Indian Economy: ಕಳೆದ 6 ತಿಂಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಭಾರತಕ್ಕೆ ಉತ್ತಮ ಆರ್ಥಿಕ ಪ್ರಗತಿ: ಪ್ರಧಾನಿ ನರೇಂದ್ರ ಮೋದಿ
PM Narendra Modi Speaks: ಕಳೆದ 10 ವರ್ಷಗಳಿಂದ ಸರ್ಕಾರ ಕೈಗೊಂಡ ಪರಿವರ್ತನೀಯ ಸುಧಾರಣಾ ಕ್ರಮಗಳು ಜಿಡಿಪಿ ಬೆಳವಣಿಗೆ ಕಾರಣವಾಗುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2023-24ರ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಕ್ರಮವಾಗಿ ಶೇ. 7.8 ಮತ್ತು ಶೇ. 7.6ರಷ್ಟು ಬೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿ ಡಿ. 9ರಂದು ಗುಜರಾತ್ನ ಗಿಫ್ಟ್ ಸಿಟಿಯಲ್ಲಿ ನಡೆದ ಇನ್ಫಿನಿಟಿ ಫೋರಂ 2.0 ಕಾನ್ಫೆರೆನ್ಸ್ ಉದ್ದೇಶಿಸಿ ಮಾತನಾಡುತ್ತಿದ್ದರು.
ನವದೆಹಲಿ, ಡಿಸೆಂಬರ್ 10: ಭಾರತದ ಜಿಡಿಪಿ 2023ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಶೇ. 7.7ರಷ್ಟು ಬೆಳೆದಿರುವುದು ದೇಶದ ಆರ್ಥಿಕತೆ ಬಲಗೊಳ್ಳುತ್ತಿರುವ ಕುರುಹು ಆಗಿದೆ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಕೈಗೊಳ್ಳಲಾದ ಪರಿವರ್ತನೀಯ ಸುಧಾರಣಾ ಕ್ರಮಗಳ ಪ್ರತಿಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ನ ಗಿಫ್ಟ್ ಸಿಟಿಯಲ್ಲಿ ನಿನ್ನೆ ಡಿಸೆಂಬರ್ 9ರಂದು ನಡೆದ ‘ಇನ್ಫಿನಿಟಿ ಫೋರಂ 2.0’ ಕಾನ್ಫೆರೆನ್ಸ್ ಉದ್ದೇಶಿಸಿ ಆನ್ಲೈನ್ನಲ್ಲಿ ಮಾತನಾಡಿದ ಪ್ರಧಾನಿಗಳು, ‘ಈ ಹಣಕಾಸು ವರ್ಷದ ಮೊದಲ ಆರು ತಿಂಗಳು ಭಾರತದ ಜಿಡಿಪಿ ಶೇ. 7.7ರಷ್ಟು ಬೆಳವಣಿಗೆ ಸಾಧಿಸಿದೆ. ಇವತ್ತು ಇಡೀ ಜಗತ್ತು ಭಾರತದ ಮೇಲೆ ಭರವಸೆ ಇಟ್ಟಿದೆ. ಈ ಬೆಳವಣಿಗೆ ತನ್ನಿಂದ ತಾನೇ ಆಗಿದ್ದಲ್ಲ. ಭಾರತದ ಆರ್ಥಿಕತೆ ಬಲಗೊಳ್ಳುತ್ತಿರುವ ಮತ್ತು ಕಳೆದ 10 ವರ್ಷದಲ್ಲಿ ತೆಗೆದುಕೊಳ್ಳಲಾದ ಸುಧಾರಣಾ ಕ್ರಮಗಳ ಪರಿಣಾಮ ಇದಾಗಿದೆ’ ಎಂದಿದ್ದಾರೆ.
ಭಾರತದ ಜಿಡಿಪಿ ಈ ವರ್ಷದ ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿ ಸರಾಸರಿಯಾಗಿ ಶೇ. 7.7ರಷ್ಟು ಬೆಳೆದಿದೆ. ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಮೂನ್ವರೆಗಿನ ಅವಧಿಯಲ್ಲಿ ಶೇ. 7.8ರಷ್ಟು; ಹಾಗೂ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟಂಬರ್ವರೆಗಿನ ಅವಧಿಯಲ್ಲಿ ಶೇ. 7.6ರಷ್ಟು ಜಿಡಿಪಿ ವೃದ್ಧಿಸಿದೆ. ವಿಶ್ವದ ದೊಡ್ಡ ಆರ್ಥಿಕತೆಯ ದೇಶಗಳ ಪೈಕಿ ಭಾರತ ಅತಿವೇಗದ ಜಿಡಿಪಿ ವೃದ್ಧಿ ದರ ಸಾಧಿಸಿರುವುದು. ಪ್ರಧಾನಿಗಳು ಇದೇ ವಿಚಾರವನ್ನು ಪ್ರಸ್ತಾಪಿಸಿ ಗಿಫ್ಟ್ ಸಿಟಿಯ ‘ಇನ್ಫಿನಿಟಿ ಫೋರಂ’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ವಾರದಲ್ಲಿ 70 ಗಂಟೆ ಕೆಲಸ ಹೇಳಿಕೆಗೆ ಬದ್ಧ, 40 ವರ್ಷ ನಾನೂ ಮಾಡಿದ್ದೇನೆ: ನಾರಾಯಣ ಮೂರ್ತಿ
ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಅಥವಾ GIFT City ಬಗ್ಗೆ ಪ್ರಧಾನಿಗಳು ಇದೇ ವೇಳೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
‘ಇವತ್ತು ವಿಶ್ವದಲ್ಲಿ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಫಿನ್ಟೆಕ್ ಮಾರುಕಟ್ಟೆಗಳಲ್ಲಿ ಭಾರತವೂ ಒಂದು. ಗಿಫ್ಟ್ ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವಿಸಸ್ ಸೆಂಟರ್ (ಐಎಫ್ಎಸ್ಸಿ) ಈ ಮಾರುಕಟ್ಟೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ’ ಎಂದು ಹೇಳಿದ ನರೇಂದ್ರ ಮೋದಿ, ಹೊಸ ಜಾಗತಿಕ ಹಣಕಾಸು ಮತ್ತು ತಂತ್ರಜ್ಞಾನ ಸೇವೆಗಳ ಜಾಗತಿಕ ಕೇಂದ್ರವಾಗಿ ಗಿಫ್ಟ್ ಸಿಟಿಯನ್ನು ಬೆಳೆಸುವುದು ತಮ್ಮ ಸರ್ಕಾರದ ಗುರಿ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