AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India UK Trade Deal: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ: ಸಾಮಾನ್ಯ ಜನರಿಗೆ ಹಬ್ಬ, ಕಾರು, ವಿಸ್ಕಿ, ಚಾಕೊಲೇಟ್ ಭಾರಿ ಅಗ್ಗ

ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದಿದ್ದು, ಪ್ರೀಮಿಯಂ ಕಾರು, ಸ್ಕಾಚ್ ವಿಸ್ಕಿ, ಚಾಕೊಲೇಟ್‌ಗಳು ಅಗ್ಗವಾಗಲಿವೆ. ಆಮದು ಸುಂಕ ಕಡಿತದಿಂದ ಗ್ರಾಹಕರಿಗೆ ಭಾರಿ ಉಳಿತಾಯ. ಭಾರತೀಯ ಉತ್ಪನ್ನಗಳಿಗೆ ಯುಕೆ ಮಾರುಕಟ್ಟೆಯಲ್ಲಿ ಶೂನ್ಯ ಸುಂಕದ ಲಾಭ. ರೈತರ ಹಿತರಕ್ಷಣೆಗೆ ಡೈರಿ ಉತ್ಪನ್ನಗಳನ್ನು ಹೊರಗಿಡಲಾಗಿದೆ. ಯುವಕರಿಗೆ ಬ್ರಿಟನ್‌ನಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ, ವಾಣಿಜ್ಯ ವಹಿವಾಟು 100 ಶತಕೋಟಿ ಡಾಲರ್​ಗೆ ಏರುವ ನಿರೀಕ್ಷೆ.

India UK Trade Deal: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ: ಸಾಮಾನ್ಯ ಜನರಿಗೆ ಹಬ್ಬ, ಕಾರು, ವಿಸ್ಕಿ, ಚಾಕೊಲೇಟ್ ಭಾರಿ ಅಗ್ಗ
ಭಾರತ-ಯುಕೆ ಒಪ್ಪಂದ
ನಯನಾ ರಾಜೀವ್
|

Updated on: Jul 15, 2026 | 10:24 AM

Share

ನವದೆಹಲಿ, ಜುಲೈ 15: ಭಾರತ ಮತ್ತು ಯುನೈಟೆಡ್ ಕಿಂಗ್​ಡಮ್(ಯುಕೆ) ನಡುವಿನ ಐತಿಹಾಸಿಕ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟನ್ನು ಬರೋಬ್ಬರಿ 100 ಬಿಲಿಯನ್ ಡಾಲರ್​ಗೆ ಹೆಚ್ಚಿಸುವ ಬೃಹತ್ ಗುರಿಯನ್ನು ಈ ಒಪ್ಪಂದ ಹೊಂದಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ(Narendra Modi) ಲಂಡನ್​​ಗೆ ಭೇಟಿ ನೀಡಿದ್ದಾಗ ಈ ಮಹತ್ವದ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿತ್ತು. ಈ ಒಪ್ಪಂದದ ಅನ್ವಯ, ಬ್ರಿಟನ್​ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವ ಪ್ರೀಮಿಯಂ ಕಾರುಗಳು, ಐಷಾರಾಮಿ ಚಾಕೊಲೇಟ್​ಗಳು ಹಾಗೂ ಸ್ಕಾಚ್ ವಿಸ್ಕಿಗಳ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲಾಗುತ್ತಿದ್ದು, ಇವುಗಳ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಾಣಲಿವೆ.

ತೆರಿಗೆಯಲ್ಲಿ ಭಾರಿ ಕಡಿತ: ಗ್ರಾಹಕರ ಜೇಬಿಗೆ ಭಾರಿ ಉಳಿತಾಯ

ಸಾಮಾನ್ಯವಾಗಿ ವಿದೇಶಿ ಬ್ರಾಂಡ್‌ಗಳ ಕಾರು ಅಥವಾ ಬಿಸ್ಕತ್ತು, ಚಾಕೊಲೇಟ್‌ಗಳನ್ನು ಖರೀದಿಸುವಾಗ ಭಾರತೀಯರು ದುಬಾರಿ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆದರೆ ಇಂದಿನಿಂದ ಈ ಹೊರೆ ಕ್ರಮೇಣ ಕಡಿಮೆಯಾಗಲಿದೆ:

