ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ, ಇಲ್ಲಿದೆ ಡೀಟೇಲ್ಸ್
Savings Bank Account Interest Rates: ಬ್ಯಾಂಕುಗಳಲ್ಲಿ ನಮ್ಮ ಉಳಿತಾಯ ಖಾತೆಯಲ್ಲಿ ಹಾಗೇ ಬಿಟ್ಟಿರುವ ಹಣಕ್ಕೆ ಬಡ್ಡಿ ಕೊಡಲಾಗುತ್ತದೆ. ಒಂದೊಂದು ಬ್ಯಾಂಕುಗಳಲ್ಲಿ ಬೇರೆ ಬೇರೆ ದರ ಇರುತ್ತದೆ. ಪ್ರಮುಖ ಬ್ಯಾಂಕುಗಳ ಪೈಕಿ ಐಡಿಎಫ್ಸಿ ಫಸ್ಟ್, ಆರ್ಬಿಎಲ್ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗೆ ಶೇ. 7ರ ಆಸುಪಾಸಿನ ಬಡ್ಡಿದರ ಇರುತ್ತದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಶೇ. 7.50ರಷ್ಟು ಬಡ್ಡಿ ಸಿಗುತ್ತದೆ. ಸ್ಮಾಲ್ ಫೈನಾನ್ಸ್ ಬ್ಯಾಂಕು ಮತ್ತು ಸಹಕಾರಿ ಬ್ಯಾಂಕುಗಳಲ್ಲೂ ಹೆಚ್ಚು ಬಡ್ಡಿ ಸಿಗುತ್ತದೆ.
ನಾವು ಉಳಿಸುವ ಹಣವನ್ನು ಬ್ಯಾಂಕುಗಳಲ್ಲಿ ಆರ್ಡಿ ರೂಪದಲ್ಲೂ, ಎಫ್ಡಿ ರೂಪದಲ್ಲೋ ಠೇವಣಿ (deposits) ಇಡುವುದುಂಟು. ಹೆಚ್ಚಿನ ಜನರು ಬ್ಯಾಂಕುಗಳಲ್ಲಿ ಹಣವನ್ನು ಏನೂ ಮಾಡದೇ ಹಾಗೇ ಬಿಟ್ಟಿರುವುದುಂಟು. ಹೀಗೆ ಇರಿಸುವ ಹಣಕ್ಕೆ ಬ್ಯಾಂಕುಗಳು ಬಡ್ಡಿ ನೀಡುತ್ತವಾದರೂ ಅದರ ದರ ಬಹಳ ಕಡಿಮೆ. ಅದೂ ನಿಮ್ಮ ಒಂದು ತಿಂಗಳ ಅವಧಿಯ ಕನಿಷ್ಠ ಮಟ್ಟದ ಹಣಕ್ಕೆ ಮಾತ್ರ ಬಡ್ಡಿ ಕೊಡಲಾಗುತ್ತದೆ. ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಇಂಥ ಸೇವಿಂಗ್ಸ್ ಅಕೌಂಟ್ನ (Savings Bank Accounts) ಹಣಕ್ಕೆ ಶೇ. 7.50ವರೆಗೂ ಬಡ್ಡಿ ಸಿಗುತ್ತದೆ. ಎಸ್ಬಿಐ, ಎಚ್ಡಿಎಫ್ಸಿ ಇತ್ಯಾದಿ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯ ಹಣಕ್ಕೆ ಸಿಗುವ ಬಡ್ಡಿ ಕಡಿಮೆಯದ್ದಿರುತ್ತದೆ.
