Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​ಆರ್’, ‘ಕಲ್ಕಿ’ ದಾಖಲೆಗಳನ್ನು ಮುರಿದ ‘ಪುಷ್ಪ 2’

Pushpa 2: ‘ಪುಷ್ಪ 2’ ಸಿನಿಮಾ ದಿನಕ್ಕೊಂದು ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿದೆ. ಇದೀಗ ಭಾರತದ ಯಾವುದೇ ಭಾಷೆಯ ಸಿನಿಮಾಗಳು ಮಾಡದೇ ಇರುವ ಅಪರೂಪದ ದಾಖಲೆಯೊದು ಪುಷ್ಪ 2 ಖಾತೆಗೆ ಸೇರ್ಪಡೆ ಆಗಿದೆ.

‘ಆರ್​ಆರ್​ಆರ್’, ‘ಕಲ್ಕಿ’ ದಾಖಲೆಗಳನ್ನು ಮುರಿದ ‘ಪುಷ್ಪ 2’
Follow us
ಮಂಜುನಾಥ ಸಿ.
|

Updated on: Nov 20, 2024 | 10:49 AM

‘ದಾಖಲೆಗಳು ಇರುವುದೇ ಮುರಿಯಲು’ ಎಂಬ ಹೇಳಿಕೆಯನ್ನು ಅಕ್ಷರಷಃ ಪಾಲಿಸುತ್ತಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರತಂಡ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಈ ಹಿಂದಿನ ದಾಖಲೆಗಳನ್ನು ಮುರಿದು ಮುನ್ನುಗ್ಗಲು ಸಜ್ಜಾಗಿದೆ. ಈಗಾಗಲೇ ಕೆಲವು ದಾಖಲೆಗಳ ನಿರ್ಮಾಣವನ್ನು ಮಾಡಿದೆ. ವಿಶೇಷವಾಗಿ ಈ ಹಿಂದಿನ ಸಿನಿಮಾಗಳ ಬಾಕ್ಸ್ ಆಫೀಸ್​ ಗಳಿಕೆಯ ಮೇಲೆ ‘ಪುಷ್ಪ 2’ ಕಣ್ಣಿಟ್ಟಿದೆ. ಭಾರತೀಯ ಸಿನಿಮಾಗಳಿಗೆ, ವಿಶೇಷವಾಗಿ ತೆಲುಗು ಸಿನಿಮಾಗಳಿಗೆ ಭಾರತ ಬಿಟ್ಟರೆ ಅಮೆರಿಕ ಅತಿ ದೊಡ್ಡ ಮಾರುಕಟ್ಟೆ. ಭಾರತದ ಇನ್ಯಾವುದೇ ಭಾಷೆಯ ಸಿನಿಮಾಗಳಿಗೆ ಇರದಷ್ಟು ಬೇಡಿಕೆ ತೆಲುಗು ಸಿನಿಮಾಗಳಿಗಿದೆ. ಇದೀಗ ಅಮೆರಿಕದಲ್ಲಿ ‘ಪುಷ್ಪ 2’ ಬಾಕ್ಸ್ ಆಫೀಸ್ ದೋಚಲು ಸಜ್ಜಾಗಿದೆ.

ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಪ್ರೀ ಬುಕಿಂಗ್ ಬೇಗನೆ ಪ್ರಾರಂಭ ಆಗುತ್ತದೆ. ಭಾರತದ ಈ ಹಿಂದಿನ ಯಾವುದೇ ಸಿನಿಮಾಕ್ಕೆ ಸಿಗದಷ್ಟು ಪ್ರೀ ಬುಕಿಂಗ್ ಅತ್ಯಂತ ಕಡಿಮೆ ಅವಧಿಯಲ್ಲಿ ‘ಪುಷ್ಪ 2’ ಸಿನಿಮಾಕ್ಕೆ ದೊರೆತಿದೆ. ‘ಪುಷ್ಪ 2’ ಸಿನಿಮಾ ಅತ್ಯಂತ ವೇಗವಾಗಿ ಒಂದು ಮಿಲಿಯನ್ ಡಾಲರ್ (8.43 ಕೋಟಿ) ಹಣವನ್ನು ಕೇವಲ ಪ್ರೀ ಬುಕಿಂಗ್​ನಲ್ಲಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ.

ತೆಲುಗಿನ ಬ್ಲಾಕ್ ಬಸ್ಟರ್​ ಸಿನಿಮಾಗಳಾದ ‘ಆರ್​ಆರ್​ಆರ್’, ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’, ಇತ್ತೀಚೆಗಿನ ಹಿಂದಿ ಬ್ಲಾಕ್ ಬಸ್ಟರ್, ‘ಸ್ತ್ರೀ 2’, ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗಳು ಸಹ ಇಷ್ಟು ವೇಗವಾಗಿ ಪ್ರೀ ಬುಕಿಂಗ್​ನಲ್ಲಿ 1 ಮಿಲಿಯನ್ ಡಾಲರ್ ಹಣ ಗಳಿಸಿರಲಿಲ್ಲ. ಆದರೆ ‘ಪುಷ್ಪ 2’ ಸಿನಿಮಾ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ಡಾಲರ್ ಗಡಿ ದಾಟಿದೆ. ಇದು ಕೇವಲ ಪ್ರೀ ಬುಕಿಂಗ್ ಮಾಹಿತಿ ಆಗಿತ್ತು. ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಅಗುವ ಸುಳಿವನ್ನು ಇದು ನೀಡಿದೆ.

ಇದನ್ನೂ ಓದಿ:Shah Rukh Khan: ನಟ ಶಾರುಖ್ ಖಾನ್​ಗೆ ಕೊಲೆ ಬೆದರಿಕೆಯೊಡ್ಡಿದ್ದ ವಕೀಲನ ಬಂಧನ

ಅಮೆರಿಕದಲ್ಲಿ ಅತ್ಯಂತ ವೇಗವಾಗಿ ಒಂದು ಮಿಲಿಯನ್ ಗಳಿಸಿದ ದಾಖಲೆ ‘ಪುಷ್ಪ 2’ ಸಿನಿಮಾದ ಹೆಸರಿಗೆ ಬಂದಿರುವ ಮಾಹಿತಿಯನ್ನು ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದೆ. ‘ಮತ್ತೊಂದು ದಿನ, ಮತ್ತೊಂದು ದಾಖಲೆ, ಇತಿಹಾಸದ ಪುಟಗಳಿಗೆ ಮತ್ತೊಂದು ಅಧ್ಯಾಯ ಸೇರ್ಪಡೆ’ ಎಂದು ಮೈತ್ರಿ ಮೂವಿ ಮೇಕರ್ಸ್ ಸಂದೇಶ ಹಂಚಿಕೊಂಡಿದೆ.

‘ಪುಷ್ಪ 2’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಹಾರದ ಪಟ್ನಾನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯ್ತು. ಸಿನಿಮಾ, ಡಿಸೆಂಬರ್ 05 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರಲಿದೆ. ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಈಗಾಗಲೇ ಯೋಜನೆ ಹಾಕಿಕೊಂಡಿದೆ. ಭಾರತ ಮಾತ್ರವೇ ಅಲ್ಲದೆ ಅಮೆರಿಕ, ಯುಎಇ, ರಷ್ಯಾ, ಜಪಾನ್, ಜರ್ಮನಿ, ಆಸ್ಟ್ರೇಲಿಯಾ ಇನ್ನೂ ಕೆಲವು ದೇಶಗಳಲ್ಲಿಯೂ ಸಹ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್