Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿಕ್ಷುಕನ ವೇಷತೊಟ್ಟು ಮುಂಬೈ ಬೀದಿಗಳಲ್ಲಿ ತಿರುಗಿದ ಸೂಪರ್ ಸ್ಟಾರ್

ಉದ್ದನೆಯ ಗಡ್ಡ, ಉದ್ದನೆಯ ಕೂದಲು ಬಿಟ್ಟುಕೊಂಡು ಮೈಗೆ ಪ್ರಾಣಿಗಳ ಚರ್ಮದಂಥಹಾ ವಸ್ತು ಸುತ್ತಿಕೊಂಡು, ಕಾಲಿಗೆ ಬೂಟು ಧರಿಸಿ ವ್ಯಕ್ತಿಯೊಬ್ಬ ಮುಂಬೈನ ಬ್ಯುಸಿ ರಸ್ತೆಗಳಲ್ಲಿ ಓಡಾಡಿದ್ದಾರೆ. ಕೈಗಾಡಿ ತಳ್ಳಿದ್ದಾನೆ, ರಸ್ತೆ ಬದಿ ಅಂಗಡಿಗಳ ಬಳಿ ಹೋಗಿ ಊಟ ಕೇಳಿದ್ದಾನೆ, ಕೆಲವೆಡೆ ತರ್ಲೆ, ತಮಾಷೆ ಮಾಡಿದ್ದಾನೆ. ಈತ ಯಾರೋ ಹುಚ್ಚನಲ್ಲ, ಭಿಕ್ಷುಕನೂ ಅಲ್ಲ ಬದಲಿಗೆ ಭಾರತದ ಸೂಪರ್ ಸ್ಟಾರ್.

ಭಿಕ್ಷುಕನ ವೇಷತೊಟ್ಟು ಮುಂಬೈ ಬೀದಿಗಳಲ್ಲಿ ತಿರುಗಿದ ಸೂಪರ್ ಸ್ಟಾರ್
Aamir Khan
Follow us
ಮಂಜುನಾಥ ಸಿ.
|

Updated on: Jan 30, 2025 | 10:03 PM

ಮೊದಲೆಲ್ಲ ರಾಜರು ಮಹಾರಾಜರು ಯಾವುದೋ ವ್ಯಾಪಾರಿಗಳಂತೆ, ಹೊರರಾಜ್ಯದವರಂತೆ ವೇಷತೊಟ್ಟು ತಮ್ಮದೇ ರಾಜ್ಯದ ಬೀದಿಗಳಲ್ಲಿ ಓಡಾಡಿ ನಿಜ ಪರಿಸ್ಥಿತಿ ಅರಿಯುತ್ತಿದ್ದರಂತೆ. ಈಗ ಅದೆಲ್ಲ ಸಾಧ್ಯವಿಲ್ಲ, ಆದರೆ ಕೆಲವು ನಟರು, ಕೆಲವು ಕ್ರೀಡಾ ಲೋಕದ ಸೆಲೆಬ್ರಿಟಿಗಳು ಆಗೊಮ್ಮೆ ಈಗೊಮ್ಮೆ ತಮ್ಮ ವೇಷ ಬದಲಿಸಿಕೊಂಡು ಸಾರ್ವಜನಿಕರ ಮಧ್ಯೆ ಓಡಾಡುತ್ತಾರೆ. ಜನರಿಗೆ ಶಾಕ್ ಕೊಡುತ್ತಾರೆ. ಜನರನ್ನು ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶ ಪಡೆಯುತ್ತಾರೆ. ಇತ್ತೀಚೆಗೆ ಮುಂಬೈ ಬೀದಿಗಳಲ್ಲಿ ದೊಡ್ಡ ಸೂಪರ್ ಸ್ಟಾರ್ ಒಬ್ಬರು ಯಾವುದೋ ಶಿಲಾಯುಗದ ವ್ಯಕ್ತಿಯಂತೆ ವೇಷ ಬದಲಿಸಿಕೊಂಡು ಓಡಾಡಿದ್ದಾರೆ, ಅದರ ವಿಡಿಯೋ ವೈರಲ್ ಆಗಿದೆ. ಆದರೆ ಅವರು ಯಾರೆಂಬುದನ್ನು ಯಾರೂ ಸಹ ಗುರುತಿಸಿಲ್ಲ.

