ಸಾರಾ ಜೊತೆ ಡೇಟ್ ಮಾಡಿದ್ದ ವೀರ್ ಪಹಾರಿಯಾ; ಆಗಬಾರದ್ದೇ ಆಗಿ ಹೋಯ್ತು
ವೀರ್ ಪಹಾರಿಯಾ ಮತ್ತು ಸಾರಾ ಅಲಿ ಖಾನ್ ಅವರ ಡೇಟಿಂಗ್ ಸುದ್ದಿ 'ಕಾಫಿ ವಿತ್ ಕರಣ್' ಶೋ ಮೂಲಕ ಬಹಿರಂಗವಾಯಿತು. ವೀರ್ ಇದರಿಂದ ಮುಜುಗರಕ್ಕೊಳಗಾದರು. ಸದ್ಯ ಸಾರಾ ಬಿಜೆಪಿ ನಾಯಕನ ಮಗ ಅರ್ಜುನ್ ಪ್ರತಾಪ್ ಬಾಜ್ವಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ವೀರ್ ಮತ್ತು ಅವರ ಸಹೋದರ ಶಿಖರ್ ಪಹಾರಿಯಾ ಅವರೊಂದಿಗೆ ಸಾರಾ ಮತ್ತು ಜಾನ್ವಿ ಕಪೂರ್ ಡೇಟಿಂಗ್ ಮಾಡಿದ್ದರು ಎಂಬುದು ಈಗಾಗಲೇ ತಿಳಿದುಬಂದಿದೆ.

ಇತ್ತೀಚೆಗೆ ರಿಲೀಸ್ ಆದ ‘ಸ್ಕೈ ಫೋರ್ಸ್’ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ವೀರ್ ಪಹಾರಿಯಾ ನಟಿಸಿದ್ದಾರೆ. ವೀರ್ ಪಹಾರಿಯಾ ಹಾಗೂ ಅವರ ಸಹೋದರ ಶಿಖರ್ ಪಹಾರಿಯಾ ಈ ಮೊದಲೇ ಸುದ್ದಿ ಆಗಿದ್ದರು. ಸಾರಾ ಅಲಿ ಖಾನ್ ಹಾಗೂ ಜಾನ್ವಿ ಕಪೂರ್ ‘ಕಾಫಿ ವಿತ್ ಕರಣ್’ ಶೋನಲ್ಲಿ ಡೇಟಿಂಗ್ ವಿಚಾರ ಬಾಯ್ಬಿಟ್ಟಿದ್ದರು. ‘ನಾವು ಸಹೋದರರ ಜೊತೆ ಡೇಟ್ ಮಾಡುತ್ತಿದ್ದೆವು’ ಎಂದಿದ್ದರು. ಈ ಬಗ್ಗೆ ವೀರ್ ಅವರು ಉತ್ತರಿಸಿದ್ದಾರೆ. ಈ ವಿಚಾರ ಹೊರಕ್ಕೆ ಬರಬಾರದು ಎಂಬುದು ವೀರ್ ಉದ್ದೇಶ ಆಗಿತ್ತು. ಆದರೆ, ಹಾಗೆಯೇ ಆಗಿದೆ.
‘ಈ ವಿಚಾರ ರಿವೀಲ್ ಆದಾಗ ನನಗೆ ಅದು ಅಷ್ಟು ದೊಡ್ಡ ಪ್ಲ್ಯಾಟ್ಫಾರ್ಮ್ ಅನ್ನೋದು ತಿಳಿದಿರಲಿಲ್ಲ. ನನ್ನ ಬಗ್ಗೆ ಯಾರಿಗೂ ತಿಳಿಯಬಾರದು ಎನ್ನುವ ಉದ್ದೇಶ ನನ್ನದಾಗಿತ್ತು. ಆದರೆ, ಎಲ್ಲರಿಗೂ ನನ್ನ ಬಗ್ಗೆ ಗೊತ್ತಾಯಿತು. ಅದು ನನಗೆ ಮುಜುಗರ ತಂದಿತು’ ಎಂದು ವೀರ್ ಹೇಳಿಕೊಂಡಿದ್ದಾರೆ. ಈ ಮೂಲಕ ಏನು ಆಗಬಾರದು ಎಂದು ಅವರು ಅಂದುಕೊಂಡಿದ್ದರು ಅದಕ್ಕೆ ವಿರುದ್ಧವಾಗಿ ಪರಿಸ್ಥಿತಿ ನಿರ್ಮಾಣ ಆಯಿತು.
