ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಹಳೆಯ ನಿಷ್ಕ್ರಿಯ ಸೇವಿಂಗ್ಸ್ ಖಾತೆ ಮತ್ತೆ ಸಕ್ರಿಯಗೊಳಿಸುವ ಕ್ರಮ ತಿಳಿಯಿರಿ
Post Office Savings Account: ಅಂಚೆ ಕಚೇರಿ ಸೇವಿಂಗ್ಸ್ ಅಕೌಂಟ್ನಲ್ಲಿ ಸತತ 3 ವರ್ಷ ಹಣಕಾಸು ವಹಿವಾಟು ನಡೆಯದಿದ್ದರೆ ಅದು ಸೈಲೆಂಟ್ ಅಕೌಂಟ್ ಆಗಿ ಮಾರ್ಪಡುತ್ತದೆ. ಪೋಸ್ಟ್ ಆಫೀಸ್ನ ಈ ಸೈಲೆಂಟ್ ಅಕೌಂಟ್ ಅನ್ನು ಮತ್ತೆ ಸಕ್ರಿಯಗೊಳಿಸಲು ಹೊಸದಾಗಿ ಕೆವೈಸಿ ದಾಖಲೆ ಕೊಡಬೇಕು. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲನ್ಸ್ ಹಣ 500 ರೂ ಇರಬೇಕು. ಅದಕ್ಕಿಂತ ಕಡಿಮೆ ಇದ್ದರೆ ಒಂದು ವರ್ಷದಲ್ಲಿ 50 ರೂ ದಂಡ ವಿಧಿಸಲಾಗುತ್ತದೆ.
ಬ್ಯಾಂಕ್ಗಳಂತೆ ಪೋಸ್ಟ್ ಆಫೀಸ್ನಲ್ಲೂ ನಾವು ಸೇವಿಂಗ್ಸ್ ಅಕೌಂಟ್ (Post Office savings account) ತೆರೆಯಬಹುದು. ಉಳಿತಾಯ ಹಣವನ್ನು ಇರಿಸುವ ಪ್ರಶಸ್ತ ಸ್ಥಳವೂ ಹೌದು. ಮಿನಿಮಮ್ ಬ್ಯಾಲನ್ಸ್ ಉಳಿಸಬೇಕೆನ್ನುವ ಯಾವ ನಿಯಮ ಇಲ್ಲದ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಲಕ್ಷಾಂತರ ಮಂದಿ ಆರಂಭಿಸಿ ಲಾಭ ಪಡೆಯುತ್ತಿದ್ದಾರೆ. ಆದರೆ, ಬ್ಯಾಂಕ್ನಲ್ಲಿರುವಂತೆ ಪೋಸ್ಟ್ ಆಫೀಸ್ ಖಾತೆ ನಿರ್ದಿಷ್ಟ ಅವಧಿಯವರೆಗೆ ಯಾವ ಚಟುವಟಿಕೆ ಕಾಣದಿದ್ದರೆ ನಿಷ್ಕ್ರಿಯ ಸ್ಥಿತಿಗೆ ಹೋಗುತ್ತದೆ. ಈ ಖಾತೆಯನ್ನು ಸೈಲೆಂಟ್ ಅಕೌಂಟ್ ಎನ್ನುತ್ತಾರೆ. ಸತತ ಮೂರು ಹಣಕಾಸು ವರ್ಷ ಈ ಖಾತೆಗೆ ಯಾವುದೇ ಹಣ ಜಮೆ ಆಗದಿದ್ದರೆ ಅಥವಾ ಖಾತೆಯಿಂದ ಹಣ ವಿತ್ಡ್ರಾ ಆಗದಿದ್ದರೆ ಆಗ ಅದು ಸೈಲೆಂಟ್ ಅಕೌಂಟ್ ಆಗಿ ಮಾರ್ಪಡುತ್ತದೆ.