ಶಿಲಾಯುಗದ ಮನುಷ್ಯನಂತೆ ಉದ್ದನೆಯ ಗಡ್ಡ, ಉದ್ದನೆಯ ಕೂದಲು ಬಿಟ್ಟುಕೊಂಡು ಮೈಗೆ ಪ್ರಾಣಿಗಳ ಚರ್ಮದಂಥಹಾ ವಸ್ತು ಸುತ್ತಿಕೊಂಡು, ಕಾಲಿಗೆ ಬೂಟು ಧರಿಸಿ ವ್ಯಕ್ತಿಯೊಬ್ಬ ಮುಂಬೈನ ಬ್ಯುಸಿ ರಸ್ತೆಗಳಲ್ಲಿ ಓಡಾಡಿದ್ದಾರೆ. ಕೈಗಾಡಿ ತಳ್ಳಿದ್ದಾನೆ, ರಸ್ತೆ ಬದಿ ಅಂಗಡಿಗಳ ಬಳಿ ಹೋಗಿ ಊಟ ಕೇಳಿದ್ದಾನೆ, ಕೆಲವೆಡೆ ತರ್ಲೆ, ತಮಾಷೆ ಮಾಡಿದ್ದಾನೆ. ಆ ವ್ಯಕ್ತಿಯ ಅವತಾರ ನೋಡಿ ಕೆಲವು ಪಾದಚಾರಿಗಳಂತೂ ವ್ಯಕ್ತಿಯಿಂದ ದೂರ ಓಡಿದ್ದಾರೆ. ಆದರೆ ನಿಜಕ್ಕೂ ಆತ ಶಿಲಾಯುಗದ ಮಾನವನೋ ಅಥವಾ ಯಾವುದೋ ಭಿಕ್ಷುಕನೋ ಅಲ್ಲ ಬದಲಿಗೆ ಆತ ಭಾರತದ ಸೂಪರ್​ ಸ್ಟಾರ್ ನಟರಲ್ಲಿ ಒಬ್ಬರು.

ಭಾರತ ಚಿತ್ರರಂಗದ ಸ್ಟಾರ್ ನಟ, ಮಿಸ್ಟರ್ ಫರ್ಪೆಕ್ಷನಿಸ್ಟ್ ಎಂದೇ ಕರೆಯಲಾಗುವ ಆಮಿರ್ ಖಾನ್ ಹೀಗೆ ಭಿಕ್ಷುಕನಂತೆ ವೇಷ ಧರಿಸಿ ಮುಂಬೈನ ಗಲ್ಲಿಗಳಲ್ಲಿ ಓಡಾಡಿದ್ದಾರೆ. ಮೊದಲಿಗೆ ವಿಡಿಯೋ ವೈರಲ್ ಆದಾಗ ಯಾರೋ ವಿಚಿತ್ರ ವ್ಯಕ್ತಿ ಮುಂಬೈ ಬೀದಿಗಳಲ್ಲಿ ಓಡಾಡಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ಆಮಿರ್ ಖಾನ್, ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಮತ್ತು ಚಿತ್ರಗಳು ಹೊರಬಂದ ಬಳಿಕವಷ್ಟೆ ಹಾಗೆ ಮುಂಬೈ ಬೀದಿಗಳಲ್ಲಿ ಓಡಾಡಿದ ವ್ಯಕ್ತಿ ಆಮಿರ್ ಖಾನ್ ಎಂದು ತಿಳಿದಿದ್ದು.

ಆದರೆ ಆಮಿರ್ ಖಾನ್ ಹೀಗೆ ಅಚಾನಕ್ಕಾಗಿ ವಿಚಿತ್ರ ವೇಷ ತೊಟ್ಟು ಮುಂಬೈ ಬೀದಿಗಳಲ್ಲಿ ಓಡಾಡಿದ್ದು ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರೇನೋ ಯಾವುದೋ ಸಿನಿಮಾಕ್ಕಾಗಿ ಇರಬಹುದು ಎಂದಿದ್ದಾರೆ. ಇನ್ನು ಕೆಲವರು ಇದು ಯಾವುದೋ ಜಾಹೀರಾತಿಗಾಗಿ ಆಗಿರಬಹುದು ಎಂದಿದ್ದಾರೆ. ಈ ಹಿಂದೆ ಸಹ ಆಮಿರ್ ಖಾನ್ ಹೀಗೆ ವೇಷ ಮರೆಸಿ ನಗರಗಳ ಬೀದಿಯಲ್ಲಿ ಓಡಾಡಿದ್ದಿದೆ. ಈ ಹಿಂದೆ ವೇಷಗಳನ್ನು ಬದಲಾಯಿಸಿ ಕೆಲವು ಸೆಲೆಬ್ರಿಟಿಗಳನ್ನು ಸಹ ಫೂಲ್ ಮಾಡಿದ್ದರು. ವೇಷ ಬದಲಿಸಿಕೊಂಡು ಸೌರವ್ ಗಂಗೂಲಿಯ ಮನೆಗೆ ಆಮಿರ್ ಖಾನ್ ಭೇಟಿ ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