ಬ್ರಿಟಿಷ್ ಐಷಾರಾಮಿ ಕಾರುಗಳು: ಇದುವರೆಗೆ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಪ್ರೀಮಿಯಂ ಕಾರುಗಳ ಮೇಲೆ ಬರೋಬ್ಬರಿ ಶೇ. 110ತೆರಿಗೆ ಇತ್ತು. ಅದನ್ನು ಈಗ ಹಂತ-ಹಂತವಾಗಿ ಕೇವಲ ಶೇ.10 ಕ್ಕೆ ಇಳಿಸಲಾಗುತ್ತಿದೆ, ಇದರ ನೇರ ಲಾಭ ಎಲೆಕ್ಟ್ರಿಕ್ (EV) ಮತ್ತು ಹೈಬ್ರಿಡ್ ಕಾರುಗಳಿಗೂ ಸಿಗಲಿದೆ.

ಸ್ಕಾಚ್ ವಿಸ್ಕಿ ಮತ್ತು ಜಿನ್: ಭಾರತದಲ್ಲಿ ಸ್ಕಾಚ್ ವಿಸ್ಕಿ ಮೇಲಿದ್ದ ಶೇ.150 ನಷ್ಟು ಬೃಹತ್ ಸುಂಕವನ್ನು ತಕ್ಷಣವೇ  ಶೇ.75 ಕ್ಕೆ ಇಳಿಸಲಾಗಿದ್ದು, ಮುಂದಿನ 10 ವರ್ಷಗಳಲ್ಲಿ ಇದು ಶೇ.40 ಕ್ಕೆ ಕುಸಿಯಲಿದೆ.

ಚಾಕೊಲೇಟ್ ಮತ್ತು ಬಿಸ್ಕತ್ತುಗಳು: ಬ್ರಿಟನ್‌ನ ಪ್ರಸಿದ್ಧ ಪ್ರೀಮಿಯಂ ಚಾಕೊಲೇಟ್, ಬಿಸ್ಕತ್ತು ಹಾಗೂ ಸೌಂದರ್ಯವರ್ಧಕಗಳ ಮೇಲಿನ ಆಮದು ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದ್ದು, ಮಧ್ಯಮ ವರ್ಗದ ಗ್ರಾಹಕರಿಗೆ ಬ್ರಾಂಡೆಡ್ ವಸ್ತುಗಳು ಅಗ್ಗದ ದರದಲ್ಲಿ ಸಿಗಲಿವೆ.

ಭಾರತದ ಶೇ. 99 ಉತ್ಪನ್ನಗಳಿಗೆ ಯುಕೆ ಮಾರುಕಟ್ಟೆಯಲ್ಲಿ ಶೂನ್ಯ ಸುಂಕ

ಈ ಒಪ್ಪಂದದಿಂದ ಭಾರತದ ರಫ್ತುದಾರರಿಗೆ ಅಕ್ಷರಶಃ ಲಾಟರಿ ಹೊಡೆದಂತಾಗಿದೆ. ಭಾರತ ತಯಾರಿಸುವ ಸುಮಾರು ಶೇ. 99ಉತ್ಪನ್ನಗಳನ್ನು ಇನ್ಮುಂದೆ ಯಾವುದೇ ಆಮದು ತೆರಿಗೆ ಇಲ್ಲದೆ ನೇರವಾಗಿ ಬ್ರಿಟನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.

ಮತ್ತಷ್ಟು ಓದಿ: ಭಾರತ-ನ್ಯೂಜಿಲೆಂಡ್ ಹೊಸ ಪಯಣಕ್ಕೆ ಸಿದ್ಧವಾಗಿದೆ; ಆಕ್ಲೆಂಡ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ

ಸ್ಕಾಚ್ ವಿಸ್ಕಿ: ಇದರ ಮೇಲಿದ್ದ ಶೇ.150 ಬೃಹತ್ ಸುಂಕವನ್ನು ತಕ್ಷಣವೇ ಶೇ, 75 ಕ್ಕೆ ಇಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಶೇ.40 ಕ್ಕೆ ಕುಸಿಯಲಿದೆ.

ದೈನಂದಿನ ವಸ್ತುಗಳು: ಬ್ರಿಟನ್‌ನ ಪ್ರಸಿದ್ಧ ಬ್ರಾಂಡೆಡ್ ಚಾಕೊಲೇಟ್‌ಗಳು, ಬಿಸ್ಕತ್ತುಗಳು ಮತ್ತು ಸೌಂದರ್ಯವರ್ಧಕಗಳ ಮೇಲಿನ ಆಮದು ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ.

