RBI: ಭಾರತದ ಫಾರೆಕ್ಸ್ ದರ ವ್ಯವಸ್ಥೆ ಮರುವರ್ಗೀಕರಿಸಿದ ಐಎಂಎಫ್​ನ ಕ್ರಮಕ್ಕೆ ಭಾರತ ಅಸಮಾಧಾನ

|

Updated on: Dec 20, 2023 | 2:26 PM

IMF on Indian Exchange Rate Intervention: ಭಾರತದ ಎಕ್ಸ್​ಚೇಂಜ್ ರೇಟ್ ರೆಜಿಮೆಯನ್ನು ಐಎಂಎಫ್ ಫ್ಲೋಟಿಂಗ್​ನಿಂದ ಸ್ಟೆಬಿಲೈಸ್ಡ್ ಅರೆಂಜ್ಮೆಂಟ್ ಎಂದು ಐಎಂಎಫ್ ಸಿಬ್ಬಂದಿ ಬದಲಾಯಿಸಿದ್ದಾರೆ. 2022ರ ಡಿಸೆಂಬರ್​ನಿಂದ 2023ರ ಅಕ್ಟೋಬರ್​ವರೆಗಿನ ಅವಧಿಯ ಎಕ್ಸ್​ಚೇಂಜ್ ರೇಟ್ ವ್ಯವಸ್ಥೆಯನ್ನು ಐಎಂಎಫ್ ಅವಲೋಕಿಸಿ ಈ ನಿರ್ಧಾರ ಕೈಗೊಂಡಿದೆ. ಆದರೆ, ಐಎಂಎಫ್ ಅಭಿಪ್ರಾಯ ತಪ್ಪು. ಪರಿಶೀಲನೆಗೆ ತೆಗೆದುಕೊಂಡಿರುವ ಅವಧಿಯೂ ಕಡಿಮೆಯೇ. ದೀರ್ಘಾವಧಿ ಅವಲೋಕಿಸಬೇಕಿತ್ತು ಎಂಬುದು ಆರ್​ಬಿಐನ ಸಲಹೆ

RBI: ಭಾರತದ ಫಾರೆಕ್ಸ್ ದರ ವ್ಯವಸ್ಥೆ ಮರುವರ್ಗೀಕರಿಸಿದ ಐಎಂಎಫ್​ನ ಕ್ರಮಕ್ಕೆ ಭಾರತ ಅಸಮಾಧಾನ
ಐಎಂಎಫ್
Follow us on

ನವದೆಹಲಿ, ಡಿಸೆಂಬರ್ 20: ಭಾರತದ ವಿದೇಶೀ ವಿನಿಮಯ ದರ ವ್ಯವಸ್ಥೆಯನ್ನು (exchange rate regime) ಮರುವರ್ಗೀಕರಿಸಿರುವ ಐಎಂಎಫ್​ನ ಕ್ರಮಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಫಾರೆಕ್ಸ್ ಮಾರುಕಟ್ಟೆಯಲ್ಲಿ ದರ ವಿಚಾರದಲ್ಲಿ ಆರ್​​ಬಿಐ ಆಗಾಗ್ಗೆ ಮಧ್ಯಪ್ರವೇಶಿಸಿ (RBI Intervention) ಬೆಲೆ ಹೆಚ್ಚು ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುತ್ತದೆ. ಫಾರೆಕ್ಸ್ ದರಗಳು ತೀರಾ ಕ್ಷಿಪ್ರ ಬದಲಾವಣೆ ಹೊಂದುವುದನ್ನು ನಿಯಂತ್ರಿಸುವುದು ತನ್ನ ಉದ್ದೇಶ ಎಂದು ಐಎಂಎಫ್​ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಮಜಾಯಿಷಿ ನೀಡಿದೆ.

ಎಕ್ಸ್​ಚೇಂಜ್ ಮಾರುಕಟ್ಟೆಯಲ್ಲಿ ದರಗಳು ಮಾರುಕಟ್ಟೆ ಅವಲಂಬಿತವಾಗಿರಬೇಕು. ಅಂದರೆ ಕರೆನ್ಸಿ ಮೌಲ್ಯ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಇರಬೇಕು ಎಂಬುದು ನಿಯಮ. ಇದಕ್ಕೆ ಫ್ಲೋಟಿಂಗ್ ವ್ಯವಸ್ಥೆ ಎನ್ನುವುದು. 2022ರ ಡಿಸೆಂಬರ್​ನಿಂದ 2023ರ ಅಕ್ಟೋಬರ್​ವರೆಗಿನ 11 ತಿಂಗಳ ಅವಧಿಯಲ್ಲಿ ಭಾರತದ ಎಕ್ಸ್​ಚೇಂಜ್ ದರ ವ್ಯವಸ್ಥೆಯ ವರ್ಗೀಕರಣ ಬದಲಾಯಿಸಲಾಗಿದೆ. ಫ್ಲೋಟಿಂಗ್ ಎಂದು ಇದ್ದದ್ದು ಸ್ಟೆಬಿಲೈಸ್ಡ್ ಅರೆಂಜ್ಮೆಂಟ್ ಎಂದು ಐಎಂಎಫ್ ಬದಲಾಯಿಸಿದೆ.

