ಪಿಪಿಎಫ್ ಸೇರಿದಂತೆ ಸರ್ಕಾರದ ಕೆಲ ಸಣ್ಣ ಉಳಿತಾಯ ಯೋಜನೆಗಳ ನಿಯಮದಲ್ಲಿ ಸಕಾರಾತ್ಮಕ ಬದಲಾವಣೆ

Rule Changes In Small Savings Schemes: ಸರ್ಕಾರ ಇತ್ತೀಚೆಗೆ ಹೊರಡಿಸಿದ ನೋಟಿಫಿಕೇಶನ್ ಪ್ರಕಾರ ಮೂರು ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಸಡಿಲಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮತ್ತು ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ಸ್ಕೀಮ್​ಗಳಲ್ಲಿ ನಿಯಮಗಳ ಬದಲಾವಣೆ ಆಗಿದೆ.

ಪಿಪಿಎಫ್ ಸೇರಿದಂತೆ ಸರ್ಕಾರದ ಕೆಲ ಸಣ್ಣ ಉಳಿತಾಯ ಯೋಜನೆಗಳ ನಿಯಮದಲ್ಲಿ ಸಕಾರಾತ್ಮಕ ಬದಲಾವಣೆ
ಪಿಪಿಎಫ್
Follow us
|

Updated on: Nov 19, 2023 | 1:41 PM

ನವದೆಹಲಿ, ನವೆಂಬರ್ 19: ಸರ್ಕಾರದಿಂದ ನಡೆಸಲಾಗುವ ವಿವಿಧ ಸಣ್ಣ ಉಳಿತಾಯ ಯೋಜನೆಗಳು (small savings schemes) ಜನಸಾಮಾನ್ಯರಿಗೆ ವರದಾನವಾಗಿವೆ. ಉತ್ತಮ ವಾರ್ಷಿಕ ಬಡ್ಡಿದರ ಇರುವ ಈ ಸ್ಕೀಮ್​ಗಳು ಸಾಮಾನ್ಯ ಜನರಲ್ಲಿ ಉಳಿತಾಯ ಪ್ರವೃತ್ತಿ ಬೆಳೆಸಲು ಮತ್ತು ಭವಿಷ್ಯದ ಹಣಕಾಸು ಭದ್ರತೆ ಒದಗಿಲು ಸಹಾಯವಾಗುತ್ತವೆ. ಈ ಸ್ಕೀಮ್​ಗಳಿಗೆ ಸರ್ಕಾರ ಪ್ರತೀ ವರ್ಷವೂ ಬಡ್ಡಿದರ ಪರಿಷ್ಕರಿಸುತ್ತದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿ ವ್ಯವಹಾರಗಳ ಇಲಾಖೆ ಈ ಸಣ್ಣ ಉಳಿತಾಯ ಯೋಜನೆಗಳನ್ನು ನಿಭಾಯಿಸುತ್ತದೆ. ಈ ಇಲಾಖೆಯಿಂದ ಸದ್ಯಕ್ಕೆ 9 ಸಣ್ಣ ಉಳಿತಾಯ ಯೋಜನೆಗಳು ಚಾಲ್ತಿಯಲ್ಲಿವೆ. ಇತ್ತೀಚೆಗೆ ಮೂರು ಇಂಥ ಸ್ಕೀಮ್​ಗಳಲ್ಲಿ ನಿಯಮಗಳನ್ನು ಸಡಿಲಿಸಲಾಗಿದೆ. ನವೆಂಬರ್ 9ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಈ ಸ್ಕೀಮ್​ಗಳಿಗೆ ಯಾವೆಲ್ಲಾ ಬದಲಾವಣೆ (rules changes) ತರಲಾಗಿದೆ ಎಂಬ ವಿವರ ಇಲ್ಲಿದೆ…

