ದೇವನಾಂಪ್ರಿಯ ಚಿತ್ರದ ನಟ ಅದರ ನಿರ್ದೇಶಕನ ಕಡೆ ಗುಂಡು ಹಾರಿಸಿದ್ದು ಯಾಕೆ ಗೊತ್ತಾ?

ದೇವನಾಂಪ್ರಿಯ ಚಿತ್ರದ ನಟ ಅದರ ನಿರ್ದೇಶಕನ ಕಡೆ ಗುಂಡು ಹಾರಿಸಿದ್ದು ಯಾಕೆ ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 19, 2024 | 7:51 PM

ತಾಂಡವರಾಮ್ ಹಾರಿಸಿದ ಗುಂಡು ನೆಲಕ್ಕೆ ಬಿದ್ದ ಕಾರಣ ಯಾವುದೇ ಅಪಾಯವಾಗಿಲ್ಲ. ಭರತ್ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ತಾಂಡವರಾಮ್ ನನ್ನು ವಶಕ್ಕೆ ಪಡೆದಿದ್ದಾರೆ. ಈತ ಚಿತ್ರ ನಿರ್ಮಾಣದಲ್ಲ್ಲಿ ಹಣ ಹೂಡಿದ್ದನಂತೆ, ಹಾಗಾಗಿ ಚಿತ್ರ ರಿಲೀಸ್ ವಿಳಂಬವಾದಂತೆ ತಳಮಳ ಶುರುವಾಗಿದೆ.

ಬೆಂಗಳೂರು: ನಗರದಲ್ಲಿ ನಿನ್ನೆ ಒಂದು ಶೂಟೌಟ್ ಪ್ರಕರಣ ನಡೆದಿದೆ ಮತ್ತು ಅದರ ವಿವರಗಳನ್ನು ನಮ್ಮ ಬೆಂಗಳೂರು ವರದಿಗಾರ ನೀಡಿದ್ದಾರೆ. ಇದು ದೇವನಾಂಪ್ರಿಯ ಹೆಸರಿನ ಇನ್ನೂ ಬಿಡುಗಡೆಯಾಗಬೇಕಿರುವ ಸಿನಿಮಾದ ವೃತ್ತಾಂತ. ಚಿತ್ರದ ನಟ ತಾಂಡವರಾಮ್, ನಿರ್ಮಾಪಕ ಕುಮಾರಸ್ವಾಮಿ ಮತ್ತು ನಿರ್ದೇಶಕ ಭರತ್ ಮೂವರ ನಡುವೆ ನಗರದ ಚಂದ್ರಾ ಲೇ ಔಟ್ ನಲ್ಲಿರುವ ಈ ಮನೆಯಲ್ಲಿ ಚಿತ್ರದ ರಿಲೀಸ್​ಗೆ ಸಂಬಂಧಿಸಿದಂತೆ ನಡೆದ ಮಾತುಕತೆ ವಿಕೋಪಕ್ಕೆ ಹೋದಾಗ ತಾಂಡವರಾಮ್ ತನ್ನಲ್ಲಿದ್ದ ಲೈಸೆನ್ಸ್​ಡ್ ಪಿಸ್ಟಲ್​ನಿಂದ ಭರತ್ ನತ್ತ ಗುಂಡು ಹಾರಿಸಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಇದು ಪ್ರಚಾರದ ಗಿಮಿಕ್’; ಸಲ್ಮಾನ್ ಖಾನ್ ಮನೆಯ ಶೂಟೌಟ್ ಬಗ್ಗೆ ತಂದೆಯ ಪ್ರತಿಕ್ರಿಯೆ