ಇದನ್ನೂ ಓದಿ: RBI Circular: ಎಐಎಫ್ ಮೇಲೆ ಹೂಡಿಕೆ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ನಿರ್ಬಂಧ; ಸಾಲ ತೀರಿಕೆಗೆ ಸಾಲ ಸಿಗುವುದು ಇನ್ಮುಂದೆ ಕಷ್ಟ

ಐಎಂಎಫ್​ನಲ್ಲಿ ಭಾರತದ ಪ್ರತಿನಿಧಿ (ಎಕ್ಸಿಕ್ಯೂಟಿವ್ ಡೈರೆಕ್ಟರ್) ಕೆ.ವಿ. ಸುಬ್ರಮಣಿಯನ್, ಸಲಹೆಗಾರರಾದ ಸಂಜಯ್ ಕುಮಾರ್ ಹಂಸದ ಮತ್ತು ಆನಂದ್ ಸಿಂಗ್ ಅವರು ಐಎಂಎಫ್ ನಡೆಯನ್ನು ಪ್ರಶ್ನಿಸಿದ್ದಾರೆ. ಪರಿಶೀಲನೆಗೆಂದು ಐಎಂಎಫ್ ತೆಗೆದುಕೊಂಡಿರುವ ಅವಧಿ ಹಾಗೂ ಎಕ್ಸ್​ಜೇಂಜ್ ರೇಟ್ ವ್ಯವಸ್ಥೆಯ ಮರುವರ್ಗೀಕರಣ ಕ್ರಮ ಸರಿಯಲ್ಲ ಎಂಬುದು ಇವರ ವಾದ.

‘… ಭಾರತದ ವಿನಿಮಯ ದರವನ್ನು ಸ್ಟೆಬಿಲೈಸ್ಡ್ ಅರೆಂಜ್ಮೆಂಟ್ ಎಂದು ಪರಿಗಣಿಸಿರುವುದು ತಪ್ಪು ಮತ್ತು ವಸ್ತುಸ್ಥಿತಿಗೆ ದೂರವಾಗಿದ್ದಾಗಿದೆ. ಹಿಂದೆ ಇದ್ದಂತೆ ವಿನಿಮಯ ದರದ ಹೊಂದಾಣಿಕೆಯು ಬಾಹ್ಯ ಆಘಾತಗಳನ್ನು ತಡೆಯಲು ಇರುವ ಮೊದಲ ರಕ್ಷಣಾ ಅಸ್ತ್ರವಾಗಿದೆ. ಆದರೆ, ಅಸ್ಥಿರ ಮಾರುಕಟ್ಟೆ ಪರಿಸ್ಥಿತಿ ಇದ್ದರೆ ಮಾತ್ರವೇ ದರ ನಿಯಂತ್ರಣಕ್ಕಾಗಿ ಹಸ್ತಕ್ಷೇಪ ಮಾಡಲಾಗುತ್ತದೆ,’ ಎಂಬುದು ಇವರ ವಾದ.

ಇದನ್ನೂ ಓದಿ: Layoff Effect: ಅಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದು ಸಂಸ್ಥೆಯ ನೈತಿಕ ಸ್ಥೈರ್ಯ ಉಡುಗಿಸಿತು: ಗೂಗಲ್ ಸಿಇಒ ಸುಂದರ್ ಪಿಚೈ

ಐಎಂಎಫ್​ನ ಸಿಬ್ಬಂದಿ ಮಾಡಿರುವ ಮಾಪನ ಕಳೆದ ಆರೆಂಟು ತಿಂಗಳ ಕಿರು ಅವಧಿಯನ್ನು ಆಧರಿಸಿದೆ. ಒಂದು ವೇಳೆ ಎರಡರಿಂದ ಐದು ವರ್ಷ ಅವಧಿಯದ್ದನ್ನು ಪರಿಶೀಲಿಸಿದ್ದರೆ ಅಭಿಪ್ರಾಯ ಬೇರೆಯೇ ಆಗಿರುತ್ತಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