AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದಿನಕ್ಕೆ 100 ರೂನಂತೆ ಹೂಡಿಕೆ ಮಾಡಿದರೆ ಎಷ್ಟಾಗುತ್ತದೆ ಮೊತ್ತ?

Sukanya Samriddhi Yojana investment calculator: ಸರ್ಕಾರದಿಂದ ನಡೆಸಲಾಗುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕೆಲ ತಿಂಗಳ ಹಿಂದೆ ಸರ್ಕಾರ ಬಡ್ಡಿದರವನ್ನು ಶೇ. 7.6ರಿಂದ ಶೇ. 8ಕ್ಕೆ ಹೆಚ್ಚಿಸಿತ್ತು. ಈ ಸ್ಕೀಮ್​ನಲ್ಲಿ ನೀವು ದಿನಕ್ಕೆ 100 ರೂ ಹಣ ತೆಗೆದಿರಿಸಿದರೆ ವರ್ಷಕ್ಕೆ 36,000 ರೂ ಹೂಡಿಕೆ ಸಾಧ್ಯವಾಗುತ್ತದೆ. 21 ವರ್ಷಕ್ಕೆ ಈ ಸ್ಕೀಮ್ ಮೆಚ್ಯೂರಿಟಿ ಆದ ಬಳಿಕ ನಿಮ್ಮ ಹೂಡಿಕೆ ಮೊತ್ತ 16 ಲಕ್ಷ ರೂಗಿಂತ ಹೆಚ್ಚಿರುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದಿನಕ್ಕೆ 100 ರೂನಂತೆ ಹೂಡಿಕೆ ಮಾಡಿದರೆ ಎಷ್ಟಾಗುತ್ತದೆ ಮೊತ್ತ?
ಸುಕನ್ಯಾ ಸಮೃದ್ದಿ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2023 | 4:13 PM

ಕೇಂದ್ರ ಸರ್ಕಾರ ನಡೆಸುತ್ತಿರುವ ಕೆಲ ಪ್ರಮುಖ ಹೂಡಿಕೆ ಸ್ಕೀಮ್​ಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ (Sukanya Samriddhi Yojana) ಒಂದು. ಹೆಣ್ಮಕ್ಕಳಿಗೆಂದು ರೂಪಿಸಿರುವ ಸ್ಕೀಮ್ ಇದು. 10 ವರ್ಷದೊಳಗಿನ ಹೆಣ್ಮಗುವಿನ ಹೆಸರಿನಲ್ಲಿ ಪೋಷಕರು ಈ ಯೋಜನೆಯ ಅಡಿ ಖಾತೆ ತೆರೆಯಬಹುದು. ವರ್ಷಕ್ಕೆ 250 ರೂನಿಂದ ಆರಂಭವಾಗಿ 1.5 ಲಕ್ಷ ರೂವರೆಗೆ ಹಣವನ್ನು ಈ ಸ್ಕೀಮ್​ನಲ್ಲಿ ಒಬ್ಬರಿಗೆ ಹೂಡಿಕೆ (Investment) ಮಾಡಲು ಅವಕಾಶ ಇದೆ. ಹೆಣ್ಮಗುವಿನ ಓದು, ಮದುವೆ ಇತ್ಯಾದಿ ಭವಿಷ್ಯದ ಖರ್ಚು ವೆಚ್ಚ ಹಾಗೂ ಆಕೆಯ ಹಣಕಾಸು ಭದ್ರತೆಗೆಂದು ಈ ಸ್ಕೀಮ್ ರೂಪಿಸಲಾಗಿದೆ.

ಸರ್ಕಾರ ಸದ್ಯ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವರ್ಷಕ್ಕೆ ಶೇ. 8ರಷ್ಟು ಬಡ್ಡಿ ಒದಗಿಸುತ್ತದೆ. ಈ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ವಿನಾಯಿತಿ ಇರುತ್ತದೆ. ಈ ಸ್ಕೀಮ್ 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಅಥವಾ ಹೆಣ್ಮಗು ಮದುವೆಯಾಗುವವರೆಗೂ ಸ್ಕೀಮ್ ಚಾಲ್ತಿಯಲ್ಲಿರುತ್ತದೆ.

ನೀವು ತಿಂಗಳಿಗೆ 21 ರೂನಷ್ಟು ಅಲ್ಪ ಮೊತ್ತದ ಹೂಡಿಕೆ ಮಾಡಬಹುದು. ಈ ಕನಿಷ್ಠ ಮೊತ್ತದ ಹೂಡಿಕೆಯನ್ನು ತೊಡಗಿಸಿದರೆ, ಅಂತಿಮವಾಗಿ 1,12,242 ರೂ ಸಿಗುತ್ತದೆ.

