India: ಇದು ಭಾರತದ ಶತಮಾನ; 2075ರೊಳಗೆ ಜಪಾನ್, ಜರ್ಮನಿ, ಅಮೆರಿಕವನ್ನೂ ಹಿಂದಿಕ್ಕಲಿದೆ ಭಾರತ: ಗೋಲ್ಡ್​ಮನ್ ಸ್ಯಾಕ್ಸ್ ಅಂದಾಜು

Goldman Sachs on Indian Economy: ಜನಸಂಖ್ಯೆ, ತಂತ್ರಜ್ಞಾನ ಇತ್ಯಾದಿ ಅಂಶಗಳ ಸಹಾಯದಿಂದ ಭಾರತ ಮುಂದಿನ ದಶಕಗಳಲ್ಲಿ ಅಗಾಧವಾಗಿ ಬೆಳೆಯಲಿದೆ. 2017ರಲ್ಲಿ ಭಾರತದ ಜಿಡಿಪಿ 52.5 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಗೋಲ್ಡ್​ಮನ್ ಸ್ಯಾಕ್ಸ್ ಅಭಿಪ್ರಾಯಪಟ್ಟಿದೆ.

India: ಇದು ಭಾರತದ ಶತಮಾನ; 2075ರೊಳಗೆ ಜಪಾನ್, ಜರ್ಮನಿ, ಅಮೆರಿಕವನ್ನೂ ಹಿಂದಿಕ್ಕಲಿದೆ ಭಾರತ: ಗೋಲ್ಡ್​ಮನ್ ಸ್ಯಾಕ್ಸ್ ಅಂದಾಜು
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 11, 2023 | 11:45 AM

ನವದೆಹಲಿ: ಇನ್ನು ಐದು ದಶಕದಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ವಿಶ್ವದ ಪ್ರಮುಖ ಹೂಡಿಕೆ ಬ್ಯಾಂಕ್ ಎನಿಸಿದ ಗೋಲ್ಡ್​ಮನ್ ಸ್ಯಾಕ್ಸ್ (Goldman Sachs) ಅಭಿಪ್ರಾಯಪಟ್ಟಿದೆ. 2075ಕ್ಕೆ ಭಾರತದ ಆರ್ಥಿಕತೆ (Indian economy) 52.5 ಟ್ರಿಲಿಯನ್ ಡಾಲರ್​ನಷ್ಟು ಬೃಹತ್ ಆಗಿ ಬೆಳೆದಿರುತ್ತದೆ ಎಂದು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಅಂದಾಜು ಮಾಡಿದೆ. ಸದ್ಯ ಭಾರತದ ಆರ್ಥಿಕತೆ 3 ಟ್ರಿಲಿಯನ್ ಡಾಲರ್​ಗಿಂತ ತುಸು ಹೆಚ್ಚು ಇದೆ. ಐವತ್ತು ವರ್ಷದಲ್ಲಿ ಆರ್ಥಿಕತೆ 17 ಪಟ್ಟು ಹೆಚ್ಚು ಬೆಳೆಯುತ್ತದೆ. 52.5 ಟ್ರಿಲಿಯನ್ ಡಾಲರ್ ಎಂದರೆ ಸುಮಾರು 4,325 ಲಕ್ಷ ಕೋಟಿ ರೂಪಾಯಿ ಆಗುತ್ತದೆ.