2022ರಲ್ಲಿ ಸಾರಾ ಅಲಿ ಖಾನ್ ಹಾಗೂ ಜಾನ್ವಿ ಕಪೂರ್ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಈ ಶೋಗೆ ಬರುವಾಗ ಜಾನ್ವಿ ಕಪೂರ್ ಬಾಯ್ಫ್ರೆಂಡ್ ವಿಚಾರ ಎಲ್ಲರಿಗೂ ತಿಳಿದಿತ್ತು. ಅವರು ಶಿಖರ್ ಪಹಾರಿಯಾ ಜೊತೆ ಆಡುತ್ತಿದ್ದಾರೆ ಎನ್ನುವ ವಿಚಾರ ರಿವೀಲ್ ಆಗಿತ್ತು. ಇದೇ ವೇಳೆ ವೇದಿಕೆ ಮೇಲೆ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು. ಇಬ್ಬರೂ ಸಹೋದರರ ಜೊತೆ ಡೇಟ್ ಮಾಡಿದ್ದ ವಿಚಾರ ರಿವೀಲ್ ಆಗಿತ್ತು.
ಇದನ್ನೂ ಓದಿ: ಕಾಂಡೋಮ್ ಜಾಹೀರಾತಿಗೆ ಜಾನ್ವಿ ಕಪೂರ್ ಲಾಯಕ್ಕು; ವೈರಲ್ ಆಯ್ತು ಉದ್ಯಮಿ ಹೇಳಿಕೆ
ಜಾನ್ವಿ ಕಪೂರ್ ಶಿಖರ್ ಜೊತೆ ಡೇಟ್ ಮಾಡಿದ್ದ ವಿಚಾರ ಗೊತ್ತೇ ಇತ್ತು. ಹೀಗಾಗಿ, ಸಾರಾ ಹಾಗೂ ವೀರ್ ಡೇಟಿಂಗ್ ವಿಚಾರ ಆಗ ರಿವೀಲ್ ಆಯಿತು. ಸಾರಾ ಅಲಿ ಖಾನ್ ‘ಕೇದರನಾಥ್’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಡುವುದಕ್ಕೂ ಮೊದಲೇ ಈ ಡೇಟಿಂಗ್ ನಡೆದಿತ್ತು ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ ವೀರ್ ಪಹಾರಿಯಾ ಅನ್ನೋದು ವಿಶೇಷ.
ಸದ್ಯ ಯಾರ ಜೊತೆ
ಕಳೆದ ಕೆಲವು ದಿನಗಳಿಂದ ಸಾರಾ ಅಲಿಖಾನ್ ಬಿಜೆಪಿ ನಾಯಕನ ಮಗನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸಾರಾ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಸಾರಾ ಜೊತೆ ಕಾಣಿಸಿಕೊಂಡ ವ್ಯಕ್ತಿಯ ಪೂರ್ಣ ಹೆಸರು ಅರ್ಜುನ್ ಪ್ರತಾಪ್ ಬಾಜ್ವಾ.
ಅರ್ಜುನ್ ನಟ ಮತ್ತು ಮಾಡೆಲ್. ಇವರು ಬಿಜೆಪಿ ನಾಯಕ ಫತೇ ಜಂಗ್ ಸಿಂಗ್ ಬಾಜ್ವಾ ಅವರ ಪುತ್ರ. ಫತೇ ಜಂಗ್ ಸಿಂಗ್ ಬಾಜ್ವಾ ಅವರು ಪಂಜಾಬ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉಪಾಧ್ಯಕ್ಷರಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಶಾಸಕರೂ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Sat, 1 February 25