ಚಿನ್ನ ಖರೀದಿಸಲು ಮುಂದಾಗಿದ್ದೀರಾ? ತೆರಿಗೆ ನಿಯಮ, ಹೂಡಿಕೆ ಆಯ್ಕೆ ಇತ್ಯಾದಿ ವಿವರ ತಿಳಿಯಿರಿ

Wedding Season Gold Rules: ಈಗ ಮದುವೆ ಸೀಸನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಅಮೂಲ್ಯ ಲೋಹ ಖರೀದಿಸುವುದು ಮತ್ತು ಉಡುಗೊರೆಯಾಗಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಸಹ ಚಿನ್ನ ಖರೀದಿಸಲು ಬಯಸಿದರೆ ನೀವು ಎಷ್ಟು ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಬಹುದು, ನಿರ್ಬಂಧಗಳೇನು ಇತ್ಯಾದಿ ಮಾಹಿತಿ ತಿಳಿದಿರಿ.

ಚಿನ್ನ ಖರೀದಿಸಲು ಮುಂದಾಗಿದ್ದೀರಾ? ತೆರಿಗೆ ನಿಯಮ, ಹೂಡಿಕೆ ಆಯ್ಕೆ ಇತ್ಯಾದಿ ವಿವರ ತಿಳಿಯಿರಿ
ಚಿನ್ನ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Dec 04, 2023 | 1:58 PM

ಈಗ ಮದುವೆ ಸೀಸನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಅಮೂಲ್ಯವಾದ ಲೋಹಗಳನ್ನು ಖರೀದಿಸುವುದು ಮತ್ತು ಉಡುಗೊರೆಯಾಗಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಸಹ ಚಿನ್ನವನ್ನು ಖರೀದಿಸಲು (gold buying) ಬಯಸಿದರೆ ಎಷ್ಟು ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಬಹುದು ಎಂಬುದನ್ನು ಮೊದಲು ತಿಳಿಯಿರಿ. ತೆರಿಗೆ ಮತ್ತು ಹೂಡಿಕೆ ತಜ್ಞ ಬಲವಂತ್ ಜೈನ್ ಪ್ರಕಾರ, “ಆದಾಯ ತೆರಿಗೆ ಕಾಯ್ದೆಯಡಿ ನೀವು ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಲು ಬಯಸಿದರೆ ನಗದು ಪಾವತಿಗೆ ಯಾವುದೇ ನಿರ್ಬಂಧವಿಲ್ಲ. ತೆರಿಗೆ ಸಂಬಂಧಿತ ನಿಯಮಗಳ ಪ್ರಕಾರ, ಹಣ ಸ್ವೀಕರಿಸುವವರು ರೂ 2 ಲಕ್ಷದವರೆಗಿನ ನಗದು ಹಣವನ್ನು ಮಾತ್ರ ಸ್ವೀಕರಿಸಬಹುದು. ”

ಚಿನ್ನ ಮಾರಾಟ ಮಾಡುವ ಆಭರಣ ವ್ಯಾಪಾರಿಗಳ ವಿರುದ್ಧ ದಂಡ

ನೀವು ಚಿನ್ನವನ್ನು ಖರೀದಿಸಲು ಹೋದರೆ, 2 ಲಕ್ಷಕ್ಕಿಂತ ಹೆಚ್ಚಿನ ನಗದು ಹಣವನ್ನು ಕೊಡಲಾಗುವುದಿಲ್ಲ. ಆದಾಯ ತೆರಿಗೆ ಕಾಯಿದೆ ಪ್ರಕಾರ ಒಡವೆ ಖರೀದಿಗೆ 2 ಲಕ್ಷ ರೂಗಿಂತ ಹೆಚ್ಚಿನ ನಗದು ಹಣ ಪಾವತಿಗೆ ನಿಷೇಧ ಇದೆ. ಎರಡು ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಒಡವೆ ಖರೀದಿಗೆ ಹಣ ಪಾವತಿ ಮಾಡುವುದಾದರೆ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಇತ್ಯಾದಿ ಗುರುತಿನ ಪುರಾವೆ ಒದಗಿಸಬೇಕಾಗುತ್ತದೆ.

