ಅಟಲ್ ಪೆನ್ಷನ್ ಯೋಜನೆ, ಏನು ಲಾಭ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಎಷ್ಟು? ಇಲ್ಲಿದೆ ಡೀಟೇಲ್ಸ್

Atal Pension Yojana Benefits: 2015ರಲ್ಲಿ ಆರಂಭವಾದ ಅಟಲ್ ಪೆನ್ಷನ್ ಯೋಜನೆ ವೃದ್ಧಾಪ್ಯದಲ್ಲಿ ಪಿಂಚಣಿ ಒದಗಿಸುತ್ತದೆ. 18ರಿಂದ 40ರ ಯಾವುದೇ ವಯಸ್ಸಿನ ಯಾವುದೇ ಭಾರತೀಯ ಪ್ರಜೆ ಈ ಯೋಜನೆ ಪಡೆಯಬಹುದು. ಕನಿಷ್ಠ ಹೂಡಿಕೆ ಅವಧಿ 20 ವರ್ಷ ಇದೆ. ಮಾಸಿಕ ಪಿಂಚಣಿ 1,000 ರೂನಿಂದ 5,000 ರೂವರೆಗೂ ಕಲ್ಪಿಸಬಲ್ಲ ಸ್ಕೀಮ್ ಇದು.

ಅಟಲ್ ಪೆನ್ಷನ್ ಯೋಜನೆ, ಏನು ಲಾಭ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಎಷ್ಟು? ಇಲ್ಲಿದೆ ಡೀಟೇಲ್ಸ್
ಪೆನ್ಷನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2023 | 5:53 PM

ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನಾ (APY- Atal Pension Yojana) ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದು. ಎಂಟು ವರ್ಷದ ಹಿಂದೆ ಶುರುವಾದ ಈ ಯೋಜನೆ ಎಲ್ಲರಿಗೂ ಮುಕ್ತವಿದೆ. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಹಳ ಅನುಕೂಲವಾಗಿರುವ ಪೆನ್ಷನ್ ಸ್ಕೀಮ್ ಇದು. 18 ವರ್ಷದಿಂದ 40 ವರ್ಷದ ವಯೋಮಾನದ ಯಾವುದೇ ಭಾರತೀಯ ಪ್ರಜೆ ಅಟಲ್ ಪೆನ್ಷನ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು. ಕನಿಷ್ಠ 20 ವರ್ಷ ಅವಧಿಯವರೆಗೆ ಪೆನ್ಷನ್ ನಿಧಿಗೆ ಹಣ ಪೂರೈಸಬೇಕು.

ಅಟಲ್ ಪೆನ್ಷನ್ ಯೋಜನೆಯ ಸದಸ್ಯರು 60 ವರ್ಷದ ಬಳಿಕ ಪ್ರತೀ ತಿಂಗಳು 1,000 ರೂನಿಂದ 5,000 ರೂವರೆಗೆ ಕನಿಷ್ಠ ಖಾತ್ರಿ ಪಿಂಚಣಿ ಪಡೆಯಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಆದಾಯ ತೆರಿಗೆ ಪಾವತಿಸುವವರಲ್ಲದವರಿಗೆ ಸರ್ಕಾರ ವರ್ಷಕ್ಕೆ ಒಂದು ಸಾವಿರ ರೂವರೆಗೂ ಕೊಡುಗೆ ನೀಡುತ್ತದೆ.

ಇದನ್ನೂ ಓದಿ: PPF Scheme: ಸರ್ಕಾರ ಪಿಪಿಎಫ್ ಸ್ಕೀಮ್​ನಲ್ಲಿ 6 ಕೋಟಿಗೂ ಹೆಚ್ಚು ರಿಟರ್ನ್ ಪಡೆಯಲು ಎಷ್ಟು ವರ್ಷ ಎಷ್ಟು ಹೂಡಿಕೆ ಬೇಕು?

ಈ ಯೋಜನೆ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಇರುತ್ತದೆ. 60ರ ವಯಸ್ಸಿನವರೆಗೂ ಕೊಡುಗೆ ನೀಡುತ್ತಾ ಹೋಗಬಹುದು. 18ನೇ ವಯಸ್ಸಿನಲ್ಲಿ ಈ ಸ್ಕೀಮ್ ಪಡೆದರೆ ಒಟ್ಟು42 ವರ್ಷ ಕಾಲ ಹೂಡಿಕೆ ಮಾಡಲು ಗರಿಷ್ಠ ಅವಕಾಶ ಇರುತ್ತದೆ.

