PPF Scheme: ಸರ್ಕಾರ ಪಿಪಿಎಫ್ ಸ್ಕೀಮ್ನಲ್ಲಿ 6 ಕೋಟಿಗೂ ಹೆಚ್ಚು ರಿಟರ್ನ್ ಪಡೆಯಲು ಎಷ್ಟು ವರ್ಷ ಎಷ್ಟು ಹೂಡಿಕೆ ಬೇಕು?
Public Provident Fund invesment calculator: ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. ಇದಕ್ಕೆ ಸದ್ಯ ವಾರ್ಷಿಕ ಬಡ್ಡಿದರ ಶೇ. 7.1 ಎಂದು ನಿಗದಿ ಮಾಡಲಾಗಿದೆ. ವರ್ಷಕ್ಕೆ 500 ರೂನಿಂದ 1,50,000 ರೂವರೆಗೂ ಹೂಡಿಕೆ ಸಾಧ್ಯ. ಪಿಪಿಎಫ್ 15 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಆ ಬಳಿಕ ಪ್ರತೀ 5 ವರ್ಷಕ್ಕೊಮ್ಮೆ ಸ್ಕೀಮ್ ಅನ್ನು ವಿಸ್ತರಿಸುತ್ತಾ ಹೋಗಬಹುದು.
ಸರ್ಕಾರದಿಂದ ನಡೆಸಲಾಗುವ ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು. ಸರ್ಕಾರದ ಯೋಜನೆ ಎಂಬ ಒಂದು ಗ್ಯಾರಂಟಿ ಜೊತೆಗೆ ಉತ್ತಮ ಬಡ್ಡಿಯನ್ನೂ ಇದು ಒದಗಿಸುತ್ತದೆ. ಜೊತೆಗೆ ಆದಾಯ ತೆರಿಗೆ ಕಟ್ಟುವವರಿಗೆ ಒಂದಷ್ಟು ಮೊತ್ತದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನೂ ಇದು ಕಲ್ಪಿಸುತ್ತದೆ. ಹೀಗಾಗಿ, ನಿಮಗೆ ವಾಸ್ತವದಲ್ಲಿ ಸಿಗುವ ಲಾಭ ಇನ್ನೂ ಹೆಚ್ಚಿರುತ್ತದೆ. ಈಕ್ವಿಟಿಯಂತಹ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದೇ ಇರುವವರು ಅಥವಾ ಈಕ್ವಿಟಿಯಿಂದ ಆಚೆ ಸುರಕ್ಷಿತ ಹೂಡಿಕೆ (secured investment) ಮಾಡಬಯಸುವವರಿಗೆ ಮತ್ತು ದೀರ್ಘಾವಧಿ ಹೂಡಿಕೆಗೆ (long term investment) ಸಿದ್ಧವಾಗಿರುವವರಿಗೆ ಪಿಪಿಎಫ್ ಸ್ಕೀಮ್ ಉತ್ತಮ ಆಯ್ಕೆ ಎನಿಸುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ನಲ್ಲಿ ಎಷ್ಟು ಹೂಡಿಕೆ ಮಾಡಬಹುದು?
ಪಿಪಿಎಫ್ ಸ್ಕೀಮ್ ಅನ್ನು ಅಪ್ರಾಪ್ತರು ಅಥವಾ ಮಾನಸಿಕ ಅಸ್ವಸ್ಥರ ಪರವಾಗಿ ಪೋಷಕರು ಆರಂಭಿಸಬಹುದು. ಯಾರು ಬೇಕಾದರೂ ಈ ಸ್ಕೀಮ್ನಲ್ಲಿ ಅಕೌಂಟ್ ತೆರೆಯಬಹುದು. ಈ ಸ್ಕೀಮ್ ಅವಧಿ 15 ವರ್ಷ ಇರುತ್ತದೆ. ಅಂದರೆ 15 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಮೆಚ್ಯೂರಿಟಿ ಆದ ಬಳಿಕವೂ ಯೋಜನೆ ಮುಂದುವರಿಸುವ ಆಯ್ಕೆಯೂ ಇದೆ. ಹಾಗೆ ನಿರ್ಧರಿಸಿದಲ್ಲಿ ಮೆಚ್ಯೂರಿಟಿ ಆದ ಬಳಿಕ 5 ವರ್ಷ ಸ್ಕೀಮ್ ಅವಧಿ ವಿಸ್ತರಿಸಬಹುದು. ಆ ಬಳಿಕವೂ ಪ್ರತೀ ಐದು ವರ್ಷಕ್ಕೊಮ್ಮೆ ವಿಸ್ತರಿಸುತ್ತಾ ಹೋಗಬಹುದು.
