Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮಲ್ಲಿ 10 ಲಕ್ಷ ರೂ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು? ಇಲ್ಲಿವೆ ನಾಲ್ಕು ಆಯ್ಕೆಗಳು

Investment Tips: ನಾವು ಸಂಪಾದಿಸಿ ಕೂಡಿಟ್ಟ 10 ಲಕ್ಷ ರೂ ಹಣ ಇದ್ದರೆ ಎಲ್ಲಿ ಹೂಡಿಕೆ ಮಾಡಬಹುದು ಎಂದು ಯಾರಿಗಾದರೂ ಅನಿಸಬಹುದು. ಇವತ್ತು ಬಹಳಷ್ಟು ಹೂಡಿಕೆ ಆಯ್ಕೆಗಳಿವೆ. ರಿಸ್ಕ್ ಕಡಿಮೆ ಇರುವ ಮತ್ತು ರಿಟರ್ನ್ ಹೆಚ್ಚು ನಿರೀಕ್ಷಿಸಬಹುದಾದ ನಾಲ್ಕು ಹೂಡಿಕೆ ಸ್ಥಳಗಳನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಅದರಲ್ಲಿ ಚಿನ್ನವೂ ಒಂದು.

ನಿಮ್ಮಲ್ಲಿ 10 ಲಕ್ಷ ರೂ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು? ಇಲ್ಲಿವೆ ನಾಲ್ಕು ಆಯ್ಕೆಗಳು
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2023 | 12:18 PM

ಸಿಂಪಲ್ ಹಣ ನಿರ್ವಹಣೆ (Money management) ಸೂತ್ರವೆಂದರೆ ಹಣ ಸಂಪಾದನೆ, ಹಣ ಉಳಿತಾಯ ಮತ್ತು ಹೂಡಿಕೆ. ಈ ಮೂರಂಶಗಳ ಕಾರ್ಯಕ್ರಮ ಸಮರ್ಪಕವಾಗಿ ಜಾರಿಯಾದರೆ ಜೀವನಕ್ಕೆ ಹಣಕಾಸು ಭದ್ರತೆ ಬಹಳ ಗಟ್ಟಿಯಾಗಿರುತ್ತದೆ. ಇವತ್ತು ನಾವು ಸಂಪಾದಿಸಿ ಕೂಡಿಟ್ಟ 10 ಲಕ್ಷ ರೂ ಹಣ ಇದ್ದರೆ ಎಲ್ಲಿ ಹೂಡಿಕೆ ಮಾಡಬಹುದು ಎಂದು ಯಾರಿಗಾದರೂ ಅನಿಸಬಹುದು. ಇವತ್ತು ಬಹಳಷ್ಟು ಹೂಡಿಕೆ ಆಯ್ಕೆಗಳಿವೆ. ರಿಸ್ಕ್ ಕಡಿಮೆ ಇರುವ ಮತ್ತು ರಿಟರ್ನ್ ಹೆಚ್ಚು ನಿರೀಕ್ಷಿಸಬಹುದಾದ ನಾಲ್ಕು ಹೂಡಿಕೆ ಸ್ಥಳಗಳನ್ನು ತಜ್ಞರು ಶಿಫಾರಸು ಮಾಡುತ್ತಾರೆ.

ಚಿನ್ನದ ಮೇಲೆ ಹೂಡಿಕೆ

ಚಿನ್ನ ಯಾವತ್ತಿದ್ದರೂ ಸುರಕ್ಷಿತ ಹೂಡಿಕೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 18ರಷ್ಟು ಬೆಳೆದಿದೆ. ಬೇರೆ ಹೂಡಿಕೆಗಳಿಗಿಂತ ಇದು ಸರಾಸರಿಯಾಗಿ ಹೆಚ್ಚು ರಿಟರ್ನ್ ಕೊಡಬಲ್ಲುದು. ಇವತ್ತು ಚಿನ್ನ ಖರೀದಿಸಬೇಕೆಂದರೆ ಒಡವೆಯೋ, ಚಿನ್ನದ ಗಟ್ಟಿಗಳನ್ನೋ ಖರೀದಿಸಬೇಕೆಂದೇನೂ ಇಲ್ಲ. ಗೋಲ್ಡ್ ಇಟಿಎಫ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿ ಸ್ಕೀಮ್​ಗಳನ್ನು ಪಡೆಯಬಹುದು.

ಇದನ್ನೂ ಓದಿ: ಮ್ಯೂಚುವಲ್ ಫಂಡ್​ನಲ್ಲಿ ಹಣ ಹಾಕಿದರೆ ಗ್ಯಾರಂಟಿ ಲಾಭ ಬರುತ್ತದೆಂಬುದು ಭ್ರಮೆ; ಹೂಡಿಕೆಗೆ ಮುಂಚೆ ಕೆಲ ವಿಚಾರಗಳು ತಿಳಿದಿರಲಿ

ಈಕ್ವಿಟಿಗಳಲ್ಲಿ ಹೂಡಿಕೆ

ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಷೇರುಗಳ ಮೇಲೆ ನಿಮ್ಮ ಹಣ ಹಾಕಬಹುದು. ಈ ದೀಪಾವಳಿಯಲ್ಲಿ ವಾಹನ, ಎಫ್​ಎಂಸಿಜಿ, ಪೇಂಟ್, ಗೃಹೋಪಕರಣ, ಆಭರಣ ಇತ್ಯಾದಿ ಕ್ಷೇತ್ರಗಳ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ ನಿರೀಕ್ಷಿಸಬಹುದು ಎನ್ನುತ್ತಾರೆ ತಜ್ಞರು.

