Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಖರೀದಿಸುತ್ತೀರಾ? ಬಿಐಎಸ್ ಕೇರ್ ಡೌನ್​ಲೋಡ್ ಮಾಡಿ; ನೆರವಾಗಬಲ್ಲುದು ಈ ಆ್ಯಪ್

BIS Care App: ಬಿಐಎಸ್ ಕೇರ್ ಆ್ಯಪ್​ನಲ್ಲಿ ಚಿನ್ನದ ಶುದ್ಧತೆ ಎಷ್ಟೆಂದು ಪತ್ತೆ ಮಾಡಬಹುದು. ನಕಲಿ ಚಿನ್ನವನ್ನೂ ಕಂಡುಹಿಡಿಯಬಹುದು. ಉತ್ಪನ್ನದ ಗುಣಮಟ್ಟ ತೃಪ್ತಿ ತರದಿದ್ದರೆ ಈ ಆ್ಯಪ್ ಮೂಲಕ ದೂರು ಕೂಡ ದಾಖಲಿಸಬಹುದು. ಈ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್ ಎರಡೂ ಆವೃತ್ತಿಯಲ್ಲೂ ಸಿಗುತ್ತದೆ.

ಚಿನ್ನ ಖರೀದಿಸುತ್ತೀರಾ? ಬಿಐಎಸ್ ಕೇರ್ ಡೌನ್​ಲೋಡ್ ಮಾಡಿ; ನೆರವಾಗಬಲ್ಲುದು ಈ ಆ್ಯಪ್
ಬಿಐಎಸ್ ಮಾರ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 15, 2023 | 1:54 PM

ಗ್ರಾಹಕ ವಸ್ತುಗಳಿಗೆ ಐಎಸ್​ಐ ಮಾರ್ಕ್ ಇರುವಂತೆ ಚಿನ್ನಕ್ಕೂ ಬಿಐಎಸ್ ಗುರುತುಗಳನ್ನು (BIS mark) ಹಾಕಲಾಗುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥೆಯಿಂದ ಚಿನ್ನದ ಶುದ್ಧತೆಯ ಪ್ರಮಾಣ ಕೊಡಲಾಗುತ್ತದೆ. ಈ ಬಿಐಎಸ್ ಗುರುತು ಮೂಲಕ ಗ್ರಾಹಕರು ಚಿನ್ನದ ಗುಣಮಟ್ಟವನ್ನು ತಿಳಿಯಬಹುದು. ಈ ಕಾರ್ಯವನ್ನು ಸುಲಭಗೊಳಿಸುತ್ತದೆ ಬಿಐಎಸ್ ಕೇರ್ ಆ್ಯಪ್. ಇದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಸಂಸ್ಥೆಯೇ ಸ್ವತಃ ಅಭಿವೃದ್ಧಿಪಡಿಸಿದೆ.

ಈ ಬಿಐಎಸ್ ಕೇರ್ ಆ್ಯಪ್​ನಲ್ಲಿ (BIS Care app) ಚಿನ್ನದ ಶುದ್ಧತೆ ಎಷ್ಟೆಂದು ಪತ್ತೆ ಮಾಡಬಹುದು. ನಕಲಿ ಚಿನ್ನವನ್ನೂ ಕಂಡುಹಿಡಿಯಬಹುದು. ಉತ್ಪನ್ನದ ಗುಣಮಟ್ಟ ತೃಪ್ತಿ ತರದಿದ್ದರೆ ಈ ಆ್ಯಪ್ ಮೂಲಕ ದೂರು ಕೂಡ ದಾಖಲಿಸಬಹುದು. ಈ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್ ಎರಡೂ ಆವೃತ್ತಿಯಲ್ಲೂ ಸಿಗುತ್ತದೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

ಆ್ಯಪ್ ಮೂಲಕ ಹೇಗೆ ಚಿನ್ನದ ಶುದ್ಧತೆ ಪರಿಶೀಲಿಸಬಹುದು?