ಇದನ್ನೂ ಓದಿ: ಜೀವ ಪ್ರಮಾಣಪತ್ರ ಸಲ್ಲಿಸಲು ಎರಡೇ ದಿನ ಬಾಕಿ; ನ. 30ಕ್ಕೆ ಕೊಡದಿದ್ದರೆ ಪಿಂಚಣಿ ಸಿಗೋದಿಲ್ವಾ?
ಈ ಸ್ಕೀಮ್ನಲ್ಲಿ ವರ್ಷಕ್ಕೆ ಕನಿಷ್ಠ ಹೂಡಿಕೆ 500 ರೂ ಇರುತ್ತದೆ. ಗರಿಷ್ಠ ಹೂಡಿಕೆ ಮಿತಿ 1.5 ಲಕ್ಷ ರೂ ಆಗಿದೆ. ಈ ಸ್ಕೀಮ್ನಲ್ಲಿ ಸದ್ಯ ವರ್ಷಕ್ಕೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತದೆ. ಸರ್ಕಾರ ಪ್ರತೀ ವರ್ಷವೂ ಬಡ್ಡಿದರವನ್ನು ಪರಿಷ್ಕರಿಸುತ್ತದೆ.
ಎಷ್ಟು ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗುತ್ತದೆ?
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇದೆ. ಅಂದರೆ ತಿಂಗಳಿಗೆ ನೀವು 12,500 ರೂವರೆಗೂ ಹಣವನ್ನು ಇದಕ್ಕಾಗಿ ವಿನಿಯೋಗಿಸಬಹುದು. 15 ವರ್ಷ ಮೆಚ್ಯೂರಿಟಿ ಆದ ಬಳಿಕ ಬಡ್ಡಿ ಎಲ್ಲವೂ ಸೇರಿ ಸುಮಾರು 40 ಲಕ್ಷ ರೂ ನಿಮ್ಮದಾಗುತ್ತದೆ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದಿನಕ್ಕೆ 100 ರೂನಂತೆ ಹೂಡಿಕೆ ಮಾಡಿದರೆ ಎಷ್ಟಾಗುತ್ತದೆ ಮೊತ್ತ?
ಒಂದು ವೇಳೆ ನೀವು ಐದು ವರ್ಷ ಅವಧಿ ವಿಸ್ತರಿಸಿದಲ್ಲಿ, ಅಂದರೆ 20 ವರ್ಷದ ಹೂಡಿಕೆಯಲ್ಲಿ ನಿಮ್ಮ ಹಣ 66 ಲಕ್ಷ ರೂ ಆಗುತ್ತದೆ. ಹೀಗೆ ನೀವು 50 ವರ್ಷದವರೆಗೂ ಹೂಡಿಕೆ ಮಾಡುತ್ತಾ ಹೋದಲ್ಲಿ ಹಾಗು ಇದೇ ದರದಲ್ಲಿ ಬಡ್ಡಿ ಸಿಗುತ್ತಾ ಹೋದಲ್ಲಿ 6.75 ಕೋಟಿ ರೂ ಹಣ ನಿಮಗೆ ಅಂತಿಮವಾಗಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Tue, 28 November 23