ಎಸ್​ಐಪಿ ಪಡೆಯಿರಿ

ಮ್ಯುಚುವಲ್ ಫಂಡ್​ಗಳ ಎಸ್​ಐಪಿ ಈಗ ಬಹಳ ಟ್ರೆಂಡಿಂಗ್​ನಲ್ಲಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳು ನಿಮಗೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹೂಡಿಕೆ ಮಾಡಲು ಅವಕಾಶ ಒದಗಿಸುತ್ತವೆ. ಉತ್ಪಾದನೆ, ಕಟ್ಟಡ ನಿರ್ಮಾಣ ಇತ್ಯಾದಿ ಎಂಜಿನಿಯರಿಂಗ್ ಕ್ಷೇತ್ರ ಕಂಪನಿಗಳ ಷೇರುಗಳ ಮೇಲೆ ಹೆಚ್ಚು ತೊಡಗಿಸಿಕೊಂಡಿರುವ ಈಕ್ವಿಟಿ ಮ್ಯುಚುವಲ್ ಫಂಡ್​ಗಳಲ್ಲಿ ಎಸ್​ಐಪಿ ಪಡೆದರೆ ಹೆಚ್ಚು ಲಾಭ ಮಾಡಬಹುದು.

ಇದನ್ನೂ ಓದಿ: Share Market Or Gold?: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

ನಿಶ್ಚಿತ ಠೇವಣಿಗಳೂ ಮುಖ್ಯ

ಎಲ್ಲಾ ಹೂಡಿಕೆಯನ್ನು ಈಕ್ವಿಟಿಗಳ ಮೇಲೆ ಹಾಕಿದರೆ ಬಹಳ ರಿಸ್ಕಿ ಎನಿಸಬಹುದು. ನಿಮ್ಮ ಹೂಡಿಕೆಯ ಒಂದಷ್ಟು ಭಾಗವು ಫಿಕ್ಸೆಡ್ ಡೆಪಾಸಿಟ್​ಗಳಲ್ಲಿ ಇರುವುದು ಉತ್ತಮ. ಕಡಿಮೆ ಬಡ್ಡಿಯಾದರೂ ಅವು ನಿಶ್ಚಿತವಾಗಿ ಬರುವ ಆದಾಯವಾಗಿರುತ್ತವೆ.

ಒಟ್ಟಾರೆ, ನಿಮ್ಮ ಹೂಡಿಕೆಯು ಚಿನ್ನ, ಷೇರು, ಎಸ್​ಐಪಿ ಮತ್ತು ಎಫ್​ಡಿಗಳಲ್ಲಿ ಹಂಚಿಕೆ ಆಗುವುದು ಒಳ್ಳೆಯದು ಎನ್ನುತ್ತಾರೆ ಹೂಡಿಕೆ ತಜ್ಞ ರಾಜೇಶ್ ಚೆರುವು.

ಚಿನ್ನ, ಈಕ್ವಿಟಿ ಮತ್ತು ಎಫ್​ಡಿಗಳಲ್ಲಿ (ಡೆಟ್ ಫಂಡ್) ಹೂಡಿಕೆ ಮಾಡುವ ಮ್ಯುಚುವಲ್ ಫಂಡ್​​ಗಳು ಹಲವಿವೆ. ಅವುಗಳಲ್ಲಿ ಎಸ್​ಐಪಿ ತೆರೆಯುವುದೂ ಕೂಡ ಉತ್ತಮ ಆಲೋಚನೆಯೇ.

ಇದನ್ನೂ ಓದಿ: ಹೆಚ್ಚುತ್ತಿದೆ ಎಸ್​ಐಪಿಗಳ ಜನಪ್ರಿಯತೆ; ಈ ವರ್ಷ 1 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದ ಹೂಡಿಕೆ

ಹಾಗೆಯೆ, ಈಕ್ವಿಟಿಗಿಂತಲೂ ಇನ್ನೂ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಾಮರ್ಥ್ಯ ಇರುವವರು ಪ್ರೈವೇಟ್ ಈಕ್ವಿಟಿಗಳಲ್ಲಿ ಹೂಡಕೆ ಮಾಡಬಹುದು. ಇವು ಹೆಚ್ಚು ರಿಟರ್ನ್ ಕೊಡಬಲ್ಲುವಾದರೂ ಅಪಾಯ ಸಾಧ್ಯತೆ ಹೆಚ್ಚು. ಎಲ್ಲಾ ಹೂಡಿಕೆಗಳಾಗಿ, ಹೆಚ್ಚುವರಿ ಹಣ ಇದ್ದರೆ ಇಂಥ ಸಾಹಸಗಳಿಗೆ ಕೈ ಹಾಕಬಹುದು ಎಂಬುದು ತಜ್ಞರು ನೀಡುವ ಎಚ್ಚರಿಕೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು
ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್
ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್
ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ನೋಡಿ
ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ನೋಡಿ
ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬದಲಾವಣೆ ಸುಳಿವು ನೀಡಿದ: ಕಾಶಪ್ಪನವರ್
ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬದಲಾವಣೆ ಸುಳಿವು ನೀಡಿದ: ಕಾಶಪ್ಪನವರ್