ಲಾಭ ಪಡೆಯಲಿರುವ ಪ್ರಮುಖ ಭಾರತೀಯ ವಲಯಗಳು

  • ಜವಳಿ ಮತ್ತು ಸಿದ್ಧ ಉಡುಪುಗಳು
  • ಚರ್ಮದ ಸರಕುಗಳು ಮತ್ತು ಪಾದರಕ್ಷೆಗಳು
  • ರತ್ನಗಳು ಮತ್ತು ಆಭರಣಗಳು
  • ಸಮುದ್ರ ಉತ್ಪನ್ನಗಳು ಮತ್ತು ಸೀಫುಡ್ಆ
  • ಆಟೋ ಬಿಡಿಭಾಗಗಳು ಮತ್ತು ರಾಸಾಯನಿಕಗಳು

ಭಾರತೀಯ ರೈತರು ಮತ್ತು ಡೈರಿ ಉದ್ಯಮಕ್ಕೆ ಸಂಪೂರ್ಣ ರಕ್ಷಣೆ

ವಿದೇಶಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡುವುದರಿಂದ ನಮ್ಮ ದೇಶದ ರೈತರಿಗೆ ತೊಂದರೆಯಾಗಬಹುದು ಎಂಬ ಆತಂಕವಿತ್ತು. ಆದರೆ ಕೇಂದ್ರ ಸರ್ಕಾರವು ದೇಶೀಯ ಕೃಷಿ ವಲಯವನ್ನು ಅತ್ಯಂತ ಚಾಣಾಕ್ಷತನದಿಂದ ರಕ್ಷಿಸಿದೆ.

ಬ್ರಿಟನ್‌ನ ಅಗ್ಗದ ಉತ್ಪನ್ನಗಳಿಂದ ಭಾರತೀಯ ರೈತರು ಮತ್ತು ಹೈನುಗಾರರಿಗೆ ನಷ್ಟವಾಗದಂತೆ ತಡೆಯಲು ಡೈರಿ ಉತ್ಪನ್ನಗಳು, ಚೀಸ್, ಸಕ್ಕರೆ, ಅಕ್ಕಿ, ಸೇಬು, ಕೋಳಿ ಮತ್ತು ಮೊಟ್ಟೆಗಳನ್ನು ಈ ಮುಕ್ತ ವ್ಯಾಪಾರ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಅಂದರೆ, ಬ್ರಿಟನ್‌ನ ಹಾಲಿನ ಉತ್ಪನ್ನಗಳು ಭಾರತಕ್ಕೆ ಬಂದು ಇಲ್ಲಿನ ಹೈನುಗಾರರ ಹೊಟ್ಟೆಯ ಮೇಲೆ ಹೊಡೆಯಲು ಸಾಧ್ಯವಿಲ್ಲ.

ಭಾರತೀಯ ಯುವಕರಿಗೆ ಬ್ರಿಟನ್‌ನಲ್ಲಿ ಉದ್ಯೋಗದ ಮಹಾದ್ವಾರ

ಈ ಒಪ್ಪಂದವು ಕೇವಲ ಸರಕುಗಳ ಮಾರಾಟಕ್ಕಷ್ಟೇ ಸೀಮಿತವಾಗಿಲ್ಲ, ಇದು ಭಾರತೀಯ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರಿ ವರವಾಗಲಿದೆ.

ಯಂಗ್ ಪ್ರೊಫೆಷನಲ್ಸ್ ಸ್ಕೀಮ್: ಒಪ್ಪಂದದ ಭಾಗವಾಗಿ ಭಾರತದ ಐಟಿ (IT) ತಜ್ಞರು, ಇಂಜಿನಿಯರ್‌ಗಳು, ಆರೋಗ್ಯ ಕಾರ್ಯಕರ್ತರು ಮತ್ತು ನಾವೀನ್ಯಕಾರರಿಗೆ ಬ್ರಿಟನ್‌ನಲ್ಲಿ ಸುಲಭವಾಗಿ ವೀಸಾ ಮತ್ತು ಉದ್ಯೋಗಾವಕಾಶಗಳು ಸಿಗಲಿವೆ.

