AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI Circular: ಎಐಎಫ್ ಮೇಲೆ ಹೂಡಿಕೆ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ನಿರ್ಬಂಧ; ಸಾಲ ತೀರಿಕೆಗೆ ಸಾಲ ಸಿಗುವುದು ಇನ್ಮುಂದೆ ಕಷ್ಟ

Alternative Investment Funds: ಆಲ್ಟರ್ನೇಟಿವ್ ಇನ್ವೆಸ್ಟ್​ಮೆಂಟ್ ಫಂಡ್​ಗಳ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ನಿರ್ಬಂಧ ಹೇರಿದೆ. ಬ್ಯಾಂಕ್​ನಲ್ಲಿ ಸಾಲ ಹೊಂದಿರುವ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿರುವ ಎಐಎಫ್​ಗಳಲ್ಲಿ ಬ್ಯಾಂಕುಗಳು ಹಣ ಇನ್ವೆಟ್​ಮೆಂಟ್ ಮಾಡುವಂತಿಲ್ಲ. ಈಗಾಗಲೇ ಇಂಥ ಎಐಎಫ್​ಗಳಲ್ಲಿ ಬ್ಯಾಂಕು ಅಥವಾ ಎನ್​ಬಿಎಫ್​ಸಿ ಹೂಡಿಕೆ ಮಾಡಿದ್ದರೆ 30 ದಿನದಲ್ಲಿ ಹಿಂಪಡೆಯಬೇಕು ಎಂದಿದೆ ಆರ್​ಬಿಐ.

RBI Circular: ಎಐಎಫ್ ಮೇಲೆ ಹೂಡಿಕೆ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ನಿರ್ಬಂಧ; ಸಾಲ ತೀರಿಕೆಗೆ ಸಾಲ ಸಿಗುವುದು ಇನ್ಮುಂದೆ ಕಷ್ಟ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2023 | 12:11 PM

Share

ನವದೆಹಲಿ, ಡಿಸೆಂಬರ್ 20: ಬಹಳಷ್ಟು ಸಂಸ್ಥೆಗಳು ಬ್ಯಾಂಕ್​ನಲ್ಲಿ ಪಡೆದ ಸಾಲವನ್ನು ತೀರಿಸಲು ಅದೇ ಬ್ಯಾಂಕಿನಲ್ಲಿ ಹೊಸ ಸಾಲ ಮಾಡುತ್ತವೆ. ಅದು ವರ್ತುಲದಂತೆ ಮರುಕಳಿಸುತ್ತಲೇ (evergreening of loans) ಇರುತ್ತದೆ. ಇಂಥದ್ದನ್ನು ತಪ್ಪಿಸಲು ಆರ್​ಬಿಐ ಕ್ರಮ ಕೈಗೊಳ್ಳಲು ಯತ್ನಿಸಿದೆ. ಬ್ಯಾಂಕ್​ನಲ್ಲಿ ಸಾಲ ಇರುವ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಆಲ್ಟರ್ನೇಟಿವ್ ಇನ್ವೆಸ್ಟ್​ಮೆಂಟ್ ಫಂಡ್ಸ್​ನ (AIF- Alternative investment fund) ಸ್ಕೀಮ್​ನಲ್ಲಿ ಬ್ಯಾಂಕ್ ಆಗಲೀ ಎನ್​ಬಿಎಫ್​ಸಿಗಳಾಗಲೀ ಹೂಡಿಕೆ ಮಾಡುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ (ಡಿ. 19) ಅಪ್ಪಣೆ ಮಾಡಿದೆ.

ಆಲ್ಟರ್ನೇಟಿವ್ ಇನ್ವೆಸ್ಟ್​ಮೆಂಟ್ ಫಂಡ್ ಎಂಬುದು ಸೆಬಿ ಇತ್ಯಾದಿ ಯಾವುದೇ ಪ್ರಾಧಿಕಾರ ಸಂಸ್ಥೆಯ ನಿಯಂತ್ರಣಕ್ಕೆ ಒಳಪಡದ ಸಂಪೂರ್ಣ ಖಾಸಗಿ ಹೂಡಿಕೆ (privately pooled funds) ನಿಧಿಯಾಗಿದೆ. ವೆಂಚರ್ ಕ್ಯಾಪಿಟಲ್ ಫಂಡ್, ಏಂಜಲ್ ಫಂಡ್, ಇನ್​ಫ್ರಾಸ್ಟ್ರಕ್ಚರ್ ಫಂಡ್, ಪ್ರೈವೇಟ್ ಈಕ್ವಿಟಿ ಫಂಡ್, ಹೆಡ್ಜ್ ಫಂಡ್ ಮೊದಲಾದವು ಇದಕ್ಕೆ ಉದಾಹರಣೆ. ಬ್ಯಾಂಕುಗಳು ತಮ್ಮಲ್ಲಿರುವ ಹಣವನ್ನು ಇಂಥ ಫಂಡ್​ಗಳ ಮೇಲೆ ಹೂಡಿಕೆ ಮಾಡುವುದು ಸಾಮಾನ್ಯ. ಆದರೆ, ಈ ಫಂಡ್​ಗಳು ಹೂಡಿಕೆ ಮಾಡಿರುವ ಸಂಸ್ಥೆಗಳು ಕಳೆದ 12 ತಿಂಗಳಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದರೆ, ಅಂಥ ಫಂಡ್​ಗಳ ಸ್ಕೀಮ್​ನಲ್ಲಿ ಬ್ಯಾಂಕು ಯಾವ ಹೂಡಿಕೆಯನ್ನೂ ಮಾಡಬಾರದು ಎಂಬುದು ಆರ್​ಬಿಐ ಈಗ ವಿಧಿಸಿರುವ ನಿರ್ಬಂಧವಾಗಿದೆ.

ಇದನ್ನೂ ಓದಿ: ಪೇಟೆಂಟ್ ವ್ಯಾಜ್ಯ; ಆ್ಯಪಲ್​ನ ಸ್ಮಾರ್ಟ್​ವಾಚ್​ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?

‘ಕಾನೂನು ಸಮಸ್ಯೆ ತರುವ ಎಐಎಫ್​ಗಳೊಂದಿಗೆ ಬ್ಯಾಂಕ್, ಎನ್​ಬಿಎಫ್​ಸಿ ಮೊದಲಾದ ಪ್ರಾಧಿಕಾರ ನಿಯಂತ್ರಿತ ಸಂಸ್ಥೆಗಳು (Regulated Entities) ನಡೆಸಿರುವ ಕೆಲ ವ್ಯವಹಾರವು ನಮ್ಮ ಗಮನಕ್ಕೆ ಬಂದಿದೆ. ಎಐಎಫ್​ಗಳಲ್ಲಿ ಹೂಡಿಕೆ ಮಾಡುವ ಮೂಲಕ ಬ್ಯಾಂಕುಗಳು ಪರೋಕ್ಷವಾಗಿ ಸಾಲ ಕೊಡುತ್ತಿವೆ,’ ಎಂದು ಆರ್​ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಹಾಗೆಯೇ, ಈಗಾಗಲೇ ಇಂಥ ಹೂಡಿಕೆಗಳನ್ನು ಮಾಡಿರುವ ಹಣಕಾಸು ಸಂಸ್ಥೆಗಳು 30 ದಿನದೊಳಗೆ ಅದನ್ನು ಹಿಂಪಡೆಯಬೇಕು ಎಂದೂ ಆರ್​ಬಿಐ ನಿರ್ದೇಶನ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