ಕಾಂಡೋಮ್ ಜಾಹೀರಾತಿಗೆ ಜಾನ್ವಿ ಕಪೂರ್ ಲಾಯಕ್ಕು; ವೈರಲ್ ಆಯ್ತು ಉದ್ಯಮಿ ಹೇಳಿಕೆ
ನಟಿ ಜಾನ್ವಿ ಕಪೂರ್ ಅವರು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ನಿಜ. ಅದೇ ಕಾರಣಕ್ಕೋ ಏನೋ ಅವರ ಬಗ್ಗೆ ಇಂಥ ಹೇಳಿಕೆ ನೀಡಲಾಗಿದೆ. ಖಾಸಗಿ ಕಂಪನಿಯ ಎಂ.ಡಿ. ನೀಡಿರುವ ಈ ಹೇಳಿಕೆ ವೈರಲ್ ಆಗಿದೆ. ಕೆಲವರು ಈ ಮಾತನ್ನು ಖಂಡಿಸಿದ್ದಾರೆ. ಜಾನ್ವಿ ಕಪೂರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡುವುದು ಬಾಕಿ ಇದೆ.
![ಕಾಂಡೋಮ್ ಜಾಹೀರಾತಿಗೆ ಜಾನ್ವಿ ಕಪೂರ್ ಲಾಯಕ್ಕು; ವೈರಲ್ ಆಯ್ತು ಉದ್ಯಮಿ ಹೇಳಿಕೆ](https://images.tv9kannada.com/wp-content/uploads/2025/01/janhvi-kapoor-2025-01-29t211049.554.jpg?w=1280)
ಸೆಲೆಬ್ರಿಟಿಗಳು ನೂರಾರು ಬಗೆಯ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿ ಆಗಿರುತ್ತಾರೆ. ಜನಸಾಮಾನ್ಯರು ಬಳಸುವ ವಸ್ತುಗಳಿಂದ ಹಿಡಿದು, ಐಷಾರಾಮಿ ವಸ್ತುಗಳ ತನಕ ಬಹುತೇಕ ಎಲ್ಲ ಉತ್ಪನ್ನಗಳಿಗೂ ಪ್ರಚಾರ ರಾಯಭಾರಿಗಳು ಇದ್ದಾರೆ. ಆದರೆ ಕೆಲವು ಸೆಲೆಬ್ರಿಟಿಗಳು ಒಂದಷ್ಟು ಕಂಪನಿಗಳಿಗೆ ಪ್ರಚಾರ ನೀಡಲು ಒಪ್ಪುವುದಿಲ್ಲ. ಅಂತಹ ಬ್ರ್ಯಾಂಡ್ಗಳಿಗೆ ಪ್ರಚಾರ ನೀಡಿದರೆ ತಮ್ಮ ಇಮೇಜ್ಗೆ ಧಕ್ಕೆ ಆಗುತ್ತದೆ ಎಂಬ ಚಿಂತೆ ಸೆಲೆಬ್ರಿಟಿಗಳಿಗೆ ಇರುತ್ತದೆ. ಕಾಂಡೋಮ್ ಕೂಡ ಅಂಥ ಉತ್ಪನ್ನಗಳಲ್ಲಿ ಒಂದು. ಜಾನ್ವಿ ಕಪೂರ್ ಕಾಂಡೋಮ್ ಜಾಹೀರಾತಿಗೆ ಸೂಕ್ತ ಎಂದು ಖಾಸಗಿ ಕಂಪನಿಯ ಎಂ.ಡಿ. ಹೇಳಿಕೆ ನೀಡಿದ್ದಾರೆ.
ಮ್ಯಾನ್ಫೋರ್ಸ್ ಕಾಂಡೋಮ್ ಕಂಪನಿಯ ಎಂಡಿ ಹಾಗೂ ಸಹ ಸಂಸ್ಥಾಪಕ ರಾಜೀವ್ ಜುನೇಜಾ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಕಂಪನಿಯ ಕಾಂಡೋಮ್ ಜಾಹೀರಾತಿಗೆ ಮೊದಲು ಸನ್ನಿ ಲಿಯೋನ್ ಪ್ರಚಾರ ರಾಯಭಾರಿ ಆಗಿದ್ದರು. ಇತ್ತೀಚೆಗೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು ಆಯ್ಕೆ ಮಾಡಲಾಯಿತು. ಬೇರೆ ಯಾರು ಸೂಕ್ತ ಎಂದು ಕೇಳಿದ್ದಕ್ಕೆ ಜಾನ್ವಿ ಕಪೂರ್ ಹಾಗೂ ರಣಬೀರ್ ಕಪೂರ್ ಹೆಸರನ್ನು ರಾಜೀವ್ ಜುನೇಜಾ ಹೇಳಿದ್ದಾರೆ.
‘ಜಾನ್ವಿ ಕಪೂರ್ ಅವರು ಕಾಂಡೋಮ್ ಜಾಹೀರಾತಿಗೆ ಲಾಯಕ್ಕು. ಅವರೇ ಉತ್ತಮ ಆಯ್ಕೆ. ಪುರುಷರಲ್ಲಿ ರಣಬೀರ್ ಕಪೂರ್ ಬೆಸ್ಟ್’ ಎಂದು ರಾಜೀವ್ ಜುನೇಜಾ ಅವರು ಹೇಳಿದ್ದಾರೆ. ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದು ವರ್ಗದ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ‘ಇದು ರಾಜೀವ್ ಜುನೇಜಾ ಅವರ ವೈಯಕ್ತಿಯ ಅಭಿಪ್ರಾಯ. ಇದರಲ್ಲಿ ಆಕ್ಷೇಪಾರ್ಹ ಅಂಶ ಏನೂ ಇಲ್ಲ’ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಸೀರೆಗೆ ಗ್ಲಾಮರ್ ಸ್ಪರ್ಶ ನೀಡಿದ ಪ್ಯಾನ್ ಇಂಡಿಯಾ ನಟಿ ಜಾನ್ವಿ ಕಪೂರ್
ಬಾಲಿವುಡ್ನ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಜಾಹೀರಾತು ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ. ಇದರಿಂದ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತದೆ. ಜಾನ್ವಿ ಕಪೂರ್ ಅವರು ಈಗಾಗಲೇ ಅನೇಕ ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ರಣಬೀರ್ ಕಪೂರ್ ಅವರ ಕೈಯಲ್ಲೂ ಹಲವು ಕಂಪನಿಗಳ ಆಫರ್ ಇದೆ. ಮ್ಯಾನ್ಫೋರ್ಸ್ ಕಾಂಡೋಮ್ ಕಂಪನಿಯ ಎಂಡಿ ಹೇಳಿಕೆಗೆ ಜಾನ್ವಿ ಕಪೂರ್ ಮತ್ತು ರಣಬೀರ್ ಕಪೂರ್ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.