ನವದೆಹಲಿ, ಡಿಸೆಂಬರ್ 4: ಭಾರತ ಅತೀ ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ (Fin Minister Pankaj Chaudhary) ಸೋಮವಾರ (ಡಿ. 4) ಹೇಳಿದ್ದಾರೆ. ಭಾರತ 2047ರಷ್ಟರಲ್ಲಿ ಮುಂದುವರಿದ ಆರ್ಥಿಕತೆ (Advanced Economy) ಆಗುವ ಗುರಿ ಇದೆ. ಆ ನಿಟ್ಟಿನಲ್ಲಿ ಸಾಗುತ್ತಿದ್ದು ಅಮೃತ ಕಾಲದಲ್ಲಿ (Amrit Kaal) ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುತ್ತದೆ ಎಂದು ಪಂಕಜ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ. ಸ್ಥೂಲ ಆರ್ಥಿಕತೆಯ ಸ್ಥಿರತೆಯಿಂದ ರುಪಾಯಿ ಬಲಗೊಳ್ಳಲಿದೆ. ಅದು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು ನೆರವಾಗುತ್ತದೆ ಎಂದು ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಬಹಳಷ್ಟು ಸಂಘ ಸಂಸ್ಥೆಗಳು ಇನ್ನು ಕೆಲ ವರ್ಷಗಳಲ್ಲಿ ಭಾರತದ ಆರ್ಥಿಕತೆ ವಿಶ್ವದ ಮೂರನೇ ಅತಿದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎಂದು ಅಂದಾಜು ಮಾಡಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಾರ 2027-28ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗಡಿ ದಾಟುತ್ತದೆ. ಆಗ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂದಿದೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ ಫಲಿತಾಂಶ ಬಳಿಕ ಷೇರುಪೇಟೆ ಇನ್ನಷ್ಟು ಜಿಗಿತ; ಬಿಜೆಪಿ ಗೆದ್ದರೆ ಉದ್ಯಮಕ್ಕೆ ಯಾಕೆ ಖುಷಿ? ಇಲ್ಲಿವೆ 5 ಕಾರಣಗಳು
2022-23ರಲ್ಲಿ ಭಾರತದ ಜಿಡಿಪಿ 3.7 ಟ್ರಿಲಿಯನ್ ಡಾಲರ್ ಮಟ್ಟದಲ್ಲಿತ್ತು. ವಿವಿಧ ಹಂತಗಳಲ್ಲಿ ಭಾರತದ ಆರ್ಥಿಕತೆ ಯಾವ ಮಟ್ಟದಲ್ಲಿತ್ತು ಎಂಬ ಪಟ್ಟಿ ಇಲ್ಲಿದೆ…
ಕಳೆದ ಕೆಲ ವರ್ಷಗಳಲ್ಲಿ, ಅದರಲ್ಲೂ 21ನೇ ಶತಮಾನದಲ್ಲಿ ಭಾರತದ ಆರ್ಥಿಕತೆ ಅದ್ಭುತ ವೇಗದಲ್ಲಿ ಬೆಳೆಯುತ್ತಿರುವುದು ಹೌದು. 2020-21ರಲ್ಲಿ 2.67 ಟ್ರಿಲಿಯನ್ ಡಾಲರ್ ಇದ್ದ ಆರ್ಥಿಕತೆ 2022-23ರಲ್ಲಿ 3.7 ಟ್ರಿಲಿಯನ್ ಡಾಲರ್ಗೆ ಏರಿಕೆ ಆಗಿದೆ. ಇದೇ ಮಟ್ಟದಲ್ಲಿ ಬೆಳವಣಿಗೆ ಸಾಗಿದರೆ ಇನ್ನೆರಡು ವರ್ಷದೊಳಗೆ 5 ಟ್ರಿಲಿಯನ್ ಡಾಲರ್ ಗಡಿ ದಾಟಬಹುದು ಎಂದು ಕೆಲ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: Charlie Secrets: ಹಣ, ಹೆಣ್ಣು, ಹೆಂಡ… ಬೇಡ ಬೇಡ ಬೇಡ; ಬುದ್ಧಿವಂತರಿಗೆ ಬುದ್ಧಿಮಾತು ಹೇಳಿದ್ದ ಚಾರ್ಲೀ ಮುಂಗರ್
2022-23ರಲ್ಲಿ 3.7 ಟ್ರಿಲಿಯನ್ ಡಾಲರ್ ಜಿಡಿಪಿಯಲ್ಲಿ ಸೇವಾ ಕ್ಷೇತ್ರದ ಕೊಡುಗೆ ಅರ್ಧಕ್ಕಿಂತಲೂ ಹೆಚ್ಚು. ಜಿಡಿಪಿಯಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳ ಕೊಡುಗೆ ಕ್ರಮವಾಗಿ ಶೇ. 18.4, ಶೇ. 28.3 ಮತ್ತು ಶೇ. 53.3ರಷ್ಟು ಇದೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಪ್ರಕಾರ, ಕಳೆದ 9 ವರ್ಷದಲ್ಲಿ ಸರ್ಕಾರ ಕೈಗೊಂಡ ಕೆಲ ಕ್ರಮಗಳು ಜಿಡಿಪಿ ಬೆಳವಣಿಗೆಗೆ ಪುಷ್ಟಿ ಕೊಟ್ಟಿವೆ. ಅದರಲ್ಲಿ ದಿವಾಳಿ ಮತ್ತು ಸಾಲ ಮರುಹಂಚಿಕೆ ಕಾನೂನು (ಐಬಿಸಿ ಕೋಡ್), ಸರ್ಕಾರಿ ಬ್ಯಾಂಕುಗಳಿಗೆ ಮರುಪೂರಣ, ಜಿಎಸ್ಟಿ ಜಾರಿ, ಕಾರ್ಪೊರೇಟ್ ಟ್ಯಾಕ್ಸ್ ಕಡಿತ, ಬಂಡವಾಳ ವೆಚ್ಚ ಹೆಚ್ಚಳ, 14 ವಲಯಗಳಿಗೆ ಪಿಎಲ್ಐ ಸ್ಕೀಮ್, ಎಫ್ಡಿಐ ಹೂಡಿಕೆಗಳಿಗೆ ಉದಾರ ನೀತಿ, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣ ಇವೇ ಮುಂತಾದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿರುವುದನ್ನು ಪಂಜಕ್ ಚೌಧರಿ ಪ್ರಸ್ತಾಪಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Mon, 4 December 23