Gold Silver Price on 05 December: ವಿದೇಶಗಳಲ್ಲಿ ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಳ; ಭಾರತದಲ್ಲೂ ತುಸು ದುಬಾರಿ; ಇಲ್ಲಿದೆ ಇವತ್ತಿನ ದರಪಟ್ಟಿ
Bullion Market 2023, December 5th: ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 64,200 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 80.05 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ 58,850 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,900 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು, ಡಿಸೆಂಬರ್ 05: ಚಿನ್ನದ ಬೆಲೆಗಳು (Gold and silver Rates) ರಾಕೆಟ್ನಂತೆ ಏರುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡರೂ ಚಿನ್ನದ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿರಲಿಲ್ಲ. ಈಗ ಅಮೆರಿಕದ ಆರ್ಥಿಕತೆ ಕಳೆ ಹೆಚ್ಚತೊಡಗುತ್ತಿದ್ದಂತೆಯೇ ಚಿನ್ನ ಮತ್ತು ಷೇರುಗಳಿಗೆ ಬೇಡಿಕೆ ಹೆಚ್ಚಿದೆ. ಚಿನ್ನದ ಬೆಲೆ ತೀವ್ರಗತಿಯಲ್ಲಿ ಮೇಲೇರುತ್ತಿದೆ. ಚಿನ್ನದ ಬೆಲೆ ಗ್ರಾಮ್ಗೆ 40 ರೂನಷ್ಟು ಏರಿದೆ. ಕಳೆದ ಕೆಲ ತಿಂಗಳಿಂದ ಚಿನ್ನದ ಬೆಲೆ ಏರಿಕೆ ಕಾಣದ ಮಲೇಷ್ಯಾದಲ್ಲೂ ದಿಢೀರ್ ಬೆಲೆ ಏರಿಕೆ ಆಗಿದೆ. ಸಿಂಗಾಪುರದಲ್ಲಿ ಭಾರತಕ್ಕಿಂತಲೂ ಚಿನ್ನ ದುಬಾರಿ ಆಗಿ ಹೋಗಿದೆ. ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಭಾರತದ ಮಟ್ಟಕ್ಕೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 64,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 5ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,850 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,200 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 805 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,850 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,200 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 790 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 58,850 ರೂ
- ಚೆನ್ನೈ: 59,750 ರೂ
- ಮುಂಬೈ: 58,850 ರೂ
- ದೆಹಲಿ: 59,000 ರೂ
- ಕೋಲ್ಕತಾ: 58,850 ರೂ
- ಕೇರಳ: 58,850 ರೂ
- ಅಹ್ಮದಾಬಾದ್: 58,900 ರೂ
- ಜೈಪುರ್: 59,000 ರೂ
- ಲಕ್ನೋ: 59,000 ರೂ
- ಭುವನೇಶ್ವರ್: 58,850 ರೂ
ಇದನ್ನೂ ಓದಿ: ಚಿನ್ನ ಖರೀದಿಸಲು ಮುಂದಾಗಿದ್ದೀರಾ? ತೆರಿಗೆ ನಿಯಮ, ಹೂಡಿಕೆ ಆಯ್ಕೆ ಇತ್ಯಾದಿ ವಿವರ ತಿಳಿಯಿರಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 3,140 ರಿಂಗಿಟ್ (56,208 ರುಪಾಯಿ)
- ದುಬೈ: 2,507.50 ಡಿರಾಮ್ (56,928 ರುಪಾಯಿ)
- ಅಮೆರಿಕ: 690 ಡಾಲರ್ (57,527 ರುಪಾಯಿ)
- ಸಿಂಗಾಪುರ: 954 ಸಿಂಗಾಪುರ್ ಡಾಲರ್ (59,562 ರುಪಾಯಿ)
- ಕತಾರ್: 2,530 ಕತಾರಿ ರಿಯಾಲ್ (57,861 ರೂ)
- ಸೌದಿ ಅರೇಬಿಯಾ: 2,580 ಸೌದಿ ರಿಯಾಲ್ (57,342 ರುಪಾಯಿ)
- ಓಮನ್: 266 ಒಮಾನಿ ರಿಯಾಲ್ (57,677 ರುಪಾಯಿ)
- ಕುವೇತ್: 210.50 ಕುವೇತಿ ದಿನಾರ್ (56,830 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,900 ರೂ
- ಚೆನ್ನೈ: 8,350 ರೂ
- ಮುಂಬೈ: 8,050 ರೂ
- ದೆಹಲಿ: 8,050 ರೂ
- ಕೋಲ್ಕತಾ: 8,050 ರೂ
- ಕೇರಳ: 8,350 ರೂ
- ಅಹ್ಮದಾಬಾದ್: 8,050 ರೂ
- ಜೈಪುರ್: 8,050 ರೂ
- ಲಕ್ನೋ: 8,050 ರೂ
- ಭುವನೇಶ್ವರ್: 8,350 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