ಅಂಚೆ ಕಚೇರಿಯ ಸೈಲೆಂಟ್ ಅಕೌಂಟ್ ಅನ್ನು ಮತ್ತೆ ಸಕ್ರಿಯಗೊಳಿಸಬಹುದು. ಅದಕ್ಕಾಗಿ ಸಂಬಂಧಿಸಿದ ಅಂಚೆ ಕಚೇರಿಗೆ ಹೋಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಜೊತೆಯಲ್ಲಿ ಮತ್ತೊಮ್ಮೆ ಕೆವೈಸಿ ದಾಖಲೆ. ಪಾಸ್ಬುಕ್ ಸಲ್ಲಿಸಬೇಕು.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ, ಏನು ಲಾಭ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಎಷ್ಟು? ಇಲ್ಲಿದೆ ಡೀಟೇಲ್ಸ್
ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ನೀವು ತಿಳಿಯಬೇಕಾದ ಕೆಲ ಸಂಗತಿಗಳಿವು
- ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು 500 ರೂ ಠೇವಣಿ ಇಡಬೇಕು.
- ಸದ್ಯಕ್ಕೆ ಈ ಸೇವಿಂಗ್ಸ್ ಅಕೌಂಟ್ನಲ್ಲಿ ಇರಿಸುವ ಹಣಕ್ಕೆ ವರ್ಷಕ್ಕೆ ಶೇ. 4ರಷ್ಟು ಬಡ್ಡಿ ಸಿಗುತ್ತದೆ.
- ನೀವು ಒಮ್ಮೆ ನಿಮ್ಮ ಖಾತೆಗೆ ಜಮೆ ಮಾಡಲು ಕನಿಷ್ಠ ಮೊತ್ತ 10 ರೂ ಆಗಿರುತ್ತದೆ. ಅಂದರೆ 10 ರೂಗಿಂತ ಕಡಿಮೆ ಮೊತ್ತವನ್ನು ನಿಮ್ಮ ಖಾತೆಗೆ ಹಾಕಲು ಬರುವುದಿಲ್ಲ.
- ನೀವು ಹಣ ವಿತ್ಡ್ರಾ ಮಾಡುವುದಾರೆ 50 ರೂಗಿಂತ ಹೆಚ್ಚು ಹಣವಾಗಿರಬೇಕು.
- ಹಣ ಇರಿಸಲು ಮಿತಿ ಇರುವುದಿಲ್ಲ. ಎಷ್ಟು ಬೇಕಾದರೂ ಹಣವನ್ನು ಖಾತೆಗೆ ಹಾಕಬಹುದು.
- ಒಂದು ತಿಂಗಳಲ್ಲಿ 10ನೇ ತಾರೀಖಿನಿಂದ ಹಿಡಿದು ತಿಂಗಳ ಕೊನೆಯವರೆಗೆ ಇರುವ ಕನಿಷ್ಠ ಬ್ಯಾಲನ್ಸ್ ಮೊತ್ತಕ್ಕೆ ಬಡ್ಡಿ ನೀಡಲಾಗುತ್ತದೆ. ಆದರೆ, ಈ ಮೊತ್ತ 500 ರೂಗಿಂತ ಕಡಿಮೆ ಇದ್ದರೆ ಅದಕ್ಕೆ ಬಡ್ಡಿ ಸಿಗುವುದಿಲ್ಲ.
- ಪೋಸ್ಟ್ ಆಫೀಸ್ ಖಾತೆಯಲ್ಲಿ 500 ರೂ ಮಿನಿಮಮ್ ಬ್ಯಾಲನ್ಸ್ ಇರಬೇಕು. ಇಲ್ಲದಿದ್ದರೆ ಒಂದು ವರ್ಷದಲ್ಲಿ 50 ರೂ ದಂಡ ಹಾಕಲಾಗುತ್ತದೆ. ಬ್ಯಾಂಕ್ನಂತೆ ಪ್ರತೀ ತಿಂಗಳು ದಂಡ ಹಾಕಲಾಗುವುದಿಲ್ಲ. ಶೂನ್ಯ ಬ್ಯಾಲನ್ಸ್ ಇದ್ದರೆ ಆ ಪೋಸ್ಟ್ ಆಫೀಸ್ ಖಾತೆ ಮುಚ್ಚಲ್ಪಡುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Fri, 1 December 23