ನೀವು ದಿನಕ್ಕೆ 100 ರೂ ಹಣವನ್ನು ಇದಕ್ಕಾಗಿ ಎತ್ತಿ ಇಟ್ಟುಕೊಳ್ಳಲು ನಿರ್ಧರಿಸಿರುತ್ತೀರಿ. ಆಗ ತಿಂಗಳಿಗೆ 3,000 ರೂ ಮತ್ತು ವರ್ಷಕ್ಕೆ 36,000 ರೂ ಹೂಡಿಕೆ ಸಾಧ್ಯವಾಗುತ್ತದೆ. 21 ವರ್ಷ ಬಳಿಕ ಮೆಚ್ಯೂರಿಟಿ ಆದಾ ನಿಮ್ಮ ಹೂಡಿಕೆ ಮೊತ್ತ 16 ಲಕ್ಷ ರೂಗೂ ಹೆಚ್ಚಿರುತ್ತದೆ.

ಇದನ್ನೂ ಓದಿ: ಪಿಪಿಎಫ್ ಸೇರಿದಂತೆ ಸರ್ಕಾರದ ಕೆಲ ಸಣ್ಣ ಉಳಿತಾಯ ಯೋಜನೆಗಳ ನಿಯಮದಲ್ಲಿ ಸಕಾರಾತ್ಮಕ ಬದಲಾವಣೆ

ನೀವು ತಿಂಗಳಿಗೆ 1,000 ರೂ, ಅಥವಾ ವರ್ಷಕ್ಕೆ 12,000 ರೂ ಹೂಡಿಕೆ ಮಾಡಿದರೆ 5.38 ಲಕ್ಷ ರೂ ರಿಟರ್ನ್ ಸಿಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 5,000 ರೂನಂತೆ, ಅಥವಾ ವರ್ಷಕ್ಕೆ 60,000 ರೂ ಹೂಡಿಕೆ ಮಾಡಿದರೆ 27 ಲಕ್ಷ ರೂ ರಿಟರ್ನ್ ಸಿಗುತ್ತದೆ.

ಈ ಎಸ್​ಎಸ್​ವೈ ಸ್ಕೀಮ್​ನಲ್ಲಿ ತಿಂಗಳಿಗೆ 10,000 ರೂ ಹಣ ಹೂಡಿಕೆ ಮಾಡಿದರೆ, ವರ್ಷಕ್ಕೆ 1,20,000 ರೂ ಹೂಡಿಕ ಆಗುತ್ತದೆ. 21 ವರ್ಷ ಹೂಡಿಕೆ ಬಳಿಕ 54 ಲಕ್ಷ ರೂ ಮೊತ್ತ ಕಲೆಹಾಕಿರುತ್ತದೆ.

ನೀವು ಒಂದು ವೇಳೆ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ವರ್ಷದ ಗರಿಷ್ಠ ಹೂಡಿಕೆ ಮಿತಿಯಾದ 1.5 ಲಕ್ಷ ರೂ ಹಣವನ್ನು ಪ್ರತೀ ವರ್ಷ ಕಟ್ಟುತ್ತಾ ಹೋದರೆ, ಅಂದರೆ ತಿಂಗಳಿಗೆ 12,500 ರೂ ಹಣವನ್ನು ಇದಕ್ಕಾಗಿ ತೆಗೆದಿರಿಸುತ್ತಾ ಹೋದರೆ ಮೆಚ್ಯೂರಿಟಿ ಬಳಿಕ ಒಟ್ಟು ಮೊತ್ತ 67 ಲಕ್ಷ ರೂಗೂ ಹೆಚ್ಚಿರುತ್ತದೆ.

ಇದನ್ನೂ ಓದಿ: ಎಸ್​ಸಿಎಸ್​ಎಸ್​ನಿಂದ ನ್ಯಾಷನಲ್ ಸೇವಿಂಗ್ಸ್​ವರೆಗೂ; ಪೋಸ್ಟ್ ಆಫೀಸ್​ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು

ಈ ಸ್ಕೀಮ್​ನಲ್ಲಿ ನೀವು ಗರಿಷ್ಠ ಹೂಡಿಕೆ ಮಾಡಿದರೆ 21 ವರ್ಷದಲ್ಲಿ 67 ಲಕ್ಷ ರೂ ಹಣವನ್ನು ರಿಟರ್ನ್ ಆಗಿ ಪಡೆಯಲು ಸಾಧ್ಯವಾಗುತ್ತದೆ. ಸುರಕ್ಷಿತ ಹೂಡಿಕೆಗೆ ಉತ್ತಮ ಸ್ಕೀಮ್​ಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ ಒಂದು ಎಂಬುದು ಚರ್ಚಾರ್ಹ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?