ಸೇವಿಂಗ್ಸ್ ಅಕೌಂಟ್ನ ಹಣಕ್ಕೆ ಸರ್ಕಾರಿ ಬ್ಯಾಂಕುಗಳಲ್ಲಿ ಸಿಗುವ ಬಡ್ಡಿ
- ಎಸ್ಬಿಐ: ಶೇ. 2.70ರಿಂದ ಶೇ. 3.00
- ಬ್ಯಾಂಕ್ ಆಫ್ ಬರೋಡಾ: ಶೇ. 2.75ರಿಂದ ಶೇ. 3.35
- ಕರ್ಣಾಟಕ ಬ್ಯಾಂಕ್: ಶೇ. 2.75ರಿಂದ ಶೇ. 4.50
- ಬ್ಯಾಂಕ್ ಆಫ್ ಇಂಡಿಯಾ: ಶೇ. 2.75ರಿಂದ ಶೇ. 2.90
- ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ. 2.70ಯಿಂದ ಶೇ. 3.00
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ. 2.75ರಿಂದ ಶೇ. 2.90
- ಕೆನರಾ ಬ್ಯಾಂಕ್: ಶೇ. 2.90ರಿಂದ ಶೇ. 4.00
- ಇಂಡಿಯನ್ ಬ್ಯಾಂಕ್: ಶೇ. 2.75ರಿಂದ ಶೇ. 2.90
ಇದನ್ನೂ ಓದಿ: ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಹಳೆಯ ನಿಷ್ಕ್ರಿಯ ಸೇವಿಂಗ್ಸ್ ಖಾತೆ ಮತ್ತೆ ಸಕ್ರಿಯಗೊಳಿಸುವ ಕ್ರಮ ತಿಳಿಯಿರಿ
ಸೇವಿಂಗ್ಸ್ ಅಕೌಂಟ್ನ ಹಣಕ್ಕೆ ಖಾಸಗಿ ಬ್ಯಾಂಕುಗಳಲ್ಲಿ ಸಿಗುವ ಬಡ್ಡಿ
- ಎಚ್ಡಿಎಫ್ಸಿ ಬ್ಯಾಂಕ್: ಶೇ. 3.00ರಿಂದ ಶೇ. 4.50
- ಎಕ್ಸಿಸ್ ಬ್ಯಾಂಕ್: ಶೇ. 3.00ಯಿಂದ ಶೇ. 3.50
- ಐಸಿಐಸಿಐ ಬ್ಯಾಂಕ್: ಶೇ. 3.00ಯಿಂದ ಶೇ. 3.50
- ಕೋಟಕ್ ಮಹೀಂದ್ರ ಬ್ಯಾಂಕ್: ಶೇ. 3.50ಯಿಂದ ಶೆ. 4.00
- ಐಡಿಎಫ್ಸಿ ಫಸ್ಟ್ ಬ್ಯಾಂಕ್: ಶೇ. 3.50ಯಿಂದ ಶೇ. 7.00
- ಆರ್ಬಿಎಲ್ ಬ್ಯಾಂಕ್: ಶೇ. 4.00 ರಿಂದ ಶೇ. 7.50
- ಯೆಸ್ ಬ್ಯಾಂಕ್: ಶೇ. 3.50ಯಿಂದ ಶೇ. 7.00
ಸೇವಿಂಗ್ಸ್ ಅಕೌಂಟ್ ಹಣಕ್ಕೆ ಸಣ್ಣ ಫೈನಾನ್ಸ್ ಬ್ಯಾಂಕುಗಳಲ್ಲಿ ಸಿಗುವ ಬಡ್ಡಿ
- ಉಜ್ಜೀವನ್ ಬ್ಯಾಂಕ್: ಶೇ. 7.50ರವರೆಗೆ ಬಡ್ಡಿ
- ಸೂರ್ಯೋದಯ್ ಬ್ಯಾಂಕ್: ಶೇ. 3.50ರಿಂದ ಶೇ. 7.50
- ಜನ ಬ್ಯಾಂಕ್: ಶೇ. 3.50ಯಿಂದ ಶೇ. 7.55
ಇದನ್ನೂ ಓದಿ: Home Loan Interest Rates: ಎಸ್ಬಿಐ, ಎಚ್ಡಿಎಫ್ಸಿ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಗೃಹಸಾಲಕ್ಕೆ ಬಡ್ಡಿದರ ಎಷ್ಟು?
ಪ್ರಮುಖ ಪೇಮೆಂಟ್ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹಣಕ್ಕೆ ಸಿಗುವ ಬಡ್ಡಿ
- ಪೇಟಿಎಂ ಪೇಮೆಂಟ್ಸ್ ಬ್ಯಾಂಕ್: ಶೇ 7.50
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್: ಶೇ. 2.00ರಿಂದ ಶೇ. 2.25
- ಎನ್ಎಸ್ಡಿಎಲ್ ಪೇಮೆಂಟ್ಸ್ ಬ್ಯಾಂಕ್: ಶೇ. 2.50ರಷ್ಟು ಬಡ್ಡಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Mon, 4 December 23