ಆರ್ಥಿಕ ಪ್ರಗತಿ: ಈ ಒಪ್ಪಂದದಿಂದಾಗಿ 2040 ರ ವೇಳೆಗೆ ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರವು ಸುಮಾರು ಶೇ.39 ರಷ್ಟು ವೃದ್ಧಿಯಾಗಲಿದ್ದು, ಭಾರತದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪ್ರಧಾನಿ ಮೋದಿ ಅವರ ‘ವಿಕಸಿತ ಭಾರತ 2047’ ಕನಸಿಗೆ ಈ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಇಂಧನ ನೀಡಿದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದ (CETA) ಮುಖ್ಯ ಗುರಿ ಏನು ಮತ್ತು ಇದು ಯಾವಾಗ ಜಾರಿಗೆ ಬಂದಿದೆ? ಉತ್ತರ: ಈ ಐತಿಹಾಸಿಕ ಒಪ್ಪಂದವು ಜುಲೈ 15, 2026 ರಂದು ಅಧಿಕೃತವಾಗಿ ಜಾರಿಗೆ ಬಂದಿದೆ. ಸದ್ಯ ಉಭಯ ದೇಶಗಳ ನಡುವೆ ಇರುವ 55-60 ಬಿಲಿಯನ್ ಡಾಲರ್ ವಾಣಿಜ್ಯ ವಹಿವಾಟನ್ನು 2030 ರ ವೇಳೆಗೆ ಬರೋಬ್ಬರಿ 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವುದು ಈ ಒಪ್ಪಂದದ ಮುಖ್ಯ ಗುರಿಯಾಗಿದೆ.

ಪ್ರಶ್ನೆ: ಈ ಒಪ್ಪಂದದಿಂದಾಗಿ ಭಾರತದ ಸಾಮಾನ್ಯ ಗ್ರಾಹಕರಿಗೆ ಯಾವೆಲ್ಲಾ ವಿದೇಶಿ ವಸ್ತುಗಳು ಅಗ್ಗದ ದರದಲ್ಲಿ ಸಿಗಲಿವೆ? ಉತ್ತರ: ಬ್ರಿಟನ್‌ನಿಂದ ಆಮದು ಮಾಡಿಕೊಳ್ಳಲಾಗುವ ಪ್ರೀಮಿಯಂ ವಸ್ತುಗಳ ಮೇಲಿನ ತೆರಿಗೆ ಕಡಿತದಿಂದಾಗಿ ಈ ಕೆಳಗಿನ ಉತ್ಪನ್ನಗಳು ಭಾರಿ ಅಗ್ಗವಾಗಲಿವೆ.

ಐಷಾರಾಮಿ ಕಾರುಗಳು: ಇದುವರೆಗೆ ಇದ್ದ ಶೇ.110 ಆಮದು ಸುಂಕವನ್ನು ಹಂತ-ಹಂತವಾಗಿ ಶೇ.10 ಕ್ಕೆ ಇಳಿಸಲಾಗುತ್ತಿದೆ (ಇದು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳಿಗೂ ಅನ್ವಯಿಸುತ್ತದೆ).

ಸ್ಕಾಚ್ ವಿಸ್ಕಿ: ಇದರ ಮೇಲಿದ್ದ ಶೇ.150 ಬೃಹತ್ ಸುಂಕವನ್ನು ತಕ್ಷಣವೇ ಶೇ, 75 ಕ್ಕೆ ಇಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಶೇ.40 ಕ್ಕೆ ಕುಸಿಯಲಿದೆ.

ದೈನಂದಿನ ವಸ್ತುಗಳು: ಬ್ರಿಟನ್‌ನ ಪ್ರಸಿದ್ಧ ಬ್ರಾಂಡೆಡ್ ಚಾಕೊಲೇಟ್‌ಗಳು, ಬಿಸ್ಕತ್ತುಗಳು ಮತ್ತು ಸೌಂದರ್ಯವರ್ಧಕಗಳ ಮೇಲಿನ ಆಮದು ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ.

ಪ್ರಶ್ನೆ: ಭಾರತೀಯ ರಫ್ತುದಾರರಿಗೆ ಈ ಒಪ್ಪಂದದಿಂದ ಸಿಗಲಿರುವ ಬಂಪರ್ ಕೊಡುಗೆ ಏನು? ಉತ್ತರ: ಈ ಒಪ್ಪಂದದ ಅಡಿಯಲ್ಲಿ ಭಾರತ ತಯಾರಿಸುವ ಸುಮಾರು ಶೇಕಡಾ 99 ರಷ್ಟು ಉತ್ಪನ್ನಗಳನ್ನು ಯಾವುದೇ ಆಮದು ತೆರಿಗೆ ಇಲ್ಲದೆ ನೇರವಾಗಿ ಬ್ರಿಟನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇದರಿಂದಾಗಿ ಭಾರತದ ಜವಳಿ , ಚರ್ಮದ ಸರಕುಗಳು, ಪಾದರಕ್ಷೆಗಳು, ರತ್ನಗಳು-ಆಭರಣಗಳು ಹಾಗೂ ಸಮುದ್ರ ಉತ್ಪನ್ನಗಳ ರಫ್ತುದಾರರಿಗೆ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಮಾರುಕಟ್ಟೆ ಸಿಗಲಿದೆ.