ಪರಿಶುದ್ಧ ಚಿನ್ನ ಎಂದರೆ 24 ಕ್ಯಾರಟ್​ನದ್ದಾಗಿರುತ್ತದೆ. ಆಭರಣ ತಯಾರಿಸಲು ಬೇರೆ ಕೆಲ ಲೋಹಗಳನ್ನು ಬೆರೆಸಲಾಗುತ್ತದೆ. ಹೀಗಾಗಿ ಆಭರಣ ಚಿನ್ನಗಳಿಗೆ ಶುದ್ಧತೆ ತುಸು ಕಡಿಮೆ ಆಗುತ್ತದೆ. ಬಹುತೇಕ ಆಭರಣಗಳು 22 ಕ್ಯಾರಟ್ ಚಿನ್ನದ್ದಾಗಿರುತ್ತವೆ. ಹಾಗೆಯೇ, 18 ಕ್ಯಾರಟ್, 16 ಕ್ಯಾರಟ್ ಹೀಗೆ ಇನ್ನೂ ಕಡಿಮೆ ಶುದ್ಧತೆಯ ಚಿನ್ನವೂ ಲಭ್ಯ ಇರುತ್ತವೆ.

ಮಾರಾಟ ಮಾಡುವ ಪ್ರತೀ ಚಿನ್ನಕ್ಕೂ ಬಿಐಎಸ್ ಮಾರ್ಕ್ ಹಾಕುವುದು ಕಡ್ಡಾಯ. ಇದರಲ್ಲಿ ಎಚ್​ಯುಐಡಿ ನಂಬರ್, ಲೈಸೆನ್ಸ್ ನಂಬರ್ ಇರುತ್ತದೆ. ಇಷ್ಟು ಮಾಹಿತಿಯನ್ನು ಬಿಐಎಸ್ ಕೇರ್ ಆ್ಯಪ್​ನಲ್ಲಿ ಹಾಕಿ ಹುಡುಕಿದಾಗ, ಆ ಚಿನ್ನ ಎಷ್ಟು ಕ್ಯಾರಟ್​ನದ್ದು, ಎಲ್ಲಿ ತಯಾರಿಸಲಾಗಿದ್ದು, ಯಾರು ತಯಾರಿಸಿದ್ದು ಎಂಬಿತ್ಯಾದಿ ಮಾಹಿತಿ ಹೊರಬರುತ್ತದೆ.

ಇದನ್ನೂ ಓದಿ: ನಿಮ್ಮಲ್ಲಿ 10 ಲಕ್ಷ ರೂ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು? ಇಲ್ಲಿವೆ ನಾಲ್ಕು ಆಯ್ಕೆಗಳು

22 ಕ್ಯಾರಟ್ ಚಿನ್ನವೆಂದು ಹೇಳಿ ನಿಮಗೆ 18 ಕ್ಯಾರಟ್ ಚಿನ್ನ ಕೊಟ್ಟಿದ್ದರೆ ನೀವು ದೂರು ದಾಖಲಿಸಲು ಈ ಆ್ಯಪ್​ನಲ್ಲಿ ಅವಕಾಶ ಇದೆ. ಆಗೆಯೇ, ಬಿಐಎಸ್ ಕಚೇರಿಗಳು ಮತ್ತು ಲ್ಯಾಬ್​ಗಳು ಎಲ್ಲೆಲ್ಲಿವೆ ಎಂಬ ಪಟ್ಟಿಯನ್ನೂ ಇದರಲ್ಲಿ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ಸಚಿವ ಸತೀಶ್ ಜಾರಕಿಹೊಳಿ ಬಾಂಬ್​: ನಮ್ಮ ಮಂತ್ರಿ ಮೇಲೆ ಹನಿಟ್ರ್ಯಾಪ್ ಆಗಿದೆ​
ಸಚಿವ ಸತೀಶ್ ಜಾರಕಿಹೊಳಿ ಬಾಂಬ್​: ನಮ್ಮ ಮಂತ್ರಿ ಮೇಲೆ ಹನಿಟ್ರ್ಯಾಪ್ ಆಗಿದೆ​
ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ: ಅಶೋಕ
ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ: ಅಶೋಕ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