Sign In

By signing in or creating an account, you agree with Associated Broadcasting Company's Terms & Conditions and Privacy Policy.

India Opportunities: ಇವತ್ತಿನ ಭಾರತದಲ್ಲಿರುವ ಅವಕಾಶ ಮನುಕುಲದ ಇತಿಹಾಸದಲ್ಲೇ ಕಂಡು ಕೇಳರಿಯದಂಥದ್ದು: ಪೀಯುಶ್ ಗೋಯಲ್

Piyush Goyal Speaks: ಅಮೃತ ಕಾಲದಲ್ಲಿ ದೇಶದ ಸೇವೆ ಮಾಡುತ್ತಿರುವುದು ನಮ್ಮ ಪುಣ್ಯ ಎಂದು ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಇನ್ನು 24 ವರ್ಷದೊಳಗೆ ಭಾರತ 35 ಟ್ರಿಲಿಯನ್ ಆರ್ಥಿಕತೆಯ ದೇಶವಾಗಲಿದೆ ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ. 2047ರಷ್ಟರಲ್ಲಿ ಭಾರತದ ಆರ್ಥಿಕತೆ ಹತ್ತು ಪಟ್ಟು ಬೆಳೆದು ಮುಂದುವರಿದ ದೇಶವಾಗಿ ಮಾಡುವುದು ನಮ್ಮ ಸಂಕಲ್ಪ ಎಂದು ಗೋಯಲ್ ತಿಳಿಸಿದ್ದಾರೆ.

India Opportunities: ಇವತ್ತಿನ ಭಾರತದಲ್ಲಿರುವ ಅವಕಾಶ ಮನುಕುಲದ ಇತಿಹಾಸದಲ್ಲೇ ಕಂಡು ಕೇಳರಿಯದಂಥದ್ದು: ಪೀಯುಶ್ ಗೋಯಲ್
ಪೀಯೂಶ್ ಗೋಯಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 10, 2023 | 11:16 AM

ನವದೆಹಲಿ, ಡಿಸೆಂಬರ್ 10: ಭಾರತದಲ್ಲಿ ಅಗಾಧವಾದ ಬೇಡಿಕೆ ಇದೆ. ಇದನ್ನು ಇಡೀ ಜಗತ್ತು ಗಮನಿಸಿದೆ. ಭಾರತಕ್ಕೆ ಬರದೇ ಬೇರೆ ದಾರಿ ಇಲ್ಲ ಎಂಬುದನ್ನು ವಿಶ್ವ ಗುರುತಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ (Union minister Piyush Goyal) ಹೇಳಿದ್ದಾರೆ. 23ನೇ ಎಪಿಇಸಿ (Apparel Export Promotion Council) ಸಭೆಯಲ್ಲಿ ಇತ್ತೀಚೆಗೆ ಮಾತನಾಡುತ್ತಿದ್ದ ಸಚಿವರು, ಮುಂಬರುವ ದಿನದಲ್ಲಿ ಭಾರತದಲ್ಲಿ ಅವಕಾಶಗಳು ಗಣನೀಯವಾಗಿ ಹೆಚ್ಚಲಿವೆ ಎಂದು ತಿಳಿಸಿದ್ದಾರೆ.

‘ಭಾರತದಲ್ಲಿ ಅವಕಾಶಗಳು ಬೃಹತ್ ಆಗಿವೆ. ಮುಂದಿನ ದಿನಗಳಲ್ಲಿ ಅವಕಾಶ ಇನ್ನಷ್ಟು ಅಗಾಧಗೊಳ್ಳಲಿದೆ. ಭಾರತದಲ್ಲಿರುವ ಅವಕಾಶಗಳನ್ನು ಇಡೀ ಜಗತ್ತು ಗಮನಿಸುತ್ತಿದೆ. ಭಾರತದೊಂದಿಗೆ ಆಳವಾಗಿ ಮತ್ತು ವಿಸ್ತೃತವಾಗಿ ವ್ಯವಹರಿಸಲು ಅದು ಬಯಸುತ್ತಿದೆ. ಭಾರತದ ಬೃಹತ್ ಬೇಡಿಕೆ ಮತ್ತು ಅಗಾಧ ಮಾರುಕಟ್ಟೆಸ್ಥಳ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬರದೇ ಬೇರೆ ದಾರಿ ಇಲ್ಲ ಎಂಬುದನ್ನು ಈ ವಿಶ್ವ ಕಂಡುಕೊಂಡಿದೆ,’ ಎಂದು ಪೀಯುಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Indian Economy: ಕಳೆದ 6 ತಿಂಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಭಾರತಕ್ಕೆ ಉತ್ತಮ ಆರ್ಥಿಕ ಪ್ರಗತಿ: ಪ್ರಧಾನಿ ನರೇಂದ್ರ ಮೋದಿ

2047ರೊಳಗೆ ಭಾರತದ್ದು 35 ಟ್ರಿಲಿಯನ್ ಆರ್ಥಿಕತೆ: ಗೋಯಲ್

ಇನ್ನು, ಎಫ್​ಐಸಿಸಿಐನ 96ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಿದ್ದ ಪೀಯೂಶ್ ಗೋಯಲ್, 2047ರಷ್ಟರಲ್ಲಿ ಭಾರತದ ಆರ್ಥಿಕತೆ 35 ಟ್ರಲಿಯನ್ ಡಾಲರ್ ದಾಟುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

‘ಇವತ್ತಿನ ಭಾರತವು ವಿಶ್ವದ ಬೆಳವಣಿಗೆಯ ಯಂತ್ರ ಆಗುವುದು ನಿಶ್ಚಿತ. ಹಲವು ದಶಕಗಳವರೆಗೆ ವಿಶ್ವ ಆರ್ಥಿಕತೆಗೆ ಭಾರತ ಶಕ್ತಿ ತುಂಬುತ್ತದೆ. 2047ರೊಳಗೆ ಹತ್ತು ಪಟ್ಟು ಬೆಳವಣಿಗೆ ಸಾಧಿಸಿ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡುವುದು ಮತ್ತು 35 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡುವುದು ನಮ್ಮ ಸಂಕಲ್ಪ’ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