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ನಿಯಮ ಬದಲಾವಣೆ

ನಿವೃತ್ತಿ ಹೊಂದಿದ ಬಳಿಕ ಆ ಹಣವನ್ನು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಒಂದು ತಿಂಗಳೊಳಗೆ ಹೂಡಿಕೆ ಮಾಡಿ ಖಾತೆ ತೆರೆಯಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ. ಈಗ ರಿಟೈರ್ಮೆಂಟ್ ಹಣ ಬಂದು 3 ತಿಂಗಳವರೆಗೂ ಎಸ್​ಸಿಎಸ್​ಎಸ್ ಖಾತೆ ತೆರೆಯಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಎಸ್​ಸಿಎಸ್​ಎಸ್​ನಿಂದ ನ್ಯಾಷನಲ್ ಸೇವಿಂಗ್ಸ್​ವರೆಗೂ; ಪೋಸ್ಟ್ ಆಫೀಸ್​ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್​ನಲ್ಲಿ ನಿಯಮ ಬದಲಾವಣೆ

ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನ ಅವಧಿ ಮುಂಚಿನ ಹಣ ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಪಿಪಿಎಫ್ ಮೆಚ್ಯೂರಿಟಿ ಅವಧಿಗೆ ಮುನ್ನ ಒಬ್ಬ ಖಾತೆದಾರ ಮೂರು ಕಾರಣಗಳಿಗೆ ಹಣ ವಿತ್​ಡ್ರಾ ಮಾಡಲು ಅವಕಾಶ ಇದೆ.

  1. ಖಾತೆದಾರ ಅಥವಾ ಅವಲಂಬಿತರಿಗೆ ಮಾರಕ ಕಾಯಿಲೆ ಬಂದಿದ್ದರೆ
  2. ಉನ್ನತ ಶಿಕ್ಷಣ ಪಡೆಯಬೇಕಿದ್ದರೆ
  3. ಹೊರದೇಶಕ್ಕೆ ವಲಸೆ ಹೋಗುತ್ತಿದ್ದರೆ…

ಈ ಮೂರರಲ್ಲಿ ಯಾವುದೇ ಕಾರಣವಿದ್ದರೂ ಪಿಪಿಎಫ್ ಹಣವನ್ನು ಮೆಚ್ಯೂರಿಟಿಗೆ ಮುನ್ನ ವಿತ್​ಡ್ರಾ ಮಾಡಿಕೊಳ್ಳಬಹುದು. ಆದರೆ, ಆ ಕಾರಣಗಳಿಗೆ ಸೂಕ್ತವಾದ ದಾಖಲೆಗಳನ್ನು ಒದಗಿಸಬೇಕು. ಸುಮ್ಮನೆ ಕಾರಣ ಹೇಳಿ ಹಣ ಹಿಂಪಡೆಯಲು ಆಗುವುದಿಲ್ಲ.

ಇದನ್ನೂ ಓದಿ: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕುಗಳಲ್ಲಿ ಎಫ್​ಡಿ ದರಗಳು ಎಷ್ಟಿವೆ? ಇಲ್ಲಿದೆ ಪಟ್ಟಿ

ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್​ನಲ್ಲಿ ನಿಯಮ ಬದಲಾವಣೆ

ಅಂಚೆ ಕಚೇರಿ ಉಳಿತಾಯ ಖಾತೆಗಳು ಒಂದರಿಂದ ಐದು ವರ್ಷದವರೆಗಿನ ವಿವಿಧ ಅವದಿ ಠೇವಣಿಯ ಆಯ್ಕೆಗಳಿವೆ. ಐದು ವರ್ಷದ ಅವಧಿಯ ಠೇವಣಿಯನ್ನು ನಾಲ್ಕು ವರ್ಷದ ಬಳಿಕ ಹಿಂಪಡೆಯುವ ಸಂದರ್ಭ ಬಂದರೆ, ಹಿಂದಿನ ನಿಯಮದ ಪ್ರಕಾರ ಮೂರು ವರ್ಷದ ಸ್ಕೀಮ್​ನಲ್ಲಿರುವಷ್ಟು ಬಡ್ಡಿ ಮಾತ್ರವೇ ಅನ್ವಯ ಆಗುತ್ತಿತ್ತು. ಹೊಸ ನಿಯಮದ ಪ್ರಕಾರ ಐದು ವರ್ಷದ ಸ್ಕೀಮ್​ಗೆ ಇರುವ ಬಡ್ಡಿಯೇ ಈ ಪ್ರೀಮೆಚ್ಯೂರ್ ವಿತ್​ಡ್ರಾಯಲ್ ಮೊತ್ತಕ್ಕೆ ಅನ್ವಯ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