ಸೈಫ್ ಅಲಿ ಖಾನ್ ಕೇಸ್ನಲ್ಲಿ ಬಂಧನಕ್ಕೆ ಒಳಗಾದ ವ್ಯಕ್ತಿ ವಿರುದ್ಧ ಸಿಕ್ತು ದೊಡ್ಡ ಸಾಕ್ಷಿ
ಸೈಫ್ ಅಲಿ ಖಾನ್ ಅವರ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತನಾದ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್‌ನ ತಂದೆ ಭಾರತೀಯ ಹೈಕಮಿಷನ್‌ಗೆ ಪ್ರತಿಭಟನೆಗೆ ಹೋಗಲು ಸಜ್ಜಾಗಿದ್ದಾರೆ. ಫಿಂಗರ್‌ಪ್ರಿಂಟ್ ಹೋಲಿಕೆಯಲ್ಲಿ ಅಸಮಂಜಸತೆ ಇದ್ದರೂ, ಫೇಸ್ ರೆಕಗ್ನಿಷನ್ ತಂತ್ರಜ್ಞಾನವು ಆರೋಪಿಯ ಗುರುತನ್ನು ಖಚಿತಪಡಿಸಿದೆ. ಇದು ಪೊಲೀಸರಿಗೆ ಸಿಕ್ಕ ದೊಡ್ಡ ಗೆಲುವಾಗಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಂಧನ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಿದೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ವ್ಯಕ್ತಿ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಬಂಧಿಸಲಾಗಿದೆ. ಈ ವ್ಯಕ್ತಿಯ ತಂದೆ ಈಗ ಇಂಡಿಯನ್ ಹೈ ಕಮಿಷನ್ಗೆ ಭೇಟಿ ನೀಡಿ ಪ್ರತಿಭಟಿಸಲು ಸಿದ್ಧರಾಗಿದ್ದಾರೆ. ಮುಂಬೈ ಪೊಲೀಸರು ತನ್ನ ಮಗನ ಈ ಪ್ರಕರಣದಲ್ಲಿ ಸಿಕ್ಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೈಫ್ ಅಲಿ ಖಾನ್ ಪ್ರಕರಣ ಸಾಕಷ್ಟು ಅನುಮಾನ ಮೂಡಿಸಿದೆ. ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಅಚ್ಚರಿ ಏನೆಂದರೆ, ಈ ವ್ಯಕ್ತಿಯ ಜೊತೆಗೆ ಫಿಂಗರ್‌ಪ್ರಿಂಟ್ ಹೋಲಿಕೆ ಆಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿತ್ತು. ಇದಾದ ಬೆನ್ನಲ್ಲೇ ಪೊಲೀಸರು ಸಿಸಿಟಿವಿ ದೃಶ್ಯದಲ್ಲಿರುವ ವ್ಯಕ್ತಿ ಹಾಗೂ ಮೊಹಮ್ಮದ್ ಶೆರಿಫುಲ್ ಮುಖವನ್ನು ಫೇಸ್ ಟೆಕಗ್ನೇಶನ್ ಟೆಸ್ಟ್ ಮೂಲಕ ಹೋಲಿಸಿ ನೋಡಿತ್ತು. ಈ ವೇಳೆ ಎರಡೂ ಮ್ಯಾಚ್ ಆಗಿದೆ ಎಂದು ವರದಿ ಬಂದಿದೆ. ಸದ್ಯ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ.
ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಅವರು ಸೈಫ್ ಅಲಿ ಖಾನ್ ವಾಸವಾಗಿರುವ 12ನೇ ಫ್ಲೋರ್ಗೆ ನುಗ್ಗಿದ್ದ. ಜನವರಿ 16ರಂದು ಈ ಘಟನೆ ನಡೆದಿತ್ತು. ಈ ವ್ಯಕ್ತಿ ಸೈಫ್ ಅಲಿ ಖಾನ್ ಅವರ ಬೆನ್ನಿಗೆ ಚೂರಿಯಿಂದ ಚುಚ್ಚಿದ್ದ. ಈ ವೇಳೆ ಸೈಫ್ಗೆ ಆರು ಕಡೆಗಳಲ್ಲಿ ಗಾಯ ಆಗಿತ್ತು. ನವೆಂಬರ್ 19ರಂದು ಈ ವ್ಯಕ್ತಿ ಬಂಧನಕ್ಕೆ ಒಳಗಾದ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಹಲವು ಅನುಮಾನ, ಪೊಲೀಸರ ಉತ್ತರ ಏನು?
ಆರಂಭದಲ್ಲಿ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಆ ಬಳಿಕ ವಿಚಾರಣೆಗೆ ಪೊಲೀಸರು ಮತ್ತಷ್ಟು ಅವಕಾಶ ಕೇಳಿದರು. ಆದರೆ, ಇದಕ್ಕೆ ಕೋರ್ಟ್ ಒಪ್ಪಿಗೆ ಕೊಟ್ಟಿಲ್ಲ. ಇದೇ ವೇಳೆ ಕೋಲ್ಕತ್ತಾದ ಮಹಿಳೆಯೊಬ್ಬರನ್ನು ಕೂಡ ಬಂಧಿಸಲಾಗಿದೆ.
ಸೈಫ್ ಅಲಿ ಖಾನ್ ಅವರು ಸದ್ಯ ಚೇತರಿಕೆ ಕಾಣುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಅವರು ಶೀಘ್ರವೇ ಸಿನಿಮಾ ಕೆಲಸಗಳಿಗೆ ಮರಳುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Fri, 31 January 25