ಜೂ ಎನ್ಟಿಆರ್ ಹಿಂದಿ ಸಿನಿಮಾ ಬಿಡುಗಡೆಗೆ ಮುಂಚೆಯೇ ನೂರು ಕೋಟಿ ಕಲೆಕ್ಷನ್
Jr NTR and Hrithik Roshan: ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಒಟ್ಟಿಗೆ ನಟಿಸಿರುವ ‘ವಾರ್ 2’ ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಇರುವಂತೆಯೇ ಸಿನಿಮಾದ ಪ್ರೀ ರಿಲೀಸ್ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಸಿನಿಮಾದ ಬಜೆಟ್ನ ಅರ್ಧ ಭಾಗಕ್ಕೂ ಹೆಚ್ಚು ಮೊತ್ತ ಪ್ರೀ ರಿಲೀಸ್ ಗಳಿಕೆಯಿಂದಲೇ ಬಂದಿದೆ.

‘ಆರ್ಆರ್ಆರ್’ (RRR) ಸಿನಿಮಾದಿಂದ ಪ್ಯಾನ್ ವರ್ಲ್ಡ್ (Pan World) ಸ್ಟಾರ್ ಆಗಿರುವ ಜೂ ಎನ್ಟಿಆರ್ಗೆ ಈಗ ಬಾಲಿವುಡ್ನಲ್ಲೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಅವರು ತಮ್ಮ ಮೊದಲ ಹಿಂದಿ ಸಿನಿಮಾನಲ್ಲಿ ನಟಿಸಿದ್ದಾರೆ ಅದೂ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರೊಟ್ಟಿಗೆ. ಜೂ ಎನ್ಟಿಆರ್ ಮತ್ತು ಹೃತಿಕ್ ರೋಷನ್ ನಟಿಸಿರುವ ‘ವಾರ್ 2’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡೂ ತಿಂಗಳಿರುವಾಗಲೇ ಸಿನಿಮಾದ ಪ್ರೀ ರಿಲೀಸ್ ಗಳಿಕೆ ಭಾರಿ ಮಟ್ಟದಲ್ಲಿ ಆಗುತ್ತಿದೆ.
ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ಸಿನಿಮಾದ ಪ್ರೀ ರಿಲೀಸ್ ಗಳಿಕೆ ಈಗಾಗಲೇ 100 ಕೋಟಿ ದಾಟಿದೆಯಂತೆ. ಸಿನಿಮಾದ ಒಟ್ಟು ಬಜೆಟ್ 300 ಕೋಟಿ ಆಗಿದ್ದು, ಸಿನಿಮಾದ ಪ್ರೀ ರಿಲೀಸ್ ಕಲೆಕ್ಷನ್ನಿಂದಲೇ ಸುಮಾರು 200 ಕೋಟಿ ವರೆಗೆ ಗಳಿಸುವ ನಿರೀಕ್ಷೆಯಲ್ಲಿದೆ ಚಿತ್ರತಂಡ. ಸಿನಿಮಾದ ಪ್ರೀ ರಿಲೀಸ್ ಗಳಿಕೆ ಚಿತ್ರತಂಡಕ್ಕೆ ಉತ್ಸಾಹ ತುಂಬಿದ್ದು, ಸಿನಿಮಾದ ಪ್ರಚಾರದ ಬಗ್ಗೆ ಹೆಚ್ಚು ಕೊಡಲು ನಿರ್ಧರಿಸಿವೆ. ಮಾತ್ರವಲ್ಲದೆ ಸಿನಿಮಾವನ್ನು ಹೊರ ದೇಶಗಳಲ್ಲಿಯೂ ಪ್ರಚಾರ ಮಾಡಲು ಸಜ್ಜಾಗಿದೆ.
ಜೂ ಎನ್ಟಿಆರ್ಗೆ ಜಪಾನ್, ಚೀನಾಗಳಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದು, ‘ವಾರ್ 2’ ಸಿನಿಮಾವನ್ನು ಅಲ್ಲಿಯೂ ಭರ್ಜರಿಯಾಗಿ ಪ್ರಚಾರ ಮಾಡಲು ಚಿತ್ರತಂಡ ಮುಂದಾಗಿದೆ. ಇನ್ನು ಸಿನಿಮಾದ ದಕ್ಷಿಣ ಭಾರತದ ವಿತರಣೆ ಹಕ್ಕನ್ನು ಜೂ ಎನ್ಟಿಆರ್ ಅವರ ಸಹೋದರ ಕಲ್ಯಾಣ್ ರಾಮ್ ಖರೀದಿ ಮಾಡಲಿದ್ದಾರಂತೆ. ‘ವಾರ್ 2’ ಸಿನಿಮಾ ಅನ್ನು ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಅಯಾನ್ ಮುಖರ್ಜಿ. ಈ ಹಿಂದಿನ ‘ವಾರ್’ ಸಿನಿಮಾನಲ್ಲಿ ಟೈಗರ್ ಶ್ರಾಫ್ ನಟಿಸಿದ್ದರು. ಆ ಸಿನಿಮಾ ಸಹ ಹಿಟ್ ಆಗಿತ್ತು.
ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅವರ ಭರ್ಜರಿ ಆಕ್ಷನ್ ಜೊತೆಗೆ ಸಖತ್ ಡ್ಯಾನ್ಸ್ ಸಹ ಇರಲಿದೆಯಂತೆ. ಇಬ್ಬರೂ ನಟರು ಒಟ್ಟಿಗೆ ಡ್ಯಾನ್ಸ್ ಮಾಡುವ ದೃಶ್ಯಗಳು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡಲಿವೆ ಎಂಬುದು ನಿರ್ದೇಶಕರ ಭರವಸೆ. ‘ವಾರ್ 2’ ಸಿನಿಮಾ ಚಿತ್ರೀಕರಣ ಮುಗಿಸಿರುವ ಜೂ ಎನ್ಟಿಆರ್ ಇದೀಗ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಸತತವಾಗಿ ಎರಡು ತಿಂಗಳು ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ ಜೂ ಎನ್ಟಿಆರ್, ಆ ಬಳಿಕ ‘ವಾರ್ 2’ ಸಿನಿಮಾದ ಪ್ರಚಾರಕ್ಕಾಗಿ ಬಿಡುವು ಪಡೆಯಲಿದ್ದಾರೆ. ‘ವಾರ್ 2’ ಸಿನಿಮಾ ಆಗಸ್ಟ್ 14 ರಂದು ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