ನಿಮ್ಮ ವಯಸ್ಸು 30 ವರ್ಷವಾಗಿದ್ದರೆ 30 ವರ್ಷ ಹೂಡಿಕೆಗೆ ಅವಕಾಶ ಇರುತ್ತದೆ. ನಿವೃತ್ತಿ ಬಳಿಕ ನೀವು 1,000 ರೂ ಪಿಂಚಣಿ ಪಡೆಯಬೇಕೆಂದರೆ 30ನೇ ವಯಸ್ಸಿನಿಂದ ಆರಂಭಿಸಿ ಪ್ರತೀ ತಿಂಗಳು 116 ರೂ ಕಟ್ಟಬೇಕು. 40ನೇ ವಯಸ್ಸಿನಲ್ಲಿ ಈ ಯೋಜನೆ ಸ್ವೀಕರಿಸಿದರೆ 1,000 ಪಿಂಚಣಿ ಪಡೆಯಲು 20 ವರ್ಷ ಕಾಲ ತಿಂಗಳಿಗೆ 264 ರೂ ಕಟ್ಟಿಕೊಂಡು ಹೋಗಬೇಕು.

ಇನ್ನು, 5,000 ರೂ ಮಾಸಿಕ ಪಿಂಚಣಿ ಬೇಕೆಂದರೆ, 30ನೇ ವಯಸ್ಸಿನಿಂದ 30 ವರ್ಷ ಕಾಲ ತಿಂಗಳಿಗೆ 577 ರೂ ಕಟ್ಟಬೇಕು. 40ನೇ ವಯಸ್ಸಿನಲ್ಲಿ ಸ್ಕೀಮ್ ಆರಂಭಿಸಿದರೆ ತಿಂಗಳಿಗೆ 1,318 ರೂ ಕಟ್ಟಬೇಕು.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದಿನಕ್ಕೆ 100 ರೂನಂತೆ ಹೂಡಿಕೆ ಮಾಡಿದರೆ ಎಷ್ಟಾಗುತ್ತದೆ ಮೊತ್ತ?

ಒಂದು ವೇಳೆ ಸದಸ್ಯನು ಮೃತಪಟ್ಟರೆ ನಾಮಿನಿಗೆ ಪರಿಹಾರ ಸಿಗುತ್ತದೆ. 1,000 ರೂ ಮಾಸಿಕ ಪಿಂಚಣಿ ಪಡೆಯುತ್ತಿರುವವರು ಮೃತಪಟ್ಟರೆ ನಾಮಿನಿಗೆ 1.7 ಲಕ್ಷ ರೂ ಸಿಗುತ್ತದೆ. 5,000 ರೂ ಮಾಸಿಕ ಪೆನ್ಷನ್ ಪಡೆಯುತ್ತಿರುವವರು ಮೃತಪಟ್ಟರೆ ಅವರ ವಾರಸುದಾರರಿಗೆ 8.5 ಲಕ್ಷ ರೂ ಸಿಗುತ್ತದೆ.

ಅಟಲ್ ಪೆನ್ಷನ್ ಯೋಜನೆ ಅರ್ಜಿ ಸಲ್ಲಿಕೆ ಹೇಗೆ?

ಯಾವುದೇ ರಾಷ್ಟ್ರೀಕೃತ ಬ್ಯಾಂಕ್​ಗೆ ಹೋಗಿ ಅಲ್ಲಿ ಈ ಸ್ಕೀಮ್ ಆರಂಭಿಸಬಹುದು. ಸಂಬಂಧಿತ ಅರ್ಜಿ ಭರ್ಜಿ ಮಾಡಿ, ಜೊತೆಯಲ್ಲಿ ಆಧಾರ್ ದಾಖಲೆಯನ್ನು ಲಗತ್ತಿಸಿ ಬ್ಯಾಂಕ್​ನಲ್ಲಿ ಸಲ್ಲಿಸಬೇಕು. ಆನ್​ಲೈನ್​ನಲ್ಲಿ ಈ ಸ್ಕೀಮ್ ಪಡೆಯಲು ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್