ, ಖಾಸಗಿ ರಿಫೈನರಿಗಳು ಯುವಾನ್ನಲ್ಲಿ ಪಾವತಿಸಬಹುದಾಗಿದೆ.
ಮತ್ತಷ್ಟು ಓದಿ: Petrol Price on October 20: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ತನಗೆ ಹೆಚ್ಚುವರಿ ರೂಪಾಯಿಗಳ ಪೂರೈಕೆ ಇದೆ ಮತ್ತು ಅದನ್ನು ಖರ್ಚು ಮಾಡಲು ಹೆಣಗಾಡುತ್ತಿದೆ ಎಂದು ರಷ್ಯಾ ಹೇಳಿದೆ. ಚೀನಾದಿಂದ ಹೆಚ್ಚು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ಯುವಾನ್ಗೆ ಪ್ರಾಮುಖ್ಯತೆ ಹೆಚ್ಚಾಗಿದೆ. ರಷ್ಯಾದ ಕಂಪನಿಗಳು ಯುವಾನ್ನ್ನು ಹೆಚ್ಚು ಬಳಸುತ್ತಿವೆ. ಭಾರತೀಯ ರಿಫೈನರಿಗಳು ಹೆಚ್ಚಾಗಿ ಯುಎಇ ಕರೆನ್ಸಿ, ಡಾಲರ್ ಹಾಗೂ ರೂಪಾಯಿಗಳಲ್ಲಿ ಪಾವತಿ ಮಾಡುತ್ತವೆ.
ಇತ್ತೀಚಿನ ದಿನಗಳಲ್ಲಿ ರಷ್ಯಾ ಹಾಗೂ ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಉಕ್ರೇನ್ ಯುದ್ಧದಿಂದಾಗಿ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿವೆ. ಇದು ರಷ್ಯಾದ ತೈಲದ ಮೇಲೆ ಪ್ರತಿ ಬ್ಯಾರೆಲ್ಗೆ 60 ಡಾಲರ್ ನಿಷೇಧವನ್ನು ಸಹ ಒಳಗೊಂಡಿದೆ. ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಪಡೆಯುತ್ತಿದೆ ಆದರೆ ಪಾವತಿ ಸಮಸ್ಯೆಯಿಂದ ಇದು ಕಷ್ಟಕರವಾಗಬಹುದು.
ನಾಲ್ಕು-ಐದು ಸರಕುಗಳ ಪಾವತಿಯಲ್ಲಿ ವಿಳಂಬವಾಗಿದೆ, ಭಾರತ ಪ್ರಸ್ತುತ ರಷ್ಯಾದಿಂದ ಗರಿಷ್ಠ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಹೆಚ್ಚುತ್ತಿರುವ ಪಾವತಿ ಸಮಸ್ಯೆಗಳಿಂದಾಗಿ, ಈ ಒಪ್ಪಂದವು ತೊಂದರೆಗೆ ಸಿಲುಕಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