ಪ್ರಶ್ನೆ: ಬ್ರಿಟನ್‌ನ ಅಗ್ಗದ ಉತ್ಪನ್ನಗಳಿಂದ ಭಾರತೀಯ ರೈತರು ಮತ್ತು ಹೈನುಗಾರರಿಗೆ ನಷ್ಟವಾಗದಂತೆ ಸರ್ಕಾರ ಹೇಗೆ ರಕ್ಷಿಸಿದೆ? ಉತ್ತರ: ಭಾರತೀಯ ರೈತರ ಮತ್ತು ಡೈರಿ ಉದ್ಯಮದ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರವು ಅತ್ಯಂತ ಚಾಣಾಕ್ಷ ಹೆಜ್ಜೆಯನ್ನಿಟ್ಟಿದೆ. ಬ್ರಿಟನ್‌ನ ಸ್ಪರ್ಧೆಯಿಂದ ದೇಶೀಯ ಮಾರುಕಟ್ಟೆಯನ್ನು ರಕ್ಷಿಸಲು ಡೈರಿ ಉತ್ಪನ್ನಗಳು, ಚೀಸ್, ಸಕ್ಕರೆ, ಅಕ್ಕಿ, ಸೇಬು, ಕೋಳಿ ಮತ್ತು ಮೊಟ್ಟೆಗಳನ್ನು ಈ ಮುಕ್ತ ವ್ಯಾಪಾರ ಒಪ್ಪಂದದಿಂದ (FTA) ಸಂಪೂರ್ಣವಾಗಿ ಹೊರಗಿಡಲಾಗಿದೆ. ಹೀಗಾಗಿ ನಮ್ಮ ದೇಶದ ಕೃಷಿ ವಲಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಪ್ರಶ್ನೆ: ಈ ಒಪ್ಪಂದವು ಭಾರತೀಯ ಯುವಕರಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಹೇಗೆ ನೆರವಾಗಲಿದೆ? ಉತ್ತರ: ಈ ಒಪ್ಪಂದವು ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿಲ್ಲ. ಇದರ ಭಾಗವಾಗಿ ಜಾರಿಯಾಗುತ್ತಿರುವ ‘ಯಂಗ್ ಪ್ರೊಫೆಷನಲ್ಸ್ ಸ್ಕೀಮ್’ ಮೂಲಕ ಭಾರತದ ಐಟಿ (IT) ತಜ್ಞರು, ಇಂಜಿನಿಯರ್‌ಗಳು, ಆರೋಗ್ಯ ಕಾರ್ಯಕರ್ತರು ಮತ್ತು ನಾವೀನ್ಯಕಾರರಿಗೆ ಬ್ರಿಟನ್‌ನಲ್ಲಿ ಸುಲಭವಾಗಿ ವೀಸಾ ಮತ್ತು ಉದ್ಯೋಗಾವಕಾಶಗಳು ಸಿಗಲಿವೆ. ಅಷ್ಟೇ ಅಲ್ಲದೆ, 2040 ರ ವೇಳೆಗೆ ಉಭಯ ದೇಶಗಳ ವ್ಯಾಪಾರ ಶೇ.39ರಷ್ಟು ವೃದ್ಧಿಯಾಗುವುದರಿಂದ ಭಾರತದಲ್ಲೇ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ
ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್
ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್
‘ಟಾಕ್ಸಿಕ್’ನ ‘ತಬಾಹಿ’ ವೈರಲ್: ಹಾಡು ಬರೆದಿರುವ ಭಟ್ಟರು ಹೇಳಿದ್ದೇನು?
‘ಟಾಕ್ಸಿಕ್’ನ ‘ತಬಾಹಿ’ ವೈರಲ್: ಹಾಡು ಬರೆದಿರುವ ಭಟ್ಟರು ಹೇಳಿದ್ದೇನು?