ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್
ಆಮಿರ್ ಖಾನ್ ಅವರು ಕಾಡು ಮನುಷ್ಯನಂತೆ ವೇಷ ಧರಿಸಿ ಮುಂಬೈ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ರಹಸ್ಯ ಅಭಿಯಾನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವು ಅಭಿಮಾನಿಗಳು ಅವರನ್ನು ಮೆಚ್ಚಿದರೆ, ಇನ್ನು ಕೆಲವರು ಅವರ ಈ ಕ್ರಮವನ್ನು ಟೀಕಿಸಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ವೈಫಲ್ಯದ ನಂತರ, ಆಮಿರ್ ಖಾನ್ ‘ಸಿತಾರೆ ಜಮೀನ್ಪರ್’ ಚಿತ್ರದ ಮೇಲೆ ಗಮನ ಹರಿಸಿದ್ದಾರೆ.

ಆಮಿರ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ನಲ್ಲಿ ಇದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ವೇಷ. ಕಾಡು ಮನುಷ್ಯನ ರೀತಿಯಲ್ಲಿ ವೇಷ ಧರಿಸಿ ಮುಂಬೈ ಬೀದಿಗಳಲ್ಲಿ ಅವರು ಸುತ್ತಾಡಿದ್ದರು. ಅಷ್ಟೇ ಅಲ್ಲ ಅವರು ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದರು. ಅವರು ಇಷ್ಟೆಲ್ಲ ಮಾಡಿದ್ದು ಹಣಕ್ಕಾಗಿ! ಹೀಗೊಂದು ವಿಚಾರ ಈಗ ರಿವೀಲ್ ಆಗಿದೆ. ಇದು ತಿಳಿದ ಬಳಿಕ ಫ್ಯಾನ್ಸ್ ಆಮಿರ್ ಖಾನ್ ವಿರುದ್ಧ ಅಸಮಾಧಾನ ಹೊರಹಾಕುತ್ತಾ ಇದ್ದಾರೆ.
ಆಮಿರ್ ಖಾನ್ ಅವರು ಹಲವು ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಇದರ ಪ್ರಚಾರದ ಭಾಗವಾಗಿ ಅವರು ಈ ರೀತಿ ವೇಷ ಧರಿಸಿದ್ದಾರೆ. ಹೌದು, ಕೋಕಾ ಕೋಲಾ ಇಂಡಿಯಾ ‘ಚಾರ್ಜ್ಡ್’ ಹೆಸರಿನ ಪಾನೀಯವನ್ನು ಪರಿಚಯಿಸಿದೆ. ಇದರ ಪ್ರಮೋಷನ್ಗೆ ಆಮಿರ್ ಖಾನ್ ಅವರನ್ನು ಸಂಸ್ಥೆ ಬಳಸಿಕೊಂಡಿದೆ. ಇದನ್ನು ಕುಡಿದ ಬಳಿಕ ಭಿನ್ನವಾಗಿ ಡ್ಯಾನ್ಸ್ ಮಾಡುವ ರೀತಿಯಲ್ಲಿ ತೋರಿಸಲಾಗಿದೆ.
ಆಮಿರ್ ಖಾನ್ ಅವರು ಮುಂಬೈ ಬೀದಿಯಲ್ಲಿ ಭಿನ್ನ ವೇಷ ತೊಟ್ಟು ತಿರುಗಾಡುವಾಗ ಯಾರೊಬ್ಬರಿಗೂ ಅದು ಆಮಿರ್ ಖಾನ್ ಎಂಬುದು ತಿಳಿಯಲಿಲ್ಲ. ಅವರನ್ನು ಯಾರು ಗುರತಿಸಲೂ ಇಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಹಂಚಿಕೊಂಡಾಗ ಈ ವಿಚಾರ ರಿವೀಲ್ ಆಯಿತು. ಆ ಬಳಿಕ ಆಮಿರ್ ಖಾನ್ನ ಭೇಟಿ ಮಾಡುವ ಅವಕಾಶ ತಪ್ಪಿಸಿಕೊಂಡಿದ್ದಕ್ಕೆ ಬೇಸರ ಮಾಡಿಕೊಂಡರು.
View this post on Instagram
ಇನ್ನೂ ಕೆಲವರು ಆಮಿರ್ ಖಾನ್ ಅವರನ್ನು ಟೀಕೆ ಮಾಡಿದ್ದಾರೆ. ‘ಸಿನಿಮಾ ಅಂತೂ ನಡೆಯುತ್ತಿಲ್ಲ. ಈ ರೀತಿಯಾಗಿ ದುಡ್ಡು ಮಾಡುವ ಕೆಲಸ ಆಗಿದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಕಾನ್ಸೆಪ್ಟ್ನ ಇಷ್ಟಪಟ್ಟಿದ್ದು, ಬ್ರ್ಯಾಂಡ್ಗೆ ಭರ್ಜರಿ ಪ್ರಚಾರ ಸಿಕ್ಕಿದೆ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.
ಇದನ್ನೂ ಓದಿ: ಭಿಕ್ಷುಕನ ವೇಷತೊಟ್ಟು ಮುಂಬೈ ಬೀದಿಗಳಲ್ಲಿ ತಿರುಗಿದ ಸೂಪರ್ ಸ್ಟಾರ್
‘ಲಾಲ್ ಸಿಂಗ್ ಚಡ್ಡಾ’ ಸೋಲಿನ ಬಳಿಕ ಆಮಿರ್ ಖಾನ್ ಅವರು ಸೈಲೆಂಟ್ ಆದರು. ನಟನೆಯಿಂದ ಒಂದು ಬ್ರೇಕ್ ಪಡೆದರು. ಈಗ ಅವರ ಸಂಪೂರ್ಣ ಗಮನ ‘ಸಿತಾರೆ ಜಮೀನ್ಪರ್’ ಸಿನಿಮಾ ಮೇಲೆ ಇದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.