ಇದನ್ನೂ ಓದಿ: ಮನೆಗಳ ಸೇಲ್​ನಲ್ಲಿ ಹೆಚ್ಚಳ; ಬೆಂಗಳೂರೇ ನಂಬರ್ 1; ಮುಂಬೈ, ಪುಣೆಯಲ್ಲಿ ಅತಿಹೆಚ್ಚು ವಸತಿಗೃಹಗಳ ಮಾರಾಟ

ಚಿನ್ನ ಖರೀದಿಸಲು ಈ ಆಯ್ಕೆ ಆರಿಸಿ

ನೀವು ದೀರ್ಘಾವಧಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದರೆ, ಸಾವರಿನ್ ಗೋಲ್ಡ್ ಬಾಂಡ್​ನಲ್ಲಿ (SGB) ಹೂಡಿಕೆ ಮಾಡುವುದು ಉತ್ತಮ. ಇದು ಮುಂಬರುವ ವರ್ಷಗಳಲ್ಲಿ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುತ್ತದೆ. ಸಾವರಿನ್ ಗೋಲ್ಡ್ ಬಾಂಡ್​ನಲ್ಲಿ ನಿಮ್ಮ ಹೂಡಿಕೆಯು ನೈಜ ಚಿನ್ನದ ಬೆಲೆಯಷ್ಟೇ ಬೆಳೆಯುತ್ತದೆ. ಜೊತೆಗೆ, ವಾರ್ಷಿಕವಾಗಿ ಶೇ 2.50 ಬಡ್ಡಿಯೂ ಸಿಗುತ್ತದೆ.

ಚಿನ್ನ ಪಡೆದದ್ದಕ್ಕೆ ದಾಖಲೆಗಳು ಇರಲಿ

ಒಂದು ಮನೆಯಲ್ಲಿ ಚಿನ್ನ ಇಟ್ಟುಕೊಳ್ಳಲು ಒಂದಷ್ಟು ನಿರ್ಬಂಧಗಳಿವೆ, ಮಿತಿಗಳಿವೆ. ವಿವಾಹಿತ ಮಹಿಳೆ 500 ಗ್ರಾಮ್, ಅವಿವಾಹಿತ ಮಹಿಳೆ 250 ಗ್ರಾಮ್, ಪುರುಷ 100 ಗ್ರಾಮ್ ಚಿನ್ನವನ್ನು ಇಟ್ಟುಕೊಳ್ಳಬಹುದು. ಎಲ್ಲದಕ್ಕೂ ದಾಖಲೆಗಳನ್ನು ಇಟ್ಟುಕೊಂಡಿರಿ. ಅಂದರೆ ಬಿಲ್​ಗಳು ಇರಲಿ. ಪಿತ್ರಾರ್ಜಿತವಾಗಿ ಬಂದ ಒಡವೆ ಅಥವಾ ಯಾರಾದರೂ ಉಡುಗೊರೆಯಾಗಿ ಕೊಟ್ಟ ಚಿನ್ನಕ್ಕೆ ಗಿಫ್ಟ್ ಡೀಡ್ ಮಾಡಿಸಿ.

ಇದನ್ನೂ ಓದಿ: ಚಿನ್ನ ಖರೀದಿಸುತ್ತೀರಾ? ಬಿಐಎಸ್ ಕೇರ್ ಡೌನ್​ಲೋಡ್ ಮಾಡಿ; ನೆರವಾಗಬಲ್ಲುದು ಈ ಆ್ಯಪ್

ಚಿನ್ನದ ಇತಿಹಾಸ ತಿಳಿಯಿರಿ

ಚಿನ್ನವು ವಿಶ್ವದ ಅತ್ಯಂತ ಅಮೂಲ್ಯವಾದ ಲೋಹಗಳಲ್ಲಿ ಒಂದಾಗಿದೆ. ವಿಜ್ಞಾನಿಗಳು ಮತ್ತು ಇತಿಹಾಸಕಾರರ ಪ್ರಕಾರ ಭೂಮಿಯ್ಲಿ ಕಂಡುಬರುವ ಅತ್ಯಂತ ಹಳೆಯ ಲೋಹಗಳಲ್ಲಿ ಚಿನ್ನವೂ ಒಂದು. ಮನುಷ್ಯರ ಕಣ್ಣಿಗೆ ಇದು ಸುಮಾರು 5,000 ವರ್ಷಗಳ ಹಿಂದೆ ಕಂಡಿತು. ಆದರೆ ಪ್ರಾಚೀನ ಕಾಲದಿಂದಲೂ ವಿಜ್ಞಾನಿಗಳು ಚಿನ್ನದ ಮೂಲದ ರಹಸ್ಯವನ್ನು ಬಿಚ್ಚಿಡಲು ಸಾಧ್ಯವಾಗಲಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್