ಮನೆಗಳ ಸೇಲ್​ನಲ್ಲಿ ಹೆಚ್ಚಳ; ಬೆಂಗಳೂರೇ ನಂಬರ್ 1; ಮುಂಬೈ, ಪುಣೆಯಲ್ಲಿ ಅತಿಹೆಚ್ಚು ವಸತಿಗೃಹಗಳ ಮಾರಾಟ

Bengaluru tops in Rise of Residential Market: ದೆಹಲಿ ಎನ್​ಸಿಆರ್, ಮುಂಬೈ ಮೆಟ್ರೋಪೊಲಿಟನ್, ಬೆಂಗಳೂರು, ಪುಣೆ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಅಹ್ಮದಾಬಾದ್ ನಗರಗಳ ವಸತಿ ಮಾರುಕಟ್ಟೆಯನ್ನು ಅವಲೋಕಿಸಿ ಪ್ರಾಪ್ ಟೈಗರ್ ಡಾಟ್ ಕಾಮ್ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. 2023ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಈ 2 ನಗರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಸತಿ ಗೃಹಗಳು ಮಾರಾಟವಾಗಿವೆ. ಕಳೆದ ವರ್ಷದಕ್ಕಿಂತ ಶೇ. 22ರಷ್ಟು ಹೆಚ್ಚಳವಾಗಿದೆ. ಮಾರಾಟ ಹೆಚ್ಚಳದಲ್ಲಿ ಬೆಂಗಳೂರು ನಂಬರ್ ಒನ್ ಎನಿಸಿದೆ. ಕಳೆದ ವರ್ಷಕ್ಕಿಂತ ಇಲ್ಲಿ ಶೇ. 60ರಷ್ಟು ಮಾರಾಟಹೆಚ್ಚಳವಾಗಿದೆ.

ಮನೆಗಳ ಸೇಲ್​ನಲ್ಲಿ ಹೆಚ್ಚಳ; ಬೆಂಗಳೂರೇ ನಂಬರ್ 1; ಮುಂಬೈ, ಪುಣೆಯಲ್ಲಿ ಅತಿಹೆಚ್ಚು ವಸತಿಗೃಹಗಳ ಮಾರಾಟ
ವಸತಿ ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 04, 2023 | 12:35 PM

ನವದೆಹಲಿ, ಡಿಸೆಂಬರ್ 4: ಭಾರತದಲ್ಲಿ ವಸತಿ ಮಾರುಕಟ್ಟೆ (housing market) ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ (2023 July-September Quarter) ಗಣನೀಯವಾಗಿ ಬೆಳೆದಿದೆ. ಬೆಂಗಳೂರು ಸೇರಿದಂತೆ ಭಾರತದ ಎಂಟು ಪ್ರಮುಖ ನಗರಗಳಲ್ಲಿ ಈ ಅವಧಿಯಲ್ಲಿ ಸೇಲ್ ಆಗಿರುವ ವಸತಿಗೃಹಗಳ (residence sales) ಸಂಖ್ಯೆ 1 ಲಕ್ಷ ದಾಟಿದೆ. 2022ರ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ 83,220 ಯೂನಿಟ್​ಗಳು ಮಾರಾಟವಾಗಿದ್ದರೆ ಈ ವರ್ಷದ ಈ ಮೂರು ತಿಂಗಳಲ್ಲಿ 1,01,220 ಮನೆಗಳ ಸೇಲ್ ಆಗಿದೆ. ಶೇ. 22, ಅಥವಾ 18,000ದಷ್ಟು ಹೆಚ್ಚು ಯೂನಿಟ್​ಗಳು ಈ ಬಾರಿಯ ಕ್ವಾರ್ಟರ್​ನಲ್ಲಿ ಮಾರಾಟವಾಗಿದೆ. ಪ್ರಾಪ್ ಟೈಗರ್ ಡಾಟ್ ಕಾಮ್ ಸಂಸ್ಥೆ (Prop Tiger) ತನ್ನ ವರದಿಯಲ್ಲಿ ಈ ಅಂಕಿ ಅಂಶಗಳನ್ನು ತೋರಿಸಿದೆ.

ಎಂಟು ನಗರಗಳಿವು: ದೆಹಲಿ ಎನ್​ಸಿಆರ್, ಮುಂಬೈ ಮೆಟ್ರೋಪಾಲಿಟನ್, ಪುಣೆ, ಬೆಂಗಳೂರು, ಚೆನ್ನೈ, ಕೋಲ್ಕತಾ, ಹೈದರಾಬಾದ್ ಮತ್ತು ಅಹ್ಮದಾಬಾದ್ ನಗರಗಳಲ್ಲಿನ ವಸತಿ ಮಾರುಕಟ್ಟೆಗಳಲ್ಲಿನ ಮಾರಾಟವನ್ನು ಈ ವರದಿಯಲ್ಲಿ ಅವಲೋಕಿಸಲಾಗಿದೆ.