ಗೋಲ್ಡ್​ಮನ್ ಸ್ಯಾಕ್ಸ್ ಬ್ಯಾಂಕು ಎಲ್ಲಾ ದೇಶಗಳ ಜಿಡಿಪಿಯ ಮುಂದಿನ ಬೆಳವಣಿಗೆಯ ಹಾದಿಯನ್ನು ಅಂದಾಜಿಸಿ ಈ ತೀರ್ಮಾನಕ್ಕೆ ಬಂದಿದೆ. ಅಮೆರಿಕದ ಆರ್ಥಿಕತೆಯನ್ನೂ ಮೀರಿಸಿ ಭಾರತ ಬೆಳೆಯುತ್ತದಂತೆ. ಭಾರತದ ಅಗಾಧ ಜನಸಂಖ್ಯೆ, ಹೆಚ್ಚು ಮಾನವ ಸಂಪನ್ಮೂಲ ಹಾಗೂ ಉತ್ಪನ್ನಶೀಲತೆ, ತಂತ್ರಜ್ಞಾನ, ನಾವೀನ್ಯತೆ, ಬಂಡವಾಳ ಹೂಡಿಕೆ ಇವೆಲ್ಲಾ ಅಂಶಗಳು ಭಾರತದ ಭರ್ಜರಿ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂಬುದು ಅದರ ಅನಿಸಿಕೆ.

ಇದನ್ನೂ ಓದಿಭಾರತದ ಶ್ರೀಮಂತ ರಾಜ್ಯ ಮಹಾರಾಷ್ಟ್ರ; ಕರ್ನಾಟಕಕ್ಕೆ ಎಷ್ಟನೆ ಸ್ಥಾನ? ಇಲ್ಲಿದೆ 2023ರ ಟಾಪ್ 10 ಶ್ರೀಮಂತ ರಾಜ್ಯಗಳ ಪಟ್ಟಿ

ಮುಂದಿನ ಕೆಲ ದಶಕಗಳ ಬಳಿಕ ಚೀನಾ ನಂಬರ್ ಒನ್ ಆರ್ಥಿಕತೆಯ ದೇಶವಾಗಿ ಬೆಳೆಯಲಿದೆ. ಚೀನಾ ನಂತರದ ಸ್ಥಾನ ಭಾರತದ್ದು ಎಂಬುದು ಹಲವು ತಜ್ಞರ ಅಭಿಮತ. ಚೀನಾದಲ್ಲಿ ಜನಸಂಖ್ಯೆ ಏರಿಕೆ ಆಗುತ್ತಿಲ್ಲ. ಅಲ್ಲಿ ಕೆಲಸ ಮಾಡುವ ವಯಸ್ಸಿನವರ ಸಂಖ್ಯೆ ಕಡಿಮೆ ಆಗುತ್ತದೆ. ಅದೇ ವೇಳೆ ಭಾರತದಲ್ಲಿ ಮುಂದಿನ ಕೆಲ ದಶಕಗಳ ಕಾಲ ಕೆಲಸ ಮಾಡಬಲ್ಲ ವಯೋಮಾನದವರ ಸಂಖ್ಯೆ ಬಹಳ ಹೆಚ್ಚಿನ ಮಟ್ಟದಲ್ಲಿರಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ಅಗಾಧವಾಗಿ ಬೆಳೆಯುವ ಸಂಭವ ಇದೆ ಎಂಬುದು ಆರ್ಥಿಕ ತಜ್ಞರುಗಳ ಅಂದಾಜು. ಇದೇ ಕಾರಣಕ್ಕೆ ಚೀನಾವನ್ನೂ ಭಾರತ ಮೀರಿಸಿ ಬೆಳೆಯಬಹುದು ಎಂದು ಕೆಲವರು ಹೇಳುವುದಿದೆ.

ಮೊನ್ನೆ ಇನ್ವೆಸ್ಕೋ ಸಂಸ್ಥೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಜಗತ್ತಿನ ಹೂಡಿಕೆದಾರರಿಗೆ ಭಾರತವೇ ಆದ್ಯತಾ ದೇಶವಾಗಿದೆ. 85 ಸಾವರೀನ್ ವೆಲ್ತ್ ಫಂಡ್ ಮತ್ತು 57 ಸೆಂಟ್ರಲ್ ಬ್ಯಾಂಕುಗಳು ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೂಡಿಕೆದಾರರು ಚೀನಾಗಿಂತ ಭಾರತದ ಮೇಲೆ ಹೆಚ್ಚು ಆಸಕ್ತಿ ತೋರುತ್ತಿದ್ದಾರಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