ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?
ಸಮಯ್ ರೈನಾ ಅವರು 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ತಮ್ಮ ಆಟೋಗ್ರಾಫ್ ನೀಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಅವರ ವಿಚಿತ್ರ ಬೇಡಿಕೆಯನ್ನು ಅಮಿತಾಭ್ ಬಚ್ಚನ್ ಒಪ್ಪಿಕೊಂಡರು. ಈ ಘಟನೆಯು ಸಮಯ್ ರೈನಾ ಅವರ ಹಾಸ್ಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ ಮತ್ತು ಅವರ ಅಭಿಮಾನಿಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಸಮಯ್ ರೈನಾ ಅವರು ತಮ್ಮ ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್ಪತಿ’ ಶೋಗೆ ಆಗಮಿಸಿದ್ದರು. ಈ ವೇಳೆ ಅಮಿತಾಭ್ ಬಚ್ಚನ್ ಅವರು ಸಮಯ್ ರೈನಾ ಬಳಿ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಟೆಲಿವಿಷನ್ ಶೋ ‘ಕೌನ್ ಬನೇಗಾ ಕರೋಡ್ಪತಿ’ 25 ವರ್ಷಗಳ ಸಂಭ್ರಮದಲ್ಲಿ ಇದೆ. ಈ ಅಪರೂಪದ ಮೈಲುಗಲ್ಲು ಸ್ಥಾಪಿಸಿದ ಖುಷಿಯಲ್ಲಿ ಸೋನಿ ಟಿವಿ ವಿಶೇಷ ವ್ಯಕ್ತಿಗಳನ್ನು ಆಹ್ವಾನಿಸಿತ್ತು. ಅದರಲ್ಲೂ ವಿಡಿಯೋ ಕಂಟೆಂಟರ್ಗಳಾದ ಕಾಮಿಯಾ ಜಾನಿ, ತನ್ಮಯ್ ಭಟ್, ಭುವನ್ ಬಾಮ್ ಹಾಗೂ ಸಮಯ್ ರೈನಾ ಇದರಲ್ಲಿ ಇದ್ದರು.
ಸಮಯ್ ರೈನಾ ಯಾವಾಗಲೂ ಜಾಲಿ ಆಗಿರುತ್ತಾರೆ. ಸದಾ ನಗಿಸುವ ಪ್ರಯತ್ನ ಮಾಡುತ್ತಾರೆ. ಅವರು ಅಮಿತಾಭ್ ಬಚ್ಚನ್ ಬಳಿ ವಿಚಿತ್ರ ಬೇಡಿಕೆ ಇಟ್ಟರು. ‘ನನ್ನ ಆಟೋಗ್ರಾಫ್ನ ನೀವು ತೆಗೆದುಕೊಳ್ಳಿ. ಆ ಬಳಿಕ ಅದನ್ನು ಕಸದಬುಟ್ಟಿಗೆ ಬೇಕಿದ್ದರೂ ಹಾಕಿ. ಆ ಬಗ್ಗೆ ನಾನು ಚಿಂತಿಸೋದಿಲ್ಲ. ನನ್ನಿಂದ ಅಮಿತಾಭ್ ಆಟೋಗ್ರಾಫ್ ಪಡೆದುಕೊಂಡರು ಎಂದಾಗಬೇಕು’ ಎಂದು ಸಮಯ್ ರೈನಾ ಹೇಳಿದರು.
There is a thin line between cringe and dark jokes. That line is owned and governed by Mr. Samay Raina @ReheSamay . Hats off to my favourite comedian ♥️@SrBachchan being the icon and sport like always he has been!!#kbc pic.twitter.com/2uU5ox5d1y
— Nishant (@verity_monocle) February 1, 2025
ಇದಕ್ಕೆ ಅಮಿತಾಭ್ ಬಚ್ಚನ್ ವಿರೋಧ ತೋರಿಸಲಿಲ್ಲ. ಬದಲಿಗೆ ಅವರು ಒಪ್ಪಿದರು. ‘ಟಿಶ್ಯೂ ಪೇಪರ್ ಇದೆ. ಅದರಲ್ಲಿ ಆಟೋಗ್ರಾಫ್ ಹಾಕಿ ಕೊಡ್ತೀನಿ’ ಎಂದು ಸಮಯ್ ರೈನಾ ಹೇಳಿದರು. ‘ಅದರಲ್ಲಿ ಆಟೋಗ್ರಾಫ್ ಹಾಕೋಕೆ ಬರುತ್ತಾ’ ಎಂದು ಅಮಿತಾಭ್ ಅಚ್ಚರಿಯಿಂದ ಕೇಳಿದರು. ‘ನಾವು ಆಟೋಗ್ರಾಫ್ ಹಾಕೋದು ಇದರಲ್ಲಿಯೇ’ ಎಂದು ಸಮಯ್ ಹೇಳಿದರು.
ಇದನ್ನೂ ಓದಿ: ಸೂಪರ್ಸ್ಟಾರ್ ಆದರೂ ಪತ್ನಿಯಿಂದ ಹಣ ಪಡೆಯುತ್ತಾರೆ ಅಮಿತಾಭ್ ಬಚ್ಚನ್
ವಿಶೇಷ ಎಂದರೆ ಸಮಯ್ ರೈನಾ ಅವರು ಕೊಟ್ಟ ಆಟೋಗ್ರಾಫ್ನ ಹಾಗೆಯೇ ಕೂಡಿಟ್ಟುಕೊಳ್ಳೋದಾಗಿ ಅಮಿತಾಭ್ ಬಚ್ಚನ್ ಹೇಳಿದರು. ಈ ವಿಚಾರ ಕೇಳಿ ಸಮಯ್ ರೈನಾ ಖುಷಿಪಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.