ನವದೆಹಲಿ, ಡಿಸೆಂಬರ್ 10: ಭಾರತದ ಆರ್ಥಿಕತೆ 2025ರ ಅಂತ್ಯದೊಳಗೆ 5 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union home minister Amit Shah) ಹೇಳಿದ್ದಾರೆ. ಉತ್ತರಾಖಂಡ್ ರಾಜ್ಯದಲ್ಲಿ ನಿನ್ನೆ ನಡೆದ (ಡಿ. 9) ಗ್ಲೋಬಲ್ ಇನ್ವೆಸ್ಟರ್ಸ್ ಸಮಿಟ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರಗಾಮಿ ದೃಷ್ಟಿಕೋದ ನಾಯಕತ್ವದಿಂದಾಗಿ ಭಾರತ ಪ್ರತಿಯೊಂದು ರಂಗದಲ್ಲೂ ಗಣನೀಯವಾಗಿ ಬೆಳೆದಿದೆ ಎಂದು ಹೇಳಿದ್ದಾರೆ.
‘2014ರಿಂದ 2023ರ ಅವಧಿಯಲ್ಲಿ ಭಾರತ ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಿಂದ ಈಗ 5ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ ಬೆಳೆದಿದೆ. ಇವತ್ತು ಇಡೀ ವಿಶ್ವವು ಭಾರತದ ಬಗ್ಗೆ ಆಶಾದಾಯಕವಾಗಿದೆ,’ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: India Opportunities: ಇವತ್ತಿನ ಭಾರತದಲ್ಲಿರುವ ಅವಕಾಶ ಮನುಕುಲದ ಇತಿಹಾಸದಲ್ಲೇ ಕಂಡು ಕೇಳರಿಯದಂಥದ್ದು: ಪೀಯುಶ್ ಗೋಯಲ್
‘ಭಾರತ ಸ್ವಾತಂತ್ರ್ಯ ಪಡೆ 75 ವರ್ಷದಲ್ಲಿ ಯಾವತ್ತೂ ಇಷ್ಟರ ಮಟ್ಟಿಗೆ ಜಿಗಿತ ಕಂಡಿರಲಿಲ್ಲ. ಇದಕ್ಕೆ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಕಾರಣ, ಹಾಗೂ ಕನಸನ್ನು ನನಸು ಮಾಡಬಲ್ಲ ಅವರ ಸಾಮರ್ಥ್ಯ ಕಾರಣ ಕಾರಣ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಪ್ರಧಾನಿ ಮೋದಿ ಅವರು ಹವಾಮಾನ ಬದಲಾವಣೆ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಭಯೋತ್ಪಾದನೆ ಮುಕ್ತ ವಿಶ್ವಕ್ಕೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಭಿಯಾನದಲ್ಲೂ ಅವರು ನೇತೃತ್ವ ವಹಿಸಿದ್ದಾರೆ. ಹಾಗೆಯೇ, ಮಂದಗತಿಯಲ್ಲಿರುವ ವಿಶ್ವದ ಆರ್ಥಿಕ ಬೆಳವಣಿಗೆಗೆ ಅವರು ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಪುಷ್ಟಿ ಕೊಡಲು ಪ್ರಯತ್ನಿಸಿದ್ದಾರೆ,’ ಎಂದು ಬಿಜೆಪಿಯ ಮಾಜಿ ಅಧ್ಯಕ್ಷರೂ ಆದ ಅಮಿತ್ ಶಾ ಹೊಗಳಿದ್ದಾರೆ.
ಇದನ್ನೂ ಓದಿ: Indian Economy: ಕಳೆದ 6 ತಿಂಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಭಾರತಕ್ಕೆ ಉತ್ತಮ ಆರ್ಥಿಕ ಪ್ರಗತಿ: ಪ್ರಧಾನಿ ನರೇಂದ್ರ ಮೋದಿ
ಭಾರತದ ಜಿಡಿಪಿ ಸದ್ಯ 4 ಟ್ರಿಲಿಯನ್ ಡಾಲರ್ ದಾಟಿರಬಹುದು ಎಂದು ನಂಬಲಾಗಿದೆ. 2027ರೊಳಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಮುಟ್ಟಬಹುದು ಎಂಬುದು ಬಹುತೇಕ ಆರ್ಥಿಕ ತಜ್ಞರ ನಿರೀಕ್ಷೆಯಾಗಿದೆ. 2047ರೊಳಗೆ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡಬೇಕೆನ್ನುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಂಕಲ್ಪವಾಗಿದ್ದು, ಆ ನಿಟ್ಟಿನಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಹಂತ ಹಂತವಾಗಿ ಜಾರಿ ಮಾಡುವ ಪ್ರಯತ್ನವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