‘ಸಿತಾರೆ ಜಮೀನ್ ಪರ್’ ಸಿನಿಮಾ ಟ್ರೇಲರ್ ನೋಡಿ ಸಿಕ್ಕಾಪಟ್ಟೆ ಹೊಗಳಿದ ರಿತೇಶ್ ದೇಶಮುಖ್
ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾ ಟ್ರೇಲರ್ ಬಿಡುಗಡೆ ಆಗುತ್ತಿದೆ. ಟ್ರೇಲರ್ ರಿಲೀಸ್ ಆಗುವುದಕ್ಕೂ ಮುನ್ನವೇ ನಟ ರಿತೇಶ್ ದೇಶಮುಖ್ ಅವರು ವಿಮರ್ಶೆ ತಿಳಿಸಿದ್ದಾರೆ. ಈ ಚಿತ್ರದಲ್ಲಿ ರಿತೇಶ್ ಪತ್ನಿ ಜೆನಿಲಿಯಾ ದೇಶಮುಖ್ ಕೂಡ ನಟಿಸಿದ್ದಾರೆ. ಜೂನ್ 20ಕ್ಕೆ ಈ ಚಿತ್ರ ತೆರೆಕಾಣಲಿದೆ. ಈಗ ಪ್ರಚಾರ ಆರಂಭಿಸಲಾಗಿದೆ.

ನಟ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ. ದೊಡ್ಡ ಗ್ಯಾಪ್ ಬಳಿಕ ಆಮಿರ್ ಖಾನ್ (Aamir Khan) ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿರುವುದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿತ್ತು. ಆ ಪೋಸ್ಟರ್ ಅಷ್ಟೇನೂ ವಿಶೇಷವಾಗಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸಿದ್ದರು. ಈಗ ಟ್ರೇಲರ್ (Sitaare Zameen Par Trailer) ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ಅದಕ್ಕೂ ಮುನ್ನವೇ ಟ್ರೇಲರ್ ನೋಡಿರುವ ನಟ ರಿತೇಶ್ ದೇಶಮುಖ್ ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಆಮಿರ್ ಖಾನ್ ಜೊತೆ ಜೆನಿಲಿಯಾ ಡಿಸೋಜಾ ನಟಿಸಿದ್ದಾರೆ. ಆ ಕಾರಣಕ್ಕಾಗಿ ಜೆನಿಲಿಯಾ ಪತಿ ರಿತೇಶ್ ದೇಶಮುಖ್ ಅವರು ಈ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಟ್ರೇಲರ್ ಇಂದು (ಮೇ 13) ಬಿಡುಗಡೆ ಆಗಲಿದೆ ಎಂಬುದನ್ನು ತಿಳಿಸುವ ಸಲುವಾಗಿ ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಸಿಕ್ಕಾಪಟ್ಟೆ ಹೊಗಳಿದ್ದಾರೆ.
ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ರಿತೇಶ್ ದೇಶಮುಖ್ ಅವರು ‘ಸಿತಾರೆ ಜಮೀನ್ ಪರ್ ಟ್ರೇಲರ್ ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿ ಅಭಿಮಾನಿಗಳ ನಿರೀಕ್ಷೆ ಡಬಲ್ ಆಗಿದೆ. ಈ ಸಿನಿಮಾದಲ್ಲಿ ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ‘ತಾರೆ ಜಮೀನ್ ಪರ್’ ರೀತಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಕೂಡ ಡಿಫರೆಂಟ್ ಕಥೆ ಹೊಂದಿರಲಿದೆ.
Extraordinary trailer #SitareZameenPar https://t.co/NYLcSSgxPB
— Riteish Deshmukh (@Riteishd) May 13, 2025
‘ತಾರೆ ಜಮೀನ್ ಪರ್’ ಸಿನಿಮಾ 2007ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಅದೇ ರೀತಿಯ ಥೀಮ್ನಲ್ಲಿ ಬೇರೊಂದು ಕಥೆಯನ್ನು ತೆರೆಗೆ ತರಲಾಗಿದೆ. ‘ತಾರೆ ಜಮೀನ್ ಪರ್ ಚಿತ್ರ ನಿಮ್ಮನ್ನು ಅಳಿಸಿತ್ತು. ಆದರೆ ಸಿತಾರೆ ಜಮೀನ್ ಪರ್ ಸಿನಿಮಾ ನಿಮ್ಮನ್ನು ನಗಿಸಲಿದೆ. ಪ್ರೀತಿ, ಸ್ನೇಹ ಮತ್ತು ಬದುಕಿನ ಕಥೆ ಈ ಸಿನಿಮಾದಲ್ಲಿದೆ’ ಎಂದು ಆಮಿರ್ ಖಾನ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣದವರನ್ನು ನೋಡಿ ಬಾಲಿವುಡ್ ಮಂದಿ ಕಲಿಯಬೇಕು: ಆಮಿರ್ ಖಾನ್
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ನಂತರ ಆಮಿರ್ ಖಾನ್ ಅವರು ಕಥೆಗಳ ಆಯ್ಕೆಯಲ್ಲಿ ಹೆಚ್ಚು ಜಾಗ್ರತೆ ವಹಿಸುತ್ತಿದ್ದಾರೆ. ಹಾಗಾಗಿ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ವಿಳಂಬ ಆಗುತ್ತಿದೆ. ಸುಮಾರು 3 ವರ್ಷಗಳ ಬಳಿಕ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