ಇದನ್ನೂ ಓದಿ: ಭಾರತದ ಜಿಡಿಪಿ ಎಲ್ಲರ ಲೆಕ್ಕಾಚಾರ ಮೀರಿಸಿದ್ದು ಹೇಗೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

ಅಪಾರ್ಟ್ಮೆಂಟ್, ವಿಲ್ಲಾ ಮೊದಲಾದವುಗಳ ಮಾರಾಟದ ಅಂಕಿ ಅಂಶಗಳು ಇವು. ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ದೆಹಲಿ ಮಾತ್ರವಲ್ಲ, ಗುರುಗ್ರಾಮ್, ನೋಯ್ಡಾ, ಗ್ರೇಟರ್ ನೋಯ್ಡಾ, ಫರೀದಾಬಾದ್ ಮತ್ತು ಘಾಜಿಯಾಬಾದ್ ಪ್ರದೇಶಗಳು ಒಳಗೊಂಡಿವೆ. ಇನ್ನು, ಎಂಎಂಆರ್ ಅಥವಾ ಮುಂಬೈ ಮೆಟ್ರೊಪೊಲಿಟನ್ ರೀಜನ್​ನಲ್ಲಿ ಮುಂಬೈ, ಥಾಣೆ ಮತ್ತು ನವಿ ಮುಂಬೈ ಪ್ರದೇಶಗಳು ಸೇರಿವೆ.

ಬೆಂಗಳೂರಿನಲ್ಲಿ ಅತಿಹೆಚ್ಚು ಶೇಕಡಾವಾರು ಮಾರಾಟ ಹೆಚ್ಚಳ

ಪ್ರಾಪ್ ಟೈಗರ್ ಡಾಟ್ ಕಾಮ್​ನ ದತ್ತಾಂಶದ ಪ್ರಕಾರ, ಬೆಂಗಳೂರಿನಲ್ಲಿ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ವಸತಿಗಳ ಮಾರಾಟ ಪ್ರಮಾಣ ಶೇ. 60ರಷ್ಟು ಹೆಚ್ಚಾಗಿದೆ. ದೆಹಲಿ ಎನ್​ಸಿಆರ್ ಮತ್ತು ಕೋಲ್ಕತಾದಲ್ಲಿ ವಸತಿ ಮಾರಾಟ ಪ್ರಮಾಣ ಶೇ. 40ಕ್ಕಿಂತಲೂ ಹೆಚ್ಚಾಗಿದೆ. ಚೆನ್ನೈನಲ್ಲಿ ಮಾರಾಟ ಶೇ. 12ರಷ್ಟು ಕಡಿಮೆ ಆಗಿದೆ. ಎಂಟು ಮಹಾನಗರಗಳ ಪೈಕಿ ಮಾರಾಟದಲ್ಲಿ ಇಳಿಕೆ ಆಗಿರುವುದು ಚೆನ್ನೈನಲ್ಲಿ ಮಾತ್ರ.

ಇದನ್ನೂ ಓದಿ: 8th Pay Commission: ಎಲೆಕ್ಷನ್ ಬಂತು, 8ನೇ ವೇತನ ಆಯೋಗ ರಚನೆಯಾಗುತ್ತಾ? ಸರ್ಕಾರದಿಂದ ಅಪ್​ಡೇಟ್ ಇದು

ಮುಂಬೈ ಮತ್ತು ಪುಣೆಯಲ್ಲಿ ಅತಿಹೆಚ್ಚು ವಸತಿ ಮಾರಾಟ ಆಗುವುದು ಮುಂದುವುರಿದಿದೆ. ಎಂಟು ನಗರಗಳಿಂದ ಆದ ಒಟ್ಟೂ ವಸತಿ ಮಾರಾಟದಲ್ಲಿ ಪುಣೆ ಮತ್ತು ಮುಂಬೈ ಪಾಲು ಅರ್ಧದಷ್ಟಿರುವುದು ಗಮನಾರ್ಹ.

2023ರ ಜುಲೈ-ಸೆಪ್ಟೆಂಬರ್ ಕ್ವಾರ್ಟರ್​ನಲ್ಲಿ ಆದ ವಸತಿ ಮಾರಾಟ ಪ್ರಮಾಣ

  1. ಮುಂಬೈ (ಎಂಎಂಆರ್): 30,300 ಯೂನಿಟ್
  2. ಪುಣೆ: 18,560 ಯೂನಿಟ್
  3. ಹೈದರಾಬಾದ್: 14,190 ಯೂನಿಟ್
  4. ಬೆಂಗಳೂರು: 12,590 ಯೂನಿಟ್
  5. ಅಹ್ಮದಾಬಾದ್: 10,300 ಯೂನಿಟ್
  6. ದೆಹಲಿ ಎನ್​ಸಿಆರ್: 7,800 ಯೂನಿಟ್
  7. ಚೆನ್ನೈ: 3,870 ಯೂನಿಟ್
  8. ಕೋಲ್ಕತಾ: 3,610 ಯೂನಿಟ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Mon, 4 December 23